ಆಮೋಸ 7 : 1 (KNV)
ದೇವರಾದ ಕರ್ತನು ನನಗೆ ಹೀಗೆ ತೋರಿಸಿದನು; ಇಗೋ, ಹಿಂಗಾರು ಮಳೆ ಬಿದ್ದು ಪೈರು ಸೊಂಪಾಗುವದಕ್ಕೆ ಆರಂಭವಾದಾಗ ಅಂದರೆ, ರಾಜಾದಾಯದ ಹುಲ್ಲನ್ನು ಕೊಯ್ದ ಮೇಲೆ ಬೆಳೆಯು ವೃದ್ಧಿಯಾಗುತ್ತಿದ್ದಾಗ ಇಗೋ, ಕರ್ತನು ಮಿಡತೆಗಳನ್ನು ಉಂಟುಮಾಡಿದನು.
ಆಮೋಸ 7 : 2 (KNV)
ಆದದ್ದೇ ನಂದರೆ, ಅವು ಆ ದೇಶದ ಹುಲ್ಲನ್ನು ತಿಂದು ಮುಗಿಸಿದ ಮೇಲೆ ನಾನು--ಓ ಕರ್ತನಾದ ದೇವರೇ, ನನ್ನನ್ನು ಮನ್ನಿಸು; ಯಾಕೋಬನು ಹೇಗೆ ನಿಲ್ಲುವನು? ಅದು ಸಣ್ಣ ಜನಾಂಗ ಎಂದು ವಿಜ್ಞಾಪಿಸಿ ಕೊಳ್ಳಲು
ಆಮೋಸ 7 : 3 (KNV)
ಕರ್ತನು ಇದನ್ನು ಕುರಿತು ಪಶ್ಚಾತ್ತಾಪಪಟ್ಟು ಇದು ಆಗ ಬಾರ ದೆಂದು ಹೇಳಿದನು.
ಆಮೋಸ 7 : 4 (KNV)
ಕರ್ತನಾದ ದೇವರು ನನಗೆ ಹೀಗೆ ತೋರಿಸಿದನು; ಇಗೋ, ಕರ್ತನಾದ ದೇವರು ಬೆಂಕಿಯಿಂದ ತರ್ಕ ಮಾಡುವದಕ್ಕೆ ಕರೆದನು. ಅದು ದೊಡ್ಡ ಅಗಾಧವನ್ನೂ ನುಂಗಿತು ಮತ್ತು ವಿಭಾಗವನ್ನು ತಿಂದುಬಿಟ್ಟಿತು.
ಆಮೋಸ 7 : 5 (KNV)
ಆಗ ನಾನು--ಓ ದೇವರಾದ ಕರ್ತನೇ, ನಿಲ್ಲಿಸಿಬಿಡು ಎಂದು ಬೇಡಿಕೊಳ್ಳುತ್ತೇನೆ; ಯಾಕೋಬು ಯಾರಿಂದ ಎಬ್ಬಿಸ ಲ್ಪಟ್ಟಿತು? ಅದು ಚಿಕ್ಕ ಜನಾಂಗ ಎಂದು ಹೇಳಿದನು.
ಆಮೋಸ 7 : 6 (KNV)
ಕರ್ತನು ಇದಕ್ಕಾಗಿ ಪಶ್ಚಾತ್ತಾಪಪಟ್ಟು ಇವು ಸಹ ಆಗಬಾರದೆಂದು ಕರ್ತನಾದ ದೇವರು ಹೇಳುತ್ತಾನೆ.
ಆಮೋಸ 7 : 7 (KNV)
ಆತನು ನನಗೆ ಹೀಗೆ ತೋರಿಸಿದನು; ಇಗೋ, ಕರ್ತನು ನೂಲು ಮಟ್ಟದ ನೆಟ್ಟಗಿರುವ ಗೋಡೆಯ ಮೇಲೆ ನಿಂತಿದ್ದನು. ಆತನ ಕೈಯಲ್ಲಿ ನೂಲುಮಟ್ಟ ಇತ್ತು.
ಆಮೋಸ 7 : 8 (KNV)
ಕರ್ತನು ನನಗೆ--ಆಮೋಸನೇ, ಏನನ್ನು ನೋಡುತ್ತಿರುವೆ ಎಂದಾಗ ನಾನು--ನೂಲುಗುಂಡು ಎನ್ನಲು ಕರ್ತನು ಹೇಳಿದ್ದೇನಂದರೆ--ಇಗೋ, ನಾನು ನನ್ನ ಜನರಾದ ಇಸ್ರಾಯೇಲ್ಯರ ಮಧ್ಯದಲ್ಲಿ ನೂಲು ಗುಂಡನ್ನು ಇಡುತ್ತೇನೆ; ಇನ್ನು ಮೇಲೆ ಅವರನ್ನು ದಾಟಿಹೋಗುವದಿಲ್ಲ.
ಆಮೋಸ 7 : 9 (KNV)
ಇಸಾಕನ ಉನ್ನತ ಸ್ಥಳಗಳು ನಾಶವಾಗುವವು; ಇಸ್ರಾಯೇಲ್ಯನ ಪರಿಶುದ್ಧ ಸ್ಥಳಗಳು ಹಾಳಾಗುವವು; ನಾನು ಕತ್ತಿಯೊಂದಿಗೆ ಯಾರೊ ಬ್ಬಾಮನ ಮನೆತನಕ್ಕೆ ವಿರುದ್ಧವಾಗಿ ಏಳುವೆನು ಅಂದನು.
ಆಮೋಸ 7 : 10 (KNV)
ಆಗ ಬೇತೇಲಿನ ಯಾಜಕನಾದ ಅಮಚ್ಯನು ಇಸ್ರಾಯೇಲಿನ ಅರಸನಾದ ಯಾರೊಬ್ಬಾಮನಿಗೆ-- ಆಮೋಸನು ಇಸ್ರಾಯೇಲಿನ ಮನೆತನದವರ ಮಧ್ಯ ದಲ್ಲಿ ನಿನಗೆ ವಿರೋಧವಾಗಿ ಒಳಸಂಚು ಮಾಡಿದ್ದಾನೆ. ದೇಶವು ಅವನ ಎಲ್ಲಾ ಮಾತುಗಳನ್ನು ತಾಳಲಾರದು.
ಆಮೋಸ 7 : 11 (KNV)
ಯಾರೊಬ್ಬಾಮನು ಕತ್ತಿಯಿಂದ ಸಾಯುವನೆಂದೂ ಇಸ್ರಾಯೇಲ್ಯರು ನಿಶ್ಚಯವಾಗಿ ತಮ್ಮ ಸ್ವದೇಶದಿಂದ ಸೆರೆಯಾಗಿ ಒಯ್ಯಲ್ಪಡುವರೆಂದೂ ಆಮೋಸನು ಹೇಳಿದನು.
ಆಮೋಸ 7 : 12 (KNV)
ಇನ್ನೂ ಅಮಚ್ಯನು ಆಮೋಸನಿಗೆ ಹೇಳಿದ್ದೇನಂದರೆ--ಓ ದರ್ಶಿಯೇ, ಯೆಹೂದ ದೇಶಕ್ಕೆ ಓಡಿಹೋಗು; ಅಲ್ಲಿ ರೊಟ್ಟಿ ತಿಂದು ಅಲ್ಲಿಯೇ ಪ್ರವಾದಿಸು.
ಆಮೋಸ 7 : 13 (KNV)
ಆದರೆ ಇನ್ನು ಮೇಲೆ ಬೇತೇಲಿನಲ್ಲಿ ಪ್ರವಾದಿಸಬೇಡ; ಅದು ಅರಸನ ಪರಿಶುದ್ಧ ಸ್ಥಾನವಾಗಿಯೂ ರಾಜನ ಅರಮನೆಯಾಗಿಯೂ ಇದೆ.
ಆಮೋಸ 7 : 14 (KNV)
ಆಗ ಆಮೋಸನು ಅಮಚ್ಯನಿಗೆ ಪ್ರತ್ಯುತ್ತರವಾಗಿ ಹೇಳಿದ್ದೇನಂದರೆ--ನಾನು ಪ್ರವಾದಿಯಲ್ಲ, ಪ್ರವಾ ದಿಯ ಮಗನೂ ಅಲ್ಲ; ಆದರೆ ನಾನು ಕುರುಬನೂ ಹತ್ತಿ ಹಣ್ಣುಗಳನ್ನು ಕೂಡಿಸುವವನೂ ಆಗಿದ್ದೇನೆ.
ಆಮೋಸ 7 : 15 (KNV)
ನಾನು ಕುರಿಯ ಹಿಂಡನ್ನು ಹಿಂಬಾಲಿಸುವ ವೇಳೆ ಯಲ್ಲಿ ಕರ್ತನು ನನ್ನನ್ನು ಕರೆದು ಹೇಳಿದ್ದೇನಂದರೆ--ನೀನು ಹೋಗಿ ನನ್ನ ಜನರಾದ ಇಸ್ರಾಯೇಲ್ಯರಿಗೆ ಪ್ರವಾದಿಸು.
ಆಮೋಸ 7 : 16 (KNV)
ಹೀಗಿರುವದರಿಂದ ನೀನು ಈಗ ಕರ್ತನ ವಾಕ್ಯವನ್ನು ಕೇಳು; ಇಸ್ರಾಯೇಲಿಗೆ ಪ್ರವಾದನೆ ಮಾಡಬೇಡವೆಂದೂ ಇಸಾಕನ ಮನೆತನಕ್ಕೆ ವಿರೋಧ ವಾಗಿ ಖಂಡನೆ ಮಾಡಬಾರದೆಂದೂ ನೀನು ಹೇಳುವಿ ಯಲ್ಲಾ.
ಆಮೋಸ 7 : 17 (KNV)
ಆದದರಿಂದ ಕರ್ತನು ಹೇಳುವದೇ ನಂದರೆ--ನಿನ್ನ ಹೆಂಡತಿ ಪಟ್ಟಣದಲ್ಲಿ ಸೂಳೆಯಾಗು ವಳು; ನಿನ್ನ ಕುಮಾರರೂ ಕುಮಾರ್ತೆಯರೂ ಕತ್ತಿ ಯಿಂದ ಬೀಳುವರು; ನಿನ್ನ ದೇಶವು ನೂಲಿನಿಂದ ವಿಭಾಗಿಸಲ್ಪಡುವದು; ನೀನು ಅಪವಿತ್ರವಾದ ದೇಶದಲ್ಲಿ ಸಾಯುವಿ. ಇಸ್ರಾಯೇಲ್ ನಿಶ್ಚಯವಾಗಿ ತನ್ನ ದೇಶದಿಂದ ಸೆರೆಯಾಗಿ ಒಯ್ಯಲ್ಪಡುವದು.
❮
❯