ಅಪೊಸ್ತಲರ ಕೃತ್ಯಗ 27 : 1 (KNV)
ನಾವು ಸಮುದ್ರ ಪ್ರಯಾಣ ಮಾಡಿ ಇತಾಲ್ಯಕ್ಕೆ ಹೋಗಬೇಕೆಂದು ನಿಶ್ಚಯ ಮಾಡಿದಾಗ ಔಗುಸ್ತನ ಪಟಾಲಮಿನ ಶತಾಧಿಪತಿಯಾದ ಯೂಲ್ಯ ಎಂಬವನಿಗೆ ಪೌಲನನ್ನೂ ಬೇರೆ ಕೆಲವು ಕೈದಿಗಳನ್ನೂ ಅವರು ಒಪ್ಪಿಸಿದರು.
ಅಪೊಸ್ತಲರ ಕೃತ್ಯಗ 27 : 2 (KNV)
ನಾವು ಆಸ್ಯದ ತೀರಗಳ ಮಾರ್ಗವಾಗಿ ಪ್ರಯಾಣಮಾಡ ಬೇಕೆಂಬ ಉದ್ದೇಶದಿಂದ ಅದ್ರಮಿತ್ತಿಯ ಹಡಗನ್ನು ಹತ್ತಿ ಸಮುದ್ರ ಪ್ರಯಾಣವನ್ನು ಪ್ರಾರಂಭಿಸಿದೆವು ಆಗ ಥೆಸಲೊನೀಕದ ಮಕೆದೋನ್ಯದವನಾದ ಅರಿ ಸ್ತಾರ್ಕನು ನಮ್ಮೊಂದಿಗೆ ಇದ್ದನು.
ಅಪೊಸ್ತಲರ ಕೃತ್ಯಗ 27 : 3 (KNV)
ನಾವು ಮರುದಿನ ಸೀದೋನಿಗೆ ಸೇರಿದೆವು; ಆಗ ಯೂಲ್ಯನು ದಯೆ ತೋರಿಸಿ ಪೌಲನನ್ನು ಒತ್ತಾಯ ಮಾಡಿ ಅವನು ತನ್ನ ಸ್ನೇಹಿತರ ಬಳಿಗೆ ಹೋಗಿ ವಿಶ್ರಮಿಸಿಕೊಳ್ಳುವಂತೆ ಸ್ವಾತಂತ್ರ್ಯವಾಗಿ ಬಿಟ್ಟನು.
ಅಪೊಸ್ತಲರ ಕೃತ್ಯಗ 27 : 4 (KNV)
ಅಲ್ಲಿಂದ ನಾವು ಪ್ರಯಾಣ ವನ್ನು ಪ್ರಾರಂಭಿಸಿದಾಗ ಎದುರುಗಾಳಿಯು ಇದ್ದದ ರಿಂದ ಕುಪ್ರದ ಮರೆಯಲ್ಲಿ ಪ್ರಯಾಣಮಾಡಿದೆವು.
ಅಪೊಸ್ತಲರ ಕೃತ್ಯಗ 27 : 5 (KNV)
ಇದಾದ ಮೇಲೆ ನಾವು ಕಿಲಿಕ್ಯ ಮತ್ತು ಪಂಪುಲ್ಯದ ಸಮುದ್ರಮಾರ್ಗವಾಗಿ ಪ್ರಯಾಣಮಾಡಿ ಲುಕೀಯ ಪಟ್ಟಣವಾದ ಮುರಕ್ಕೆ ಬಂದೆವು.
ಅಪೊಸ್ತಲರ ಕೃತ್ಯಗ 27 : 6 (KNV)
ಅಲ್ಲಿ ಇತಾಲ್ಯಕ್ಕೆ ಸಮುದ್ರ ಪ್ರಯಾಣ ಮಾಡುವ ಅಲೆಕ್ಸಾಂದ್ರಿಯದ ಒಂದು ಹಡಗನ್ನು ಶತಾಧಿಪತಿಯು ಕಂಡು ಅದರಲ್ಲಿ ನಮ್ಮನ್ನು ಹತ್ತಿಸಿದನು.
ಅಪೊಸ್ತಲರ ಕೃತ್ಯಗ 27 : 7 (KNV)
ನಾವು ಅನೇಕ ದಿವಸ ನಿಧಾನವಾಗಿ ಸಾಗಿದಾಗ್ಯೂ ಎದುರುಗಾಳಿಯ ದೆಸೆ ಯಿಂದ ಸಲ್ಮೊನೆಗೆ ಎದುರಾಗಿ ಕ್ರೇತದ ಮರೆಯಲ್ಲಿ ಪ್ರಯಾಣ ಮಾಡಿದೆವು;
ಅಪೊಸ್ತಲರ ಕೃತ್ಯಗ 27 : 8 (KNV)
ಅದನ್ನು ದಾಟುವದು ಕಷ್ಟವಾದದರಿಂದ ಚಂದರೇವುಗಳೆಂಬ ಸ್ಥಳಕ್ಕೆ ಸೇರಿ ದೆವು; ಲಸಾಯವೆಂಬ ಪಟ್ಟಣವು ಇದಕ್ಕೆ ಸವಿಾಪವಾಗಿದೆ.
ಅಪೊಸ್ತಲರ ಕೃತ್ಯಗ 27 : 9 (KNV)
ಹೀಗೆ ಬಹುಕಾಲ ಕಳೆದ ಮೇಲೆ ಉಪವಾಸದ ಸಮಯವು ಆಗಲೇ ದಾಟಿಹೋದದರಿಂದ ಸಮುದ್ರ ಪ್ರಯಾಣವು ಅಪಾಯಕರವಾದಾಗ ಪೌಲನು ಅವ ರನ್ನು ಎಚ್ಚರಿಸುತ್ತಾ--
ಅಪೊಸ್ತಲರ ಕೃತ್ಯಗ 27 : 10 (KNV)
ಅಯ್ಯಗಳಿರಾ, ಈ ಸಮುದ್ರ ಪ್ರಯಾಣವು ಸರಕಿಗೂ ಹಡಗಿಗೂ ಮಾತ್ರವಲ್ಲದೆ ನಮ್ಮ ಪ್ರಾಣಗಳಿಗೆ ಕೇಡನ್ನೂ ದೊಡ್ಡ ನಷ್ಟವನ್ನೂ ಉಂಟುಮಾಡುವಂತದ್ದಾಗಿದೆ ಎಂದು ನನಗೆ ತೋರು ತ್ತದೆ.
ಅಪೊಸ್ತಲರ ಕೃತ್ಯಗ 27 : 11 (KNV)
ಆದರೂ ಪೌಲನು ಹೇಳಿದವುಗಳಿಗಿಂತ ಹೆಚ್ಚಾಗಿ ಹಡಗಿನ ನಾಯಕನೂ ಯಜಮಾನನೂ ಆಗಿದ್ದವನನ್ನು ಶತಾಧಿಪತಿಯು ನಂಬಿದನು.
ಅಪೊಸ್ತಲರ ಕೃತ್ಯಗ 27 : 12 (KNV)
ಆ ರೇವು ಚಳಿಗಾಲವನ್ನು ಕಳೆಯುವದಕ್ಕೆ ಅನುಕೂಲ ವಲ್ಲದ್ದರಿಂದ ಅಲ್ಲಿಂದಲೂ ಹೊರಟು ಫೊಯಿನಿಕೆಗೆ ಸೇರಿ ಅಲ್ಲಿ ಚಳಿಗಾಲವನ್ನು ಕಳೆಯುವದು ಸಾಧ್ಯವಾಗ ಬಹುದು ಎಂದು ಅನೇಕರು ಸಲಹೆಕೊಟ್ಟರು; ಇದು ಕ್ರೇತದ ಒಂದು ರೇವು ಆಗಿದ್ದು ಈಶಾನ್ಯ ದಿಕ್ಕಿಗೂ ಅಗ್ನೇಯ ದಿಕ್ಕಿಗೂ ಅಭಿಮುಖವಾಗಿ
ಅಪೊಸ್ತಲರ ಕೃತ್ಯಗ 27 : 13 (KNV)
ಇದಾದ ಮೇಲೆ ದಕ್ಷಿಣದ ಗಾಳಿಯು ಮೆಲ್ಲಗೆ ಬೀಸಿದಾಗ ಅವರು ತಮ್ಮ ಉದ್ದೇಶವು ಸಾರ್ಥಕವಾಯಿತೆಂದು ಭಾವಿಸಿ ಅಲ್ಲಿಂದ ಹೊರಟು ಕ್ರೇತಕ್ಕೆ ಸವಿಾಪವಾಗಿ ಪ್ರಯಾಣಮಾಡಿದರು.
ಅಪೊಸ್ತಲರ ಕೃತ್ಯಗ 27 : 14 (KNV)
ಆದರೆ ಸ್ವಲ್ಪ ಹೊತ್ತಿನ ಮೇಲೆ ಊರಕಲೋನು ಎಂಬ ಬಿರುಗಾಳಿಯು ಎದುರಾಗಿ ಬೀಸಿತು.
ಅಪೊಸ್ತಲರ ಕೃತ್ಯಗ 27 : 15 (KNV)
ಆಗ ಹಡಗು ಅದಕ್ಕೆ ಸಿಕ್ಕಿಕೊಂಡು ಗಾಳಿಗೆ ತಾಳಲಾರದೆ ಇದ್ದದರಿಂದ ಅದು ನೂಕಿಕೊಂಡು ಹೋಗುವಂತೆ ನಾವು ಬಿಟ್ಟುಕೊಟ್ಟೆವು
ಅಪೊಸ್ತಲರ ಕೃತ್ಯಗ 27 : 16 (KNV)
ನಾವು ಕ್ಲೌಡವೆಂಬ ಒಂದು ದ್ವೀಪದ ಮರೆಯಲ್ಲಿ ಹೋಗುತ್ತಿ ದ್ದದರಿಂದ ದೋಣಿಯನ್ನು ಭದ್ರಮಾಡಿಕೊಳ್ಳುವದು ನಮಗೆ ಬಹಳ ಪ್ರಯಾಸವಾಗಿತ್ತು.
ಅಪೊಸ್ತಲರ ಕೃತ್ಯಗ 27 : 17 (KNV)
ಅದನ್ನು ಮೇಲಕ್ಕೆ ಎತ್ತಿ ಸಾಧನಗಳಿಂದ ಹಡಗಿನ ಕೆಳಭಾಗವನ್ನು ಬಿಗಿಯಾಗಿ ಕಟ್ಟಿದರು. ಆಮೇಲೆ ಕಳ್ಳುಸುಬಿಗೆ ನಾವು ಸಿಕ್ಕಿಕೊಂಡೇವೆಂದು ಭಯಪಟ್ಟು ಹಾಯಿಯನ್ನು ಸಡಿಲು ಮಾಡಿ ನೂಕಿಸಿಕೊಂಡು ಹೋದೆವು.
ಅಪೊಸ್ತಲರ ಕೃತ್ಯಗ 27 : 18 (KNV)
ಬಿರುಗಾಳಿಯು ನಮ್ಮನ್ನು ಬಹಳವಾಗಿ ಹೊಯಿದಾಡಿಸಿದ್ದರಿಂದ ಮರುದಿನ ಅವರು ಹಡಗನ್ನು ಹಗುರವಾಗಿ ಮಾಡಿ ದರು;
ಅಪೊಸ್ತಲರ ಕೃತ್ಯಗ 27 : 19 (KNV)
ಮೂರನೆಯ ದಿನ ನಮ್ಮ ಕೈಗಳಿಂದಲೇ ಹಡಗಿನ ಸಾಮಾನುಗಳನ್ನು ಎತ್ತಿ ಹೊರಗೆ ಹಾಕಿದೆವು.
ಅಪೊಸ್ತಲರ ಕೃತ್ಯಗ 27 : 20 (KNV)
ಅನೇಕ ದಿವಸಗಳವರೆಗೆ ಸೂರ್ಯನಾಗಲಿ ನಕ್ಷತ್ರ ಗಳಾಗಲಿ ಕಾಣಿಸದೆ ದೊಡ್ಡ ಬಿರುಗಾಳಿಯು ನಮ್ಮ ಮೇಲೆ ಹೊಡೆದದ್ದರಿಂದ ನಾವು ಪಾರಾದೇವೆಂಬ ಎಲ್ಲಾ ನಿರೀಕ್ಷೆಯು ತಪ್ಪಿಹೋಯಿತು.
ಅಪೊಸ್ತಲರ ಕೃತ್ಯಗ 27 : 21 (KNV)
ಆದರೆ ಅವರು ಬಹುಕಾಲ ಆಹಾರವಿಲ್ಲದೆ ಇದ್ದಮೇಲೆ ಪೌಲನು ಅವರ ಮಧ್ಯದಲ್ಲಿ ನಿಂತುಕೊಂಡು--ಅಯ್ಯಗಳಿರಾ, ನೀವು ನನ್ನ ಮಾತು ಕೇಳಿ ಕ್ರೇತದಿಂದ ಹೊರಡದೆ ಇದ್ದಿದ್ದರೆ ನಾವು ಈ ಕಷ್ಟನಷ್ಟಕ್ಕೆ ಗುರಿಯಾಗುತ್ತಿರಲಿಲ್ಲ.
ಅಪೊಸ್ತಲರ ಕೃತ್ಯಗ 27 : 22 (KNV)
ಆದಾಗ್ಯೂ ನೀವು ಧೈರ್ಯದಿಂದ ಇರಬೇಕೆಂದು ನಾನು ನಿಮ್ಮನ್ನು ಪ್ರೋತ್ಸಾಹಮಾಡುತ್ತೇನೆ; ಹಡಗಿಗೆ ಹೊರತು ನಿಮ್ಮಲ್ಲಿ ಯಾವ ಮನುಷ್ಯನಿಗೂ ಪ್ರಾಣ ನಷ್ಟವಾಗುವದಿಲ್ಲ.
ಅಪೊಸ್ತಲರ ಕೃತ್ಯಗ 27 : 23 (KNV)
ನಾನು ಯಾರವನಾಗಿದ್ದೇನೋ ಯಾರನ್ನು ಸೇವಿಸುತ್ತೇನೊ ಆ ದೇವರ ದೂತನು ಈ ರಾತ್ರಿಯಲ್ಲಿ ನನ್ನ ಹತ್ತಿರ ನಿಂತು--
ಅಪೊಸ್ತಲರ ಕೃತ್ಯಗ 27 : 24 (KNV)
ಪೌಲನೇ, ಭಯಪಡಬೇಡ, ನೀನು ಕೈಸರನ ಮುಂದೆ ನಿಲ್ಲತಕ್ಕದ್ದು; ಇಗೋ, ನಿನ್ನೊಂದಿಗೆ ಪ್ರಯಾಣಮಾಡುವವರೆಲ್ಲರನ್ನು ನಿನಗೆ ದೇವರು ಕೊಟ್ಟಿದ್ದಾನೆ ಎಂದು ಹೇಳಿದನು.
ಅಪೊಸ್ತಲರ ಕೃತ್ಯಗ 27 : 25 (KNV)
ಆದಕಾರಣ ಅಯ್ಯಗಳಿರಾ, ನೀವು ಧೈರ್ಯವಾಗಿರ್ರಿ; ನನಗೆ ಹೇಳಲ್ಪಟ್ಟ ಪ್ರಕಾರವೇ ಆಗುವದೆಂದು ನಾನು ದೇವರನ್ನು ನಂಬುತ್ತೇನೆ.
ಅಪೊಸ್ತಲರ ಕೃತ್ಯಗ 27 : 26 (KNV)
ಹೇಗಿದ್ದರೂ ನಾವು ಒಂದು ದ್ವೀಪಕ್ಕೆ ಸೇರಲೇಬೇಕಾಗಿದೆ ಅಂದನು.
ಅಪೊಸ್ತಲರ ಕೃತ್ಯಗ 27 : 27 (KNV)
ಆದರೆ ಹದಿನಾಲ್ಕನೆಯ ರಾತ್ರಿ ಬಂದಾಗ ಆದ್ರಿ ಯಲ್ಲಿ ಅತ್ತ ಇತ್ತ ಬಡಿಸಿಕೊಂಡ ನಂತರ ಸುಮಾರು ಮಧ್ಯರಾತ್ರಿಯಲ್ಲಿ ನಾವಿಕರು ಒಂದು ದೇಶಕ್ಕೆ ಬಂದೆವೆಂದು ನೆನಸಿದರು;
ಅಪೊಸ್ತಲರ ಕೃತ್ಯಗ 27 : 28 (KNV)
ಆಗ ಅವರು ಅಳತೆಯ ಗುಂಡನ್ನು ಇಳಿಸಿ ಇಪ್ಪತ್ತು ಮಾರುದ್ದ ಎಂದು ತಿಳಿದು ಕೊಂಡರು. ಇನ್ನೂ ಸ್ವಲ್ಪ ದೂರ ಹೋಗಿ ತಿರಿಗಿ ಅಳತೆಯ ಗುಂಡನ್ನು ಇಳಿಸಿ ಹದಿನೈದು ಮಾರುದ್ದವೆಂದು ತಿಳಿದರು.
ಅಪೊಸ್ತಲರ ಕೃತ್ಯಗ 27 : 29 (KNV)
ನಾವು ಬಂಡೆಗಳನ್ನು ತಾಕೇವೆಂದು ಭಯ ಪಟ್ಟಾಗ ಅವರು ಹಡಗಿನ ಹಿಂಭಾಗದ ನಾಲ್ಕು ಲಂಗರು ಗಳನ್ನು ಬಿಟ್ಟು ಯಾವಾಗ ಬೆಳಗಾದೀತು ಎಂದು ಹಾರೈ ಸುತ್ತಿದ್ದರು.
ಅಪೊಸ್ತಲರ ಕೃತ್ಯಗ 27 : 30 (KNV)
ನಾವಿಕರು ಹಡಗಿನ ಮುಂಭಾಗದಲ್ಲಿ ಲಂಗರುಗಳನ್ನು ಹಾಕಬೇಕೆಂಬ ನೆವದಿಂದ ದೋಣಿ ಯನ್ನು ಸಮುದ್ರದಲ್ಲಿ ಇಳಿಸಿ ಅವರು ಹಡಗಿನಿಂದ ತಪ್ಪಿಸಿಕೊಂಡು ಹೋಗಬೇಕೆಂದಿದ್ದರು:
ಅಪೊಸ್ತಲರ ಕೃತ್ಯಗ 27 : 31 (KNV)
ಆಗ ಪೌಲನು ಶತಾಧಿಪತಿಗೆ ಮತ್ತು ಸೈನಿಕರಿಗೆ--ಇವರು ಹಡಗಿನಲ್ಲಿ ನಿಲ್ಲದೆ ಹೋದರೆ ನೀವು ತಪ್ಪಿಸಿಕೊಳ್ಳಲಾರಿರಿ ಎಂದು ಹೇಳಿದನು.
ಅಪೊಸ್ತಲರ ಕೃತ್ಯಗ 27 : 32 (KNV)
ಅದಕ್ಕೆ ಸೈನಿಕರು ದೋಣಿಯ ಹಗ್ಗಗಳನ್ನು ಕತ್ತರಿಸಿ ಅದು ಬಿದ್ದು ಹೋಗುವಂತೆ ಮಾಡಿದರು.
ಅಪೊಸ್ತಲರ ಕೃತ್ಯಗ 27 : 33 (KNV)
ಬೆಳಗಾಗುತ್ತಿರುವಷ್ಟರಲ್ಲಿ ಆಹಾರವನ್ನು ತೆಗೆದುಕೊಳ್ಳಬೇಕೆಂದು ಪೌಲನು ಅವರೆಲ್ಲರನ್ನು ಬೇಡಿ ಕೊಳ್ಳುವವನಾಗಿ--ಏನೂ ಆಹಾರವನ್ನು ತೆಗೆದು ಕೊಳ್ಳದೆ ಕಾದುಕೊಂಡು ಉಪವಾಸವಾಗಿರುವದು ಇದು ಹದಿನಾಲ್ಕನೆಯ ದಿವಸ.
ಅಪೊಸ್ತಲರ ಕೃತ್ಯಗ 27 : 34 (KNV)
ನಿಮ್ಮ ಕ್ಷೇಮಕ್ಕಾಗಿ ಸ್ವಲ್ಪ ಆಹಾರವನ್ನು ತೆಗೆದುಕೊಳ್ಳಬೇಕೆಂದು ನಾನು ನಿಮ್ಮನ್ನು ಬೇಡಿಕೊಳ್ಳುತ್ತೇನೆ; ನಿಮ್ಮಲ್ಲಿ ಯಾರ ತಲೆ ಯಿಂದ ಒಂದು ಕೂದಲೂ ಕೆಳಗೆ ಬಿದ್ದು ಹೋಗು ವದಿಲ್ಲ ಎಂದು ಹೇಳಿದನು.
ಅಪೊಸ್ತಲರ ಕೃತ್ಯಗ 27 : 35 (KNV)
ಅವನು ಹಾಗೆ ಹೇಳಿದ ತರುವಾಯ ರೊಟ್ಟಿಯನ್ನು ತೆಗೆದುಕೊಂಡು ಅವರೆಲ್ಲರ ಮುಂದೆ ದೇವರಿಗೆ ಸ್ತೋತ್ರಮಾಡಿ ಅದನ್ನು ಮುರಿದು ತಿನ್ನುವದಕ್ಕೆ ಪ್ರಾರಂಭಿಸಿದನು.
ಅಪೊಸ್ತಲರ ಕೃತ್ಯಗ 27 : 36 (KNV)
ಆಗ ಅವರೆಲ್ಲರು ಧೈರ್ಯದಿಂದ ಸ್ವಲ್ಪ ಆಹಾರವನ್ನು ತೆಗೆದುಕೊಂಡರು.
ಅಪೊಸ್ತಲರ ಕೃತ್ಯಗ 27 : 37 (KNV)
ಎಲ್ಲರೂ ಸೇರಿ ಹಡಗಿನಲ್ಲಿ ಇನ್ನೂರ ಎಪ್ಪತ್ತಾರು ಮಂದಿ ಇದ್ದೆವು.
ಅಪೊಸ್ತಲರ ಕೃತ್ಯಗ 27 : 38 (KNV)
ಅವರು ಸಾಕಾದಷ್ಟು ತಿಂದಮೇಲೆ ಗೋದಿಯನ್ನು ಸಮುದ್ರಕ್ಕೆ ಚೆಲ್ಲಿ ಹಡಗನ್ನು ಹಗುರ ಮಾಡಿದರು.
ಅಪೊಸ್ತಲರ ಕೃತ್ಯಗ 27 : 39 (KNV)
ಬೆಳಗಾದ ಮೇಲೆ ಆ ದೇಶವು ಯಾವ ದೆಂದು ತಿಳಿಯದೆ ದಡವಿದ್ದ ಒಂದು ಕೊಲ್ಲಿಯನ್ನು ನೋಡಿ ಅದರ ಮೇಲೆ ಹಡಗನ್ನು ನೂಕುವದಕ್ಕೆ ಸಾಧ್ಯವಾದೀತೆಂದು ನಾವು ಯೋಚಿಸಿದೆವು.
ಅಪೊಸ್ತಲರ ಕೃತ್ಯಗ 27 : 40 (KNV)
ಅವರು ಲಂಗರುಗಳನ್ನು ತೆಗೆದು ಸಮುದ್ರದಲ್ಲಿ ಬಿಟ್ಟು ಚುಕ್ಕಾ ಣಿಗಳ ಕಟ್ಟುಗಳನ್ನು ಬಿಚ್ಚಿ ದೊಡ್ಡ ಹಾಯಿಗಳನ್ನು ಗಾಳಿಗೆ ಎತ್ತಿಕಟ್ಟಿ ಹಡಗನ್ನು ದಡಕ್ಕೆ ನಡಿಸುತ್ತಿದ್ದರು.
ಅಪೊಸ್ತಲರ ಕೃತ್ಯಗ 27 : 41 (KNV)
ಎರಡು ಸಮುದ್ರಗಳು ಸೇರುವ ಸ್ಥಳದಲ್ಲಿ ಅವರು ಹಡಗನ್ನು ಆಳವಿಲ್ಲದ ನೀರಿನಲ್ಲಿದ್ದ ನೆಲದ ಮೇಲೆ ಹತ್ತಿಸಿದರು; ಆಗ ಮುಂಭಾಗವು ತಗಲಿಕೊಂಡು ಅಲ್ಲಾಡದಂತೆ ನಿಂತಿತು. ಆದರೆ ಹಿಂಭಾಗವು ತೆರೆಗಳ ಹೊಡೆತದಿಂದ ಒಡೆದುಹೋಯಿತು.
ಅಪೊಸ್ತಲರ ಕೃತ್ಯಗ 27 : 42 (KNV)
ಸೆರೆಯವರಲ್ಲಿ ಯಾರಾದರೂ ಈಜಿ ತಪ್ಪಿಸಿಕೊಂಡಾರೆಂದು ಅವರನ್ನು ಕೊಲ್ಲಬೇಕೆಂಬದಾಗಿ ಸೈನಿಕರು ಆಲೋಚಿಸಿದರು.
ಅಪೊಸ್ತಲರ ಕೃತ್ಯಗ 27 : 43 (KNV)
ಆದರೆ ಶತಾಧಿಪತಿಯು ಪೌಲನನ್ನು ಉಳಿಸ ಬೇಕೆಂದು ಅಪೇಕ್ಷಿಸಿ ಅವರ ಉದ್ದೇಶವನ್ನು ತಡೆದು ಈಜು ಬಲ್ಲವರು ಮೊದಲು ಸಮುದ್ರದಲ್ಲಿ ಧುಮುಕ ಬೇಕೆಂತಲೂ
ಅಪೊಸ್ತಲರ ಕೃತ್ಯಗ 27 : 44 (KNV)
ಉಳಿದವರಲ್ಲಿ ಕೆಲವರು ಹಲಿಗೆಗಳ ಮೇಲೆ ಇನ್ನೂ ಕೆಲವರು ಹಡಗಿನ ತುಂಡುಗಳ ಮೇಲೆ ತೀರಕ್ಕೆ ಹೋಗಬೇಕೆಂತಲೂ ಅಪ್ಪಣೆಕೊಟ್ಟನು. ಹೀಗೆ ಎಲ್ಲರೂ ಸುರಕ್ಷಿತವಾಗಿ ತೀರಕ್ಕೆ ಸೇರಿದರು.

1 2 3 4 5 6 7 8 9 10 11 12 13 14 15 16 17 18 19 20 21 22 23 24 25 26 27 28 29 30 31 32 33 34 35 36 37 38 39 40 41 42 43 44

BG:

Opacity:

Color:


Size:


Font: