ಅಪೊಸ್ತಲರ ಕೃತ್ಯಗ 25 : 1 (KNV)
ಫೆಸ್ತನು ಆ ಪ್ರಾಂತ್ಯಕ್ಕೆ ಬಂದು ಮೂರು ದಿವಸಗಳಾದ ಮೇಲೆ ಕೈಸರೈಯದಿಂದ ಯೆರೂಸಲೇಮಿಗೆ ಹೋದನು.
ಅಪೊಸ್ತಲರ ಕೃತ್ಯಗ 25 : 2 (KNV)
ಆಗ ಮಹಾ ಯಾಜಕನೂ ಯೆಹೂದ್ಯರಲ್ಲಿ ಮುಖ್ಯಸ್ಥರೂ ಪೌಲನಿಗೆ ವಿರೋಧವಾಗಿ ಅವನಿಗೆ ಫಿರಿಯಾದಿ ಹೇಳಿದರು.
ಅಪೊಸ್ತಲರ ಕೃತ್ಯಗ 25 : 3 (KNV)
ಅವನನ್ನು ಕೊಲ್ಲುವದಕ್ಕಾಗಿ ದಾರಿಯಲ್ಲಿ ಹೊಂಚು ಹಾಕುತ್ತಾ ಅವನನ್ನು ಯೆರೂಸಲೇಮಿನಿಂದ ಕರೆಯಿಸ ಬೇಕೆಂದು ಅವನಿಗೆ ವಿರೋಧವಾಗಿ ಬೇಡಿಕೊಂಡರು.
ಅಪೊಸ್ತಲರ ಕೃತ್ಯಗ 25 : 4 (KNV)
ಆದರೆ ಫೆಸ್ತನು ಪ್ರತ್ಯುತ್ತರವಾಗಿ--ಪೌಲನು ಕೈಸರೈ ಯದಲ್ಲೇ ಕಾವಲಿನಲ್ಲಿಡಲ್ಪಡತಕ್ಕದ್ದೆಂದೂ ಅಲ್ಲಿಗೆ ತಾನೇ ಶೀಘ್ರವಾಗಿ ಹೋಗುವೆನೆಂದೂ ಹೇಳಿದನು.
ಅಪೊಸ್ತಲರ ಕೃತ್ಯಗ 25 : 5 (KNV)
ಆದಕಾರಣ ನಿಮ್ಮಲ್ಲಿ ಸಾಮರ್ಥ್ಯವುಳ್ಳವರು ನನ್ನೊಂ ದಿಗೆ ಬಂದು ಅವನಲ್ಲಿ ದುಷ್ಟತನವೇನಾದರೂ ಇದ್ದರೆ ಅವನ ಮೇಲೆ ತಪ್ಪು ಹೊರಿಸಲಿ ಎಂದು ಅವನು ಹೇಳಿದನು.
ಅಪೊಸ್ತಲರ ಕೃತ್ಯಗ 25 : 6 (KNV)
ಅವನು ಅವರ ಮಧ್ಯದಲ್ಲಿ ಹತ್ತು ದಿವಸಗಳಿಗಿಂತ ಹೆಚ್ಚು ಸಮಯವಿದ್ದ ತರುವಾಯ ಕೈಸರೈಯಕ್ಕೆ ಹೊರಟುಹೋಗಿ ಮರುದಿನ ನ್ಯಾಯಾಸನದ ಮೇಲೆ ಕೂತುಕೊಂಡು ಪೌಲನನ್ನು ಕರೆದುಕೊಂಡು ಬರ ಬೇಕೆಂದು ಅಪ್ಪಣೆಕೊಟ್ಟನು.
ಅಪೊಸ್ತಲರ ಕೃತ್ಯಗ 25 : 7 (KNV)
ಅವನು ಬಂದಾಗ ಯೆರೂಸಲೇಮಿನಿಂದ ಬಂದಿದ್ದ ಯೆಹೂದ್ಯರು ಸುತ್ತಲೂ ನಿಂತುಕೊಂಡು ತಾವು ಸ್ಥಾಪಿಸಲಿಕ್ಕಾಗದ ಅನೇಕ ಕಠಿಣ ದೂರುಗಳನ್ನು ಪೌಲನಿಗೆ ವಿರೋಧ ವಾಗಿ ಹೇಳಿದರು.
ಅಪೊಸ್ತಲರ ಕೃತ್ಯಗ 25 : 8 (KNV)
ಆಗ ಪೌಲನು--ಯೆಹೂದ್ಯರ ನ್ಯಾಯಪ್ರಮಾಣಕ್ಕೆ ವಿರೋಧವಾಗಿಯಾಗಲೀ ಈ ದೇವಾಲಯಕ್ಕೆ ವಿರೋಧವಾಗಿಯಾಗಲೀ ಮಾತ್ರ ವಲ್ಲದೆ ಕೈಸರನಿಗೆ ವಿರೋಧವಾಗಿಯಾಗಲೀ ನಾನು ಯಾವ ತಪ್ಪನ್ನೂ ಮಾಡಲಿಲ್ಲ ಎಂದು ಪ್ರತ್ಯುತ್ತರವಾಗಿ ಹೇಳಿದನು.
ಅಪೊಸ್ತಲರ ಕೃತ್ಯಗ 25 : 9 (KNV)
ಆದರೆ ಯೆಹೂದ್ಯರನ್ನು ಸಂತೋಷ ಪಡಿಸುವದಕ್ಕಾಗಿ ಫೆಸ್ತನು ಪೌಲನಿಗೆ--ನೀನು ಯೆರೂಸಲೇಮಿಗೆ ಬಂದು ನನ್ನ ಮುಂದೆ ಇವುಗಳ ವಿಷಯವಾಗಿ ವಿಚಾರಿಸಲ್ಪಡುವದಕ್ಕೆ ನಿನಗೆ ಇಷ್ಟ ವಿದೆಯೋ ಎಂದು ಕೇಳಿದನು.
ಅಪೊಸ್ತಲರ ಕೃತ್ಯಗ 25 : 10 (KNV)
ಆಗ ಪೌಲನು--ನ್ಯಾಯವಿಚಾರಣೆ ಮಾಡತಕ್ಕ ಕೈಸರನ ನ್ಯಾಯಾಸನದ ಮುಂದೆ ನಾನು ನಿಂತಿದ್ದೇನೆ; ನಾನು ಯೆಹೂದ್ಯರಿಗೆ ಯಾವ ಅನ್ಯಾಯವನ್ನೂ ಮಾಡಲಿಲ್ಲ ಎಂಬದು ನಿನಗೆ ಚೆನ್ನಾಗಿ ತಿಳಿದದೆ.
ಅಪೊಸ್ತಲರ ಕೃತ್ಯಗ 25 : 11 (KNV)
ನಾನು ಅನ್ಯಾಯಮಾಡಿದವ ನಾಗಿದ್ದರೆ ಇಲ್ಲವೆ ಮರಣದಂಡನೆಗೆ ಕಾರಣವಾದ ಯಾವದನ್ನಾದರೂ ನಡಿಸಿದ್ದರೆ ಸಾಯುವದಕ್ಕೆ ನಾನು ಬೇಡವೆನ್ನುವದಿಲ್ಲ; ನನ್ನ ಮೇಲೆ ಅವರು ತಪ್ಪು ಹೊರಿಸುವವುಗಳಲ್ಲಿ ಯಾವದೂ ಇಲ್ಲದೆ ಹೋದರೆ ನನ್ನನ್ನು ಅವರಿಗೆ ಯಾವ ಮನುಷ್ಯನೂ ಒಪ್ಪಿಸಲಾರನು; ನಾನು ಕೈಸರ
ಅಪೊಸ್ತಲರ ಕೃತ್ಯಗ 25 : 12 (KNV)
ಆಗ ಫೆಸ್ತನು ಆಲೋಚನಾ ಸಭೆಯವ ರೊಂದಿಗೆ ಮಾತನಾಡಿ--ಕೈಸರನ ಮುಂದೆ ಹೇಳಿ ಕೊಳ್ಳುತ್ತೇನೆ ಎಂದು ನೀನು ಹೇಳಿದಿಯಲ್ಲಾ, ನೀನು ಕೈಸರನ ಬಳಿಗೇ ಹೋಗಬೇಕು ಎಂದು ಉತ್ತರ ಕೊಟ್ಟನು.
ಅಪೊಸ್ತಲರ ಕೃತ್ಯಗ 25 : 13 (KNV)
ಕೆಲವು ದಿವಸಗಳಾದ ಮೇಲೆ ಅರಸನಾದ ಅಗ್ರಿಪ್ಪನೂ ಬೆರ್ನಿಕೆಯೂ ಫೆಸ್ತನನ್ನು ವಂದಿಸುವದಕ್ಕಾಗಿ ಕೈಸರೈಯಕ್ಕೆ ಬಂದರು.
ಅಪೊಸ್ತಲರ ಕೃತ್ಯಗ 25 : 14 (KNV)
ಅಲ್ಲಿ ಅವರು ಅನೇಕ ದಿವಸಗಳು ಇದ್ದ ತರುವಾಯ ಪೌಲನ ವಿಷಯವಾಗಿ ಫೆಸ್ತನು ಅರಸನಿಗೆ--ಫೇಲಿಕ್ಸನು ಬಂಧನಗಳಲ್ಲಿ ಬಿಟ್ಟು ಹೋದ ಒಬ್ಬ ಮನುಷ್ಯನು ಇದ್ದಾನೆ.
ಅಪೊಸ್ತಲರ ಕೃತ್ಯಗ 25 : 15 (KNV)
ನಾನು ಯೆರೂಸಲೇಮಿನಲ್ಲಿದ್ದಾಗ ಪ್ರಧಾನಯಾಜಕರೂ ಯೆಹೂದ್ಯರ ಹಿರಿಯರೂ ಅವನ ವಿಷಯವಾಗಿ ನನಗೆ ತಿಳಿಸಿ ಅವನಿಗೆ ವಿರೋಧವಾಗಿ ತೀರ್ಪುಮಾಡ ಬೇಕೆಂದು ನನ್ನನ್ನು ಬೇಡಿಕೊಂಡರು.
ಅಪೊಸ್ತಲರ ಕೃತ್ಯಗ 25 : 16 (KNV)
ನಾನು ಅವರಿಗೆ ಪ್ರತ್ಯುತ್ತರವಾಗಿ--ಆ ಆಪಾದಿತನು ತನ್ನ ಮೇಲೆ ಆಪಾದನೆ ಮಾಡುವವರಿಗೆ ಮುಖಾಮುಖಿ ಯಾಗಿ ತನ್ನ ಮೇಲೆ ಹೊರಿಸಲ್ಪಟ್ಟ ಆಪಾದನೆಯ ವಿಷಯದಲ್ಲಿ ತನಗಾಗಿ ಪ್ರತಿವಾದ ಮಾಡುವಂತೆ ಅನುಮತಿ ಪಡೆಯುವ ಮುಂಚೆ ಯಾವ ಮನುಷ್ಯ ನನ್ನೂ ಮರಣಕ್ಕೆ ಒಪ್ಪಿಸುವದು ರೋಮ್ನವರ
ಅಪೊಸ್ತಲರ ಕೃತ್ಯಗ 25 : 17 (KNV)
ಆದಕಾರಣ ಅವರು ಇಲ್ಲಿಗೆ ಬಂದಾಗ ಯಾವದಕ್ಕೂ ತಡಮಾಡದೆ ಮರುದಿನ ನಾನು ನ್ಯಾಯಾಸನದ ಮೇಲೆ ಕೂತು ಕೊಂಡು ಆ ಮನುಷ್ಯನನ್ನು ತರಬೇಕೆಂದು ಅಪ್ಪಣೆ ಕೊಟ್ಟೆನು.
ಅಪೊಸ್ತಲರ ಕೃತ್ಯಗ 25 : 18 (KNV)
ತಪ್ಪುಹೊರಿಸುವವರು ಅವನಿಗೆ ವಿರೋಧ ವಾಗಿ ನಿಂತು ನಾನು ಭಾವಿಸಿದವುಗಳಲ್ಲಿ ಯಾವ ತಪ್ಪನ್ನೂ ಅವನ ಮೇಲೆ ಹೊರಿಸಲಿಲ್ಲ.
ಅಪೊಸ್ತಲರ ಕೃತ್ಯಗ 25 : 19 (KNV)
ಆದರೆ ಸತ್ತುಹೋದ ಒಬ್ಬ ಯೇಸು ಬದುಕಿದ್ದಾನೆ ಎಂದು ಪೌಲನು ಸ್ಥಾಪಿಸಿರುವ ವಿಷಯವಾಗಿಯೂ ತಮ್ಮ ಮೂಢಭಕ್ತಿಯ ವಿಷಯವಾಗಿಯೂ ಕೆಲವು ಪ್ರಶ್ನೆಗಳು ಅವನಿಗೆ ವಿರೋಧವಾಗಿ ಅವರಿಗೆ ಇದ್ದವು.
ಅಪೊಸ್ತಲರ ಕೃತ್ಯಗ 25 : 20 (KNV)
ನಾನು ಅಂಥಾ ವಿಧವಾದ ಪ್ರಶ್ನೆಗಳ ವಿಷಯವಾಗಿ ಸಂದೇಹ ಪಟ್ಟದ್ದರಿಂದ ಅವನು ಯೆರೂಸಲೇಮಿಗೆ ಬಂದು ಇವುಗಳ ವಿಷಯವಾಗಿ ವಿಚಾರಿಸಲ್ಪಡುವದು ತನಗೆ ಇಷ್ಟವಿದೆಯೋ ಎಂದು ನಾನು ಕೇಳಿದೆನು.
ಅಪೊಸ್ತಲರ ಕೃತ್ಯಗ 25 : 21 (KNV)
ಆದರೆ ಔಗುಸ್ತನ ವಿಚಾರಣೆಗಾಗಿ ತನ್ನನ್ನು ಕಾಯಬೇಕೆಂದು ಪೌಲನು ಬೇಡಿಕೊಂಡ ಪ್ರಕಾರ ಕೈಸರನ ಬಳಿಗೆ ಅವನನ್ನು ನಾನು ಕಳುಹಿಸುವ ವರೆಗೆ ಕಾಯಬೇಕೆಂದು ನಾನು ಅಪ್ಪಣೆಕೊಟ್ಟೆನು.
ಅಪೊಸ್ತಲರ ಕೃತ್ಯಗ 25 : 22 (KNV)
ಆಗ ಅಗ್ರಿಪ್ಪನು ಫೆಸ್ತನಿಗೆ--ಆ ಮನುಷ್ಯನು ಹೇಳುವದನ್ನು ಕೇಳುವದಕ್ಕೆ ನಾನು ಸಹ ಇಷ್ಟಪಡುತ್ತೇನೆ ಎಂದು ಹೇಳಿದನು. ಅದಕ್ಕೆ ಅವನು--ಅವನು ಹೇಳುವದನ್ನು ನಾಳೆ ನೀನು ಕೇಳುವಿ ಅಂದನು.
ಅಪೊಸ್ತಲರ ಕೃತ್ಯಗ 25 : 23 (KNV)
ಮಾರನೆಯ ದಿನ ಅಗ್ರಿಪ್ಪನೂ ಬೆರ್ನಿಕೆಯೂ ಬಹು ಆಡಂಬರದೊಂದಿಗೆ ಬಂದು ಮುಖ್ಯನಾಯಕ ರೊಂದಿಗೂ ಪಟ್ಟಣದ ಪ್ರಮುಖರೊಂದಿಗೂ ವಿಚಾ ರಣೆಯ ಸ್ಥಳಕ್ಕೆ ಪ್ರವೇಶಿಸಿದಾಗ ಫೆಸ್ತನ ಅಪ್ಪಣೆಯ ಪ್ರಕಾರ ಪೌಲನನ್ನು ಕರತಂದರು.
ಅಪೊಸ್ತಲರ ಕೃತ್ಯಗ 25 : 24 (KNV)
ಆಗ ಫೆಸ್ತನು--ಅರಸನಾದ ಅಗ್ರಿಪ್ಪನೇ, ಇಲ್ಲಿ ನಮ್ಮೊಂದಿಗೆ ಸೇರಿ ಬಂದಿರುವ ಎಲ್ಲಾ ಜನರೇ, ಇವನು ಇನ್ನು ಮೇಲೆ ಜೀವಿಸಬಾರದೆಂದು ಯೆರೂಸಲೇಮಿನಲ್ಲಿಯೂ ಇಲ್ಲಿಯೂ ಯಾವ ಮನುಷ್ಯನ ವಿಷಯವಾಗಿ ಯೆಹೂದ್ಯರ ಜನಸಮೂಹವೆಲ್ಲಾ ನನ್ನನ್ನು ಬೇಡಿ ಕೊಂಡಿತೋ ಇವನನ್ನು ನೀವು ನೋಡು
ಅಪೊಸ್ತಲರ ಕೃತ್ಯಗ 25 : 25 (KNV)
ಆದರೆ ಮರಣದಂಡನೆಗೆ ಕಾರಣವಾದ ಯಾವ ದನ್ನೂ ಇವನು ಮಾಡಲಿಲ್ಲವೆಂದು ನಾನು ಕಂಡು ಕೊಂಡೆನು. ತಾನೇ ಔಗುಸ್ತನ ಮುಂದೆ ಹೇಳಿಕೊಳ್ಳು ತ್ತೇನೆಂದು ಬೇಡಿಕೊಂಡದ್ದರಿಂದ ಇವನನ್ನು ಕಳುಹಿಸು ವದಕ್ಕೆ ನಾನು ತೀರ್ಮಾನಿಸಿದ್ದೇನೆ.
ಅಪೊಸ್ತಲರ ಕೃತ್ಯಗ 25 : 26 (KNV)
ಈ ಮನುಷ್ಯನ ವಿಷಯವಾಗಿ ನನ್ನ ದೊರೆಗೆ ಬರೆಯುವದಕ್ಕಾಗಿ ನಿರ್ದಿಷ್ಟವಾದದ್ದೇನೂ ಇಲ್ಲ; ಆದಕಾರಣ ವಿಚಾರಣೆ ಯಾದನಂತರ ಬರೆಯುವದಕ್ಕೆ ನನಗೆ ಏನಾದರೂ ಸಿಕ್ಕುವದೆಂದು ನಿಮ್ಮ ಮುಂದೆ ವಿಶೇಷವಾಗಿ ಅರಸನಾದ ಓ ಅಗ್ರಿಪ್ಪನೇ, ನಿನ್ನ ಮುಂದೆ ಇವನನ್ನು ನಾನು ತಂದಿದ್ದೇನೆ.
ಅಪೊಸ್ತಲರ ಕೃತ್ಯಗ 25 : 27 (KNV)
ಸೆರೆಯವನಿಗೆ ವಿರೋಧವಾಗಿ ಹೊರಿಸಲ್ಪಟ್ಟ ಅಪರಾಧಗಳನ್ನು ಸೂಚಿಸುವದಕ್ಕೆ ಏನೂ ಇಲ್ಲದೆ ಅವನನ್ನು ಕಳುಹಿಸುವದು ಯುಕ್ತವಲ್ಲ ಎಂಬದಾಗಿ ನನಗೆ ಕಾಣುತ್ತದೆ ಎಂದು ಹೇಳಿದನು.
❮
❯