ಅಪೊಸ್ತಲರ ಕೃತ್ಯಗ 21 : 1 (KNV)
ಇದಾದ ಮೇಲೆ ನಾವು ಅವರನ್ನು ಬಿಟ್ಟು ಸಮುದ್ರಪ್ರಯಾಣವಾಗಿ ನೆಟ್ಟಗೆ ಕೋಸ್ಗೆ ಬಂದೆವು. ಮರುದಿನ ರೋದಕ್ಕೆ ಹೋಗಿ ಅಲ್ಲಿಂದ ಪತರಕ್ಕೆ ಸೇರಿದೆವು.
ಅಪೊಸ್ತಲರ ಕೃತ್ಯಗ 21 : 2 (KNV)
ಅಲ್ಲಿ ಫೊಯಿನೀಕೆಗೆ ಹೋಗುವ ಹಡಗನ್ನು ಕಂಡು ಅದನ್ನು ಹತ್ತಿ ಪ್ರಯಾಣವನ್ನು ಸಾಗಿಸಿದೆವು.
ಅಪೊಸ್ತಲರ ಕೃತ್ಯಗ 21 : 3 (KNV)
ನಾವು ಕುಪ್ರವನ್ನು ಕಂಡು ಅದನ್ನು ಎಡಗಡೆಗೆ ಬಿಟ್ಟು ಸಿರಿಯದ ಕಡೆಗೆ ಸಾಗಿ ತೂರ್ಗೆ ಬಂದು ಇಳಿದೆವು. ಹಡಗು ಅಲ್ಲಿ ಸರಕನ್ನು ಇಳಿಸ ಬೇಕಾಗಿತ್ತು.
ಅಪೊಸ್ತಲರ ಕೃತ್ಯಗ 21 : 4 (KNV)
ಅಲ್ಲಿ ನಾವು ಶಿಷ್ಯರನ್ನು ಕಂಡು ಏಳು ದಿವಸ ಇದ್ದೆವು; ಪೌಲನು ಯೆರೂಸ ಲೇಮಿಗೆ ಹೋಗಬಾರದೆಂದು ಅವರು ಆತ್ಮನ ಮುಖಾಂತರ ಅವನಿಗೆ ಹೇಳಿದರು.
ಅಪೊಸ್ತಲರ ಕೃತ್ಯಗ 21 : 5 (KNV)
ಆ ದಿವಸಗಳು ಕಳೆದ ಮೇಲೆ ನಾವು ಹೊರಟು ಹೋಗುತ್ತಿರುವಾಗ ಅವರು ತಮ್ಮ ಹೆಂಡತಿಯರು ಮಕ್ಕಳ ಸಹಿತವಾಗಿ ನಮ್ಮನ್ನು ಪಟ್ಟಣದ ಹೊರಗೆ ಸಾಗಕಳುಹಿಸಿದರು; ನಾವು ಸಮುದ್ರದ ತೀರದಲ್ಲಿ ಮೊಣಕಾಲೂರಿ ಪ್ರಾರ್ಥನೆ ಮಾಡಿದೆವು.
ಅಪೊಸ್ತಲರ ಕೃತ್ಯಗ 21 : 6 (KNV)
ಆಗ ನಾವು ಒಬ್ಬರನ್ನೊಬ್ಬರು ಬಿಟ್ಟು ಹಡಗನ್ನು ಹತ್ತಿದಾಗ ಅವರು ತಮ್ಮ ಮನೆಗೆ ಹಿಂತಿರುಗಿದರು.
ಅಪೊಸ್ತಲರ ಕೃತ್ಯಗ 21 : 7 (KNV)
ತೂರಿನಿಂದ ಪ್ರಯಾಣವನ್ನು ಮುಗಿಸಿದ ಮೇಲೆ ಪ್ತೊಲೆಮಾಯಕ್ಕೆ ಬಂದು ಅಲ್ಲಿದ್ದ ಸಹೋದರರನ್ನು ವಂದಿಸಿ ಅವರ ಬಳಿಯಲ್ಲಿ ಒಂದು ದಿವಸ ಇದ್ದೆವು.
ಅಪೊಸ್ತಲರ ಕೃತ್ಯಗ 21 : 8 (KNV)
ಮರುದಿನ ಪೌಲನ ಜೊತೆಯವರಲ್ಲಿದ್ದ ನಾವು ಹೊರಟು ಕೈಸರೈಯಕ್ಕೆ ಸೇರಿ ಏಳು ಮಂದಿಯಲ್ಲಿ ಒಬ್ಬನಾಗಿದ್ದ ಸುವಾರ್ತಿಕನಾದ ಫಿಲಿಪ್ಪನ ಮನೆಗೆ ಹೋಗಿ ಅವನೊಂದಿಗೆ ಇದ್ದೆವು.
ಅಪೊಸ್ತಲರ ಕೃತ್ಯಗ 21 : 9 (KNV)
ಇವನಿ ಪ್ರವಾದಿ ಸುತ್ತಿದ್ದ ಕನ್ಯೆಯರಾದ ನಾಲ್ಕು ಮಂದಿ ಕುಮಾರ್ತೆಯರು ಇದ್ದರು.
ಅಪೊಸ್ತಲರ ಕೃತ್ಯಗ 21 : 10 (KNV)
ನಾವು ಅಲ್ಲಿ ಆನೇಕ ದಿವಸಗಳು ಇದ್ದ ತರುವಾಯ ಅಗಬನೆಂಬ ಒಬ್ಬ ಪ್ರವಾದಿಯು ಯೂದಾಯದಿಂದ ಅಲ್ಲಿಗೆ ಬಂದನು.
ಅಪೊಸ್ತಲರ ಕೃತ್ಯಗ 21 : 11 (KNV)
ಅವನು ನಮ್ಮ ಬಳಿಗೆ ಬಂದು ಪೌಲನ ನಡುಕಟ್ಟನ್ನು ತೆಗೆದು ತನ್ನ ಸ್ವಂತ ಕೈಕಾಲುಗಳನ್ನು ಕಟ್ಟಿಕೊಂಡು--ಈ ನಡುಕಟ್ಟು ಯಾವನದೋ ಆ ಮನುಷ್ಯನನ್ನು ಯೆಹೂದ್ಯರು ಯೆರೂಸಲೇಮಿನಲ್ಲಿ ಹೀಗೆ ಕಟ್ಟಿ ಅನ್ಯಜನರ ಕೈಗೆ ಒಪ್ಪಿಸುವರು ಎಂದು ಪವಿತ್ರಾತ್ಮನು ಹೇಳುತ್ತಾನೆ ಅಂದ
ಅಪೊಸ್ತಲರ ಕೃತ್ಯಗ 21 : 12 (KNV)
ನಾವೂ ಇವುಗಳನ್ನು ಕೇಳಿದಾಗ ಅವನು ಯೆರೂಸಲೇಮಿಗೆ ಹೋಗಬಾರ ದೆಂದು ನಾವು ಆ ಸ್ಥಳದಲ್ಲಿದ್ದವರೂ ಅವನನ್ನು ಬೇಡಿ ಕೊಂಡೆವು.
ಅಪೊಸ್ತಲರ ಕೃತ್ಯಗ 21 : 13 (KNV)
ಅದಕ್ಕೆ ಪೌಲನು ಪ್ರತ್ಯುತ್ತರ ವಾಗಿ--ನೀವು ಅತ್ತು ನನ್ನ ಹೃದಯವನ್ನು ಒಡೆಯುವ ದೇನು? ಕರ್ತನಾದ ಯೇಸು ಕ್ರಿಸ್ತನ ಹೆಸರಿನ ನಿಮಿತ್ತವಾಗಿ ಬಂಧಿಸಲ್ಪಡುವದಕ್ಕೆ ಮಾತ್ರವಲ್ಲದೆ ಯೆರೂಸಲೇಮಿನಲ್ಲಿ ಸಾಯುವದಕ್ಕೂ ನಾನು ಸಿದ್ಧ ನಾಗಿದ್ದೇನೆ ಎಂದು ಹೇಳಿದನು.
ಅಪೊಸ್ತಲರ ಕೃತ್ಯಗ 21 : 14 (KNV)
ಅವನು ಒಪ್ಪದೆ ಇದ್ದದರಿಂದ--ಕರ್ತನ ಚಿತ್ತದಂತೆಯೇ ಆಗಲಿ ಎಂದು ಹೇಳಿ ನಾವು ಸುಮ್ಮನಾದೆವು.
ಅಪೊಸ್ತಲರ ಕೃತ್ಯಗ 21 : 15 (KNV)
ಆ ದಿವಸಗಳಾದ ಮೇಲೆ ನಾವು ಸಿದ್ಧಪಡಿಸಿ ಕೊಂಡು ಯೆರೂಸಲೇಮಿಗೆ ಹೋದೆವು.
ಅಪೊಸ್ತಲರ ಕೃತ್ಯಗ 21 : 16 (KNV)
ಆಗ ಕೈಸರೈಯದ ಶಿಷ್ಯರಲ್ಲಿ ಸಹ ಕೆಲವರು ನಮ್ಮೊಂದಿಗೆ ಬಂದು ನಾವು ಕುಪ್ರದ ಮ್ನಾಸೋನನೆಂಬ ಪ್ರಾಯ ಹೋದ ಒಬ್ಬ ಶಿಷ್ಯನ ಕೂಡ ಇಳುಕೊಳ್ಳುವಂತೆ ತಮ್ಮೊಂದಿಗೆ ಅವನನ್ನು ಕರಕೊಂಡು ಬಂದರು.
ಅಪೊಸ್ತಲರ ಕೃತ್ಯಗ 21 : 17 (KNV)
ನಾವು ಯೆರೂಸಲೇಮಿಗೆ ಬಂದಾಗ ಸಹೋದ ರರು ನಮ್ಮನ್ನು ಸಂತೋಷದಿಂದ ಸೇರಿಸಿಕೊಂಡರು.
ಅಪೊಸ್ತಲರ ಕೃತ್ಯಗ 21 : 18 (KNV)
ಮರುದಿನ ಪೌಲನು ನಮ್ಮ ಕೂಡ ಯಾಕೋಬನ ಬಳಿಗೆ ಬಂದನು; ಆಗ ಹಿರಿಯರೆಲ್ಲರೂ ಅಲ್ಲಿ ಕೂಡಿದ್ದರು.
ಅಪೊಸ್ತಲರ ಕೃತ್ಯಗ 21 : 19 (KNV)
ಅವನು ಅವರನ್ನು ವಂದಿಸಿ ತನ್ನ ಸೇವೆಯ ಮೂಲಕ ದೇವರು ಪ್ರತ್ಯೇಕವಾಗಿ ಅನ್ಯ ಜನರಲ್ಲಿ ಎಂಥ ಕಾರ್ಯಗಳನ್ನು ಮಾಡಿಸಿದನೆಂದು ವಿವರಿಸಿದನು.
ಅಪೊಸ್ತಲರ ಕೃತ್ಯಗ 21 : 20 (KNV)
ಅವರು ಅದನ್ನು ಕೇಳಿ ಕರ್ತನನ್ನು ಮಹಿಮೆಪಡಿಸಿ ಅವನಿಗೆ--ಸಹೋದರನೇ, ವಿಶ್ವಾಸಿ ಗಳಾದ ಯೆಹೂದ್ಯರು ಎಷ್ಟೋ ಸಾವಿರ ಮಂದಿ ಇದ್ದಾರೆಂಬದನ್ನು ನೀನು ನೋಡುತ್ತೀಯಲ್ಲಾ. ಅವರೆಲ್ಲರೂ ನ್ಯಾಯಪ್ರಮಾಣದ ವಿಷಯದಲ್ಲಿ ಅಭಿಮಾನವುಳ್ಳವರಾಗಿದ್ದಾರೆ.
ಅಪೊಸ್ತಲರ ಕೃತ್ಯಗ 21 : 21 (KNV)
ಅವರು ತಮ್ಮ ಮಕ್ಕಳಿಗೆ ಸುನ್ನತಿ ಮಾಡಿಸಬಾರದೆಂದೂ ಆಚಾರಗಳ ಪ್ರಕಾರ ನಡೆಯಬಾರದೆಂದೂ ಹೇಳುತ್ತಾ ಮೋಶೆ ಬರೆದದ್ದನ್ನು ತ್ಯಜಿಸಬೇಕೆಂದು ಅನ್ಯಜನರಲ್ಲಿರುವ ಯೆಹೂದ್ಯರಿಗೆ ನೀನು ಬೋಧಿಸುತ್ತಿದ್ದೀ ಎಂಬದಾಗಿ ನಿನ್ನ ವಿಷಯದಲ್ಲಿ ಅವರು ಕೇಳಿದ್ದಾರೆ.
ಅಪೊಸ್ತಲರ ಕೃತ್ಯಗ 21 : 22 (KNV)
ಆದದರಿಂದ ಏನು ಮಾಡಬೇಕು? ಸಮೂಹವು ಕೂಡಿಬರುವದು ಅವಶ್ಯವಾಗಿದೆ; ನೀನು ಇಲ್ಲಿಗೆ ಬಂದಿದ್ದೀ ಎಂದು ಅವರಿಗೆ ಗೊತ್ತಾಗುವದು.
ಅಪೊಸ್ತಲರ ಕೃತ್ಯಗ 21 : 23 (KNV)
ಆದಕಾರಣ ನಾವು ನಿನಗೆ ಹೇಳುವದನ್ನು ಮಾಡು; ನಮ್ಮಲ್ಲಿ ಪ್ರಮಾಣ ಮಾಡಿದ ನಾಲ್ಕು ಮಂದಿ ಇದ್ದಾರೆ.
ಅಪೊಸ್ತಲರ ಕೃತ್ಯಗ 21 : 24 (KNV)
ನೀನು ಅವರನ್ನು ಕರೆದುಕೊಂಡು ಹೋಗಿ ಅವರು ತಮ್ಮ ತಲೆಗಳನ್ನು ಬೋಳಿಸಿಕೊಳ್ಳುವಂತೆ ನೀನೂ ಅವ ರೊಂದಿಗೆ ನಿನ್ನನ್ನು ಶುದ್ಧಮಾಡಿಕೊಂಡು ಅವರಿ ಗೋಸ್ಕರ ವೆಚ್ಚಮಾಡು; ಆಗ ನಿನ್ನ ವಿಷಯವಾಗಿ ಅವರು ಕೇಳಿದವುಗಳು ಏನೂ ಅಲ್ಲವೆಂದೂ ನೀನು ಸಹ ಕ್ರಮವಾಗಿ ನಡೆಯುತ್ತಾ ನ್ಯಾಯಪ್ರಮಾಣ
ಅಪೊಸ್ತಲರ ಕೃತ್ಯಗ 21 : 25 (KNV)
ನಂಬಿರುವ ಅನ್ಯಜನರ ವಿಷಯವಾದರೋ ವಿಗ್ರಹಕ್ಕೆ ನೈವೇದ್ಯ ಮಾಡಿದ್ದನ್ನೂ ರಕ್ತವನ್ನೂ ಕುತ್ತಿಗೆ ಹಿಸುಕಿ ಕೊಂದದ್ದನ್ನೂ ಹಾದರವನ್ನೂ ಬಿಟ್ಟು ದೂರವಾಗಿರಬೇಕೆಂಬದಾಗಿ ನಾವು ತೀರ್ಮಾನಿಸಿ ಬರೆದೆವೆಂದು ಹೇಳಿದರು.
ಅಪೊಸ್ತಲರ ಕೃತ್ಯಗ 21 : 26 (KNV)
ಆಗ ಪೌಲನು ಆ ಮನುಷ್ಯರನ್ನು ಕರೆದು ಕೊಂಡು ಮರುದಿನ ಅವರೊಂದಿಗೆ ತನ್ನನ್ನು ಶುದ್ಧಮಾಡಿಕೊಂಡು ಅವರಲ್ಲಿ ಪ್ರತಿಯೊಬ್ಬನಿಗಾಗಿ ಅರ್ಪಣೆಯನ್ನು ಸಮರ್ಪಿಸುವ ವರೆಗೆ ಶುದ್ಧೀಕರಣದ ದಿವಸಗಳು ಪೂರೈಸಲ್ಪಟ್ಟವೆಂದು ಸೂಚಿಸುವಂತೆ ದೇವಾಲಯದಲ್ಲಿ ಪ್ರವೇಶಿಸಿದನು.
ಅಪೊಸ್ತಲರ ಕೃತ್ಯಗ 21 : 27 (KNV)
ಆ ಏಳು ದಿವಸಗಳು ತುಂಬುತ್ತಿರುವಾಗ ಆಸ್ಯ ದಿಂದ ಬಂದಿದ್ದ ಯೆಹೂದ್ಯರು ಅವನನ್ನು ದೇವಾಲ ಯದಲ್ಲಿ ಕಂಡು ಜನರೆಲ್ಲರನ್ನು ಉದ್ರೇಕಿಸಿ ಅವನನ್ನು ಹಿಡಿದು--
ಅಪೊಸ್ತಲರ ಕೃತ್ಯಗ 21 : 28 (KNV)
ಇಸ್ರಾಯೇಲ್ ಜನರೇ, ಸಹಾಯ ಮಾಡಿರಿ; ಎಲ್ಲಾ ಕಡೆಯಲ್ಲಿ ಜನರಿಗೂ ಈ ನ್ಯಾಯ ಪ್ರಮಾಣಕ್ಕೂ ಈ ಸ್ಥಳಕ್ಕೂ ವಿರೋಧವಾಗಿ ಎಲ್ಲರಿಗೂ ಬೋಧಿಸುತ್ತಿದ್ದವನು ಈ ಮನುಷ್ಯನೇ; ಇದಲ್ಲದೆ ಗ್ರೀಕರನ್ನು ಸಹ ಈ ದೇವಾಲಯದೊಳಗೆ ಕರೆದು ಕೊಂಡು ಬಂದು ಈ ಪರಿಶುದ್ಧಸ್ಥಳವನ್ನು ಹೊಲೆ ಮಾಡಿದ್ದಾನೆ ಎಂದು ಕೂಗಿ
ಅಪೊಸ್ತಲರ ಕೃತ್ಯಗ 21 : 29 (KNV)
(ಮುಂಚೆ ಎಫೆಸದವನಾದ ತ್ರೊಫಿಮನನ್ನು ಪೌಲನೊಂದಿಗೆ ಆ ಪಟ್ಟಣದಲ್ಲಿ ಅವರು ಕಂಡಿದ್ದರಿಂದ ಅವನನ್ನು ದೇವಾಲಯದೊಳಗೆ ಪೌಲನು ಕರೆದುಕೊಂಡು ಬಂದಿದ್ದನೆಂದು ಭಾವಿಸಿದರು).
ಅಪೊಸ್ತಲರ ಕೃತ್ಯಗ 21 : 30 (KNV)
ಆಗ ಪಟ್ಟಣವೆಲ್ಲಾ ಕದಲಿಹೋಯಿತು. ಜನರು ಒಟ್ಟಾಗಿ ಓಡಿಬಂದು ಪೌಲನನ್ನು ಹಿಡಿದು ದೇವಾಲಯದ ಹೊರಗೆ ಎಳೆದುಕೊಂಡು ಬಂದ ಕೂಡಲೆ ಬಾಗಿಲುಗಳು ಮುಚ್ಚಲ್ಪಟ್ಟವು.
ಅಪೊಸ್ತಲರ ಕೃತ್ಯಗ 21 : 31 (KNV)
ಅವರು ಅವನನ್ನು ಕೊಲ್ಲಬೇಕೆಂ ದಿದ್ದಾಗ ಯೆರೂಸಲೇಮಿನಲ್ಲೆಲ್ಲಾ ಗಲಭೆ ಆಯಿತೆಂದು ಪಟಾಲಮಿನ ಮುಖ್ಯ ನಾಯಕನಿಗೆ ವರದಿ ಬಂತು.
ಅಪೊಸ್ತಲರ ಕೃತ್ಯಗ 21 : 32 (KNV)
ಅವನು ತಕ್ಷಣವೇ ಸೈನಿಕರನ್ನೂ ಶತಾಧಿಪತಿಗಳನ್ನೂ ತೆಗೆದುಕೊಂಡು ಅವರ ಬಳಿಗೆ ಓಡಿ ಬಂದನು. ಅವರು ಮುಖ್ಯ ನಾಯಕನನ್ನೂ ಸೈನಿಕರನ್ನೂ ನೋಡಿ ಪೌಲನನ್ನು ಹೊಡೆಯುವದನ್ನು ಬಿಟ್ಟರು.
ಅಪೊಸ್ತಲರ ಕೃತ್ಯಗ 21 : 33 (KNV)
ಮುಖ್ಯ ನಾಯಕನು ಹತ್ತರಕ್ಕೆ ಬಂದು ಅವನನ್ನು ಹಿಡಿದು ಅವನಿಗೆ ಜೋಡು ಸರಪಣಿಯಿಂದ ಕಟ್ಟಬೇಕೆಂದು ಅಪ್ಪಣೆ ಕೊಟ್ಟು--ಅವನು ಯಾರು? ಏನು ಮಾಡಿದ್ದಾನೆ ಎಂದು ಕೇಳಿದನು.
ಅಪೊಸ್ತಲರ ಕೃತ್ಯಗ 21 : 34 (KNV)
ಆಗ ಸಮೂಹದಲ್ಲಿ ಕೆಲವರು ಒಂದು ವಿಧವಾಗಿ ಬೇರೆ ಕೆಲವರು ಇನ್ನೊಂದು ವಿಧವಾಗಿ ಕೂಗಿದಾಗ ಆ ಗದ್ದಲದ ನಿಜಸ್ಥಿತಿಯನ್ನು ಅವನು ತಿಳಿಯಲಾರದೆ ಅವನನ್ನು ಕೋಟೆಯೊಳಗೆ ತೆಗೆದುಕೊಂಡು ಹೋಗಬೇಕೆಂದು ಅಪ್ಪಣೆಕೊಟ್ಟನು.
ಅಪೊಸ್ತಲರ ಕೃತ್ಯಗ 21 : 35 (KNV)
ಅವನು ಮೆಟ್ಟಲುಗಳ ಮೇಲೆ ಬಂದಾಗ ಜನರ ಬಲಾತ್ಕಾರದ ನಿಮಿತ್ತ ಸೈನಿಕರು ಅವನನ್ನು ಹೊತ್ತು ಕೊಂಡು ಹೋದರು.
ಅಪೊಸ್ತಲರ ಕೃತ್ಯಗ 21 : 36 (KNV)
ಯಾಕಂದರೆ ಗುಂಪಾಗಿ ಕೂಡಿದ ಜನರು ಹಿಂದಿನಿಂದ ಬಂದು--ಅವನನ್ನು ತೆಗೆದುಹಾಕು ಎಂದು ಕೂಗುತ್ತಿದ್ದರು.
ಅಪೊಸ್ತಲರ ಕೃತ್ಯಗ 21 : 37 (KNV)
ಪೌಲನನ್ನು ಕೋಟೆಯೊಳಗೆ ಕರೆದುಕೊಂಡು ಹೋಗುವದಕ್ಕಿದ್ದಾಗ ಅವನು ಸಹಸ್ರಾಧಿಪತಿಗೆ-- ನಿನ್ನೊಂದಿಗೆ ನಾನು ಮಾತನಾಡಬಹುದೋ ಎಂದು ಕೇಳಿದಾಗ ಅವನು--ನೀನು ಗ್ರೀಕ್ ಮಾತನಾಡ ಬಲ್ಲೆಯಾ?
ಅಪೊಸ್ತಲರ ಕೃತ್ಯಗ 21 : 38 (KNV)
ಸ್ವಲ್ಪ ದಿವಸಗಳ ಮುಂಚೆ ದಂಗೆಯ ನ್ನೆಬ್ಬಿಸಿ ಕೊಲೆಗಡುಕರಾದ ನಾಲ್ಕುಸಾವಿರ ಮನುಷ್ಯ ರನ್ನು ಅಡವಿಗೆ ತೆಗೆದುಕೊಂಡು ಹೋದ ಆ ಐಗುಪ್ತ್ಯನು ನೀನೇ ಅಲ್ಲವೋ ಎಂದು ಕೇಳಿದನು.
ಅಪೊಸ್ತಲರ ಕೃತ್ಯಗ 21 : 39 (KNV)
ಆದರೆ ಪೌಲನು--ನಾನು ಪ್ರಖ್ಯಾತವಾದ ಕಿಲಿಕ್ಯದ ತಾರ್ಸ ಪಟ್ಟಣದಲ್ಲಿ ನಿವಾಸಿಯಾಗಿರುವ ಯೆಹೂದ್ಯನು; ಈ ಜನರಿಗೆ ಮಾತನಾಡುವಂತೆ ನನಗೆ ಅಪ್ಪಣೆ ಕೊಡು ಎಂದು ನಾನು ನಿನ್ನನ್ನು ಕೇಳಿಕೊಳ್ಳುತ್ತೇನೆ ಅಂದನು.
ಅಪೊಸ್ತಲರ ಕೃತ್ಯಗ 21 : 40 (KNV)
ಅವನು ಅಪ್ಪಣೆ ಕೊಟ್ಟಾಗ ಪೌಲನು ಮೆಟ್ಟಲುಗಳ ಮೇಲೆ ನಿಂತು ಜನರಿಗೆ ಕೈಸನ್ನೆ ಮಾಡಿದನು. ದೊಡ್ಡ ನಿಶ್ಶಬ್ದತೆ ಉಂಟಾದಾಗ ಇಬ್ರಿಯ ಭಾಷೆಯಲ್ಲಿ ಅವರೊಂದಿಗೆ--
❮
❯