ಅಪೊಸ್ತಲರ ಕೃತ್ಯಗ 10 : 1 (KNV)
ಕೈಸರೈಯದಲ್ಲಿ ಇತಾಲ್ಯದ ಪಟಾಲಮೆನಿಸಿ ಕೊಳ್ಳುವ ಒಂದು ಪಟಾಲಮಿನ ಶತಾ ಧಿಪತಿ ಯಾದ ಕೊರ್ನೇಲ್ಯನೆಂಬ ಒಬ್ಬ ಮನುಷ್ಯ ನಿದ್ದನು.
ಅಪೊಸ್ತಲರ ಕೃತ್ಯಗ 10 : 2 (KNV)
ಅವನು ಭಕ್ತನೂ ತನ್ನ ಮನೆಯವರೆಲ್ಲರ ಸಹಿತವಾಗಿ ದೇವರಿಗೆ ಭಯಪಡುವವನೂ ಆಗಿದ್ದು ಜನರಿಗೆ ಬಹಳವಾಗಿ ದಾನವನ್ನು ಮಾಡುತ್ತಾ ದೇವರಿಗೆ ನಿತ್ಯವೂ ಪ್ರಾರ್ಥನೆ ಮಾಡುತ್ತಾ ಇದ್ದನು.
ಅಪೊಸ್ತಲರ ಕೃತ್ಯಗ 10 : 3 (KNV)
ಹಗಲಿನಲ್ಲಿ ಸುಮಾರು ಒಂಭತ್ತನೆಯ ತಾಸಿಗೆ (ಮೂರು ಘಂಟೆಗೆ) ಅವನಿಗಾದ ದರ್ಶನದಲ್ಲಿ ಒಬ್ಬ ದೇವದೂತನು ಅವನ ಬಳಿಗೆ ಬಂದು--ಕೊರ್ನೇ ಲ್ಯನೇ ಎಂದು ಕರೆಯುವದನ್ನು ಅವನು ಪ್ರತ್ಯಕ್ಷವಾಗಿ ಕಂಡನು.
ಅಪೊಸ್ತಲರ ಕೃತ್ಯಗ 10 : 4 (KNV)
ಅವನು ಆ ದೂತನನ್ನು ದೃಷ್ಟಿಸಿ ನೋಡಿ ಭಯಹಿಡಿದವನಾಗಿ--ಕರ್ತನೇ, ಇದೇನು ಎಂದು ಕೇಳಲು ದೂತನು ಅವನಿಗೆ--ನಿನ್ನ ಪ್ರಾರ್ಥನೆಗಳೂ ನಿನ್ನ ದಾನಗಳೂ ದೇವರ ಮುಂದೆ ಜ್ಞಾಪಕಾರ್ಥವಾಗಿ ಮೇಲಕ್ಕೇರಿ ಬಂದವು.
ಅಪೊಸ್ತಲರ ಕೃತ್ಯಗ 10 : 5 (KNV)
ಈಗ ನೀನು ಯೊಪ್ಪಕ್ಕೆ ಜನರನ್ನು ಕಳುಹಿಸಿ ಪೇತ್ರನೆನಿಸಿಕೊಳ್ಳುವ ಸೀಮೋನ ನನ್ನು ಕರೆಯಿಸಬೇಕು.
ಅಪೊಸ್ತಲರ ಕೃತ್ಯಗ 10 : 6 (KNV)
ಅವನು ಚರ್ಮಕಾರನಾದ ಸೀಮೋನನ ಬಳಿಯಲ್ಲಿ ಇಳುಕೊಂಡಿದ್ದಾನೆ; ಈ ಸೀಮೋನನ ಮನೆಯು ಸಮುದ್ರದ ಬಳಿಯಲ್ಲಿದೆ. ನೀನು ಮಾಡಬೇಕಾದದ್ದನ್ನು ಅವನು ನಿನಗೆ ತಿಳಿಸುವನು ಎಂದು ಹೇಳಿದನು.
ಅಪೊಸ್ತಲರ ಕೃತ್ಯಗ 10 : 7 (KNV)
ತನ್ನ ಸಂಗಡ ಮಾತನಾಡಿದ ದೂತನು ಹೊರಟುಹೋದ ಮೇಲೆ ಕೊರ್ನೇಲ್ಯನು ತನ್ನ ಮನೆಯ ಪರಿಚಾರಕರಲ್ಲಿ ಇಬ್ಬರನ್ನೂ ತನ್ನ ಹತ್ತಿರ ಯಾವಾಗಲೂ ಇರುತ್ತಿದ್ದ ಸೈನಿಕರಲ್ಲಿ ಒಬ್ಬ ದೇವಭಕ್ತ ನನ್ನೂ ಕರೆದು
ಅಪೊಸ್ತಲರ ಕೃತ್ಯಗ 10 : 8 (KNV)
ಅವರಿಗೆ ಈ ಸಂಗತಿಗಳನ್ನೆಲ್ಲಾ ವಿವರ ವಾಗಿ ಹೇಳಿ ಅವರನ್ನು ಯೊಪ್ಪಕ್ಕೆ ಕಳುಹಿಸಿದನು.
ಅಪೊಸ್ತಲರ ಕೃತ್ಯಗ 10 : 9 (KNV)
ಮರುದಿನ ಅವರು ಪ್ರಯಾಣಮಾಡಿ ಆ ಊರಿನ ಹತ್ತಿರಕ್ಕೆ ಬರುತ್ತಿರುವಾಗ ಪೇತ್ರನು ಸುಮಾರು ಆರನೇ ತಾಸಿನಲ್ಲಿ (ಹನ್ನೆರಡು ಘಂಟೆಗೆ) ಪ್ರಾರ್ಥನೆ ಮಾಡು ವದಕ್ಕಾಗಿ ಮಾಳಿಗೆಯನ್ನು ಹತ್ತಿದನು.
ಅಪೊಸ್ತಲರ ಕೃತ್ಯಗ 10 : 10 (KNV)
ಅವನು ಬಹಳ ಹಸಿದು ಊಟಮಾಡಬೇಕೆಂದಿದ್ದನು; ಅವರು ಊಟಕ್ಕೆ ಸಿದ್ಧಮಾಡುತ್ತಿರುವಷ್ಟರಲ್ಲಿ ಅವನು ಪರವಶ ನಾಗಿ
ಅಪೊಸ್ತಲರ ಕೃತ್ಯಗ 10 : 11 (KNV)
ಆಕಾಶವು ತೆರೆದಿರುವದನ್ನೂ ಒಂದು ಪಾತ್ರೆ ಯಂತಿರುವ ನಾಲ್ಕು ಮೂಲೆಗಳನ್ನು ಕಟ್ಟಿದ್ದ ದೊಡ್ಡ ಜೋಳಿಗೆಯು ಭೂಮಿಯ ಮೇಲೆ ಅವನ ಬಳಿಗೆ ಇಳಿಯುವದನ್ನೂ ಕಂಡನು.
ಅಪೊಸ್ತಲರ ಕೃತ್ಯಗ 10 : 12 (KNV)
ಭೂಮಿಯ ಮೇಲಿ ರುವ ನಾಲ್ಕು ಕಾಲುಗಳುಳ್ಳ ಎಲ್ಲಾ ತರವಾದ ಪಶು ಗಳೂ ಕಾಡುಮೃಗಗಳೂ ಹರಿದಾಡುವ ಕ್ರಿಮಿಕೀಟ ಗಳೂ ಆಕಾಶದ ಪಕ್ಷಿಗಳೂ ಅದರೊಳಗೆ ಇದ್ದವು.
ಅಪೊಸ್ತಲರ ಕೃತ್ಯಗ 10 : 13 (KNV)
ಆಗ--ಪೇತ್ರನೇ, ಎದ್ದು ಕೊಯ್ದು ತಿನ್ನು ಎಂದು ಹೇಳುವ ಒಂದು ಧ್ವನಿಯು ಅವನಿಗೆ ಕೇಳಿಸಿತು.
ಅಪೊಸ್ತಲರ ಕೃತ್ಯಗ 10 : 14 (KNV)
ಅದಕ್ಕೆ ಪೇತ್ರನು--ಕರ್ತನೇ, ಹಾಗಲ್ಲ, ನಾನೆಂದೂ ಹೊಲೆಯಾದ ಪದಾರ್ಥವನ್ನಾಗಲೀ ಅಶುದ್ಧ ಪದಾ ರ್ಥವನ್ನಾಗಲೀ ತಿಂದವನಲ್ಲ ಅಂದನು.
ಅಪೊಸ್ತಲರ ಕೃತ್ಯಗ 10 : 15 (KNV)
ದೇವರು ಶುದ್ಧಮಾಡಿದ್ದನ್ನು ನೀನು ಹೊಲೆಯೆನ್ನಬೇಡ ಎಂದು ತಿರಿಗಿ ಎರಡನೆಯ ಸಾರಿ ಅವನಿಗೆ ಹೇಳುವ ಧ್ವನಿಯು ಕೇಳಿಸಿತು.
ಅಪೊಸ್ತಲರ ಕೃತ್ಯಗ 10 : 16 (KNV)
ಹೀಗೆ ಮೂರು ಸಾರಿ ಆಯಿತು. ತರು ವಾಯ ಆ ಪಾತ್ರೆಯು ಪುನಃ ಆಕಾಶದೊಳಗೆ ಸೇರಿ ಕೊಂಡಿತು.
ಅಪೊಸ್ತಲರ ಕೃತ್ಯಗ 10 : 17 (KNV)
ಪೇತ್ರನು ತನಗಾದ ಈ ದರ್ಶನವು ಏನಾಗಿರ ಬಹುದೆಂದು ತನ್ನಲ್ಲಿ ಸಂದೇಹಪಡುತ್ತಿರುವಾಗ ಇಗೋ, ಕೊರ್ನೇಲ್ಯನು ಕಳುಹಿಸಿದ್ದ ಆ ಮನುಷ್ಯರು ಸೀಮೋ ನನ ಮನೆ ಯಾವದು ಎಂದು ಕೇಳಿಕೊಂಡು ಬಂದು ಬಾಗಿಲ ಬಳಿಯಲ್ಲಿ ನಿಂತು
ಅಪೊಸ್ತಲರ ಕೃತ್ಯಗ 10 : 18 (KNV)
ಪೇತ್ರನೆನಿಸಿಕೊಳ್ಳುವ ಸೀಮೋನನು ಇಲ್ಲಿ ಇಳುಕೊಂಡಿದ್ದಾನೋ ಎಂದು ಕೂಗಿ ಕೇಳಿದರು.
ಅಪೊಸ್ತಲರ ಕೃತ್ಯಗ 10 : 19 (KNV)
ಪೇತ್ರನು ಆ ದರ್ಶನದ ವಿಷಯ ದಲ್ಲಿ ಆಲೋಚನೆ ಮಾಡುತ್ತಿರಲು ಆತ್ಮನು ಅವ ನಿಗೆ--ಅಗೋ, ಮೂವರು ಮನುಷ್ಯರು ನಿನ್ನನ್ನು ವಿಚಾರಿಸುತ್ತಾರೆ;
ಅಪೊಸ್ತಲರ ಕೃತ್ಯಗ 10 : 20 (KNV)
ನೀನೆದ್ದು ಕೆಳಗಿಳಿದು ಏನೂ ಸಂಶಯಪಡದೆ ಅವರ ಜೊತೆಯಲ್ಲಿ ಹೋಗು; ನಾನೇ ಅವರನ್ನು ಕಳುಹಿಸಿದ್ದೇನೆಂದು ಹೇಳಿದನು.
ಅಪೊಸ್ತಲರ ಕೃತ್ಯಗ 10 : 21 (KNV)
ಪೇತ್ರನು ಕೆಳಗಿಳಿದು ಕೊರ್ನೇಲ್ಯನು ಕಳುಹಿಸಿದ ಆ ಮನುಷ್ಯರ ಬಳಿಗೆ ಬಂದು--ಇಗೋ, ನೀವು ವಿಚಾರಿಸುವವನು ನಾನೇ; ನೀವು ಬಂದ ಕಾರಣವೇನು ಎಂದು ಕೇಳಲು
ಅಪೊಸ್ತಲರ ಕೃತ್ಯಗ 10 : 22 (KNV)
ಅವರು--ಕೊರ್ನೇಲ್ಯನೆಂಬ ಒಬ್ಬ ಶತಾಧಿಪತಿ ಇದ್ದಾನೆ. ಅವನು ನೀತಿವಂತನೂ ದೇವರಿಗೆ ಭಯಪಡು ವವನೂ ಯೆಹೂದ್ಯ ಜನಾಂಗದವರೆಲ್ಲರಿಂದ ಒಳ್ಳೇ ಹೆಸರು ಹೊಂದಿದವನೂ ಆಗಿದ್ದಾನೆ; ನಿನ್ನನ್ನು ತನ್ನ ಮನೆಗೆ ಕರೇ ಕಳುಹಿಸಿಕೊಂಡು ನಿನ್ನ ಮಾತುಗಳನ್ನು ಕೇಳಬೇಕೆಂದು ಅವನು ಪರಿಶುದ್ಧ ದೂತ
ಅಪೊಸ್ತಲರ ಕೃತ್ಯಗ 10 : 23 (KNV)
ಆಗ ಪೇತ್ರನು ಅವರನ್ನು ಒಳಕ್ಕೆ ಕರೆದು ಸತ್ಕಾರ ಮಾಡಿದನು. ಮರುದಿನ ಅವನು ಎದ್ದು ಅವರ ಜೊತೆ ಯಲ್ಲಿ ಹೊರಟನು; ಯೊಪ್ಪದಲ್ಲಿದ್ದ ಸಹೋದರರಲ್ಲಿ ಕೆಲವರು ಅವನ ಕೂಡ ಹೋದರು.
ಅಪೊಸ್ತಲರ ಕೃತ್ಯಗ 10 : 24 (KNV)
ಮರುದಿನ ವಾದ ಮೇಲೆ ಅವರು ಕೈಸರೈಯಕ್ಕೆ ಸೇರಿದರು. ಕೊರ್ನೇಲ್ಯನು ತನ್ನ ಬಂಧುಬಳಗದವರನ್ನೂ ಹತ್ತಿರದ ಮಿತ್ರರನ್ನೂ ಕೂಡ ಕರೆಯಿಸಿ ಅವರಿಗಾಗಿ ಎದುರು ನೋಡುತ್ತಿದ್ದನು.
ಅಪೊಸ್ತಲರ ಕೃತ್ಯಗ 10 : 25 (KNV)
ಪೇತ್ರನು ಒಳಗೆ ಬಂದಾಗ ಕೊರ್ನೇಲ್ಯನು ಅವನನ್ನು ಎದುರುಗೊಂಡು ಅವನ ಪಾದಕ್ಕೆ ಬಿದ್ದು ನಮಸ್ಕರಿಸಿದನು.
ಅಪೊಸ್ತಲರ ಕೃತ್ಯಗ 10 : 26 (KNV)
ಆದರೆ ಪೇತ್ರನು --ಏಳು, ನಾನು ಸಹ ಮನುಷ್ಯನು ಎಂದು ಹೇಳಿ ಅವನನ್ನು ಎತ್ತಿ
ಅಪೊಸ್ತಲರ ಕೃತ್ಯಗ 10 : 27 (KNV)
ಅವನ ಸಂಗಡ ಸಂಭಾಷಣೆ ಮಾಡುತ್ತಾ ಮನೆಯೊಳಕ್ಕೆ ಬಂದನು. ಅಲ್ಲಿ ಬಹು ಜನರು ಕೂಡಿಬಂದಿರುವದನ್ನು ಕಂಡು
ಅಪೊಸ್ತಲರ ಕೃತ್ಯಗ 10 : 28 (KNV)
ಅವ ರಿಗೆ--ಯೆಹೂದ್ಯನಾಗಿರುವವನು ಅನ್ಯಜನಾಂಗದವ ರಲ್ಲಿ ಒಬ್ಬನ ಕೂಡ ಹೊಕ್ಕು ಬಳಿಕೆ ಮಾಡುವದಾಗಲೀ ಅವನ ಬಳಿಗೆ ಬರುವದಾಗಲೀ ನ್ಯಾಯವಲ್ಲವೆಂದು ನೀವು ಬಲ್ಲಿರಷ್ಟೆ. ನನಗಂತೂ ಯಾವ ಮನುಷ್ಯನನ್ನಾ ದರೂ ಹೊಲೆಯನು ಇಲ್ಲವೆ ಅಶುದ್ಧನು ಅನ್ನಬಾರ ದೆಂದು ದೇವರು ನನಗೆ ತೋರಿ
ಅಪೊಸ್ತಲರ ಕೃತ್ಯಗ 10 : 29 (KNV)
ಆದಕಾರಣ ನೀವು ನನ್ನನ್ನು ಕರೇಕಳುಹಿಸಿದಾಗ ನಾನು ಯಾವ ಎದುರು ಮಾತನ್ನೂ ಹೇಳದೆ ತಕ್ಷಣ ಬಂದೆನು. ಈಗ ನೀವು ನನ್ನನ್ನು ಕರೆಯಿಸಿದ ಉದ್ದೇಶವೇನು ಎಂದು ನಾನು ಕೇಳುತ್ತೇನೆ ಎಂದು ಹೇಳಿದನು.
ಅಪೊಸ್ತಲರ ಕೃತ್ಯಗ 10 : 30 (KNV)
ಅದಕ್ಕೆ ಕೊರ್ನೇಲ್ಯನು--ನಾನು ನಾಲ್ಕು ದಿನಗಳ ಹಿಂದೆ ಈ ಗಳಿಗೆಯವರೆಗೂ ಉಪವಾಸವಿದ್ದು ಒಂಭತ್ತನೆಯ ತಾಸಿನಲ್ಲಿ (ಮೂರು ಘಂಟೆಗೆ) ನನ್ನ ಮನೆಯಲ್ಲಿ ಪ್ರಾರ್ಥಿಸಿದಾಗ ಇಗೋ, ಹೊಳೆಯುವ ವಸ್ತ್ರವನ್ನು ಧರಿಸಿಕೊಂಡಿದ್ದ ಒಬ್ಬ ಮನುಷ್ಯನು ನನ್ನೆದುರಿಗೆ ನಿಂತು ಕೊಂಡು--
ಅಪೊಸ್ತಲರ ಕೃತ್ಯಗ 10 : 31 (KNV)
ಕೊರ್ನೇಲ್ಯನೇ, ನಿನ್ನ ಪ್ರಾರ್ಥನೆಯು ಕೇಳಬಂತು. ನಿನ್ನ ದಾನಗಳು ದೇವರ ಸನ್ನಿಧಾನದಲ್ಲಿ ನೆನಪಿಗೆ ಬಂದವು.
ಅಪೊಸ್ತಲರ ಕೃತ್ಯಗ 10 : 32 (KNV)
ಅದಕಾರಣ ನೀನು ಯೊಪ್ಪಕ್ಕೆ ಕಳುಹಿಸಿ ಪೇತ್ರನೆನಿಸಿಕೊಳ್ಳುವ ಸೀಮೋನನನ್ನು ಕರೆಯಿಸಬೇಕು; ಅವನು ಚರ್ಮಕಾರನಾದ ಸೀಮೋ ನನ ಮನೆಯಲ್ಲಿ ಇಳುಕೊಂಡಿದ್ದಾನೆ; ಆ ಮನೆ ಸಮುದ್ರದ ಬಳಿಯಲ್ಲಿದೆ. ಅವನು ಬಂದು ನಿನ್ನೊಂದಿಗೆ ಮಾತನಾಡುವನು ಎಂದು ಹೇಳಿದನು.
ಅಪೊಸ್ತಲರ ಕೃತ್ಯಗ 10 : 33 (KNV)
ಆದಕಾರಣ ನಾನು ತಡಮಾಡದೆ ನಿನ್ನ ಬಳಿಗೆ ಕಳುಹಿಸಿದೆನು. ನೀನು ಬಂದದ್ದು ಒಳ್ಳೇದಾಯಿತು. ಹೀಗಿರುವದರಿಂದ ಕರ್ತನು ನಿನಗೆ ಅಪ್ಪಣೆ ಕೊಟ್ಟಿರುವ ಎಲ್ಲಾ ಮಾತು ಗಳನ್ನು ಕೇಳುವದಕ್ಕೆ ನಾವೆಲ್ಲರು ಈಗ ದೇವರ ಸನ್ನಿಧಾನದಲ್ಲಿ ಕೂಡಿದ್ದೇವೆ ಅಂದನು.
ಅಪೊಸ್ತಲರ ಕೃತ್ಯಗ 10 : 34 (KNV)
ಆಗ ಪೇತ್ರನು ತನ್ನ ಬಾಯಿ ತೆರೆದು ಹೇಳಿದ್ದೇನಂದರೆ--ನಿಜವಾಗಿಯೂ ದೇವರು ಪಕ್ಷಪಾತಿ ಅಲ್ಲವೆಂದು ನಾನು ತಿಳಿದಿದ್ದೇನೆ.
ಅಪೊಸ್ತಲರ ಕೃತ್ಯಗ 10 : 35 (KNV)
ಆದರೆ ಪ್ರತಿ ಯೊಂದು ಜನಾಂಗದವರಲ್ಲಿ ದೇವರಿಗೆ ಭಯಪಟ್ಟು ನೀತಿಯನ್ನು ನಡಿಸುವವನು ಆತನಿಗೆ ಮೆಚ್ಚಿಕೆಯಾ ಗಿದ್ದಾನೆ.
ಅಪೊಸ್ತಲರ ಕೃತ್ಯಗ 10 : 36 (KNV)
ಯೇಸು ಕ್ರಿಸ್ತನ ಮೂಲಕ ದೇವರು ಸಮಾಧಾನವನ್ನು ಪ್ರಕಟಿಸುತ್ತಾ ಇಸ್ರಾಯೇಲ್ ಜನರಿಗೆ ವಾಕ್ಯವನ್ನು ಅನುಗ್ರಹಿಸಿದ್ದಾನೆ; (ಆತನು ಎಲ್ಲರಿಗೂ ಕರ್ತನಾಗಿದ್ದಾನೆ.)
ಅಪೊಸ್ತಲರ ಕೃತ್ಯಗ 10 : 37 (KNV)
ಯೋಹಾನನು ಸಾರಿದ ಬಾಪ್ತಿಸ್ಮದ ತರುವಾಯ ಆ ವಾಕ್ಯವು ಗಲಿಲಾಯದಿಂದ ಪ್ರಾರಂಭವಾಗಿ ಯೂದಾಯದಲ್ಲೆಲ್ಲಾ ಪ್ರಬಲವಾಯಿ ತೆಂಬದನ್ನೂ
ಅಪೊಸ್ತಲರ ಕೃತ್ಯಗ 10 : 38 (KNV)
ದೇವರು ನಜರೇತಿನ ಯೇಸುವನ್ನು ಪವಿತ್ರಾತ್ಮನಿಂದಲೂ ಬಲದಿಂದಲೂ ಅಭಿಷೇಕಿಸಿದ ನೆಂಬದನ್ನೂ ಹೇಗೆ ಆತನು ಒಳ್ಳೇದನ್ನು ಮಾಡುತ್ತಾ ಸೈತಾನನಿಂದ ಬಾಧಿಸಲ್ಪಡುತ್ತಿರುವವರೆಲ್ಲರನ್ನು ಗುಣ ಮಾಡುತ್ತಾ ಸಂಚರಿಸಿದನೆಂಬದನ್ನು ನೀವು ತಿಳಿದಿದ್ದೀರಿ; ಯಾಕಂದರೆ ದೇವರು ಆತನ ಸಂಗಡ ಇದ್ದನು.
ಅಪೊಸ್ತಲರ ಕೃತ್ಯಗ 10 : 39 (KNV)
ಆತನು ಯೆಹೂದ್ಯರ ಸೀಮೆಯಲ್ಲಿಯೂ ಯೆರೂಸ ಲೇಮಿನಲ್ಲಿಯೂ ಮಾಡಿದ ಎಲ್ಲಾ ಕಾರ್ಯಗಳಿಗೆ ನಾವು ಸಾಕ್ಷಿಗಳಾಗಿದ್ದೇವೆ; ಅವರು ಆತನನ್ನು ಮರದ ಮೇಲೆ ತೂಗಹಾಕಿಕೊಂದರು;
ಅಪೊಸ್ತಲರ ಕೃತ್ಯಗ 10 : 40 (KNV)
ದೇವರು ಆತನನ್ನು ಮೂರನೆಯ ದಿನದಲ್ಲಿ ಎಬ್ಬಿಸಿ ಬಹಿರಂಗವಾಗಿ ತೋರ್ಪಡಿಸಿದನು.
ಅಪೊಸ್ತಲರ ಕೃತ್ಯಗ 10 : 41 (KNV)
ದೇವರು ಎಲ್ಲರಿಗೆ ತೋರ್ಪಡಿ ಸದೆ ಆತನು ಮುಂಚಿತವಾಗಿ ಆರಿಸಿಕೊಂಡಿದ್ದ ಸಾಕ್ಷಿಗಳಾಗಿರುವ ನಮಗೆ ಆತನನ್ನು ತೋರ್ಪಡಿಸಿ ದನು. ಆತನು ಸತ್ತವರೊಳಗಿಂದ ಎದ್ದು ಬಂದ ಮೇಲೆ ನಾವು ಆತನ ಸಂಗಡ ತಿಂದು ಕುಡಿದೆವು.
ಅಪೊಸ್ತಲರ ಕೃತ್ಯಗ 10 : 42 (KNV)
ಆತನೇ ಜೀವಿತರಿಗೂ ಸತ್ತವರಿಗೂ ನ್ಯಾಯಾಧಿಪತಿಯಾಗಿ ದೇವರಿಂದ ನೇಮಕವಾದವನೆಂಬದನ್ನು ಜನರಿಗೆ ಸಾರಿ ಸಾಕ್ಷಿ ಹೇಳಬೇಕೆಂದು ದೇವರು ನಮಗೆ ಅಪ್ಪಣೆಕೊಟ್ಟನು.
ಅಪೊಸ್ತಲರ ಕೃತ್ಯಗ 10 : 43 (KNV)
ಆತನ ಹೆಸರಿನಲ್ಲಿ ನಂಬಿಕೆಯಿ ಡುವ ಪ್ರತಿಯೊಬ್ಬನು ಆತನಲ್ಲಿ ಪಾಪ ಪರಿಹಾರವನ್ನು ಹೊಂದುವನೆಂದು ಆತನ ವಿಷಯದಲ್ಲಿ ಪ್ರವಾದಿ ಗಳೆಲ್ಲರು ಸಾಕ್ಷಿಕೊಡುತ್ತಾರೆ ಅಂದನು.
ಅಪೊಸ್ತಲರ ಕೃತ್ಯಗ 10 : 44 (KNV)
ಪೇತ್ರನು ಈ ಮಾತುಗಳನ್ನು ಇನ್ನೂ ಹೇಳು ತ್ತಿರುವಾಗ ವಾಕ್ಯವನ್ನು ಕೇಳಿದವರೆಲ್ಲರ ಮೇಲೆ ಪವಿ ತ್ರಾತ್ಮನು ಇಳಿದನು.
ಅಪೊಸ್ತಲರ ಕೃತ್ಯಗ 10 : 45 (KNV)
ಪೇತ್ರನ ಸಂಗಡ ಬಂದಿದ್ದ ಸುನ್ನತಿಯಾದವರಲ್ಲಿ ನಂಬಿದವರೆಲ್ಲಾ ಅನ್ಯಜನಗಳ ಮೇಲೆಯೂ ಪವಿತ್ರಾತ್ಮನು ಸುರಿಸಲ್ಪಟ್ಟದ್ದರಿಂದ ಅತ್ಯಾ ಶ್ಚರ್ಯಪಟ್ಟರು.
ಅಪೊಸ್ತಲರ ಕೃತ್ಯಗ 10 : 46 (KNV)
ಯಾಕಂದರೆ ಅವರು ಭಾಷೆಗಳನ್ನು ಮಾತನಾಡುತ್ತಾ ದೇವರನ್ನು ಕೊಂಡಾಡುತ್ತಾ ಇದ್ದದ್ದನ್ನು ಅವರು ಕೇಳಿದರು. ಆಗ ಪೇತ್ರನು--
ಅಪೊಸ್ತಲರ ಕೃತ್ಯಗ 10 : 47 (KNV)
ನಮ್ಮ ಹಾಗೆಯೇ ಪವಿತ್ರಾತ್ಮನನ್ನು ಹೊಂದಿದ ಇವರಿಗೆ ನೀರಿನ ಬಾಪ್ತಿಸ್ಮವಾಗದಂತೆ ಯಾರಾದರೂ ಅಭ್ಯಂತರ ಮಾಡಾರೇ ಎಂದು ಹೇಳಿ--
ಅಪೊಸ್ತಲರ ಕೃತ್ಯಗ 10 : 48 (KNV)
ಅವರು ಕರ್ತನ ಹೆಸರಿನಲ್ಲಿ ಬಾಪ್ತಿಸ್ಮ ಹೊಂದುವಂತೆ ಅಪ್ಪಣೆಕೊಟ್ಟನು. ಅಮೇಲೆ ಅವನು ಇನ್ನೂ ಕೆಲವು ದಿವಸ ಇರಬೇಕೆಂದು ಅವರು ಬೇಡಿಕೊಂಡರು.
❮
❯