3 ಯೋಹಾನನು 1 : 1 (KNV)
ಹಿರಿಯನಾದ ಸತ್ಯದಲ್ಲಿ ಬಹಳವಾಗಿ ಪ್ರೀತಿಸುವ ಗಾಯನಿಗೆ--
3 ಯೋಹಾನನು 1 : 2 (KNV)
ಪ್ರಿಯನೇ, ನಿನ್ನ ಆತ್ಮವು ಅಭಿವೃದಿ ಹೊಂದಿರುವ ಪ್ರಕಾರವೇ ಎಲ್ಲಾ ವಿಷಯಗಳಿಗಿಂತ ನೀನು ಸ್ವಸ್ಥನಾಗಿದ್ದು ಕ್ಷೇಮಹೊಂದಿ ಅಭಿವೃದ್ಧಿಯಾಗ ಬೇಕೆಂದು ನಾನು ಅಪೇಕ್ಷಿಸುತ್ತೇನೆ.
3 ಯೋಹಾನನು 1 : 3 (KNV)
ಸಹೋದರರು ಬಂದಾಗ ನಿನ್ನಲ್ಲಿರುವ ಸತ್ಯವನ್ನು ಸಾಕ್ಷೀಕರಿಸಿದ್ದರಿಂದ ನಾನು ಬಹಳವಾಗಿ ಸಂತೋಷಪಟ್ಟೆನು.
3 ಯೋಹಾನನು 1 : 4 (KNV)
ನನ್ನ ಮಕ್ಕಳು ಸತ್ಯವನ್ನನುಸರಿಸಿ ನಡೆಯುವವರಾಗಿದ್ದಾರೆಂದು ಕೇಳುವ ದಕ್ಕಿಂತ ಹೆಚ್ಚಾದ ಸಂತೋಷವು ನನಗಿಲ್ಲ.
3 ಯೋಹಾನನು 1 : 5 (KNV)
ಪ್ರಿಯನೇ, ಸಹೋದರರಿಗೂ ಪರಿಚಯವಿಲ್ಲದವ ರಿಗೂ ನೀನು ಮಾಡುವದನ್ನೆಲ್ಲಾ ನಂಬಿಗಸ್ತನಾಗಿ ಮಾಡುತ್ತೀ.
3 ಯೋಹಾನನು 1 : 6 (KNV)
ಅವರು ಸಭೆಯ ಮುಂದೆ ನಿನ್ನ ಪ್ರೀತಿಗೆ ಸಾಕ್ಷಿ ಹೇಳಿದರು. ಅವರನ್ನು ನೀನು ಭಕ್ತಿಪೂರ್ವಕವಾಗಿ ಸಾಗ ಕಳುಹಿಸಿದರೆ ನೀನು ಒಳ್ಳೇದು ಮಾಡುತ್ತೀ.
3 ಯೋಹಾನನು 1 : 7 (KNV)
ಯಾಕಂದರೆ ಅವರು ಆತನ ಹೆಸರಿನ ನಿಮಿತ್ತವಾಗಿ ಹೊರಟು ಹೋಗಿದ್ದಾರೆ; ಅನ್ಯಜನಗಳಿಂದ ಏನೂ ತೆಗೆದುಕೊಳ್ಳುವವರಲ್ಲ.
3 ಯೋಹಾನನು 1 : 8 (KNV)
ಆದದರಿಂದ ನಾವು ಸತ್ಯಕ್ಕೆ ಸಹಕಾರಿಗಳಾಗುವಂತೆ ಅಂಥವರನ್ನು ಸೇರಿಸಿಕೊಳ್ಳುವ ಹಂಗಿನಲ್ಲಿದ್ದೇವೆ.
3 ಯೋಹಾನನು 1 : 9 (KNV)
ಸಭೆಗೆ ನಾನು ಬರೆದಿದ್ದೆನು; ಆದರೆ ಸಭೆಯವರಲ್ಲಿ ಪ್ರಮುಖನಾಗಬೇಕೆಂದಿರುವ ದಿಯೊತ್ರೇಫನು ನಮ್ಮನ್ನು ಅಂಗೀಕರಿಸುವದಿಲ್ಲ.
3 ಯೋಹಾನನು 1 : 10 (KNV)
ಆದಕಾರಣ ನಾನು ಬಂದರೆ ಅವನು ಮಾಡುವ ಕೃತ್ಯಗಳನ್ನು ಜ್ಞಾಪಕ ಮಾಡುವೆನು. ಅವನು ಹರಟೆ ಕೊಚ್ಚುವವನಾಗಿ ನಮ ವಿಷಯದಲ್ಲಿ ಕೆಟ್ಟಕೆಟ್ಟ ಮಾತುಗಳನ್ನಾಡುತ್ತಾನೆ. ಇವೂ ಸಾಲದೆ ಸಹೋದರರನ್ನು ಸೇರಿಸಿಕೊಳ್ಳಬೇಕೆಂದಿ ರುವವರಿಗೆ ಅಡ್ಡಿ ಮಾಡುತ್ತಾ ತಾನೂ ಅವರನ್ನು ಸೇರಿಸಿಕೊಳ್ಳ
3 ಯೋಹಾನನು 1 : 11 (KNV)
ಪ್ರಿಯನೇ, ನೀನು ಕೆಟ್ಟದ್ದನ್ನು ಅನುಸರಿಸದೆ ಒಳ್ಳೇದನ್ನು ಅನುಸರಿಸು; ಒಳ್ಳೇದನ್ನು ಮಾಡುವವನು ದೇವರಿಗೆ ಸಂಬಂಧಪಟ್ಟವನಾಗಿದ್ದಾನೆ, ಕೆಟ್ಟದ್ದನ್ನು ಮಾಡುವವನು ದೇವರನ್ನು ಕಂಡವನಲ್ಲ.
3 ಯೋಹಾನನು 1 : 12 (KNV)
ದೇಮೇತ್ರಿ ಯನು ಎಲ್ಲರಿಂದಲೂ ಸತ್ಯದಿಂದಲೂ ಒಳ್ಳೇ ಸಾಕ್ಷಿ ಹೊಂದಿದ್ದಾನೆ. ಹೌದು, ನಾವು ಸಹ ಸಾಕ್ಷಿ ಹೇಳುವವ ರಾಗಿದ್ದೇವೆ, ನಮ್ಮ ಸಾಕ್ಷಿ ಸತ್ಯವಾದದ್ದೆಂದು ನೀವು ಬಲ್ಲಿರಿ.
3 ಯೋಹಾನನು 1 : 13 (KNV)
ನಾನು ಬರೆಯತಕ್ಕ ಅನೇಕ ವಿಷಯಗಳಿದ್ದವು; ಆದರೆ ಮಸಿ ಲೇಖಣಿಗಳಿಂದ ನಿನಗೆ ಬರೆಯುವದಕ್ಕೆ ನನಗಿಷ್ಟವಿಲ್ಲ.
3 ಯೋಹಾನನು 1 : 14 (KNV)
ಬೇಗನೆ ನಿನ್ನನ್ನು ನೋಡುವೆನೆಂದು ನಿರೀಕ್ಷಿಸುತ್ತೇನೆ; ಆಗ ಮುಖಾಮುಖಿಯಾಗಿ ನಾವು ಮಾತನಾಡುವೆವು. ನಿನಗೆ ಶಾಂತಿ ಇರಲಿ. ನಮ್ಮ ಸ್ನೇಹಿತರು ನಿನಗೆ ವಂದನೆ ಹೇಳುತ್ತಾರೆ. ಸ್ನೇಹಿತರನು ಹೆಸರ್ಹೆಸರಾಗಿ ವಂದಿಸು.

1 2 3 4 5 6 7 8 9 10 11 12 13 14