2 ತಿಮೊಥೆಯನಿಗೆ 3 : 1 (KNV)
ಆದರೆ ಕಡೇ ದಿವಸಗಳಲ್ಲಿ ಅಪಾಯಕರ ವಾದ ಕಾಲಗಳು ಬರುವವೆಂಬದನ್ನು ಸಹ ತಿಳಿದುಕೋ.
2 ತಿಮೊಥೆಯನಿಗೆ 3 : 2 (KNV)
ಮನುಷ್ಯರು ತಮ್ಮನ್ನು ತಾವೇ ಪ್ರೀತಿಸಿ ಕೊಳ್ಳುವವರೂ ಲೋಭಿಗಳೂ ಬಡಾಯಿ ಕೊಚ್ಚುವ ವರೂ ಅಹಂಕಾರಿಗಳೂ ದೇವದೂಷಕರೂ ತಂದೆ ತಾಯಿಗಳಿಗೆ ಅವಿಧೇಯರೂ ಉಪಕಾರನೆನಸದವರೂ ಅಶುದ್ಧರೂ
2 ತಿಮೊಥೆಯನಿಗೆ 3 : 3 (KNV)
ಸ್ವಾಭಾವಿಕವಾದ ಮಮತೆಯಿಲ್ಲದವರೂ ಒಪ್ಪಂದವನ್ನು ಮುರಿಯುವವರೂ ಸುಳ್ಳಾಗಿ ದೂರು ವವರೂ ದಮೆಯಿಲ್ಲದವರೂ ಉಗ್ರತೆಯುಳ್ಳವರೂ ಒಳ್ಳೆಯವರನ್ನೂ ಹೀನೈಸುವವರೂ
2 ತಿಮೊಥೆಯನಿಗೆ 3 : 4 (KNV)
ದ್ರೋಹಿಗಳೂ ದುಡಿಕಿನವರೂ ಉಬ್ಬಿಕೊಂಡವರೂ ದೇವರಿಗಿಂತ ಹೆಚ್ಚಾಗಿ ಭೋಗಗಳನ್ನೇ ಪ್ರೀತಿಸುವವರೂ
2 ತಿಮೊಥೆಯನಿಗೆ 3 : 5 (KNV)
ಭಕ್ತಿಯ ವೇಷವಿದ್ದು ಅದರ ಬಲವನ್ನು ಅಲ್ಲಗಳೆಯುವವರೂ ಆಗಿರುವರು; ಇಂಥವರಿಂದ ಪ್ರತ್ಯೇಕವಾಗಿರು.
2 ತಿಮೊಥೆಯನಿಗೆ 3 : 6 (KNV)
ಮನೆ ಗಳಲ್ಲಿ ನುಸುಳಿ ಪಾಪಗಳಿಂದ ತುಂಬಿದವರೂ ನಾನಾ ವಿಧವಾದ ಇಚ್ಛೆಗಳಿಂದ ನಡಿಸಲ್ಪಟ್ಟವರೂ ಆಗಿರುವ ಅವಿವೇಕಿಗಳಾದ ಸ್ತ್ರೀಯರನ್ನು ವಶಮಾಡಿಕೊಳ್ಳು ವವರೂ ಇವರೊಳಗೆ ಸೇರಿದವರೇ.
2 ತಿಮೊಥೆಯನಿಗೆ 3 : 7 (KNV)
ಇವರು ಯಾವಾಗಲೂ ಕಲಿಯುತ್ತಿದ್ದರೂ ಸತ್ಯದ ಪರಿಜ್ಞಾನ ವನ್ನು ಹೊಂದಲಾರದವರು.
2 ತಿಮೊಥೆಯನಿಗೆ 3 : 8 (KNV)
ಯನ್ನಯಂಬ್ರ ಎಂಬ ವರು ಮೋಶೆಯನ್ನು ವಿರೋಧಿಸಿದಂತೆಯೇ ಇವರು ಸಹ ಸತ್ಯವನ್ನು ವಿರೋಧಿಸುತ್ತಾರೆ; ಇದಲ್ಲದೆ ಇವರು ಬುದ್ಧಿಗೆಟ್ಟವರೂ ಭ್ರಷ್ಟರೂ ಆಗಿದ್ದಾರೆ.
2 ತಿಮೊಥೆಯನಿಗೆ 3 : 9 (KNV)
ಆದರೆ ಇವರು ಇನ್ನು ಮುಂದುವರಿಯಲಾರರು; ಈ ಯನ್ನ ಯಂಬ್ರರ ಮೂರ್ಖತನವು ಎಲ್ಲರಿಗೂ ಪರಿಷ್ಕಾರವಾಗಿ ತಿಳಿದು ಬಂದ ಪ್ರಕಾರ ಇವರದೂ ತಿಳಿದುಬರುವದು.
2 ತಿಮೊಥೆಯನಿಗೆ 3 : 10 (KNV)
ನೀನಾದರೋ ನನ್ನ ಬೋಧನೆ ನಡತೆ ಉದ್ದೇಶ ನಂಬಿಕೆ ದೀರ್ಘ ಶಾಂತಿ ಪ್ರೀತಿ ಸೈರಣೆ ಇವುಗಳನೂ
2 ತಿಮೊಥೆಯನಿಗೆ 3 : 11 (KNV)
ಅಂತಿಯೋಕ್ಯ ಇಕೋನ್ಯ ಲುಸ್ತ್ರ ಎಂಬ ಪಟ್ಟಣಗಳಲ್ಲಿ ನನಗೆ ಸಂಭವಿಸಿದ ಹಿಂಸೆಗಳನ್ನೂ ಕಷ್ಟಾನುಭವಗಳನ್ನೂ ನಾನು ಎಂಥೆಂಥ ಹಿಂಸೆಗಳನ್ನು ಸಹಿಸಿಕೊಂಡೆನೆಂಬ ದನ್ನೂ ನೀನು ಪೂರ್ಣವಾಗಿ ತಿಳಿದವನಾಗಿದ್ದೀ. ಆದರೆ ಅವೆಲ್ಲವುಗಳೊಳಗಿಂದ ಕರ್ತನು ನನ್ನನ್ನು ಬಿಡಿಸಿದನು.
2 ತಿಮೊಥೆಯನಿಗೆ 3 : 12 (KNV)
ಹೌದು, ಕ್ರಿಸ್ತ ಯೇಸುವಿನಲ್ಲಿ ಭಕ್ತಿ ಯುಳ್ಳವರಾಗಿ ಜೀವಿಸುವದಕ್ಕೆ ಮನಸ್ಸು ಮಾಡುವವ ರೆಲ್ಲರೂ ಹಿಂಸೆಗೊಳಗಾಗುವರು.
2 ತಿಮೊಥೆಯನಿಗೆ 3 : 13 (KNV)
ಆದರೆ ದುಷ್ಟರೂ ವಂಚಕರೂ ಮೋಸಮಾಡುತ್ತಾ ತಾವೇ ಮೋಸ ಹೋಗುತ್ತಾ ಹೆಚ್ಚಾದ ಕೆಟ್ಟತನಕ್ಕೆ ಹೋಗುವರು.
2 ತಿಮೊಥೆಯನಿಗೆ 3 : 14 (KNV)
ನೀನಾದರೋ ಕಲಿತು ದೃಢವಾಗಿ ನಂಬಿದವುಗಳಲ್ಲಿ ನೆಲೆಯಾಗಿರು. ಕಲಿಸಿಕೊಟ್ಟವರು ಯಾರೆಂಬದನ್ನು ಆಲೋಚಿಸು.
2 ತಿಮೊಥೆಯನಿಗೆ 3 : 15 (KNV)
ಚಿಕ್ಕಂದಿನಿಂದಲೂ ನೀನು ಪರಿಶುದ ಬರಹಗಳನ್ನು ತಿಳಿದವನಾಗಿದ್ದೀಯಲ್ಲಾ; ಆ ಬರಹಗಳು ಕ್ರಿಸ್ತ ಯೇಸುವಿನಲ್ಲಿರುವ ನಂಬಿಕೆಯ ಮೂಲಕ ರಕ್ಷಣೆ ಹೊಂದಿಸುವ ಜ್ಞಾನವನ್ನು ಕೊಡುವದಕ್ಕೆ ಶಕ್ತವಾಗಿವೆ.
2 ತಿಮೊಥೆಯನಿಗೆ 3 : 16 (KNV)
ಬರಹಗಳನ್ನು ತಿಳಿದವನಾಗಿದ್ದೀಯಲ್ಲಾ; ಆ ಬರಹಗಳು ಕ್ರಿಸ್ತ ಯೇಸುವಿನಲ್ಲಿರುವ ನಂಬಿಕೆಯ ಮೂಲಕ ರಕ್ಷಣೆ ಹೊಂದಿಸುವ ಜ್ಞಾನವನ್ನು ಕೊಡುವದಕ್ಕೆ ಶಕ್ತವಾಗಿವೆ.
2 ತಿಮೊಥೆಯನಿಗೆ 3 : 17 (KNV)
ಆದದರಿಂದ ದೇವರ ಮನುಷ್ಯನು ಪರಿಪೂರ್ಣ ನಾಗಿ ಸಕಲ ಸತ್ಕಾರ್ಯಗಳಿಗೆ ಸನ್ನದ್ಧನಾಗುವನು.

1 2 3 4 5 6 7 8 9 10 11 12 13 14 15 16 17