2 ಥೆಸಲೊನೀಕದವರಿಗೆ 2 : 1 (KNV)
ಸಹೋದರರೇ, ನಮ್ಮ ಕರ್ತನಾದ ಯೇಸು ಕ್ರಿಸ್ತನ ಬರೋಣದ ವಿಷಯವಾಗಿಯೂ ನಾವು ಆತನ ಬಳಿಯಲ್ಲಿ ಕೂಡಿಕೊಳ್ಳುವದರ ವಿಷಯ ವಾಗಿಯೂ ನಿಮ್ಮನ್ನು ಬೇಡಿಕೊಳ್ಳುವದೇನಂದರೆ--
2 ಥೆಸಲೊನೀಕದವರಿಗೆ 2 : 2 (KNV)
ಕ್ರಿಸ್ತನ ದಿನವು ಈಗಲೇ ಹತ್ತಿರವಾಯಿತೆಂದು ಆತ್ಮನಿಂದಾಗಲಿ ಮಾತಿನಿಂದಾಗಲಿ ಇಲ್ಲವೆ ನಾವು ಹಾಗೆ ಬರೆದೆವೆಂದಾಗಲಿ ನೀವು ಮನದಲ್ಲಿ ಚಂಚಲರಾಗಿ ಕಳವಳಪಡಬೇಡಿರಿ;
2 ಥೆಸಲೊನೀಕದವರಿಗೆ 2 : 3 (KNV)
ಯಾವನೂ ನಿಮ್ಮನ್ನು ಯಾವ ವಿಧದಲ್ಲಿಯೂ ಮೋಸಗೊಳಿಸದಿರಲಿ; ಯಾಕಂದರೆ ಮೊದಲು ಭ್ರಷ್ಟತೆಯು ಉಂಟಾಗಿ ನಾಶನ ಮಗನಾದ ಆ ಪಾಪದ ಮನುಷ್ಯನು ಬಾರದ ಹೊರತು ಆ ದಿನವು ಬರುವದಿಲ್ಲ;
2 ಥೆಸಲೊನೀಕದವರಿಗೆ 2 : 4 (KNV)
ಅವನು ದೇವರೆಂದು ಕರೆಯ ಲ್ಪಟ್ಟಾತನನ್ನು ಇಲ್ಲವೆ ಆರಾಧನೆ ಹೊಂದುವಾತನನ್ನು ವಿರೋಧಿಸಿ ಎಲ್ಲವುಗಳ ಮೇಲೆ ತನ್ನನ್ನು ತಾನೇ ಘನತೆಗೇರಿಸಿಕೊಂಡು ದೇವರ ಹಾಗೆ ದೇವಾಲಯದಲ್ಲಿ ಕೂತುಕೊಂಡವನಾಗಿ ತಾನೇ ದೇವರಾಗಿದ್ದಾನೆಂದು ತೋರಿಸಿಕೊಳ್ಳುತ್ತಾನೆ.
2 ಥೆಸಲೊನೀಕದವರಿಗೆ 2 : 5 (KNV)
ನಾನು ನಿಮ್ಮ ಸಂಗಡ ಇದ್ದಾಗ ಈ ಸಂಗತಿಗಳನ್ನು ನಿಮಗೆ ಹೇಳಿದ್ದು ಜ್ಞಾಪಕವಿಲ್ಲವೋ?
2 ಥೆಸಲೊನೀಕದವರಿಗೆ 2 : 6 (KNV)
ಇದಲ್ಲದೆ ಅವನು ತನ್ನ ಸಮಯದಲ್ಲಿ ಪ್ರತ್ಯಕ್ಷನಾಗು ವದಕ್ಕೆ ಏನು ಅಡ್ಡಿ ಮಾಡುತ್ತದೊ ಅದು ನಿಮಗೆ ತಿಳಿದೇ ಇದೆ.
2 ಥೆಸಲೊನೀಕದವರಿಗೆ 2 : 7 (KNV)
ದುಷ್ಟತ್ವದ ಮರ್ಮವು ಈಗಾಗಲೇ ಕಾರ್ಯ ಮಾಡುತ್ತದೆ; ಅವನು ತೆಗೆಯಲ್ಪಡುವವರೆಗೆ ಈಗ ಅಡ್ಡಿ ಮಾಡುವಾತನು ಮಾತ್ರಅಡ್ಡಿ ಮಾಡುವನು;
2 ಥೆಸಲೊನೀಕದವರಿಗೆ 2 : 8 (KNV)
ಆಗ ಆ ದುಷ್ಟನು ಪ್ರತ್ಯಕ್ಷನಾಗುವನು; ಕರ್ತನು ತನ್ನ ಬಾಯಿಯ ಉಸುರಿನಿಂದ ಅವನನ್ನು ದಹಿಸಿ ತನ್ನ ಪ್ರತ್ಯಕ್ಷತೆಯ ಪ್ರಕಾಶದಿಂದ ನಾಶಮಾಡುವನು.
2 ಥೆಸಲೊನೀಕದವರಿಗೆ 2 : 9 (KNV)
ಆ ಕೆಡುಕನ ಬರುವಿಕೆಯು ಸೈತಾನನ ಕಾರ್ಯಕ್ಕನು ಸಾರವಾಗಿರುವದು; ಅದು ಎಲ್ಲಾ ಶಕ್ತಿಯಿಂದಲೂ ಸೂಚಕ ಕಾರ್ಯಗಳಿಂದಲೂ ಸುಳ್ಳಾದ ಅದ್ಭುತ ಕಾರ್ಯಗಳಿಂದಲೂ
2 ಥೆಸಲೊನೀಕದವರಿಗೆ 2 : 10 (KNV)
ದುರ್ನೀತಿಯ ಎಲ್ಲಾ ವಂಚನೆ ಯಿಂದಲೂ ಕೂಡಿ ನಾಶವಾಗುವವರಲ್ಲಿ ಸಂಭವಿಸು ವದು; ಅವರು ಪ್ರೀತಿಯ ಸತ್ಯವನ್ನು ಅಂಗೀಕರಿಸದ ಕಾರಣ ರಕ್ಷಣೆಯನ್ನು ಹೊಂದುವದಿಲ್ಲ.
2 ಥೆಸಲೊನೀಕದವರಿಗೆ 2 : 11 (KNV)
ಇದೇ ಕಾರಣದಿಂದ ದೇವರು ಬಲವಾದ ಭ್ರಮೆಯನ್ನು ಅವರಲ್ಲಿಗೆ ಕಳುಹಿಸಿ ಅವರು ಆ ಸುಳ್ಳನ್ನು ನಂಬುವಂತೆ ಮಾಡುತ್ತಾನೆ.
2 ಥೆಸಲೊನೀಕದವರಿಗೆ 2 : 12 (KNV)
ಸತ್ಯವನ್ನು ನಂಬದೆ ಅನೀತಿಯಲ್ಲಿ ಆನಂದಪಡುವವರೆಲ್ಲರೂ ಈ ಪ್ರಕಾರ ತೀರ್ಪಿಗೆ ಒಳಗಾಗುವರು.
2 ಥೆಸಲೊನೀಕದವರಿಗೆ 2 : 13 (KNV)
ಕರ್ತನಿಗೆ ಪ್ರಿಯರಾಗಿರುವ ಸಹೊದರರೇ, ನೀವು ಆತ್ಮನಿಂದ ಶುದ್ಧೀಕರಿಸಲ್ಪಟ್ಟವರಾಗಿ ಸತ್ಯದ ಮೇಲೆ ನಂಬಿಕೆಯನ್ನಿಟ್ಟು ರಕ್ಷಣೆಯನ್ನು ಪಡೆಯುವದಕ್ಕಾಗಿ ದೇವರು ನಿಮ್ಮನ್ನು ಆದಿಯಿಂದ ಆರಿಸಿಕೊಂಡದ್ದರಿಂದ ನಾವು ನಿಮ್ಮ ವಿಷಯದಲ್ಲಿ ಯಾವಾಗಲೂ ದೇವರಿಗೆ ಕೃತಜ್ಞತಾಸ್ತುತಿ ಮಾಡುವದಕ್ಕೆ ಬದ್ದರಾಗಿದ್ದೇವೆ
2 ಥೆಸಲೊನೀಕದವರಿಗೆ 2 : 14 (KNV)
ನಮ್ಮ ಕರ್ತನಾದ ಯೇಸು ಕ್ರಿಸ್ತನ ಪ್ರಭಾವವನ್ನು ಹೊಂದಿ ಕೊಳ್ಳಬೇಕೆಂದು ದೇವರು ನಮ್ಮ ಸುವಾರ್ತೆಯ ಮೂಲಕವಾಗಿ ನಿಮ್ಮನ್ನು ಅದಕ್ಕೆ ಕರೆದನು.
2 ಥೆಸಲೊನೀಕದವರಿಗೆ 2 : 15 (KNV)
ಹೀಗಿರುವದರಿಂದ ಸಹೋದರರೇ, ದೃಢವಾಗಿ ನಿಲ್ಲಿರಿ, ನಾವು ಮಾತಿನಿಂದಾಗಲಿ ನಮ್ಮ ಪತ್ರಿಕೆ ಯಿಂದಾಗಲಿ ನಿಮಗೆ ಕಲಿಸಿದ ಬೋಧನೆಗಳನ್ನು ನೀವು ಭದ್ರವಾಗಿ ಹಿಡಿದುಕೊಂಡಿರ್ರಿ.
2 ಥೆಸಲೊನೀಕದವರಿಗೆ 2 : 16 (KNV)
ನಮ್ಮನ್ನು ಪ್ರೀತಿಸಿ ನಮಗೆ ನಿತ್ಯವಾದ ಆದರಣೆಯನ್ನೂ ಉತ್ತಮವಾದ ನಿರೀಕ್ಷೆಯನ್ನೂ ಕೃಪೆಯಿಂದ ಅನುಗ್ರ ಹಿಸಿದ ನಮ ಕರ್ತನಾದ ಯೇಸು ಕ್ರಿಸ್ತನೂ ನಮ್ಮ ತಂದೆಯಾದ ದೇವರೂನಿಮ್ಮ ಹೃದಯಗಳನ್ನು ಸಂತೈಸಿ ಸಕಲ ಸದ್ವಾಕ್ಯದಲ್ಲಿಯೂ ಸತ್ಕಾರ್ಯದಲ್ಲಿಯೂ ದೃಢಪಡಿಸಲಿ.
2 ಥೆಸಲೊನೀಕದವರಿಗೆ 2 : 17 (KNV)
ನಿಮ್ಮ ಹೃದಯಗಳನ್ನು ಸಂತೈಸಿ ಸಕಲ ಸದ್ವಾಕ್ಯದಲ್ಲಿಯೂ ಸತ್ಕಾರ್ಯದಲ್ಲಿಯೂ ದೃಢಪಡಿಸಲಿ.

1 2 3 4 5 6 7 8 9 10 11 12 13 14 15 16 17

BG:

Opacity:

Color:


Size:


Font: