2 ಥೆಸಲೊನೀಕದವರಿಗೆ 1 : 1 (KNV)
ನಮ್ಮ ತಂದೆಯಾದ ದೇವರಲ್ಲಿಯೂ ಕರ್ತನಾದ ಯೇಸು ಕ್ರಿಸ್ತನಲ್ಲಿಯೂ ಇರುವ ಥೆಸಲೊನೀಕದವರ ಸಭೆಗೆ ಪೌಲ ಸಿಲ್ವಾನ ತಿಮೊಥೆ ಯರು ಬರೆಯುವದೇನಂದರೆ--
2 ಥೆಸಲೊನೀಕದವರಿಗೆ 1 : 2 (KNV)
ನಮ್ಮ ತಂದೆಯಾದ ದೇವರಿಂದಲೂ ಕರ್ತನಾದ ಯೇಸು ಕ್ರಿಸ್ತನಿಂದಲೂ ನಿಮಗೆ ಕೃಪೆಯೂ ಶಾಂತಿಯೂ ಆಗಲಿ.
2 ಥೆಸಲೊನೀಕದವರಿಗೆ 1 : 3 (KNV)
ಸಹೋದರರೇ, ನಾವು ಯಾವಾಗಲೂ ನಿಮ್ಮ ವಿಷಯದಲ್ಲಿ ದೇವರಿಗೆ ಕೃತಜ್ಞತಾಸ್ತುತಿ ಮಾಡುವದಕ್ಕೆ ಬದ್ಧರಾಗಿದ್ದೇವೆ. ಹಾಗೆ ಮಾಡುವದು ಯೋಗ್ಯ; ಯಾಕಂದರೆ ನಿಮ್ಮ ನಂಬಿಕೆಯು ಬಹಳ ಅಭಿವೃದ್ಧಿ ಹೊಂದುತ್ತಾ ಪರಸ್ಪರವಾದ ಪ್ರೀತಿಯು ನಿಮ್ಮೆಲ್ಲ ರಲ್ಲಿಯೂ ಹೆಚ್ಚುತ್ತಾ ಬರುತ್ತದೆ.
2 ಥೆಸಲೊನೀಕದವರಿಗೆ 1 : 4 (KNV)
ಹೀಗಿರುವದರಿಂದ ನಿಮಗೆ ಬಂದಿರುವ ಎಲ್ಲಾ ಹಿಂಸೆಗಳಲ್ಲಿಯೂ ನೀವು ಅನುಭವಿಸುತ್ತಿರುವ ಸಂಕಟಗಳಲ್ಲಿಯೂ ತೋರಿಬಂದ ನಿಮ್ಮ ತಾಳ್ಮೆ ನಂಬಿಕೆಗಳನ್ನು ನೆನಸಿ ನಿಮ್ಮ ವಿಷಯವಾಗಿ ದೇವರ ಸಭೆಗಳಲ್ಲಿ ನಾವೇ ಹೆಚ್ಚಳಪಡುತ್ತೇವೆ.
2 ಥೆಸಲೊನೀಕದವರಿಗೆ 1 : 5 (KNV)
ನೀವು ಯಾವದಕ್ಕಾಗಿ ಶ್ರಮೆಪಡುತ್ತೀರೋ ದೇವರ ಆ ರಾಜ್ಯಕ್ಕೆ ನೀವು ಯೋಗ್ಯರೆಂದು ಎಣಿಸಲ್ಪಡುವಂತೆ ದೇವರ ನೀತಿಯುಳ್ಳ ತೀರ್ಪಿಗೆ ಅದು ಸ್ಪಷ್ಟವಾದ ನಿದರ್ಶನವಾಗಿದೆ.
2 ಥೆಸಲೊನೀಕದವರಿಗೆ 1 : 6 (KNV)
ನಿಮ್ಮನ್ನು ಸಂಕಟಪಡಿಸುವವರಿಗೆ ಪ್ರತಿಯಾಗಿ ಸಂಕಟಪಡಿಸುವದೂ
2 ಥೆಸಲೊನೀಕದವರಿಗೆ 1 : 7 (KNV)
ರ್ತನಾದ ಯೇಸು ತನ್ನ ಬಲವುಳ್ಳ ದೂತರೊಂದಿಗೆ ಪರಲೋಕ ದಿಂದ ಪ್ರತ್ಯಕ್ಷನಾಗುವಾಗ ಸಂಕಟಪಡುವವರಾದ ನಿಮಗೆ ನಮ್ಮೊಡನೆ ಉಪಶಮನ ಮಾಡುವದೂ
2 ಥೆಸಲೊನೀಕದವರಿಗೆ 1 : 8 (KNV)
ಆತನು (ಕರ್ತನಾದ ಯೇಸು) ದೇವರನ್ನರಿಯ ದವರಿಗೆ ಮತ್ತು ಕರ್ತನಾದ ಯೇಸು ಕ್ರಿಸ್ತನ ಸುವಾರ್ತೆಗೆ ವಿಧೇಯರಾಗದವರಿಗೆ ಉರಿಯುವ ಬೆಂಕಿಯ ಮೂಲಕ ಪ್ರತೀಕಾರ ಮಾಡುವದೂ ದೇವರಿಗೆ ನ್ಯಾಯವಾಗಿದೆ;
2 ಥೆಸಲೊನೀಕದವರಿಗೆ 1 : 9 (KNV)
ಅಂಥವರು ಕರ್ತನ ಸಾನಿಧ್ಯದಿಂದಲೂ ಬಲವುಳ್ಳ ಆತನ ಮಹಿಮೆಯಿಂದಲೂ ನಿತ್ಯ ನಾಶನವೆಂಬ ಶಿಕ್ಷೆ ಯನ್ನು ಹೊಂದುವರು.
2 ಥೆಸಲೊನೀಕದವರಿಗೆ 1 : 10 (KNV)
ಆ ದಿನದಲ್ಲಿ ಆತನು ತನ್ನ ಪರಿಶುದ್ಧರಲ್ಲಿ ಮಹಿಮೆ ಹೊಂದುವಂತೆಯೂ ನಂಬುವವರೆಲ್ಲರಲ್ಲಿ ಮೆಚ್ಚಿಕೆ ಹೊಂದುವಂತೆಯೂ ಬರುವನು. (ಯಾಕಂದರೆ ನೀವು ನಮ್ಮ ಸಾಕ್ಷಿಯನ್ನು ನಂಬಿದಿರಿ).
2 ಥೆಸಲೊನೀಕದವರಿಗೆ 1 : 11 (KNV)
ಹೀಗಿರುವದರಿಂದ ನಾವು ಯಾವಾ ಗಲೂ ನಿಮಗೋಸ್ಕರ ಪ್ರಾರ್ಥನೆ ಮಾಡಿ ಈ ಕರೆಯು ವಿಕೆಗೆ ದೇವರು ನಿಮ್ಮನ್ನು ಯೊಗ್ಯರೆಂದು ಎಣಿಸು ವಂತೆಯೂ ತನ್ನ ಒಳ್ಳೇತನದ ಒಳ್ಳೇ ಸಂತೋಷವನ್ನು ಮತ್ತು ಬಲದಿಂದಾದ ನಂಬಿಕೆಯ ಕಾರ್ಯವನ್ನು ಪೂರೈಸುವ ಹಾಗೆಯೂ ಬೇಡಿಕೊಳ್ಳುತ್ತೇವೆ.
2 ಥೆಸಲೊನೀಕದವರಿಗೆ 1 : 12 (KNV)
ಹೀಗಾದರೆ ನಮ್ಮ ದೇವರ ಮತ್ತು ಕರ್ತನಾದ ಯೇಸು ಕ್ರಿಸ್ತನ ಕೃಪೆಗನುಸಾರವಾಗಿ ನಮ್ಮ ಕರ್ತನಾದ ಯೇಸು ಕ್ರಿಸ್ತನ ಹೆಸರು ನಿಮ್ಮಲ್ಲಿ ಮಹಿಮೆ ಹೊಂದುವದು, ಆತನಲ್ಲಿ ನೀವೂ ಮಹಿಮೆ ಹೊಂದುವಿರಿ.

1 2 3 4 5 6 7 8 9 10 11 12