2 ಸಮುವೇಲನು 17 : 1 (KNV)
ಇದಲ್ಲದೆ ಅಹೀತೋಫೆಲನು ಅಬ್ಷಾ ಲೋಮನಿಗೆ--ಅಪ್ಪಣೆಯಾದರೆ ನಾನು ಹನ್ನೆರಡು ಸಾವಿರ ಜನರನ್ನು ಆದುಕೊಳ್ಳುವೆನು.
2 ಸಮುವೇಲನು 17 : 2 (KNV)
ಅವನು ದಣಿದವನೂ ಧೈರ್ಯಗುಂದಿದವನೂ ಆಗಿ ರುವಾಗಲೇ ಫಕ್ಕನೆ ಅವನ ಮೇಲೆ ಬಿದ್ದು ಅವನನ್ನು ಬೆದರಿಸುವೆನು, ಅವನ ಜನರೆಲ್ಲರೂ ಓಡಿಹೋಗು ವರು.
2 ಸಮುವೇಲನು 17 : 3 (KNV)
ಆಗ ನಾನು ಅರಸನನ್ನು ಮಾತ್ರ ಕೊಂದು ಜನರೆಲ್ಲರನ್ನು ತಿರಿಗಿ ನಿನ್ನ ಬಳಿಗೆ ತಕ್ಕೊಂಡು ಬರು ವೆನು. ನೀನು ಹುಡುಕುವವನು ಸಿಕ್ಕಿದರೆ ಜನರೆಲ್ಲರೂ ಹಿಂತಿರುಗಿದ ಹಾಗೆ ಆಗುವದು; ಜನರೆಲ್ಲರೂ ಸಮಾ ಧಾನವಾಗಿರುವರು ಅಂದನು.
2 ಸಮುವೇಲನು 17 : 4 (KNV)
ಈ ಮಾತು ಅಬ್ಷಾಲೋಮನಿಗೂ ಇಸ್ರಾಯೇಲಿನ ಎಲ್ಲಾ ಹಿರಿಯರ ದೃಷ್ಟಿಗೂ ಸರಿಯಾಗಿತ್ತು.
2 ಸಮುವೇಲನು 17 : 5 (KNV)
ಆದರೆ ಅಬ್ಷಾಲೋಮನು ಅರ್ಕೀಯನಾದ ಹೂಷೈಯನ್ನು ನಾವು ಕೇಳುವ ಹಾಗೆ ಅವನನ್ನು ಕರೆಯಿರಿ ಅಂದನು.
2 ಸಮುವೇಲನು 17 : 6 (KNV)
ಹೂಷೈಯು ಅಬ್ಷಾಲೋಮನ ಬಳಿಗೆ ಬಂದಾಗ ಅಬ್ಷಾಲೋಮನು ಅವನಿಗೆ--ಅಹೀತೋಫೆಲನು ಈ ಪ್ರಕಾರ ಹೇಳಿದ್ದಾನೆ. ಅವನ ಮಾತಿನ ಪ್ರಕಾರ ಮಾಡೋಣವೋ? ಬೇಡವಾದರೆ, ನೀನು ಮಾತ ನಾಡು ಅಂದನು.
2 ಸಮುವೇಲನು 17 : 7 (KNV)
ಆಗ ಹೂಷೈ ಅಬ್ಷಾಲೋಮ ನಿಗೆ--ಅಹೀತೋಫೆಲನು ಹೇಳಿದ ಆಲೋಚನೆಯು ಈ ವೇಳೆಗೆ ಒಳ್ಳೇದಲ್ಲ.
2 ಸಮುವೇಲನು 17 : 8 (KNV)
ನಿನ್ನ ತಂದೆಯೂ ಅವನ ಜನರೂ ಪರಾಕ್ರಮಶಾಲಿಗಳು; ಅವರು ಅಡವಿಯಲ್ಲಿ ಮರಿಗಳನ್ನು ಕಳಕೊಂಡ ಕರಡಿಯ ಹಾಗೆ ರೋಷ ವುಳ್ಳವರಾಗಿದ್ದಾರೆಂದು ನೀನು ಬಲ್ಲೆ. ಇದಲ್ಲದೆ ನಿನ್ನ ತಂದೆಯು ಶೂರನು; ಅವನು ರಾತ್ರಿಯಲ್ಲಿ ಜನರ ಸಂಗಡ ತಂಗುವದಿಲ್ಲ.
2 ಸಮುವೇಲನು 17 : 9 (KNV)
ಇಗೋ, ಅವನು ಈಗ ಒಂದು ಗವಿಯಲ್ಲಾದರೂ ಒಂದು ಸ್ಥಳದಲ್ಲಾದರೂ ಅಡಗಿಕೊಂಡಿರುವನು. ಮೊದಲೇ ಇವರಲ್ಲಿ ಕೆಲವರು ಸತ್ತರೆ ಅದನ್ನು ಕೇಳು ವವರು ಅಬ್ಷಾಲೋಮನನ್ನು ಹಿಂಬಾಲಿಸುವ ಜನರಲ್ಲಿ ಸಂಹಾರವಾಯಿತೆಂದು ಹೇಳುವರು.
2 ಸಮುವೇಲನು 17 : 10 (KNV)
ಆಗ ಸಿಂಹದ ಹೃದಯವುಳ್ಳ ಪರಾಕ್ರಮಶಾಲಿಯ ಹೃದಯವೂ ಸಹ ಸಂಪೂರ್ಣ ಕರಗುವದು. ಇದಲ್ಲದೆ ನಿನ್ನ ತಂದೆಯು ಶೂರನೆಂದೂ ಅವನ ಸಂಗಡ ಇರುವವರು ಪರಾ ಕ್ರಮಶಾಲಿಗಳೆಂದೂ ಇಸ್ರಾಯೇಲ್ಯರೆಲ್ಲರು ಬಲ್ಲರು.
2 ಸಮುವೇಲನು 17 : 11 (KNV)
ನಾನು ಹೇಳುವ ಆಲೋಚನೆ ಏನಂದರೆ, ದಾನಿ ನಿಂದ ಬೇರ್ಷೆಬದ ವರೆಗೂ ಇರುವ ಸಮುದ್ರದ ಮರಳಿನಷ್ಟು ಅಸಂಖ್ಯವಾದ ಇಸ್ರಾಯೇಲ್ಯರು ನಿನ್ನ ಬಳಿಯಲ್ಲಿ ಕೂಡಿಸಲ್ಪಟ್ಟ ತರುವಾಯ ನೀನೇ ಯುದ್ಧಕ್ಕೆ ಹೋಗಬೇಕು.
2 ಸಮುವೇಲನು 17 : 12 (KNV)
ಆಗ ನಾವು ಅವನನ್ನು ಕಂಡು ಕೊಳ್ಳುವ ಸ್ಥಳದಲ್ಲಿ ಅವನ ಮೇಲೆ ಬಂದು ಭೂಮಿಯ ಮೇಲೆ ಮಂಜು ಬೀಳುವ ಹಾಗೆ ಅವನ ಮೇಲೆ ಬೀಳುವೆವು. ಅವನೂ ಅವನ ಸಂಗಡವಿರುವ ಎಲ್ಲಾ ಜನರಲ್ಲಿ ಒಬ್ಬನಾದರೂ ಉಳಿಯುವದಿಲ್ಲ.
2 ಸಮುವೇಲನು 17 : 13 (KNV)
ಅವನು ಒಂದು ವೇಳೆ ಒಂದು ಪಟ್ಟಣದಲ್ಲಿ ಹೊಕ್ಕರೆ ಇಸ್ರಾಯೇಲ್ಯರೆಲ್ಲರು ಆ ಪಟ್ಟಣಕ್ಕೆ ಹಗ್ಗಗಳನ್ನು ತಂದು ಹಾಕಿದ ತರುವಾಯ ನಾವು ಒಂದು ಹರಳಾದರೂ ಅಲ್ಲಿ ಕಾಣದ ಹಾಗೆ ಅದನ್ನು ನದಿಗೆ ಎಳೆದು ಹಾಕುವೆವು ಅಂದನು.
2 ಸಮುವೇಲನು 17 : 14 (KNV)
ಆಗ ಅಬ್ಷಾ ಲೋಮನೂ ಇಸ್ರಾಯೇಲಿನ ಎಲ್ಲಾ ಜನರೂಅಹೀತೋಫೆಲನ ಆಲೋಚನೆಗಿಂತ ಅರ್ಕೀಯನಾದ ಹೂಷೈಯ ಆಲೋಚನೆ ಒಳ್ಳೇದು ಅಂದರು. ತಾನು ಅಬ್ಷಾಲೋಮನ ಮೇಲೆ ಕೇಡನ್ನು ಬರಮಾಡುವ ಹಾಗೆ ಅಹೀತೋಫೆಲನ ಒಳ್ಳೇ ಆಲೋಚನೆಯನ್ನು ವ್ಯರ್ಥಮಾಡುವದಕ್ಕೆ ಕರ್ತನು ನೇಮಿಸಿದ್ದನು.
2 ಸಮುವೇಲನು 17 : 15 (KNV)
ಹೂಷೈಯು ಯಾಜಕರಾದ ಚಾದೋಕನಿಗೂ ಎಬ್ಯಾತಾರನಿಗೂ--ಅಹೀತೋಫೆಲನು ಅಬ್ಷಾಲೋ ಮನಿಗೂ ಇಸ್ರಾಯೇಲಿನ ಹಿರಿಯರಿಗೂ ಇಂಥಿಂಥ ಆಲೋಚನೆ ಹೇಳಿದನು.
2 ಸಮುವೇಲನು 17 : 16 (KNV)
ಆದರೆ ನಾನು ಇಂಥಿಂಥ ಆಲೋಚನೆ ಹೇಳಿದೆನು. ಆದದರಿಂದ ನೀವು ತ್ವರೆ ಯಾಗಿ ಕಳುಹಿಸಿ ದಾವೀದನಿಗೆ ತಿಳಿಸಬೇಕಾದದ್ದೇ ನಂದರೆ--ನೀನು ರಾತ್ರಿಯಲ್ಲಿ ಅರಣ್ಯದ ಬೈಲುಗಳಲ್ಲಿ ತಂಗಬೇಡ; ಅರಸನೂ ಅವನ ಸಂಗಡವಿರುವ ಎಲ್ಲಾ ಜನರೂ ನಾಶವಾಗದ ಹಾಗೆ ಬೇಗ ದಾಟಿಹೋಗು ಅಂದನು.
2 ಸಮುವೇಲನು 17 : 17 (KNV)
ಆದರೆ ಯೋನಾತಾನನೂ ಅಹೀಮಾ ಚನೂ ಪಟ್ಟಣದಲ್ಲಿ ಪ್ರವೇಶಿಸಿ ಯಾರೂ ನೋಡ ದಂತೆ ಎನ್ರೋಗೆಲಿನ ಬಳಿಯಲ್ಲಿ ಇದ್ದರು. ಆದದರಿಂದ ಅವರು ಅರಸನಾದ ದಾವೀದನಿಗೆ ಅದನ್ನು ತಿಳಿಸುವ ಹಾಗೆ ಒಬ್ಬ ದಾಸಿಯು ಹೋಗಿ ಅವರಿಗೆ ಹೇಳಿದಳು.
2 ಸಮುವೇಲನು 17 : 18 (KNV)
ಆದರೆ ಒಬ್ಬ ಹುಡುಗನು ಅವರನ್ನು ನೋಡಿ ಅಬ್ಷಾ ಲೋಮನಿಗೆ ತಿಳಿಸಿದನು. ಆದದರಿಂದ ಅವರಿಬ್ಬರು ಶೀಘ್ರವಾಗಿ ಹೋಗಿ ಬಹುರೀಮಿನಲ್ಲಿರುವ ಒಬ್ಬ ಮನುಷ್ಯನ ಮನೆಯಲ್ಲಿ ಪ್ರವೇಶಿಸಿ ಅವನ ಅಂಗಳ ದಲ್ಲಿರುವ ಬಾವಿಯಲ್ಲಿ ಇಳಿದರು.
2 ಸಮುವೇಲನು 17 : 19 (KNV)
ಆಗ ಆ ಮನೆ ಯವಳು ಬಾವಿಯ ಮೇಲೆ ಒಂದು ವಸ್ತ್ರವನ್ನು ಹಾಸಿ ನುಚ್ಚನ್ನು ಹರವಿಬಿಟ್ಟಳು. ಆದದರಿಂದ ಕಾರ್ಯ ತಿಳಿ ಯದೆ ಹೋಯಿತು.
2 ಸಮುವೇಲನು 17 : 20 (KNV)
ಅಬ್ಷಾಲೋಮನ ಸೇವಕರು ಮನೆಯೊಳಗೆ ಬಂದು ಆ ಸ್ತ್ರೀಯನ್ನು--ಅಹೀಮಾ ಚನೂ ಯೋನಾತಾನನೂ ಎಲ್ಲಿ ಎಂದು ಕೇಳಿದಾಗ ಅವಳು ಅವರಿಗೆ--ಹಳ್ಳವನ್ನು ದಾಟಿಹೋದರು ಅಂದಳು. ಅವರು ಹುಡುಕಿ ಕಾಣದೆ ಹೋಗಿ ಯೆರೂಸಲೇಮಿಗೆ ಹಿಂತಿರುಗಿದರು.
2 ಸಮುವೇಲನು 17 : 21 (KNV)
ಆದರೆ ಇವರು ಹೋದ ತರುವಾಯ ಅವರು ಬಾವಿಯೊಳಗಿಂದ ಏರಿ ಹೋಗಿ ಅರಸನಾದ ದಾವೀದನಿಗೆ--ನೀನು ಶೀಘ್ರ ವಾಗಿ ಎದ್ದು ಹೊಳೆ ದಾಟಿಹೋಗು; ಯಾಕಂದರೆ ಈ ಪ್ರಕಾರ ಅಹೀತೋಫೆಲನು ನಿನಗೆ ವಿರೋಧ ವಾಗಿ ಆಲೋಚನೆ ಹೇಳಿದನು ಅಂದರು.
2 ಸಮುವೇಲನು 17 : 22 (KNV)
ಆಗ ದಾವೀದನೂ ಅವನ ಸಂಗಡ ಇದ್ದ ಎಲ್ಲಾ ಜನರೂ ಎದ್ದು ಯೊರ್ದನನ್ನು ದಾಟಿದರು. ಉದಯವಾಗುವ ದಕ್ಕಿಂತ ಮುಂಚೆ ಒಬ್ಬರಾದರೂ ಹಿಂದುಳಿದಿರಲಿಲ್ಲ.
2 ಸಮುವೇಲನು 17 : 23 (KNV)
ಅಹೀತೋಫೆಲನು ತನ್ನ ಯೋಚನೆಯ ಪ್ರಕಾರ ನಡೆಯಲಿಲ್ಲವೆಂದು ನೋಡಿದಾಗ ತನ್ನ ಕತ್ತೆಯ ಮೇಲೆ ತಡಿಯನ್ನು ಹಾಕಿ ಏರಿ ಪಟ್ಟಣದಲ್ಲಿರುವ ತನ್ನ ಮನೆಗೆ ಹೋಗಿ ಅದನ್ನು ಕ್ರಮಪಡಿಸಿ ಉರ್ಲುಹಾಕಿ ಕೊಂಡು ಸತ್ತು ತನ್ನ ತಂದೆಯ ಸಮಾಧಿಯಲ್ಲಿ ಹೂಣಲ್ಪಟ್ಟನು.
2 ಸಮುವೇಲನು 17 : 24 (KNV)
ದಾವೀದನು ಮಹನಯಿಮಿಗೆ ಬಂದನು. ಇದ ಲ್ಲದೆ ಅಬ್ಷಾಲೋಮನೂ ಅವನ ಸಂಗಡ ಇಸ್ರಾ ಯೇಲ್ ಎಲ್ಲಾ ಜನರೂ ಯೊರ್ದನನ್ನು ದಾಟಿದರು.
2 ಸಮುವೇಲನು 17 : 25 (KNV)
ಅಬ್ಷಾಲೋಮನು ಯೋವಾಬನಿಗೆ ಬದಲಾಗಿ ಅಮಾಸನನ್ನು ಸೈನ್ಯದ ಅಧಿಪತಿಯನ್ನಾಗಿ ನೇಮಿಸಿದನು. ನಾಹಾಷನಿಗೆ ಮಗಳಾದ ಅಬೀಗೈಲಳ ಬಳಿಗೆ ಪ್ರವೇಶಿಸಿದ ಇಸ್ರಾಯೇಲ್ಯನಾದ ಇತ್ರನೆಂಬ ಹೆಸರುಳ್ಳ ಈ ಅಮಾಸನು ಒಬ್ಬ ಮಗನಾಗಿದ್ದನು. ಅಬೀಗೈಲಳು ಯೋವಾಬನ ತಾಯಿಯಾದ ಚೆರೂಯಳಿಗೆ ಸಹೋದರಿಯಾಗಿದ್ದಳು.
2 ಸಮುವೇಲನು 17 : 26 (KNV)
ಹೀಗೆಯೇ ಇಸ್ರಾಯೇ ಲ್ಯರೂ ಅಬ್ಷಾಲೋಮನೂ ಗಿಲ್ಯಾದ್ ದೇಶದಲ್ಲಿ ದಂಡಿಳಿದರು.
2 ಸಮುವೇಲನು 17 : 27 (KNV)
ದಾವೀದನು ಮಹನಯಿಮಿಗೆ ಬಂದಾಗ ಏನಾ ಯಿತಂದರೆ, ಅಮ್ಮೋನನ ಮಕ್ಕಳ ರಬ್ಬಾ ಪಟ್ಟಣದ ನಾಹಾಷನ ಮಗನಾದ ಶೋಬಿಯೂ ಲೋದೆಬಾ ರಿನ ಊರಿನವನಾಗಿರುವ ಅವ್ಮೆಾಯೇಲನ ಮಗನಾದ ಮಾಕೀರ್
2 ಸಮುವೇಲನು 17 : 28 (KNV)
ರೋಗೆಲೀಮ್ ಊರಿನ ಗಿಲ್ಯಾದ್ಯ ನಾದ ಬರ್ಜಿಲೈಯೂ ಹಾಸಿಗೆಗಳನ್ನೂ ಬಟ್ಟಲು ಗಳನ್ನೂ ಮಡಿಕೆಗಳನ್ನೂ ಗೋಧಿಯನ್ನೂ ಜವೆಗೋಧಿ ಯನ್ನೂ ಹಿಟ್ಟನ್ನೂ ಹುರಿದ ಕಾಳನ್ನೂ
2 ಸಮುವೇಲನು 17 : 29 (KNV)
ಅವರೆಯನ್ನೂ ಹೆಸರನ್ನೂ ಹುರಿದ ಕಡಲೆಯನ್ನೂ ಜೇನು ತುಪ್ಪವನ್ನೂ ಬೆಣ್ಣೆಯನ್ನೂ ಕುರಿಗಳನ್ನೂ ಹಸುವಿನ ಗಿಣ್ಣದ ಗಡ್ಡೆಗಳನ್ನೂ ದಾವೀದನಿಗೂ ಅವನ ಸಂಗಡ ಲಿದ್ದ ಜನರಿಗೂ ತಿನ್ನುವದಕ್ಕೆ ತಂದರು. ಯಾಕಂದರೆ ಅರಣ್ಯದಲ್ಲಿ ಜನರು ಹಸಿದು ದಣಿದು ದಾಹವಾಗಿರು ವರೆಂದು ಅಂದುಕೊಂಡರು.

1 2 3 4 5 6 7 8 9 10 11 12 13 14 15 16 17 18 19 20 21 22 23 24 25 26 27 28 29

BG:

Opacity:

Color:


Size:


Font: