2 ಸಮುವೇಲನು 16 : 1 (KNV)
ದಾವೀದನು ಬೆಟ್ಟದ ತುದಿಯಿಂದ ಸ್ವಲ್ಪ ದೂರಹೋದಾಗ ಇಗೋ, ಮೆಫೀಬೋ ಶೆತನ ಸೇವಕನಾದ ಚೀಬನು ತಡಿಹಾಕಿದ ಎರಡು ಕತ್ತೆಗಳನ್ನು ಹೊಡಕೊಂಡು ಬಂದು ಅವನನ್ನು ಎದುರು ಗೊಂಡನು; ಅವುಗಳ ಮೇಲೆ ಇನ್ನೂರು ರೊಟ್ಟಿ ಗಳೂ ಒಣಗಿದ ನೂರು ದ್ರಾಕ್ಷೇ ಗೊಂಚಲುಗಳೂ ವಸಂತಕಾಲದ ನೂರು ಹಣ್ಣುಗಳೂ ಒಂದು ಬುದ್ದಲಿ ದ್ರಾಕ್ಷಾರಸವೂ ಇದ್ದವು.
2 ಸಮುವೇಲನು 16 : 2 (KNV)
ಅರಸನು ಚೀಬನಿಗೆ--ಇವು ಯಾಕೆ ಅಂದನು. ಅದಕ್ಕೆ ಚೀಬನು--ಕತ್ತೆಗಳು ಅರಸನ ಮನೆಯವರು ಹತ್ತುವದಕ್ಕೂ ಆ ರೊಟ್ಟಿಗಳೂ ವಸಂತಕಾಲದ ಫಲಗಳೂ ಯೌವನಸ್ಥರು ತಿನ್ನುವ ದಕ್ಕೂ ದ್ರಾಕ್ಷಾರಸವು ಅರಣ್ಯದಲ್ಲಿ ದಣಿದವರು ಕುಡಿಯುವದಕ್ಕೂ ಅಂದನು.
2 ಸಮುವೇಲನು 16 : 3 (KNV)
ಆಗ ಅರಸನು ಅವ ನನ್ನು--ನಿನ್ನ ಯಜಮಾನನ ಕುಮಾರನು ಎಲ್ಲಿದ್ದಾ ನೆಂದು ಕೇಳಿದನು. ಚೀಬನು ಅರಸನಿಗೆ--ಇಗೋ, ಅವನು ಯೆರೂಸಲೇಮಿನಲ್ಲಿದ್ದಾನೆ. ಯಾಕಂದರೆ--ಈ ಹೊತ್ತು ಇಸ್ರಾಯೇಲಿನ ಮನೆಯವರು ನನ್ನ ತಂದೆಯ ರಾಜ್ಯವನ್ನು ನನಗೆ ತಿರಿಗಿಕೊಡುವರೆಂದು ಅಂದನು.
2 ಸಮುವೇಲನು 16 : 4 (KNV)
ಆಗ ಅರಸನು ಚೀಬನಿಗೆ--ಇಗೋ, ಮೆಫೀಬೋಶೆತನಿಗೆ ಉಂಟಾದದ್ದೆಲ್ಲಾ ನಿನ್ನದಾಯಿತು ಅಂದನು. ಅದಕ್ಕೆ ಚೀಬನು--ಅರಸನಾದ ನನ್ನ ಒಡೆ ಯನೇ, ನಿನ್ನ ದೃಷ್ಟಿಯಲ್ಲಿ ನನಗೆ ದಯೆದೊರಕಲಿ ಎಂದು ನಾನು ನಿನ್ನನ್ನು ಬೇಡಿಕೊಳ್ಳುತ್ತೇನೆ ಅಂದನು.
2 ಸಮುವೇಲನು 16 : 5 (KNV)
ಅರಸನಾದ ದಾವೀದನು ಬಹುರೀಮಿನ ವರೆಗೂ ಬಂದಾಗ ಇಗೋ, ಸೌಲನ ಗೋತ್ರದವನಾದಂಥ ಗೇರನ ಮಗನಾದ ಶಿಮ್ಮಿಯೆಂಬ ಹೆಸರುಳ್ಳ ಒಬ್ಬ ಮನುಷ್ಯನು ಅಲ್ಲಿಂದ ಹೊರಟು ದೂಷಿಸುತ್ತಾ ನಡೆದು ಬಂದನು.
2 ಸಮುವೇಲನು 16 : 6 (KNV)
ಎಲ್ಲಾ ಜನರೂ ಎಲ್ಲಾ ಪರಾಕ್ರಮಶಾಲಿ ಗಳೂ ದಾವೀದನ ಬಲ ಮತ್ತು ಎಡ ಪಾರ್ಶ್ವಗಳಲ್ಲಿ ರುವಾಗ ಅವನು ಅರಸನಾದ ದಾವೀದನ ಮೇಲೆಯೂ ಅವನ ಎಲ್ಲಾ ಊಳಿಗದವರ ಮೇಲೆಯೂ ಕಲ್ಲುಗಳನ್ನು ಎಸೆದನು.
2 ಸಮುವೇಲನು 16 : 7 (KNV)
ಶಿಮ್ಮಿ ಅವನನ್ನು ದೂಷಿಸುತ್ತಾ--ರಕ್ತದ ಮನುಷ್ಯನೇ, ಬೆಲಿಯಾಳನ ಮನುಷ್ಯನೇ, ಹೊರಟು ಬಾ, ಹೊರಟು ಬಾ.
2 ಸಮುವೇಲನು 16 : 8 (KNV)
ಕರ್ತನು ಸೌಲನ ಮನೆಯವರ ರಕ್ತವನ್ನು ಸೌಲನಿಗೆ ಪ್ರತಿಯಾಗಿ ಅರಸನಾದ ನಿನ್ನ ಮೇಲೆ ತಿರಿಗಿ ಬರಮಾಡಿ ರಾಜ್ಯವನ್ನು ನಿನ್ನ ಮಗನಾದ ಅಬ್ಷಾಲೋಮನ ಕೈಯಲ್ಲಿ ಒಪ್ಪಿಸಿಕೊಟ್ಟನು; ನೀನು ರಕ್ತದ ಮನುಷ್ಯನಾದದರಿಂದ ಇಗೋ, ನಿನ್ನ ಕೇಡಿನಲ್ಲಿ ಸಿಕ್ಕಿಕೊಂಡಿ ಅಂದನು.
2 ಸಮುವೇಲನು 16 : 9 (KNV)
ಆಗ ಚೆರೂಯಳ ಮಗನಾದ ಅಬೀಷೈಯು ಅರಸನಿಗೆ--ಈ ಸತ್ತ ನಾಯಿ, ಅರಸನಾದ ನನ್ನ ಒಡೆಯನನ್ನು ದೂಷಿಸುವದೇನು? ನಾನೇ ದಾಟಿಹೋಗಿ ಅವನ ತಲೆಯನ್ನು ತೆಗೆದುಕೊಳ್ಳಲು ಅಪ್ಪಣೆಯಾಗಲಿ ಅಂದನು.
2 ಸಮುವೇಲನು 16 : 10 (KNV)
ಆದರೆ ಅರಸನು--ಚೆರೂಯಳ ಮಕ್ಕಳೇ, ನನಗೂ ನಿಮಗೂ ಏನು? ಅವನು ನನ್ನನ್ನು ದೂಷಿಸಲಿ; ಯಾಕಂದರೆ--ದಾವೀದ ನನ್ನು ದೂಷಿಸು ಎಂದು ಕರ್ತನು ಅವನಿಗೆ ಹೇಳಿದ್ದಾನೆ; ಹಾಗಾದರೆ ಯಾಕೆ ಹೀಗೆ ಮಾಡುತ್ತೀ ಎಂದು ಹೇಳುವ ವನಾರು ಅಂದನು.
2 ಸಮುವೇಲನು 16 : 11 (KNV)
ದಾವೀದನು ಅಬೀಷೈಗೂ ತನ್ನ ಎಲ್ಲಾ ಸೇವಕರಿಗೂ--ಇಗೋ, ನನ್ನ ಹೊಟ್ಟೆಯಲ್ಲಿ ಹುಟ್ಟಿದ ನನ್ನ ಮಗನು ನನ್ನ ಪ್ರಾಣವನ್ನು ಹುಡುಕಿದರೆ ಎಷ್ಟೋ ಅಧಿಕವಾಗಿ ಈ ಬೆನ್ಯಾವಿಾನ್ಯನಾದವನು ಹೀಗೆ ಮಾಡುವದು ಯಾವ ದೊಡ್ಡಮಾತು? ಅವ ನನ್ನು ಬಿಟ್ಟುಬಿಡಿರಿ; ಅವನು ದೂಷಿಸಲಿ; ಯಾಕಂದರೆ ಕರ್ತನು ಅವನಿಗೆ ಹಾಗೆಯೇ ಹೇಳಿದ್ದಾನೆ.
2 ಸಮುವೇಲನು 16 : 12 (KNV)
ಒಂದು ವೇಳೆ ಕರ್ತನು ನನ್ನ ಶ್ರಮೆಯನ್ನು ನೋಡಿ ಈ ದಿನ ದಲ್ಲಿ ಅವನು ಮಾಡಿದ ದೂಷಣೆಗೆ ಪ್ರತಿಯಾಗಿ ನನಗೆ ಒಳ್ಳೆಯದನ್ನು ಮಾಡಬಹುದು ಅಂದನು.
2 ಸಮುವೇಲನು 16 : 13 (KNV)
ದಾವೀದನೂ ಅವನ ಸೇವಕರೂ ದಾರಿ ಹಿಡಿದು ಹೋಗುವಾಗ ಶಿಮ್ಮಿ ಬೆಟ್ಟದ ಪಾರ್ಶ್ವವಾಗಿ ಬಂದು ಅವನಿಗೆದುರಾಗಿ ನಡೆದು ದೂಷಿಸಿ ಅವನ ಕಡೆಗೆ ಮಣ್ಣನ್ನು ತೂರಿ ಕಲ್ಲುಗಳನ್ನು ಎಸೆದನು.
2 ಸಮುವೇಲನು 16 : 14 (KNV)
ಅರಸನೂ ಅವನ ಸಂಗಡಲಿರುವ ಎಲ್ಲಾ ಜನರೂ ನಡೆದು ದಣಿದದ್ದರಿಂದ ಅಲ್ಲಿ ವಿಶ್ರಮಿಸಿಕೊಂಡರು.
2 ಸಮುವೇಲನು 16 : 15 (KNV)
ಅಬ್ಷಾಲೋಮನೂ ಎಲ್ಲಾ ಇಸ್ರಾಯೇಲ್ ಜನರೂ ಅವನ ಸಂಗಡ ಅಹೀತೋಫೆಲನೂ ಯೆರೂ ಸಲೇಮಿಗೆ ಬಂದರು
2 ಸಮುವೇಲನು 16 : 16 (KNV)
ಅರ್ಕೀಯನಾದ ಹೂಷೈ ಯೆಂಬ ದಾವೀದನ ಸ್ನೇಹಿತನು ಅಬ್ಷಾಲೋಮನ ಬಳಿಗೆ ಬಂದು--ಅರಸನು ಬಾಳಲಿ, ಅರಸನು ಬಾಳಲಿ ಅಂದನು.
2 ಸಮುವೇಲನು 16 : 17 (KNV)
ಅಬ್ಷಾಲೋಮನು ಅವನಿಗೆ--ಸ್ನೇಹಿತನ ಮೇಲೆ ನಿನಗಿದ್ದ ಪ್ರೀತಿ ಇಷ್ಟೇಯೇನು? ನೀನು ನಿನ್ನ ಸ್ನೇಹಿತನೊಡನೆ ಯಾಕೆ ಹೋಗಲಿಲ್ಲ ಅಂದನು.
2 ಸಮುವೇಲನು 16 : 18 (KNV)
ಹೂಷೈ ಅಬ್ಷಾಲೋಮನಿಗೆ--ಹಾಗಲ್ಲ, ಆದರೆ ಕರ್ತನೂ ಈ ಜನವೂ ಇಸ್ರಾಯೇಲಿನ ಎಲ್ಲಾ ಜನರೂ ಯಾರನ್ನು ಆದುಕೊಳ್ಳುವರೋ ನಾನೂ ಅವನ ಪಕ್ಷದವನಾಗಿರುವೆನು; ನಾನು ಅವನ ಬಳಿಯಲ್ಲಿ ಇರುವೆನು.
2 ಸಮುವೇಲನು 16 : 19 (KNV)
ಇದಲ್ಲದೆ ನಾನು ಯಾರನ್ನು ಸೇವಿಸತಕ್ಕದ್ದು? ಅವನ ಮಗನ ಸಮ್ಮುಖ ದಲ್ಲಿ ಅಲ್ಲವೇ? ನಾನು ನಿನ್ನ ತಂದೆಯ ಸಮ್ಮುಖದಲ್ಲಿ ಹೇಗೆ ಸೇವಿಸಿದೆನೋ ಹಾಗೆಯೇ ನಿನ್ನ ಸಮ್ಮುಖದಲ್ಲಿ ಇರುವೆನು ಅಂದನು.
2 ಸಮುವೇಲನು 16 : 20 (KNV)
ಆಗ ಅಬ್ಷಾಲೋಮನು ಅಹೀತೋಫೆಲನಿಗೆ--ನಾವು ಮಾಡಬೇಕಾದದ್ದನ್ನು ನೀನು ಯೋಚನೆ ಮಾಡಿ ಹೇಳು ಅಂದನು.
2 ಸಮುವೇಲನು 16 : 21 (KNV)
ಅಹೀತೋಫೆಲನು ಅಬ್ಷಾಲೋಮನಿಗೆ--ನಿನ್ನ ತಂದೆಯು ಮನೆಗೆ ಕಾವಲಿಟ್ಟ ಉಪಪತ್ನಿಗಳೊಡನೆ ಸಂಗಮಿಸು; ಆಗ ನಿನ್ನ ತಂದೆ ಯಿಂದ ನೀನು ಹಗೆಮಾಡಲ್ಪಟ್ಟವನೆಂದು ಎಲ್ಲಾ ಇಸ್ರಾ ಯೇಲ್ಯರು ಕೇಳಿ ನಿನ್ನ ಸಂಗಡ ಇರುವ ಎಲ್ಲಾ ಜನರ ಕೈಗಳೂ ಬಲವಾಗಿರುವವು ಅಂದನು.
2 ಸಮುವೇಲನು 16 : 22 (KNV)
ಹಾಗೆಯೇ ಅವರು ಅಬ್ಷಾಲೋಮನಿಗೋಸ್ಕರ ಮನೆಯ ಮೇಲೆ ಡೇರೆ ಹಾಕಿದರು; ಅಲ್ಲಿ ಅಬ್ಷಾಲೋಮನು ಎಲ್ಲಾ ಇಸ್ರಾಯೇಲ್ಯರ ಕಣ್ಣುಗಳ ಮುಂದೆ ತನ್ನ ತಂದೆಯ ಉಪಪತ್ನಿಗಳನ್ನು ಕೂಡಿದನು.
2 ಸಮುವೇಲನು 16 : 23 (KNV)
ಆ ದಿವಸಗಳಲ್ಲಿ ಅಹೀತೋಫೆಲನು ಆಲೋಚಿಸಿದ ಆಲೋಚನೆಯು ಒಬ್ಬನು ದೈವೋಕ್ತಿಗಳನ್ನು ವಿಚಾರಿಸುವ ಹಾಗೆ ಇತ್ತು. ಅಹೀತೋಫೆಲನ ಆಲೋಚನೆಯೆಲ್ಲಾ ದಾವೀದನಿಗೂ ಅಬ್ಷಾಲೋಮನಿಗೂ ಹಾಗೆಯೇ ಇತ್ತು.

1 2 3 4 5 6 7 8 9 10 11 12 13 14 15 16 17 18 19 20 21 22 23

BG:

Opacity:

Color:


Size:


Font: