2 ಸಮುವೇಲನು 15 : 1 (KNV)
ತರುವಾಯ ಅಬ್ಷಾಲೋಮನು ತನ ಗೋಸ್ಕರ ರಥಗಳನ್ನೂ ಕುದುರೆಗಳನ್ನೂ ತನ್ನ ಮುಂದೆ ಓಡುವದಕ್ಕೆ ಐವತ್ತು ಮಂದಿಯನ್ನೂ ಸಿದ್ಧಮಾಡಿಕೊಂಡನು.
2 ಸಮುವೇಲನು 15 : 2 (KNV)
ಇದಲ್ಲದೆ ಅಬ್ಷಾಲೋಮನು ಬೆಳಿಗ್ಗೆ ಎದ್ದು ಬಾಗಲ ಬಳಿಯಲ್ಲಿ ನಿಂತುಕೊಂಡು ವ್ಯಾಜ್ಯ ಉಂಟಾದವನು ಯಾವನಾದರೂ ನ್ಯಾಯ ಕ್ಕೋಸ್ಕರ ಅರಸನ ಬಳಿಗೆ ಬರುವವನಾಗಿದ್ದರೆ ಅವನನ್ನು ಕರೆದು--ನೀನು ಯಾವ ಪಟ್ಟಣದವನೆಂದು ಕೇಳು ವನು.
2 ಸಮುವೇಲನು 15 : 3 (KNV)
ಅದಕ್ಕವನು--ನಿನ್ನ ಸೇವಕನು ಇಸ್ರಾಯೇಲ್ ಗೋತ್ರಗಳಲ್ಲಿ ಒಬ್ಬನೆಂದು ಹೇಳಿದರೆ ಅಬ್ಷಾಲೋ ಮನು ಅವನಿಗೆ--ನೋಡು, ನಿನ್ನ ಕಾರ್ಯಗಳು ಒಳ್ಳೆಯವೂ ಯುಕ್ತವೂ ಆದವುಗಳು; ಆದರೆ ಅರಸನ ಬಳಿಯಲ್ಲಿ ನಿನ್ನನ್ನು ವಿಚಾರಿಸುವದಕ್ಕೆ ಯಾವನೂ ಇಲ್ಲ.
2 ಸಮುವೇಲನು 15 : 4 (KNV)
ಇದಲ್ಲದೆ ಅಬ್ಷಾಲೋಮನು--ನಾನು ದೇಶದ ಮೇಲೆ ನ್ಯಾಯಾಧಿಪತಿಯಾಗಿ ಮಾಡಲ್ಪಟ್ಟಿದ್ದರೆ ಎಷ್ಟೋ ಒಳ್ಳೆಯದು; ಆಗ ವ್ಯಾಜ್ಯವಾದರೂ ನ್ಯಾಯವಿಚಾರಣೆ ಯಾದರೂ ಇದ್ದ ಪ್ರತಿ ಮನುಷ್ಯನು ನನ್ನ ಬಳಿಗೆ ಬಂದರೆ ನಾನು ಅವನಿಗೆ ನೀತಿಯಿಂದ ನ್ಯಾಯ ತೀರಿಸುವೆನು ಅನ್ನುವನು.
2 ಸಮುವೇಲನು 15 : 5 (KNV)
ಯಾವನಾದರೂ ತನಗೆ ವಂದಿಸುವದಕ್ಕೆ ತನ್ನ ಬಳಿಗೆ ಬಂದರೆ ತನ್ನ ಕೈಯನ್ನು ಚಾಚಿ ಅವನನ್ನು ಹಿಡಿದು ಮುದ್ದಿಟ್ಟುಕೊಳ್ಳುತ್ತಿದ್ದನು.
2 ಸಮುವೇಲನು 15 : 6 (KNV)
ಈ ಪ್ರಕಾರ ಅಬ್ಷಾಲೋಮನು ನ್ಯಾಯಕ್ಕೋಸ್ಕರ ಅರಸನ ಬಳಿಗೆ ಬರುವ ಇಸ್ರಾಯೇಲ್ಯರೆಲ್ಲರಿಗೆ ಮಾಡಿ ದನು. ಈ ರೀತಿಯಲ್ಲಿ ಅಬ್ಷಾಲೋಮನು ಇಸ್ರಾ ಯೇಲ್ಯರಿಗೆ ಮಾಡಿದನು. ಹೀಗೆ ಅಬ್ಷಾಲೋಮನು ಇಸ್ರಾಯೇಲ್ಯರ ಹೃದಯಗಳನ್ನು ಕದ್ದುಕೊಂಡನು.
2 ಸಮುವೇಲನು 15 : 7 (KNV)
ನಾಲ್ಕು ವರುಷಗಳಾದ ತರುವಾಯ ಅಬ್ಷಾಲೋ ಮನು ಅರಸನಿಗೆ--ನಾನು ಕರ್ತನಿಗೆ ಮಾಡಿಕೊಂಡಿದ್ದ ನನ್ನ ಪ್ರಮಾಣವನ್ನು ಹೆಬ್ರೋನಿನಲ್ಲಿ ಸಲ್ಲಿಸಲು ಹೋಗುವದಕ್ಕೆ ಅಪ್ಪಣೆಕೊಡಬೇಕು.
2 ಸಮುವೇಲನು 15 : 8 (KNV)
ಕರ್ತನು ನನ್ನನ್ನು ಯೆರೂಸಲೇಮಿಗೆ ತಿರಿಗಿ ನಿಜವಾಗಿಯೂ ಬರಮಾಡಿದರೆ ನಾನು ಕರ್ತನನ್ನು ಸೇವಿಸುವೆನೆಂದು ನಿನ್ನ ಸೇವಕನು ಅರಾಮ್ಯ ದೇಶದ ಗೆಷೂರಿನಲ್ಲಿ ವಾಸಿಸಿರುವಾಗ ಪ್ರಮಾಣಮಾಡಿಕೊಂಡಿದ್ದೆನು ಅಂದನು.
2 ಸಮುವೇಲನು 15 : 9 (KNV)
ಅರಸನು ಅವನಿಗೆ--ಸಮಾಧಾನವಾಗಿ ಹೋಗು ಅಂದನು. ಆಗ ಅವನು ಎದ್ದು ಹೆಬ್ರೋನಿಗೆ ಹೋದನು.
2 ಸಮುವೇಲನು 15 : 10 (KNV)
ಆದರೆ ಅಬ್ಷಾಲೋಮನು ಇಸ್ರಾಯೇಲಿನ ಎಲ್ಲಾ ಗೋತ್ರಗಳಿಗೆ ಪಾಳತಿಗಾರರನ್ನು ಕಳುಹಿಸಿ ಅವರಿಗೆ--ನೀವು ತುತೂರಿಯ ಶಬ್ದ ಕೇಳಿದಾಗ ಅಬ್ಷಾಲೋಮನು ಹೆಬ್ರೋನಿನಲ್ಲಿ ಆಳುತ್ತಾನೆಂದು ಹೇಳಿರಿ ಅಂದನು.
2 ಸಮುವೇಲನು 15 : 11 (KNV)
ಅಬ್ಷಾಲೋಮನ ಸಂಗಡ ಯೆರೂಸಲೇಮಿನಿಂದ ಕರೆಯಲ್ಪಟ್ಟ ಇನ್ನೂರು ಮಂದಿ ಜನರು ಹೋದರು. ಆದರೆ ಅವರು ನಿರ್ವಂಚನೆ ಯುಳ್ಳವರಾಗಿ ಏನೂ ತಿಳಿಯದೆ ಇದ್ದರು.
2 ಸಮುವೇಲನು 15 : 12 (KNV)
ಅಬ್ಷಾ ಲೋಮನು ಬಲಿಗಳನ್ನು ಅರ್ಪಿಸುತ್ತಿರುವಾಗ ದಾವೀ ದನ ಆಲೋಚನಾ ಕರ್ತನಾಗಿರುವ ಗೀಲೋವಿಯ ನಾದ ಅಹೀತೋಫೆಲನನ್ನು ಗೀಲೋವೆಂಬ ಅವನ ಪಟ್ಟಣದಿಂದ ಕರೇಕಳುಹಿಸಿದನು. ಅಬ್ಷಾಲೋಮನ ಸಂಗಡ ಕೂಡುವ ಜನರು ಆಗಾಗ್ಗೆ ಹೆಚ್ಚಿದ್ದರಿಂದ ಒಳಸಂಚಿನ ಗುಂಪು ಬಲವಾಯಿತು.
2 ಸಮುವೇಲನು 15 : 13 (KNV)
ದಾವೀದನ ಬಳಿಗೆ ಒಬ್ಬ ದೂತನು ಬಂದು --ಇಸ್ರಾಯೇಲ್ ಜನರ ಹೃದಯಗಳು ಅಬ್ಷಾ ಲೋಮನ ಕಡೆಗಾದವು ಅಂದನು.
2 ಸಮುವೇಲನು 15 : 14 (KNV)
ಆಗ ದಾವೀದನು ಯೆರೂಸಲೇಮಿನಲ್ಲಿ ತನ್ನ ಹತ್ತಿರ ಇರುವ ತನ್ನ ಎಲ್ಲಾ ಸೇವಕರಿಗೆ--ಏಳಿರಿ, ನಾವು ಓಡಿ ಹೋಗೋಣ; ಇಲ್ಲದಿದ್ದರೆ ಅಬ್ಷಾಲೋಮನ ಕೈ ಯಿಂದ ತಪ್ಪಿಸಿಕೊಂಡು ಹೋಗಲಾರೆವು; ಅವನು ಪಕ್ಕನೆ ನಮ್ಮನ್ನು ಹಿಡಿದು ನಮ್ಮ ಮೇಲೆ ಕೇಡನ್ನು ಬರಮಾಡಿ ಪಟ್ಟಣವನ್ನು ಕತ್ತಿಯಿಂದ ಹೊಡೆಯದ ಹಾಗೆ ಹೊರಟು ಹೋಗುವದಕ್ಕೆ ತ್ವರೆಮಾಡಿರಿ ಅಂದನು.
2 ಸಮುವೇಲನು 15 : 15 (KNV)
ಆಗ ಅರಸನ ಸೇವಕರು ಅರಸನಿಗೆಇಗೋ, ಅರಸನಾದ ನಮ್ಮ ಒಡೆಯನು ನಮಗೆ ಏನೇನು ಆಜ್ಞಾಪಿಸುವನೋ ಅದನ್ನು ಮಾಡುವದಕ್ಕೆ ನಿನ್ನ ಸೇವಕರು ಸಿದ್ಧರಾಗಿದ್ದೇವೆ ಅಂದರು.
2 ಸಮುವೇಲನು 15 : 16 (KNV)
ಅರಸನು ಮನೆಗೆ ಕಾವಲಿರುವಂತೆ ಉಪಪತ್ನಿಗಳಾದ ಹತ್ತು ಮಂದಿ ಸ್ತ್ರೀಯರನ್ನು ಬಿಟ್ಟು ಅವನೂ ಅವನ ಮನೆ ಯವರೆಲ್ಲರೂ ಅವನ ಹಿಂದೆ ಹೊರಟು ಹೋದರು.
2 ಸಮುವೇಲನು 15 : 17 (KNV)
ಅರಸನೂ ಅವನ ಹಿಂದೆ ಎಲ್ಲಾ ಜನರೂ ಹೊರಟು ಹೋಗಿ ದೂರವಾದ ಸ್ಥಳದಲ್ಲಿ ನಿಂತರು.
2 ಸಮುವೇಲನು 15 : 18 (KNV)
ಅವನ ಎಲ್ಲಾ ಸೇವಕರೂ ಕೆರೇತ್ಯರೂ ಪೆಲೇತ್ಯರೂ ಅವನ ಹಿಂದೆ ಗತ್ ಊರಿನಿಂದ ಅವನ ಸಂಗಡ ಬಂದ ಗಿತ್ತಿಯರಾದ ಆರುನೂರು ಮಂದಿಯೂ ಅರಸನ ಮುಂದೆ ನಡೆದರು.
2 ಸಮುವೇಲನು 15 : 19 (KNV)
ಆಗ ಅರಸನು ಗಿತ್ತೀಯನಾದ ಇತ್ತೈಯನ್ನು ನೋಡಿ--ನೀನು ನಮ್ಮ ಸಂಗಡ ಬರುವದು ಯಾಕೆ? ನಿನ್ನ ಸ್ಥಳಕ್ಕೆ ಹಿಂದಿರುಗಿ ಹೋಗಿ ಅರಸನ ಸಂಗಡ ಇರು. ಯಾಕಂದರೆ ನೀನು ಸೆರೆಹಿಡಿಯಲ್ಪಟ್ಟವನಾದ ಅನ್ಯದೇಶದವನು.
2 ಸಮುವೇಲನು 15 : 20 (KNV)
ನೀನು ನಿನ್ನೆ ಬಂದವನಾದದ ರಿಂದ ನಮ್ಮ ಸಂಗಡ ಹೋಗುವದಕ್ಕೆ ನಾನು ನಿನ್ನನ್ನು ತಿರುಗಾಡಿಸುವದು ಯಾಕೆ? ನಾನು ಎಲ್ಲಿಗೆ ಹೋಗ ಬೇಕಾದರೂ ಅಲ್ಲಿಗೆ ಹೋಗುವೆನು. ನಿನ್ನ ಸಹೋದರ ರನ್ನು ಕರಕೊಂಡು ಹಿಂದಕ್ಕೆ ಹೋಗು; ಕೃಪೆಯೂ ಸತ್ಯವೂ ನಿನ್ನ ಸಂಗಡ ಇರಲಿ ಅಂದನು.
2 ಸಮುವೇಲನು 15 : 21 (KNV)
ಆದರೆ ಇತ್ತೈಯು ಅರಸನಿಗೆ ಪ್ರತ್ಯುತ್ತರವಾಗಿ--ಕರ್ತನ ಜೀವ ದಾಣೆ, ಅರಸನಾದ ನನ್ನ ಒಡೆಯನ ಜೀವದಾಣೆ--ಸಾವಾದರೂ ಬದುಕುವದಾದರೂ ಅರಸನಾದ ನನ್ನ ಒಡೆಯನು ಎಲ್ಲಿ ಇರುವನೋ ನಿಶ್ಚಯವಾಗಿ ಅಲ್ಲಿ ನಿನ್ನ ಸೇವಕನು ಇರುವನು ಅಂದನು.
2 ಸಮುವೇಲನು 15 : 22 (KNV)
ಆಗ ದಾವೀದನು ಅವನಿಗೆ--ನೀನು ಹೋಗಿ ದಾಟು ಅಂದನು. ಆದದರಿಂದ ಗಿತ್ತೀಯನಾದ ಇತ್ತೈ ಅವನ ಎಲ್ಲಾ ಜನರೂ ಅವನ ಸಂಗಡ ಇರುವ ಎಲ್ಲಾ ಚಿಕ್ಕ ವರು ಕೂಡ ದಾಟಿಹೋದರು. ಜನರೆಲ್ಲಾ ದಾಟಿ ಹೋಗುವಾಗ ದೇಶದವರೆಲ್ಲಾ ಬಹಳವಾಗಿ ಅತ್ತರು.
2 ಸಮುವೇಲನು 15 : 23 (KNV)
ಅರಸನು ಕಿದ್ರೋನ್ ಹಳ್ಳವನ್ನು ದಾಟಿದನು; ಹಾಗೆಯೇ ಅವನ ಜನರೆಲ್ಲರೂ ದಾಟಿ ಅರಣ್ಯದ ಮಾರ್ಗವಾಗಿ ನಡೆದು ಹೋದರು.
2 ಸಮುವೇಲನು 15 : 24 (KNV)
ಇಗೋ, ಚಾದೋಕನೂ ಅವನ ಸಂಗಡ ಇರುವ ಎಲ್ಲಾ ಲೇವಿಯರೂ ದೇವರ ಒಡಂಬಡಿಕೆಯ ಮಂಜೂ ಷವನ್ನು ಹೊತ್ತುಕೊಂಡು ಬಂದು ಇಳಿಸಿದರು. ಆದರೆ ಎಬ್ಯಾತಾರನು ಜನರೆಲ್ಲರು ಪಟ್ಟಣದಿಂದ ದಾಟಿ ಹೋಗುವ ವರೆಗೆ ಮುಂದೆ ನಡೆಯುತ್ತಿದ್ದನು.
2 ಸಮುವೇಲನು 15 : 25 (KNV)
ಆಗ ಅರಸನು ಚಾದೋಕನಿಗೆ--ದೇವರ ಮಂಜೂಷವನ್ನು ಪಟ್ಟಣಕ್ಕೆ ತಿರಿಗಿ ತಕ್ಕೊಂಡು ಹೋಗು. ಕರ್ತನ ದೃಷ್ಟಿಯಲ್ಲಿ ಮುಂದೆ ನನಗೆ ಕೃಪೆ ದೊರಕಿದರೆ ಆತನು ನನ್ನನ್ನು ತಿರಿಗಿ ಬರಮಾಡಿ ಅದನ್ನೂ ಅದರ ವಾಸಸ್ಥಳವನ್ನೂ ನನಗೆ ತೋರಿಸುವನು.
2 ಸಮುವೇಲನು 15 : 26 (KNV)
ಒಂದು ವೇಳೆ ಆತನು--ನಿನ್ನಲ್ಲಿ ನನಗೆ ಇಷ್ಟವಿಲ್ಲವೆಂದು ಹೇಳಿ ದರೆ ಇಗೋ, ಆತನು ತನ್ನ ದೃಷ್ಟಿಗೆ ಯುಕ್ತವಾದ ಹಾಗೆ ನನಗೆ ಮಾಡಲಿ ಅಂದನು.
2 ಸಮುವೇಲನು 15 : 27 (KNV)
ಅರಸನು ಯಾಜಕ ನಾದ ಚಾದೋಕನಿಗೆ--ನೀನು ದರ್ಶಿಯಲ್ಲವೇ? ನೀನು ಸಮಾಧಾನದಿಂದ ಪಟ್ಟಣಕ್ಕೆ ತಿರಿಗಿ ಹೋಗು; ಇದಲ್ಲದೆ ನಿನ್ನ ಇಬ್ಬರು ಮಕ್ಕಳಾದ ಅಹೀಮಾಚನೂ ಎಬ್ಯಾತಾರನ ಮಗನಾದ ಯೋನಾತಾನನೂ ನಿನ್ನ ಸಂಗಡ ಹೋಗಲಿ.
2 ಸಮುವೇಲನು 15 : 28 (KNV)
ನೋಡು, ನನಗೆ ತಿಳಿಸುವದಕ್ಕೆ ನಿಮ್ಮ ಬಳಿಯಿಂದ ವರ್ತಮಾನ ಬರುವ ವರೆಗೂ ನಾನು ಅರಣ್ಯದ ಬೈಲಲ್ಲಿ ಇರುವೆನು ಅಂದನು.
2 ಸಮುವೇಲನು 15 : 29 (KNV)
ಹಾಗೆಯೇ ಚಾದೋಕನೂ ಎಬ್ಯಾತಾರನೂ ದೇವರ ಮಂಜೂಷವನ್ನು ತಿರಿಗಿ ಯೆರೂಸಲೇಮಿಗೆ ತಕ್ಕೊಂಡು ಹೋಗಿ ಅಲ್ಲಿದ್ದರು.
2 ಸಮುವೇಲನು 15 : 30 (KNV)
ದಾವೀದನು ಅಳುತ್ತಾ ತನ್ನ ತಲೆಯನ್ನು ಮುಚ್ಚಿ ಕೊಂಡು ಬರಿಗಾಲಾಗಿ ಎಣ್ಣೆ ಮರಗಳ ಗುಡ್ಡವನ್ನು ಏರಿದನು; ಅವನ ಸಂಗಡ ಇರುವ ಎಲ್ಲಾ ಜನರೂ ತಮ್ಮ ತಮ್ಮ ತಲೆಗಳನ್ನು ಮುಚ್ಚಿಕೊಂಡು ಅಳುತ್ತಾ ಮೇಲಕ್ಕೆರಿದರು.
2 ಸಮುವೇಲನು 15 : 31 (KNV)
ಅಹೀತೋಫೆಲನು ಅಬ್ಷಾಲೋ ಮನ ಬಳಿಯಲ್ಲಿ ಒಳಸಂಚಿನವರ ಸಂಗಡ ಇದ್ದಾ ನೆಂದು ದಾವೀದನಿಗೆ ತಿಳಿಸಲ್ಪಟ್ಟಾಗ ದಾವೀದನು--ಕರ್ತನೇ, ಅಹೀತೋಫೆಲನ ಆಲೋಚನೆಯನ್ನು ಹುಚ್ಚುತನವಾಗ ಮಾಡು ಅಂದನು.
2 ಸಮುವೇಲನು 15 : 32 (KNV)
ದಾವೀದನು ಪರ್ವತದ ತುದಿಗೆ ಬಂದು ಅಲ್ಲಿ ದೇವರನ್ನು ಆರಾಧಿಸಿ ದಾಗ ಏನಾಯಿತಂದರೆ ಇಗೋ, ಅರ್ಕೀಯನಾದ ಹೂಷೈ ತನ್ನ ಅಂಗಿಯನ್ನು ಹರಿದುಕೊಂಡು ತನ್ನ ತಲೆಯ ಮೇಲೆ ಮಣ್ಣು ಹೊಯ್ದುಕೊಂಡು ಅವನನ್ನು ಎದುರುಗೊಳ್ಳಲು ಬಂದನು.
2 ಸಮುವೇಲನು 15 : 33 (KNV)
ಆಗ ದಾವೀದನು ಅವನಿಗೆ--ನೀನು ನನ್ನ ಸಂಗಡ ಬಂದರೆ ನನಗೆ ಭಾರವಾಗಿರುವಿ; ನೀನು ಪಟ್ಟಣಕ್ಕೆ ತಿರಿಗಿ ಹೋಗಿ ಅಬ್ಷಾಲೋಮನಿಗೆ--ಅರಸನೇ, ನಾನು ನಿನ್ನ ಸೇವಕ ನಾಗಿರುವೆನು.
2 ಸಮುವೇಲನು 15 : 34 (KNV)
ನಾನು ಇಂದಿನ ವರೆಗೂ ಹೇಗೆ ನಿನ್ನ ತಂದೆಗೆ ಸೇವಕನಾಗಿದ್ದೆನೋ ಹಾಗೆಯೇ ಈಗ ನಿನ್ನ ಸೇವಕನಾಗಿರುವೆನು ಎಂದು ಹೇಳುವುದಾದರೆ ನೀನು ನನಗೋಸ್ಕರ ಅಹೀತೋಫೆಲನ ಆಲೋಚನೆ ಯನ್ನು ವ್ಯರ್ಥಮಾಡಬಹುದು.
2 ಸಮುವೇಲನು 15 : 35 (KNV)
ಅಲ್ಲಿ ಯಾಜಕ ರಾದ ಚಾದೋಕನೂ ಎಬ್ಯಾತಾರನೂ ನಿನ್ನ ಬಳಿಯಲ್ಲಿ ಲ್ಲವೋ? ಆದದರಿಂದ ನೀನು ಅರಸನ ಮನೆಯಲ್ಲಿ ಯಾವ ವರ್ತಮಾನವನ್ನು ಕೇಳುತ್ತೀಯೋ ಅದನ್ನು ಯಾಜಕರಾದ ಚಾದೋಕನಿಗೂ ಎಬ್ಯಾತಾರನಿಗೂ ತಿಳಿಸು.
2 ಸಮುವೇಲನು 15 : 36 (KNV)
ಇಗೋ, ಅಲ್ಲಿ ಅವರ ಸಂಗಡ ಅವರ ಇಬ್ಬರು ಮಕ್ಕಳು ಇದ್ದಾರೆ: ಚಾದೋಕನ ಮಗನಾದ ಅಹೀಮಾಚನೂ ಎಬ್ಯಾತಾರನ ಮಗನಾದ ಯೋನಾ ತಾನನೂ. ನೀವು ಕೇಳಿದ ವರ್ತಮಾನವನ್ನೆಲ್ಲಾ ಅವರ ಮೂಲಕ ನನಗೆ ಹೇಳಿ ಕಳುಹಿಸಬೇಕು ಅಂದನು.
2 ಸಮುವೇಲನು 15 : 37 (KNV)
ಹಾಗೆಯೇ ದಾವೀದನ ಸ್ನೇಹಿತನಾದ ಹೂಷೈ ಪಟ್ಟಣಕ್ಕೆ ಬಂದನು; ಅಬ್ಷಾಲೋಮನು ಯೆರೂಸಲೇಮಿಗೆ ಬಂದನು.

1 2 3 4 5 6 7 8 9 10 11 12 13 14 15 16 17 18 19 20 21 22 23 24 25 26 27 28 29 30 31 32 33 34 35 36 37