2 ಸಮುವೇಲನು 10 : 1 (KNV)
ಇದರ ತರುವಾಯ ಏನಾಯಿತಂದರೆ, ಅಮ್ಮೋನನ ಮಕ್ಕಳ ಅರಸನು ಸತ್ತನು; ಅವನ ಮಗನಾದ ಹಾನೂನನು ಅವನಿಗೆ ಬದಲಾಗಿ ಅರಸನಾದನು.
2 ಸಮುವೇಲನು 10 : 2 (KNV)
ದಾವೀದನು--ಹಾನೂನನ ತಂದೆಯಾದ ನಾಹಾಷನು ನನಗೆ ದಯೆತೋರಿಸಿದ ಹಾಗೆಯೇ ನಾನೂ ಅವನ ಮಗನಾದ ಹಾನೂನನಿಗೆ ದಯೆತೋರಿಸುವೆನು ಅಂದನು. ದಾವೀದನು ಅವನ ತಂದೆಗೋಸ್ಕರ ಅವನಿಗೆ ಆದರಣೆ ಹೇಳುವದಕ್ಕೆ ತನ್ನ ಸೇವಕರನ್ನು ಕಳುಹಿಸಿದನು.
2 ಸಮುವೇಲನು 10 : 3 (KNV)
ದಾವೀದನ ಸೇವಕರು ಅಮ್ಮೋನನ ಮಕ್ಕಳ ದೇಶಕ್ಕೆ ಬಂದಾಗ ಅಮ್ಮೋನನ ಮಕ್ಕಳ ಪ್ರಧಾನರು ತಮ್ಮ ಯಜಮಾನನಾದ ಹಾನೂನ ನಿಗೆ--ದಾವೀದನು ಆದರಣೆ ಹೇಳುವವರನ್ನು ನಿನ್ನ ಬಳಿಗೆ ಕಳುಹಿಸಿದ್ದರಿಂದ ನಿನ್ನ ತಂದೆಯನ್ನು ಘನ ಪಡಿಸುತ್ತಾನೆಂದು ಯೋಚಿಸುತ್ತೀಯೋ? ಈ ಪಟ್ಟಣ ವನ್ನು ಶೋಧಿಸುವದಕ್ಕೂ ಪಾಳತಿನೋಡುವದಕ್ಕೂ ಅದನ್ನು ಕೆಡವಿಹಾಕುವದಕ್ಕೂ ದಾವೀದನು ತನ್ನ ಸೇವಕರನ್ನು ನಿನ್ನ ಬಳಿಗೆ ಕಳುಹಿಸಿದ್ದಲ್ಲವೋ ಅಂದರು.
2 ಸಮುವೇಲನು 10 : 4 (KNV)
ಆದದರಿಂದ ಹಾನೂನನು ದಾವೀದನ ಸೇವಕರನ್ನು ಹಿಡಿದು ಅವರ ಅರ್ಧ ಗಡ್ಡವನ್ನು ಬೋಳಿಸಿ ಅವರ ವಸ್ತ್ರಗಳನ್ನು ಮಧ್ಯದಲ್ಲಿ ಕುಂಡಿಯ ವರೆಗೆ ಕತ್ತರಿಸಿ ಅವರನ್ನು ಕಳುಹಿಸಿದನು.
2 ಸಮುವೇಲನು 10 : 5 (KNV)
ಅವರು ಅದನ್ನು ದಾವೀದ ನಿಗೆ ತಿಳಿಸಿದಾಗ ಆ ಜನರು ಬಹಳ ನಾಚಿಕೆಪಟ್ಟದ್ದ ರಿಂದ ದಾವೀದನು ಕೆಲವರನ್ನು ಅವರಿಗೆದುರಾಗಿ ಕಳು ಹಿಸಿ--ನಿಮ್ಮ ಗಡ್ಡಗಳು ಬೆಳೆಯುವವರೆಗೆ ನೀವು ಯೆರಿಕೋವಿನಲ್ಲಿ ಕಾದಿದ್ದು ತರುವಾಯ ಬನ್ನಿರಿ ಎಂದು ಹೇಳಿದನು.
2 ಸಮುವೇಲನು 10 : 6 (KNV)
ಅಮ್ಮೋನನ ಮಕ್ಕಳು ತಾವು ದಾವೀದನಿಗೆ ಅಸಹ್ಯ ವಾದೆವೆಂದು ತಿಳುಕೊಂಡಾಗ ಅವರು (ದೂತರನ್ನು) ಕಳುಹಿಸಿ ಬೇತ್ರೆಹೋಬ್ನಲ್ಲಿಯೂ ಚೋಬಾದ ಲ್ಲಿಯೂ ಇರುವ ಇಪ್ತತ್ತು ಸಾವಿರ ಕಾಲಾಳುಗಳಾದ ಅರಾಮ್ಯರನ್ನೂ ಅರಸನಾದ ಮಾಕನ ಬಳಿಯಿಂದ ಸಾವಿರ ಜನರನ್ನೂ ಇಷ್ಟೋಬ್ನಿಂದ ಹನ್ನೆರಡು ಸಾವಿರ ಜನರನ್ನೂ ಕೂಲಿಗೆ ತೆಗೆದುಕೊಂಡರು.
2 ಸಮುವೇಲನು 10 : 7 (KNV)
ದಾವೀದನು ಅದನ್ನು ಕೇಳಿದಾಗ ಅವನು ಯೋವಾಬನನ್ನೂ ಪರಾ ಕ್ರಮಶಾಲಿಗಳಾದ ಸಕಲ ಶೂರಸೈನಿಕರನ್ನು ಕಳುಹಿ ಸಿದನು.
2 ಸಮುವೇಲನು 10 : 8 (KNV)
ಆಗ ಅಮ್ಮೋನನ ಮಕ್ಕಳು ಹೊರಟು ಪಟ್ಟಣದ ಬಾಗಲ ಮುಂದೆ ವ್ಯೂಹಕಟ್ಟಿದರು. ಆದರೆ ಚೋಬಾದಿಂದಲೂ ರೆಹೋಬ್ನಿಂದಲೂ ಇಷ್ಟೋಬ್ ನಿಂದಲೂ ಮಾಕನಿಂದಲೂ ಬಂದ ಅರಾಮ್ಯರು ಹೊರಗೆ ಬೈಲಿನಲ್ಲಿ ಬೇರೆ ಇಳಿದಿದ್ದರು.
2 ಸಮುವೇಲನು 10 : 9 (KNV)
ಯೋವಾಬನು ಯುದ್ಧದ ಮುಖವು ಹಿಂದೆ ಮುಂದೆ ತನಗೆ ಎದುರಾ ಗಿರುವದನ್ನು ನೋಡಿದಾಗ ಅವನು ಇಸ್ರಾಯೇಲಿನ ಆಯಲ್ಪಟ್ಟ ಎಲ್ಲಾ ಜನರನ್ನು ಆದುಕೊಂಡು ಅರಾಮ್ಯ ರಿಗೆ ಎದುರಾಗಿ ವ್ಯೂಹಕಟ್ಟಿದನು.
2 ಸಮುವೇಲನು 10 : 10 (KNV)
ಆದರೆ ಮಿಕ್ಕಾದ ವರು ಅಮ್ಮೋನನ ಮಕ್ಕಳಿಗೆದುರಾಗಿ ವ್ಯೂಹಕಟ್ಟುವ ಹಾಗೆ ಅವರನ್ನು ತನ್ನ ಸಹೋದರನಾದ ಅಬೀಷೈಯ ಕೈಯಲ್ಲಿ ಒಪ್ಪಿಸಿಕೊಟ್ಟು--
2 ಸಮುವೇಲನು 10 : 11 (KNV)
ಅರಾಮ್ಯರು ನನಗಿಂತ ಬಲವುಳ್ಳವರಾದರೆ ನೀನು ನನಗೆ ಸಹಾಯ ಕೊಡ ಬೇಕು; ಅಮ್ಮೋನನ ಮಕ್ಕಳು ನಿನಗಿಂತ ಬಲವುಳ್ಳವ ರಾದರೆ ನಾನು ಬಂದು ನಿನಗೆ ಸಹಾಯ ಮಾಡುವೆನು.
2 ಸಮುವೇಲನು 10 : 12 (KNV)
ಬಲವಾಗಿರು; ನಾವು ನಮ್ಮ ಜನರಿಗೋಸ್ಕರವೂ ನಮ್ಮ ದೇವರ ಪಟ್ಟಣಗಳಿಗೋಸ್ಕರವೂ ಬಲಗೊ ಳ್ಳೋಣ. ಕರ್ತನು ತನ್ನ ದೃಷ್ಟಿಗೆ ಉತ್ತಮವಾದದ್ದನ್ನು ಮಾಡಲಿ ಅಂದನು.
2 ಸಮುವೇಲನು 10 : 13 (KNV)
ಆಗ ಯೋವಾಬನೂ ಅವನ ಸಂಗಡ ಇದ್ದ ಜನರೂ ಅರಾಮ್ಯರ ಮೇಲೆ ಯುದ್ಧ ಮಾಡುವದಕ್ಕೆ ಸವಿಾಪಕ್ಕೆ ಬಂದರು. ಅವರು ಅವನ ಎದುರಿನಿಂದ ಓಡಿಹೋದರು.
2 ಸಮುವೇಲನು 10 : 14 (KNV)
ಅರಾಮ್ಯರು ಓಡಿ ಹೋದದ್ದನ್ನು ಅಮ್ಮೋನನ ಮಕ್ಕಳು ನೋಡಿದಾಗ ಅವರು ಅಬೀಷೈಯ ಎದುರಿನಿಂದ ಓಡಿ ಪಟ್ಟಣ ದೊಳಗೆ ಹೊಕ್ಕರು. ಆಗ ಯೋವಾಬನು ಅಮ್ಮೊನನ ಮಕ್ಕಳನ್ನು ಬಿಟ್ಟು ತಿರುಗಿ ಯೆರೂಸಲೇಮಿಗೆ ಬಂದನು.
2 ಸಮುವೇಲನು 10 : 15 (KNV)
ಅರಾಮ್ಯರು ತಾವು ಇಸ್ರಾಯೇಲ್ಯರ ಮುಂದೆ ಹೊಡೆಯಲ್ಪಟ್ಟದ್ದನ್ನು ಕಂಡಾಗ ಅವರು ಒಟ್ಟಾಗಿ ಕೂಡಿದರು.
2 ಸಮುವೇಲನು 10 : 16 (KNV)
ಇದಲ್ಲದೆ ಹದದೆಜೆರನು ನದಿಗೆ ಆಚೆ ಇದ್ದ ಅರಾಮ್ಯರನ್ನು ಕರೇಕಳುಹಿಸಿದ್ದರಿಂದ ಅವರು ಹೇಲಾಮಿಗೆ ಬಂದರು; ಹದದೆಜೆರನ ಸೈನ್ಯಕ್ಕೆ ಅಧಿ ಪತಿಯಾದ ಶೋಬಕನು ಅವರ ಮುಂದೆ ನಡೆದನು.
2 ಸಮುವೇಲನು 10 : 17 (KNV)
ಅದು ದಾವೀದನಿಗೆ ತಿಳಿಸಲ್ಪಟ್ಟಾಗ ಅವನು ಇಸ್ರಾ ಯೇಲ್ಯರೆಲ್ಲರನ್ನು ಕೂಡಿಸಿಕೊಂಡು ಯೊರ್ದನನ್ನು ದಾಟಿ ಹೇಲಾಮಿಗೆ ಬಂದನು. ಅರಾಮ್ಯರು ದಾವೀದ ನಿಗೆದುರಾಗಿ ವ್ಯೂಹಕಟ್ಟಿ ಯುದ್ಧಮಾಡಿದರು.
2 ಸಮುವೇಲನು 10 : 18 (KNV)
ಆಗ ಅರಾಮ್ಯರು ಇಸ್ರಾಯೇಲ್ಯರ ಎದುರಿನಿಂದ ಓಡಿದರು. ದಾವೀದನು ಅರಾಮ್ಯರಲ್ಲಿ ಏಳು ನೂರು ಮಂದಿ ಸಾರಥಿಗಳನ್ನೂ ನಾಲ್ವತ್ತು ಸಾವಿರ ಕುದುರೆ ರಾಹುತ ರನ್ನೂ ಕೊಂದು ಅವರ ಸೈನ್ಯದ ಯಜಮಾನನಾದ ಶೋಬಕನನ್ನು ಹೊಡೆದನು; ಅವನು ಅಲ್ಲಿಯೇ ಸತ್ತನು.
2 ಸಮುವೇಲನು 10 : 19 (KNV)
ಹದದೆಜೆರನ ಸೇವಕರಾದ ಅರಸುಗಳೆ ಲ್ಲರೂ ತಾವು ಇಸ್ರಾಯೇಲ್ಯರ ಮುಂದೆ ಹೊಡೆಯ ಲ್ಪಟ್ಟದ್ದನ್ನು ಕಂಡಾಗ ಅವರು ಇಸ್ರಾಯೇಲ್ಯರ ಸಂಗಡ ಸಮಾಧಾನಮಾಡಿಕೊಂಡು ಅವರನ್ನು ಸೇವಿಸಿದರು.ಹೀಗೆ ಅರಾಮ್ಯರು ಅಮ್ಮೋನನ ಮಕ್ಕಳಿಗೆ ಇನ್ನು ಸಹಾಯಮಾಡುವದಕ್ಕೆ ಭಯಪಟ್ಟರು.

1 2 3 4 5 6 7 8 9 10 11 12 13 14 15 16 17 18 19