2 ಸಮುವೇಲನು 1 : 1 (KNV)
ಸೌಲನು ಸತ್ತ ತರುವಾಯ ದಾವೀದನು ಅಮಾಲೇಕ್ಯರನ್ನು ಸಂಹರಿಸಿ ಚಿಕ್ಲಗಿಗೆ ತಿರಿಗಿ ಬಂದು ಎರಡು ದಿವಸ ಅಲ್ಲಿ ಇದ್ದ ತರುವಾಯ ಏನಾಯಿತಂದರೆ
2 ಸಮುವೇಲನು 1 : 2 (KNV)
ಇಗೋ, ಮೂರನೆಯ ದಿನದಲ್ಲಿ ತನ್ನ ವಸ್ತ್ರಗಳನ್ನು ಹರಿದುಕೊಂಡು ತನ್ನ ತಲೆಯ ಮೇಲೆ ಮಣ್ಣು ಹಾಕಿಕೊಂಡಿದ್ದ ಒಬ್ಬ ಮನುಷ್ಯನು ಸೌಲನ ಬಳಿಯಿಂದಲೂ ಪಾಳೆಯಿಂದಲೂ ಹೊರಟು ದಾವೀ ದನ ಬಳಿಗೆ ಬಂದು ನೆಲದ ಮೇಲೆ ಬಿದ್ದು ಅವ ನಿಗೆ ವಂದಿಸಿದನು.
2 ಸಮುವೇಲನು 1 : 3 (KNV)
ದಾವೀದನು ಅವನಿಗೆ--ನೀನು ಎಲ್ಲಿಂದ ಬಂದಿ ಅಂದನು. ಅದಕ್ಕವನು--ಇಸ್ರಾಯೇ ಲಿನ ದಂಡಿನಿಂದ ತಪ್ಪಿಸಿಕೊಂಡು ಬಂದೆನು ಅಂದನು.
2 ಸಮುವೇಲನು 1 : 4 (KNV)
ದಾವೀದನು ಅವನಿಗೆ--ನಡೆದ ವರ್ತಮಾನವೇನು? ನೀನು ನನಗೆ ತಿಳಿಸು ಅಂದನು. ಅವನು--ಜನರು ಯುದ್ಧದಿಂದ ಓಡಿಹೋದರು; ಜನರಲ್ಲಿ ಅನೇಕರು ಸತ್ತುಬಿದ್ದರು; ಸೌಲನೂ ಅವನ ಮಗನಾದ ಯೋನಾ ತಾನನೂ ಸತ್ತರು ಅಂದನು.
2 ಸಮುವೇಲನು 1 : 5 (KNV)
ದಾವೀದನು ತನಗೆ ವರ್ತಮಾನ ಹೇಳಿದ ಯೌವನಸ್ಥನಿಗೆ--ಸೌಲನೂ ಅವನ ಮಗನಾದ ಯೋನಾತಾನನೂ ಸತ್ತರೆಂದು ನಿನಗೆ ಹೇಗೆ ತಿಳಿಯಿತು ಅಂದನು.
2 ಸಮುವೇಲನು 1 : 6 (KNV)
ಅವನಿಗೆ ವರ್ತ ಮಾನ ಹೇಳಿದ ಯೌವನಸ್ಥನು--ನಾನು ಸುಮ್ಮನೆ ಗಿಲ್ಬೋವ ಬೆಟ್ಟದಲ್ಲಿ ಬಂದಿದ್ದೆನು. ಅಲ್ಲಿ ಇಗೋ, ಸೌಲನು ತನ್ನ ಈಟಿಯ ಮೇಲೆ ಆತುಕೊಂಡಿದ್ದನು. ಆಗ ಇಗೋ, ರಥಗಳೂ ರಾಹುತರೂ ಅವನನ್ನು ಹಿಂದಟ್ಟಿಕೊಂಡೇ ಇದ್ದರು.
2 ಸಮುವೇಲನು 1 : 7 (KNV)
ಅವನು ಹಿಂದಕ್ಕೆ ತಿರುಗಿ ನೋಡಿ ನನ್ನನ್ನು ಕಂಡು ಕರೆದನು. ಆಗ ನಾನುಇಗೋ, ಇದ್ದೇನೆ ಅಂದೆನು.
2 ಸಮುವೇಲನು 1 : 8 (KNV)
ಆಗ ಅವನು ನೀನ್ಯಾರು ಅಂದನು.
2 ಸಮುವೇಲನು 1 : 9 (KNV)
ನಾನು ಅವನಿಗೆ--ಅಮಾಲೇಕ್ಯನು ಎಂದು ಹೇಳಿದೆನು. ಅವನು ನನಗೆ -- ನೀನು ದಯಮಾಡಿ ನನ್ನ ಮೇಲೆ ನಿಂತು ನನ್ನನ್ನು ಕೊಂದುಹಾಕು; ಯಾಕಂದರೆ ನನ್ನ ಪ್ರಾಣವು ಇನ್ನೂ ನನ್ನಲ್ಲಿ ಪೂರ್ಣ ವಾಗಿರುವದರಿಂದ ಸಂಕಟವು ನನ್ನನ್ನು ಹಿಡಿಯಿತು ಅಂದನು.
2 ಸಮುವೇಲನು 1 : 10 (KNV)
ಆದದರಿಂದ ಇವನು ಬಿದ್ದ ತರುವಾಯ ಬದುಕಲಾರನೆಂದು ನಾನು ತಿಳಿದು ಅವನ ಮೇಲೆ ನಿಂತು ಅವನನ್ನು ಕೊಂದುಹಾಕಿದೆನು. ಅವನ ತಲೆಯ ಮೇಲಿದ್ದ ಕಿರೀಟವನ್ನೂ ಅವನ ಕೈಯಲ್ಲಿದ್ದ ಕಡಗ ವನ್ನೂ ತೆಗೆದುಕೊಂಡು ಅವುಗಳನ್ನು ನನ್ನ ಒಡೆಯನಿಗೆ ಇಲ್ಲಿ ತಂದೆನು ಅಂದನು.
2 ಸಮುವೇಲನು 1 : 11 (KNV)
ಆಗ ದಾವೀದನೂ ಅವನ ಸಂಗಡ ಇದ್ದ ಎಲ್ಲಾ ಜನರೂ ತಮ್ಮ ವಸ್ತ್ರಗಳನ್ನು ಹರಿದುಕೊಂಡು
2 ಸಮುವೇಲನು 1 : 12 (KNV)
ಸೌಲನೂ ಅವನ ಮಗನಾದ ಯೋನಾತಾನನೂ ಇಸ್ರಾಯೇಲಿನ ಮನೆಯವರೂ ಕರ್ತನ ಜನರೂ ಕತ್ತಿಯಿಂದ ಬಿದ್ದ ಕಾರಣ ಅವರಿ ಗೋಸ್ಕರ ಗೋಳಾಡಿ ಅತ್ತು ಸಾಯಂಕಾಲದ ವರೆಗೂ ಉಪವಾಸವಾಗಿದ್ದರು.
2 ಸಮುವೇಲನು 1 : 13 (KNV)
ಆದರೆ ದಾವೀದನು ಅದನ್ನು ತನಗೆ ತಿಳಿಸಿದ ಯೌವನಸ್ಥನನ್ನು--ನೀನು ಎಲ್ಲಿಯ ವನು ಎಂದು ಕೇಳಿದಾಗ ಅವನು--ನಾನು ಅನ್ಯನ ಮಗನಾದ ಅಮಾಲೇಕ್ಯನು ಅಂದನು.
2 ಸಮುವೇಲನು 1 : 14 (KNV)
ಆಗ ದಾವೀ ದನು ಅವನಿಗೆ--ಕರ್ತನ ಅಭಿಷಿಕ್ತನನ್ನು ಸಂಹರಿಸಲು ನಿನ್ನ ಕೈಚಾಚುವದಕ್ಕೆ ಭಯಪಡದೆ ಇದ್ದದ್ದು ಹೇಗೆ ಎಂದು ಹೇಳಿದನು.
2 ಸಮುವೇಲನು 1 : 15 (KNV)
ದಾವೀದನು ಯೌವನಸ್ಥ ನೊಬ್ಬನನ್ನು ಕರೆದು--ನೀನು ಹತ್ತಿರ ಹೋಗಿ ಅವನ ಮೇಲೆ ಬೀಳು ಅಂದನು. ಹಾಗೆಯೇ ಅವನು ಅವನನ್ನು ಹೊಡೆದನು; ಅವನು ಸತ್ತನು.
2 ಸಮುವೇಲನು 1 : 16 (KNV)
ದಾವೀದನು ಅವ ನಿಗೆ--ಕರ್ತನ ಅಭಿಷಿಕ್ತನನ್ನು ಕೊಂದುಹಾಕಿದೆನೆಂದು ನಿನ್ನ ಬಾಯಿ ನಿನಗೆ ವಿರೋಧವಾಗಿ ಸಾಕ್ಷಿಹೇಳಿದ್ದರಿಂದ ನಿನ್ನ ರಕ್ತವು ನಿನ್ನ ತಲೆಯ ಮೇಲೆ ಇರಲಿ ಅಂದನು.
2 ಸಮುವೇಲನು 1 : 17 (KNV)
ಆಗ ದಾವೀದನು ಸೌಲನ ಮೇಲೆಯೂ ಅವನ ಮಗನಾದ ಯೋನಾತಾನನ ಮೇಲೆಯೂ ಗೋಳಾಟ ದಿಂದ ಈ ಗೀತೆ ಹಾಡಿ ಗೋಳಾಡಿದನು.
2 ಸಮುವೇಲನು 1 : 18 (KNV)
ಇದ ಲ್ಲದೆ ದಾವೀದನು ಬಿಲ್ಲೆಂಬ ಗೀತವನ್ನು ಯೆಹೂದನ ಮಕ್ಕಳಿಗೆ ಕಲಿಸಬೇಕೆಂದು ಹೇಳಿದನು; ಇಗೋ, ಇದು ಯಾಷಾರಿನ ಪುಸ್ತಕದಲ್ಲಿ ಬರೆಯಲ್ಪಟ್ಟಿದೆ,
2 ಸಮುವೇಲನು 1 : 19 (KNV)
ಏನಂದರೆ--ಇಸ್ರಾಯೇಲಿನ ಸೌಂದರ್ಯವು ಉನ್ನತಸ್ಥಳಗಳ ಮೇಲೆ ಕೊಲ್ಲಲ್ಪಟ್ಟಿದೆ. ಪರಾಕ್ರಮ ಶಾಲಿಗಳು ಹೇಗೆ ಬಿದ್ದರು!
2 ಸಮುವೇಲನು 1 : 20 (KNV)
ಗತ್ ಊರಿನಲ್ಲಿ ತಿಳಿಸಬೇಡಿರಿ. ಅಷ್ಕೆಲೋನಿನ ಬೀದಿಗಳಲ್ಲಿ ಸಾರ ಬೇಡಿರಿ. ಫಿಲಿಷ್ಟಿಯರ ಕುಮಾರ್ತೆಯರು ಸಂತೋಷ ಪಟ್ಟಾರಲ್ಲಾ; ಸುನ್ನತಿ ಇಲ್ಲದವರ ಕುಮಾರ್ತೆಯರು ಉತ್ಸಾಹ ಪಟ್ಟಾರಲ್ಲಾ.
2 ಸಮುವೇಲನು 1 : 21 (KNV)
ಗಿಲ್ಬೋವ ಬೆಟ್ಟಗಳೇ, ನಿಮ್ಮ ಮೇಲೆ ಮಂಜೂ ಮಳೆಯೂ ಅರ್ಪಣೆಗಳ ಹೊಲ ಗಳೂ ಇಲ್ಲದೆ ಹೋಗಲಿ. ಯಾಕಂದರೆ ಅಲ್ಲಿ ಪರಾ ಕ್ರಮಶಾಲಿಗಳ ಗುರಾಣಿಯೂ ಸೌಲನ ಗುರಾಣಿಯೂ ಅವಮಾನವಾಗಿ ಬಿದ್ದವು. ಸೌಲನು ಎಣ್ಣೆಯಿಂದ ಅಭಿಷೇಕಿಸಲ್ಪಡದವನ ಹಾಗಾದನು.
2 ಸಮುವೇಲನು 1 : 22 (KNV)
ಕೊಲ್ಲಲ್ಪಟ್ಟ ವರ ರಕ್ತದಿಂದಲೂ ಬಲಶಾಲಿಗಳ ಕೊಬ್ಬಿನಿಂದಲೂ ಯೋನಾತಾನನ ಬಿಲ್ಲು ಹಿಂದಕ್ಕೆ ತಿರುಗಲಿಲ್ಲ; ಸೌಲನ ಕತ್ತಿ ಬರಿದಾಗಿ ತಿರಿಗಿ ಬರಲಿಲ್ಲ.
2 ಸಮುವೇಲನು 1 : 23 (KNV)
ಸೌಲನೂ ಯೋನಾತಾನನೂ ಜೀವದಿಂದಿದ್ದಾಗ ಪ್ರಿಯಕರವಾಗಿಯೂ ಸಂತೋಷಕರವಾಗಿಯೂ ಇದ್ದರು; ತಮ್ಮ ಮರಣದಲ್ಲಿಯೂ ಅಗಲಿ ಹೋಗದೆ ಇದ್ದರು. ಅವರು ಹದ್ದುಗಳಿಗಿಂತ ವೇಗವುಳ್ಳವರೂ ಸಿಂಹಗಳಿಗಿಂತ ಬಲ ವುಳ್ಳವರೂ ಆಗಿದ್ದರು.
2 ಸಮುವೇಲನು 1 : 24 (KNV)
ಇಸ್ರಾಯೇಲಿನ ಕುಮಾರ್ತೆ ಯರೇ, ಸೌಲನಿಗೋಸ್ಕರ ಅಳಿರಿ, ನಿಮಗೆ ರಕ್ತಾಂಬರ ವನ್ನು ಸಂಭ್ರಮವಾಗಿ ತೊಡಿಸಿದನಲ್ಲಾ; ನಿಮ್ಮ ಉಡುಗೆ ಗಳ ಮೇಲೆ ಚಿನ್ನದ ಆಭರಣಗಳನ್ನು ಧರಿಸುವಂತೆ ಮಾಡಿದನಲ್ಲಾ.
2 ಸಮುವೇಲನು 1 : 25 (KNV)
ಪರಾಕ್ರಮಶಾಲಿಗಳು ಹೇಗೆ ಯುದ್ಧದಲ್ಲಿ ಬಿದ್ದಿದ್ದಾರೆ! ಯೋನಾತಾನನೇ, ನೀನು ನಿನ್ನ ಉನ್ನತಸ್ಥಳಗಳಲ್ಲಿ ಕೊಲ್ಲಲ್ಪಟ್ಟಿ.
2 ಸಮುವೇಲನು 1 : 26 (KNV)
ನನ್ನ ಸಹೋದರನಾದ ಯೋನಾತಾನನೇ, ನಾನು ನಿನ ಗೋಸ್ಕರ ಸಂಕಟಪಡುತ್ತೇನೆ; ನೀನು ನನಗೆ ಬಹಳ ಮನೋಹರನಾಗಿದ್ದೀ. ನಿನ್ನ ಪ್ರೀತಿ ನನ್ನ ಮೇಲೆ ಆಶ್ಚರ್ಯವಾಗಿತ್ತು. ಅದು ಸ್ತ್ರೀಯರ ಪ್ರೀತಿಗಿಂತ ಅಧಿಕವಾದದ್ದು.
2 ಸಮುವೇಲನು 1 : 27 (KNV)
ಪರಾಕ್ರಮಶಾಲಿಗಳು ಹೇಗೆ ಯುದ್ಧದಲ್ಲಿ ಬಿದ್ದಿದ್ದಾರೆ; ಯುದ್ಧದ ಆಯುಧಗಳು ನಾಶವಾಗಿ ಹೋದವಲ್ಲಾ.
❮
❯