2 ಅರಸುಗಳು 7 : 1 (KNV)
ಆಗ ಎಲೀಷನು--ನೀವು ಕರ್ತನ ವಾಕ್ಯವನ್ನು ಕೇಳಿರಿ; ಕರ್ತನು ಹೀಗೆ ಹೇಳು ತ್ತಾನೆ -- ನಾಳೆ ಹೆಚ್ಚು ಕಡಿಮೆ ಇಷ್ಟು ಹೊತ್ತಿಗೆ ಸಮಾರ್ಯದ ಬಾಗಲಲ್ಲಿ ಒಂದು ಸೇರು ನಯವಾದ ಹಿಟ್ಟು ಒಂದು ಶೇಕೆಲಿಗೂ ಎರಡು ಸೇರು ಜವೆ ಗೋದಿಯು ಒಂದು ಶೇಕೆಲಿಗೂ ಮಾರಲ್ಪಡುವವು ಅಂದನು.
2 ಅರಸುಗಳು 7 : 2 (KNV)
ಆಗ ಅರಸನಿಗೆ ಹಸ್ತಕನಾದ ಅಧಿಕಾರಿಯು ದೇವರ ಮನುಷ್ಯನಿಗೆ ಪ್ರತ್ಯುತ್ತರವಾಗಿ -- ಇಗೋ, ಕರ್ತನು ಆಕಾಶದಲ್ಲಿ ಕಿಟಕಿಗಳನ್ನು ಮಾಡಿದರೂ ಸಂಭವಿಸಲಾರದು ಅನ್ನಲು ಎಲೀಷನು ಅವನಿಗೆ ಈ ಕಾರ್ಯವನ್ನು ನೀನು ನಿನ್ನ ಕಣ್ಣುಗಳಿಂದ ನೋಡುವಿ; ಆದರೆ ಅದನ್ನು ತಿನ್ನುವದಿಲ್ಲ ಅಂದನು.
2 ಅರಸುಗಳು 7 : 3 (KNV)
ಆಗ ಊರು ಬಾಗಲ ದ್ವಾರದಲ್ಲಿ ನಾಲ್ಕುಮಂದಿ ಕುಷ್ಠರೋಗಿಗಳು ಇದ್ದರು. ಅವರು ಒಬ್ಬರಿಗೊಬ್ಬರುನಾವು ಸಾಯುವ ವರೆಗೂ ಇಲ್ಲಿ ಕುಳಿತುಕೊಂಡಿ ರುವದೇನು?
2 ಅರಸುಗಳು 7 : 4 (KNV)
ನಾವು ಪಟ್ಟಣದಲ್ಲಿ ಪ್ರವೇಶಿಸುವೆವು ಅಂದರೆ ಪಟ್ಟಣದಲ್ಲಿ ಬರವಿರುವದರಿಂದ ಅಲ್ಲಿ ಸಾಯುತ್ತೇವೆ; ಇಲ್ಲಿ ನಾವು ಕುಳಿತಿದ್ದರೂ ಹಾಗೆಯೇ ಸಾಯು ತ್ತೇವೆ. ಆದದರಿಂದ ನಾವು ಅರಾಮ್ಯರ ಪಾಳೆಯಕ್ಕೆ ಹೋಗೋಣ ಬನ್ನಿರಿ; ಅವರು ನಮ್ಮನ್ನು ಬದುಕಿಸಿದರೆ ಬದುಕುವೆವು, ಸಾಯಿಸಿದರೆ ಸಾಯುವೆವು ಅಂದು ಕೊಂಡರು.
2 ಅರಸುಗಳು 7 : 5 (KNV)
ಹಾಗೆಯೇ ಸಂಜೆಯಲ್ಲಿ ಎದ್ದು ಅರಾಮ್ಯರ ಪಾಳೆಯಕ್ಕೆ ಹೋಗಲು ಅವರು ಅರಾಮ್ಯರ ಪಾಳೆಯದ ಅಂಚಿಗೆ ಬಂದಾಗ ಇಗೋ, ಅಲ್ಲಿ ಯಾರೂ ಇರಲಿಲ್ಲ.
2 ಅರಸುಗಳು 7 : 6 (KNV)
ಕರ್ತನು ಪಾಳೆಯದಲ್ಲಿರುವ ಅರಾಮ್ಯರಿಗೆ ರಥಗಳ ಶಬ್ದವೂ ಕುದುರೆಗಳ ಶಬ್ದವೂ ಮಹಾಸೈನ್ಯದ ಶಬ್ದವೂ ಕೇಳಲ್ಪಡುವಂತೆ ಮಾಡಿದ್ದರಿಂದ ಅವರು ಒಬ್ಬರಿಗೊ ಬ್ಬರು--ಇಗೋ, ಇಸ್ರಾಯೇಲಿನ ಅರಸನು ನಮ್ಮ ಮೇಲೆ ಬೀಳಲು ಹಿತ್ತಿಯರ ಅರಸುಗಳನ್ನೂ ಐಗುಪ್ತದ ಅರಸುಗಳನ್ನೂ ಕೂಲಿಗೆ ಕರೆದಿದ್ದಾನೆ ಅಂದುಕೊಂಡರು.
2 ಅರಸುಗಳು 7 : 7 (KNV)
ಅವರು ಸಂಜೆಯಲ್ಲಿ ಎದ್ದು ಪಾಳೆಯದಲ್ಲಿದ್ದ ಹಾಗೆ ತಮ್ಮ ಗುಡಾರಗಳನ್ನೂ ಕುದುರೆಗಳನ್ನೂ ಕತ್ತೆಗಳನ್ನೂ ಬಿಟ್ಟು ಬಿಟ್ಟು ತಮ್ಮ ಪ್ರಾಣಕ್ಕೋಸ್ಕರ ಓಡಿಹೋದರು.
2 ಅರಸುಗಳು 7 : 8 (KNV)
ಆ ಕುಷ್ಠರೋಗಿಗಳು ದಂಡಿನ ಅಂಚಿನ ವರೆಗೂ ಬಂದು ಒಂದು ಡೇರೆಯಲ್ಲಿ ಪ್ರವೇಶಿಸಿ ಅಲ್ಲಿ ತಿಂದು ಕುಡಿದು ಅಲ್ಲಿದ್ದ ಬೆಳ್ಳಿ ಬಂಗಾರವನ್ನೂ ವಸ್ತ್ರಗಳನ್ನೂ ತೆಗೆದುಕೊಂಡು ಹೋಗಿ ಬಚ್ಚಿಟ್ಟರು; ತಿರಿಗಿ ಬಂದು ಮತ್ತೊಂದು ಡೇರೆಯಲ್ಲಿ ಪ್ರವೇಶಿಸಿ ಅಲ್ಲಿಂದಲೂ ಹಾಗೆಯೇ ತೆಗೆದುಕೊಂಡು ಹೋಗಿ ಬಚ್ಚಿಟ್ಟರು.
2 ಅರಸುಗಳು 7 : 9 (KNV)
ಆಗ ಅವರು ಒಬ್ಬರಿಗೊಬ್ಬರು -- ನಾವು ಮಾಡಿದ್ದು ಒಳ್ಳೇದಲ್ಲ; ಈ ದಿವಸ ಒಳ್ಳೇ ಸಮಾಚಾರದ ದಿವಸ; ನಾವು ಸುಮ್ಮನೆ ಇದ್ದು ಉದಯವಾಗುವ ವರೆಗೆ ತಡೆದರೆ ಶಿಕ್ಷೆಯನ್ನು ಹೊಂದುವೆವು; ಆದಕಾರಣ ಬನ್ನಿರಿ ನಾವು ಹೋಗಿ ಅರಸನ ಮನೆಯವರಿಗೆ ತಿಳಿಸೋಣ ಎಂದು ಮಾತಾಡಿಕೊಂಡರು.
2 ಅರಸುಗಳು 7 : 10 (KNV)
ಹಾಗೆಯೇ ಅವರು ಬಂದು ಪಟ್ಟಣದ ಬಾಗಲು ಕಾಯುವವನನ್ನು ಕರೆದು ಅವನಿಗೆ -- ನಾವು ಅರಾಮ್ಯರ ಪಾಳೆಯಕ್ಕೆ ಹೋಗಿ ಬಂದೆವು; ಇಗೋ, ಅಲ್ಲಿ ಕಟ್ಟಲ್ಪಟ್ಟ ಕುದುರೆಗಳೂ ಕತ್ತೆಗಳೂ ನಿಶ್ಯಬ್ದವಾದ ಡೇರೆಗಳೂ ಹೊರತಾಗಿ ಮನು ಷ್ಯನಾದರೂ ಮನುಷ್ಯನ ಶಬ್ದವಾದರೂ ಅಲ್ಲಿ ಇಲ್ಲ ಅಂದರು.
2 ಅರಸುಗಳು 7 : 11 (KNV)
ಅವನು ಬಾಗಲು ಕಾಯುವವರನ್ನು ಕರೆದನು; ಅವರು ಒಳಗಿರುವ ಅರಸನ ಮನೆಯವರಿಗೆ ತಿಳಿಸಿದರು.
2 ಅರಸುಗಳು 7 : 12 (KNV)
ಆಗ ಅರಸನು ರಾತ್ರಿಯಲ್ಲಿ ಎದ್ದು ತನ್ನ ಸೇವಕರಿಗೆ--ಅರಾಮ್ಯರು ನಮಗೆ ಮಾಡಿದ್ದನ್ನು ನಿಮಗೆ ತಿಳಿಸುತ್ತೇನೆ. ನಾವು ಹಸಿದವರಾಗಿದ್ದೇವೆಂದು ಅವರು ತಿಳಿದು ಹೊಲದಲ್ಲಿ ಅಡಗಿಕೊಳ್ಳಲು ಪಾಳೆಯ ದಿಂದ ಹೊರಟು--ಅವರು ಪಟ್ಟಣದಿಂದ ಹೊರಟು ಬಂದಾಗ ನಾವು ಅವರನ್ನು ಸಜೀವಿಗಳನ್ನಾಗಿಯೇ ಹಿಡಿದು ಪಟ್ಟಣದಲ್ಲಿ ಪ್ರವೇಶಿಸುವೆವು ಅಂದುಕೊಂಡಿ ದ್ದಾರೆ ಅಂದನು.
2 ಅರಸುಗಳು 7 : 13 (KNV)
ಆಗ ಅವನ ಸೇವಕರಲ್ಲಿ ಒಬ್ಬನು --ಕುದುರೆಗಳಲ್ಲಿ ಐದು ಕುದುರೆಗಳನ್ನು ಕೆಲವರು ತಕ್ಕೊಂಡು ಹೋಗಲಿ; ಇಗೋ, ಅವು ಇಸ್ರಾಯೇಲಿನ ಎಲ್ಲಾ ಸಮೂಹದಲ್ಲಿ ಉಳಿದವುಗಳ ಹಾಗೆ ಅವೆ; ಅಂದರೆ ಇಗೋ, ಇಸ್ರಾಯೇಲಿನ ಎಲ್ಲಾ ಗುಂಪಿನಲ್ಲಿ ನಾಶವಾಗದೆ ಉಳಿದವುಗಳಂತಿವೆ; ನಾವು ಕಳುಹಿಸಿ ನೋಡೋಣ ಅಂದನು.
2 ಅರಸುಗಳು 7 : 14 (KNV)
ಹಾಗೆಯೇ ಅವರು ಎರಡು ರಥಗಳ ಕುದುರೆಗಳನ್ನು ತೆಗೆದುಕೊಂಡರು; ಆಗ ಅರಸನು--ನೀವು ಅರಾಮ್ಯರ ಪಾಳೆಯದ ಹಿಂದೆ ಹೋಗಿ ನೋಡಿರಿ ಎಂದು ಹೇಳಿ ಕಳುಹಿಸಿದನು.
2 ಅರಸುಗಳು 7 : 15 (KNV)
ಅವರು ಅವರ ಹಿಂದೆ ಯೊರ್ದನಿನ ವರೆಗೆ ಹೋದರು. ಇಗೋ, ಮಾರ್ಗದಲ್ಲೆಲ್ಲಾ ಅರಾಮ್ಯರು ಬಹು ಅವಸರದಿಂದ ಬಿಸಾಡಿದ ವಸ್ತ್ರಗಳೂ ಪಾತ್ರೆ ಗಳೂ ತುಂಬಿದ್ದನ್ನು ದೂತರು ತಿರಿಗಿ ಬಂದು ಅರಸ ನಿಗೆ ತಿಳಿಸಿದರು.
2 ಅರಸುಗಳು 7 : 16 (KNV)
ಆಗ ಜನರು ಹೊರಟುಹೋಗಿ ಅರಾಮ್ಯರ ಡೇರೆಗಳನ್ನು ಸುಲುಕೊಂಡರು. ಆದದ ರಿಂದ ಕರ್ತನ ವಾಕ್ಯದ ಪ್ರಕಾರವೇ ಒಂದು ಸೇರು ನಯವಾದ ಹಿಟ್ಟು ಒಂದು ಶೇಕೆಲಿಗೂ ಎರಡು ಸೇರು ಜವೆಗೋದಿಯು ಒಂದು ಶೇಕೆಲಿಗೂ ಮಾರಲ್ಪಟ್ಟಿತು.
2 ಅರಸುಗಳು 7 : 17 (KNV)
ಅರಸನಿಗೆ ಹಸ್ತಕನಾದ ಆ ಅಧಿಕಾರಿಯನ್ನು ಅರಸನು ಪಟ್ಟಣದ ಬಾಗಲಿನ ಕಾವಲಿಗೆ ನೇಮಿಸಿದ್ದನು. ಅರಸನು ದೇವರ ಮನುಷ್ಯನ ಬಳಿಗೆ ಬಂದಾಗ ದೇವರ ಮನು ಷ್ಯನು ಹೇಳಿದ್ದ ಪ್ರಕಾರವೇ ಜನರು ಅವನನ್ನು ಪಟ್ಟ ಣದ ಬಾಗಲಲ್ಲಿ ತುಳಿದು ಹಾಕಿದ್ದರಿಂದ ಅವನು ಸತ್ತುಹೋದನು.
2 ಅರಸುಗಳು 7 : 18 (KNV)
ಹಾಗೆಯೇ--ಎರಡು ಸೇರು ಜವೆ ಗೋದಿಯು ಒಂದು ಶೇಕೆಲಿಗೂ ಒಂದು ಸೇರು ನಯವಾದ ಹಿಟ್ಟು ಒಂದು ಶೇಕೆಲಿಗೂ ನಾಳೆ ಇಷ್ಟು ಹೊತ್ತಿಗೆ ಸಮಾರ್ಯದ ಬಾಗಲಲ್ಲಿ ಮಾರಲ್ಪಡುವ ವೆಂದು ದೇವರ ಮನುಷ್ಯನು ಅರಸನಿಗೆ ಹೇಳಿದ ಪ್ರಕಾರವೇ ಸಂಭವಿಸಿತು.
2 ಅರಸುಗಳು 7 : 19 (KNV)
ಆ ಅಧಿಕಾರಿ ದೇವರ ಮನುಷ್ಯನಿಗೆ ಪ್ರತ್ಯುತ್ತರವಾಗಿ--ಇಗೋ, ಕರ್ತನು ಆಕಾಶದಲ್ಲಿ ಕಿಟಕಿಗಳನ್ನು ಉಂಟುಮಾಡಿದರೂ ಹಾಗಾ ಗುವದೋ ಅಂದನು; ಅದಕ್ಕವನು--ಇಗೋ, ನೀನು ನಿನ್ನ ಕಣ್ಣುಗಳಿಂದ ನೋಡುವಿ; ಆದರೆ ಅದನ್ನು ತಿನ್ನು ವದಿಲ್ಲ ಎಂದು ಹೇಳಿದ್ದನು.
2 ಅರಸುಗಳು 7 : 20 (KNV)
ಆ ಪ್ರಕಾರವೇ ಅವನಿಗೆ ಸಂಭವಿಸಿತು; ಏನಂದರೆ ಬಾಗಲಲ್ಲಿ ಜನರು ಅವನನ್ನು ತುಳಿದಿದ್ದರಿಂದ ಅವನು ಸತ್ತನು.

1 2 3 4 5 6 7 8 9 10 11 12 13 14 15 16 17 18 19 20