2 ಅರಸುಗಳು 6 : 1 (KNV)
ಪ್ರವಾದಿಗಳ ಮಕ್ಕಳು ಎಲೀಷನಿಗೆ-- ಇಗೋ, ಈಗ ನಾವು ನಿನ್ನ ಸಂಗಡ ವಾಸವಾಗಿರುವ ಸ್ಥಳವು ನಮಗೆ ಇಕ್ಕಟ್ಟಾಗಿದೆ.
2 ಅರಸುಗಳು 6 : 2 (KNV)
ಅಪ್ಪಣೆ ಕೊಡು; ನಾವು ಯೊರ್ದನಿನ ವರೆಗೂ ಹೋಗಿ ಪ್ರತಿ ಮನುಷ್ಯನು ಅಲ್ಲಿಂದ ಒಂದೊಂದು ತೊಲೆಯನ್ನು ತಕ್ಕೊಂಡು ಬಂದು ವಾಸವಾಗಿರುವದಕ್ಕೆ ನಮಗೋ ಸ್ಕರ ಒಂದು ಸ್ಥಳವನ್ನು ಅಲ್ಲಿ ಮಾಡುವೆವು ಅಂದರು. ಅವನು--ಹೋಗಿರಿ ಅಂದನು.
2 ಅರಸುಗಳು 6 : 3 (KNV)
ಆಗ ಅವರಲ್ಲಿ ಒಬ್ಬನು--ನೀನು ದಯಮಾಡಿ ನಿನ್ನ ಸೇವಕರ ಸಂಗಡ ಬಾ ಅಂದನು. ಅದಕ್ಕವನು--ನಾನು ಬರುತ್ತೇನೆ ಅಂದನು.
2 ಅರಸುಗಳು 6 : 4 (KNV)
ಹಾಗೆಯೇ ಅವನು ಅವರ ಸಂಗಡ ಹೋದನು. ಅವರು ಯೊರ್ದನಿಗೆ ಬಂದು ಅಲ್ಲಿ ಮರಗಳನ್ನು ಕಡಿಯುತ್ತಿದ್ದರು.
2 ಅರಸುಗಳು 6 : 5 (KNV)
ಒಬ್ಬನು ತೊಲೆಯನ್ನು ಬೀಳಿಸುವಾಗ ಕೊಡಲಿಯು ನೀರಿನೊಳಗೆ ಬಿತ್ತು. ಆಗ ಅವನು--ಅಯ್ಯೋ! ಯಜಮಾನನೇ, ಅದು ಎರವಾಗಿ ತಕ್ಕೊಂಡದ್ದು ಎಂದು ಕೂಗಿ ಹೇಳಿದನು.
2 ಅರಸುಗಳು 6 : 6 (KNV)
ದೇವರ ಮನುಷ್ಯನು--ಅದು ಎಲ್ಲಿ ಬಿತ್ತು ಅಂದನು. ಇವನು ಅವನಿಗೆ ಆ ಸ್ಥಳವನ್ನು ತೋರಿಸಿದ ತರುವಾಯ ಅವನು ಒಂದು ಕಟ್ಟಿಗೆಯನ್ನು ಕಡಿದು ಅಲ್ಲಿ ಹಾಕಿದ್ದರಿಂದ ಆ ಕೊಡಲಿಯು ತೇಲಾಡಿತು.
2 ಅರಸುಗಳು 6 : 7 (KNV)
ಪ್ರವಾದಿಯು ಅವ ನಿಗೆ--ಅದನ್ನು ತೆಗೆದುಕೋ ಅಂದನು. ಹಾಗೆಯೇ ಅವನು ತನ್ನ ಕೈಯನ್ನು ಚಾಚಿ ಅದನ್ನು ತೆಗೆದುಕೊಂಡನು.
2 ಅರಸುಗಳು 6 : 8 (KNV)
ತರುವಾಯ ಅರಾಮ್ಯರ ಅರಸನು ಇಸ್ರಾಯೇಲಿನ ಮೇಲೆ ಯುದ್ಧಮಾಡುತ್ತಿದ್ದನು; ಇಂಥಿಂಥ ಸ್ಥಳದಲ್ಲಿ ತನ್ನ ದಂಡು ಇಳಿಯಬೇಕೆಂದು ತನ್ನ ಸೇವಕರ ಸಂಗಡ ಯೋಚನೆ ಮಾಡಿಕೊಂಡನು.
2 ಅರಸುಗಳು 6 : 9 (KNV)
ಆಗ ದೇವರ ಮನು ಷ್ಯನು ಇಸ್ರಾಯೇಲಿನ ಅರಸನಿಗೆ--ಅಂಥಾ ಸ್ಥಳವನ್ನು ಹಾದು ಹೋಗದೆ ಜಾಗ್ರತೆಯಾಗಿ ಇರು; ಯಾಕಂದರೆ ಅರಾಮ್ಯರು ಅಲ್ಲಿಗೆ ಇಳಿದು ಬಂದಿದ್ದಾರೆಂದು ಹೇಳಿ ಕಳುಹಿಸಿದನು.
2 ಅರಸುಗಳು 6 : 10 (KNV)
ಹೀಗೆಯೇ ದೇವರ ಮನುಷ್ಯನು ತನ್ನನ್ನು ಎಚ್ಚರಿಸಿ ತನಗೆ ಹೇಳಿದ ಸ್ಥಳಕ್ಕೆ ಇಸ್ರಾಯೇಲಿನ ಅರಸನು ಹೇಳಿಕಳುಹಿಸಿ ತನ್ನನ್ನು ರಕ್ಷಿಸಿಕೊಂಡನು; ಹೀಗಾದದ್ದು ಒಂದೆರಡು ಸಾರಿ ಮಾತ್ರವೇ ಅಲ್ಲ.
2 ಅರಸುಗಳು 6 : 11 (KNV)
ಆದದರಿಂದ ಅರಾಮ್ಯರ ಅರಸನ ಹೃದಯವು ಇದರ ನಿಮಿತ್ತ ಕಳವಳಗೊಂಡು ಅವನು ತನ್ನ ಸೇವಕರನ್ನು ಕರೆದು ಅವರಿಗೆ--ನಮ್ಮಲ್ಲಿ ಇಸ್ರಾಯೇ ಲಿನ ಅರಸನ ಕಡೆಯವನು ಯಾರು? ನೀವು ನನಗೆ ತಿಳಿಸುವದಿಲ್ಲವೋ ಅಂದನು.
2 ಅರಸುಗಳು 6 : 12 (KNV)
ಅವನ ಸೇವಕರಲ್ಲಿ ಒಬ್ಬನು--ನನ್ನ ಒಡೆಯನೇ, ಅರಸನೇ, ಯಾವನೂ ಇಲ್ಲ. ಆದರೆ ಇಸ್ರಾಯೇಲಿನಲ್ಲಿರುವ ಪ್ರವಾದಿಯಾದ ಎಲೀಷನು ಇದ್ದಾನೆ; ನೀನು ನಿನ್ನ ಮಲಗುವ ಮನೆ ಯಲ್ಲಿ ಹೇಳುವ ಮಾತುಗಳನ್ನು ಇಸ್ರಾಯೇಲಿನ ಅರಸ ನಿಗೆ ಹೇಳುತ್ತಾನೆ ಅಂದನು.
2 ಅರಸುಗಳು 6 : 13 (KNV)
ಆಗ ಅವನು--ನಾನು ಕಳುಹಿಸಿ ಅವನನ್ನು ಹಿಡಿಯುವ ಹಾಗೆ ನೀನು ಹೋಗಿ ಅವನು ಎಲ್ಲಿದ್ದಾನೋ ನೋಡಿರಿ ಅಂದನು. ಆಗ ಇಗೋ, ದೋತಾನಿನಲ್ಲಿದ್ದಾನೆಂದು ಅವನಿಗೆ ತಿಳಿಸಿದರು.
2 ಅರಸುಗಳು 6 : 14 (KNV)
ಆದದರಿಂದ ಅವನು ಅಲ್ಲಿಗೆ ಕುದುರೆ ಗಳನ್ನೂ ರಥಗಳನ್ನೂ ಮಹಾಸೈನ್ಯವನ್ನೂ ಕಳುಹಿಸಿ ದನು. ಅವರು ರಾತ್ರಿಯಲ್ಲಿ ಬಂದು ಪಟ್ಟಣವನ್ನು ಸುತ್ತಿಕೊಂಡರು.
2 ಅರಸುಗಳು 6 : 15 (KNV)
ದೇವರ ಮನುಷ್ಯನ ಸೇವಕನು ಉದಯದಲ್ಲಿ ಎದ್ದು ಹೊರಗೆ ಹೊರಟಾಗ ಇಗೋ, ಕುದುರೆಗಳೂ ರಥಗಳುಳ್ಳ ಸೈನ್ಯವೂ ಪಟ್ಟಣವನ್ನು ಸುತ್ತಿಕೊಂಡಿತು. ಆಗ ಆ ಸೇವಕನು ಅವನಿಗೆ--ಅಯ್ಯೋ, ನನ್ನ ಯಜಮಾನನೇ, ನಾವು ಏನು ಮಾಡು ವದು ಅಂದನು.
2 ಅರಸುಗಳು 6 : 16 (KNV)
ಅದಕ್ಕವನು--ಭಯಪಡಬೇಡ; ಅವರ ಸಂಗಡ ಇರುವವರಿಗಿಂತ ನಮ್ಮ ಸಂಗಡ ಇರುವ ವರು ಹೆಚ್ಚಾಗಿದ್ದಾರೆ ಅಂದನು.
2 ಅರಸುಗಳು 6 : 17 (KNV)
ಆಗ ಎಲೀಷನುಕರ್ತನೇ, ನೀನು ದಯಮಾಡಿ ಅವನು ನೋಡುವ ಹಾಗೆ ಅವನ ಕಣ್ಣುಗಳನ್ನು ತೆರೆ ಎಂದು ಪ್ರಾರ್ಥಿಸಿ ದನು. ಕರ್ತನು ಆ ಯೌವನಸ್ಥನ ಕಣ್ಣುಗಳನ್ನು ತೆರೆ ದಾಗ ಇಗೋ, ಎಲೀಷನ ಸುತ್ತಲೂ ಬೆಟ್ಟದಲ್ಲಿ ಬೆಂಕಿಯ ಕುದುರೆಗಳೂ ರಥಗಳೂ ತುಂಬಿರುವದನ್ನು ಅವನು ನೋಡಿದನು.
2 ಅರಸುಗಳು 6 : 18 (KNV)
ಅವರು ಇವನ ಬಳಿಗೆ ಇಳಿದು ಬಂದಾಗ ಎಲೀಷನು--ಕರ್ತನೇ, ನೀನು ದಯಮಾಡಿ ಈ ಜನರನ್ನು ಕುರುಡರನ್ನಾಗಿ ಮಾಡು ಎಂದು ಪ್ರಾರ್ಥಿ ಸಿದನು. ಆಗ ಎಲೀಷನ ಮಾತಿನ ಹಾಗೆಯೇ ಆತನು ಅವರನ್ನು ಕುರುಡರನ್ನಾಗಿ ಮಾಡಿದನು.
2 ಅರಸುಗಳು 6 : 19 (KNV)
ಆಗ ಎಲೀ ಷನು ಅವರಿಗೆ--ಇದು ಆ ಮಾರ್ಗವಲ್ಲ, ಇದು ಆ ಪಟ್ಟಣವಲ್ಲ, ನನ್ನ ಹಿಂದೆ ಬನ್ನಿರಿ; ನೀವು ಹುಡುಕುವ ಮನುಷ್ಯನ ಬಳಿಗೆ ನಿಮ್ಮನ್ನು ಬರಮಾಡುವೆನು ಎಂದು ಹೇಳಿ ಅವರನ್ನು ಸಮಾರ್ಯಕ್ಕೆ ನಡಿಸಿದನು.
2 ಅರಸುಗಳು 6 : 20 (KNV)
ಅವರು ಸಮಾರ್ಯಕ್ಕೆ ಬಂದಾಗ ಏನಾಯಿತಂದರೆ, ಎಲೀ ಷನು--ಕರ್ತನೇ, ಇವರು ನೋಡುವ ಹಾಗೆ ಇವರ ಕಣ್ಣುಗಳನ್ನು ತೆರೆ ಅಂದನು. ಆಗ ಕರ್ತನು ಅವರ ಕಣ್ಣುಗಳನ್ನು ತೆರೆದನು; ಅವರು ನೋಡಿದಾಗ ಇಗೋ, ಸಮಾರ್ಯದ ಮಧ್ಯದಲ್ಲಿದ್ದರು.
2 ಅರಸುಗಳು 6 : 21 (KNV)
ಇಸ್ರಾಯೇಲಿನ ಅರಸನು ಅವರನ್ನು ಕಂಡಾಗ ಎಲೀಷನಿಗೆ--ನನ್ನ ತಂದೆಯೇ, ನಾನು ಹೊಡೆಯಲೋ? ಹೊಡೆಯ ಲೋ? ಅಂದನು.
2 ಅರಸುಗಳು 6 : 22 (KNV)
ಅದಕ್ಕವನು--ಹೊಡೆಯಬೇಡ; ನೀನು ನಿನ್ನ ಕತ್ತಿಯಿಂದಲೂ ನಿನ್ನ ಬಿಲ್ಲಿನಿಂದಲೂ ಸೆರೆಯಾಗಿ ತೆಗೆದುಕೊಳ್ಳುವವರನ್ನು ಹೊಡೆಯುತ್ತೀ ಯೋ? ರೊಟ್ಟಿಯನ್ನೂ ನೀರನ್ನೂ ಇವರ ಮುಂದೆ ಇಡು; ಅವರು ತಿಂದು ಕುಡಿದು ತಮ್ಮ ಯಜಮಾನನ ಬಳಿಗೆ ಹೋಗಲಿ ಅಂದನು.
2 ಅರಸುಗಳು 6 : 23 (KNV)
ಆಗ ಅರಸನು ಅವರಿಗೋಸ್ಕರ ದೊಡ್ಡ ಔತಣ ಮಾಡಿಸಿದನು. ಅವರು ತಿಂದು ಕುಡಿದ ತರುವಾಯ ಅವರನ್ನು ಕಳುಹಿಸಿ ಬಿಟ್ಟನು. ಅವರು ತಮ್ಮ ಯಜಮಾನನ ಬಳಿಗೆ ಹೋದರು. ಅರಾಮ್ಯರ ದಂಡುಗಳು ಇಸ್ರಾಯೇಲ್ ದೇಶದಲ್ಲಿ ತಿರಿಗಿ ಬಾರದೆ ಹೋದವು.
2 ಅರಸುಗಳು 6 : 24 (KNV)
ಇದರ ತರುವಾಯ ಏನಾಯಿತಂದರೆ, ಅರಾಮ್ಯರ ಅರಸನಾದ ಬೆನ್ಹದದನು ತನ್ನ ಎಲ್ಲಾ ಸೈನ್ಯವನ್ನು ಕೂಡಿಸಿ ಕೊಂಡು ಹೊರಟುಹೋಗಿ ಸಮಾರ್ಯಕ್ಕೆ ಮುತ್ತಿಗೆ ಹಾಕಿದನು.
2 ಅರಸುಗಳು 6 : 25 (KNV)
ಆಗ ಸಮಾರ್ಯದಲ್ಲಿ ದೊಡ್ಡ ಬರ ಉಂಟಾಯಿತು. ಇಗೋ, ಒಂದು ಕತ್ತೆಯ ತಲೆಯು ಎಂಭತ್ತು ರೂಪಾಯಿಗಳಿಗೂ ಒಂದು ಪಾರಿವಾಳದ ಮಲವು ಐದು ರೂಪಾಯಿಗಳಿಗೂ ಮಾರಲ್ಪಡುವ ವರೆಗೂ ಅದನ್ನು ಮುತ್ತಿಗೆ ಹಾಕಿದನು.
2 ಅರಸುಗಳು 6 : 26 (KNV)
ಇಸ್ರಾ ಯೇಲಿನ ಅರಸನು ಗೋಡೆಯ ಮೇಲೆ ಹಾದು ಹೋಗುತ್ತಿರುವಾಗ ಒಬ್ಬ ಸ್ತ್ರೀಯು ಅವನನ್ನು ಬೇಡುವ ವಳಾಗಿ--ನನ್ನ ಯಜಮಾನನೇ, ಅರಸನೇ, ಸಹಾಯ ಮಾಡು ಅಂದಳು.
2 ಅರಸುಗಳು 6 : 27 (KNV)
ಅದಕ್ಕವನು--ಕರ್ತನು ನಿನ್ನನ್ನು ಸಂರಕ್ಷಿಸದೆ ಹೋದರೆ ನಾನು ಎಲ್ಲಿಂದ ನಿನ್ನನ್ನು ರಕ್ಷಿ ಸಲಿ? ಕಣದಿಂದಲೋ ಇಲ್ಲವೆ ದ್ರಾಕ್ಷೇ ಅಲೆಯಿಂದ ಲೋ ಅಂದನು.
2 ಅರಸುಗಳು 6 : 28 (KNV)
ಅರಸನು ಅವಳಿಗೆ--ನಿನ್ನ ದುಃಖ ವೇನು ಅಂದನು. ಅದಕ್ಕವಳು--ಈ ಸ್ತ್ರೀಯು ನನಗೆ ಹೇಳಿದ್ದೇನಂದರೆ--ಈ ಹೊತ್ತು ನಾವು ನಿನ್ನ ಮಗನನ್ನು ತಿನ್ನುವ ಹಾಗೆ ಅವನನ್ನು ಕೊಡು; ನಾಳೆ ನನ್ನ ಮಗನನ್ನು ತಿನ್ನೋಣ ಅಂದಳು.
2 ಅರಸುಗಳು 6 : 29 (KNV)
ಹಾಗೆಯೇ ನಾನು ನನ್ನ ಮಗನನ್ನು ಬೇಯಿಸಿ ತಿಂದೆವು. ಮಾರನೇ ದಿವಸದಲ್ಲಿ ನಾನು ಅವಳಿಗೆ--ನಾವು ನಿನ್ನ ಮಗನನ್ನು ತಿನ್ನುವ ಹಾಗೆ ಅವನನ್ನು ಕೊಡು ಅಂದೆನು. ಆದರೆ ಅವಳು ತನ್ನ ಮಗನನ್ನು ಬಚ್ಚಿಟ್ಟಿದ್ದಾಳೆ ಅಂದಳು.
2 ಅರಸುಗಳು 6 : 30 (KNV)
ಅರಸನು ಆ ಸ್ತ್ರೀಯು ಹೇಳಿದ ಮಾತುಗಳನ್ನು ಕೇಳಿದಾಗ ತನ್ನ ವಸ್ತ್ರಗಳನ್ನು ಹರಿದುಕೊಂಡು ಗೋಡೆಯ ಮೇಲೆ ಹಾದುಹೋದನು. ಜನರು ನೋಡಿದಾಗ ಇಗೋ, ಒಳಗೆ ಅವನ ಶರೀರದ ಮೇಲೆ ಗೋಣಿತಟ್ಟು ಇತ್ತು.
2 ಅರಸುಗಳು 6 : 31 (KNV)
ಆಗ ಅವನು -- ಶಾಫಾಟನ ಮಗನಾದ ಎಲೀಷನ ತಲೆಯು ಈ ದಿನ ಅವನ ಮೇಲೆ ಇದ್ದರೆ ದೇವರು ನನಗೆ ಇದರಂತೆಯೂ ಇನ್ನು ಹೆಚ್ಚಾಗಿಯೂ ಮಾಡಲಿ ಅಂದನು.
2 ಅರಸುಗಳು 6 : 32 (KNV)
ಎಲೀಷನು ಹಿರಿಯರ ಜೊತೆ ತನ್ನ ಮನೆಯಲ್ಲಿ ಕುಳಿತುಕೊಂಡಿದ್ದನು; ಆಗ ಅರಸನು ತನ್ನ ಬಳಿಯಿಂದ ಒಬ್ಬ ಮನುಷ್ಯನನ್ನು ಕಳುಹಿಸಿದನು. ಆ ಸೇವಕನು ಎಲೀಷನ ಬಳಿಗೆ ಬರುವದಕ್ಕಿಂತ ಮುಂಚೆ ಅವನು ಹಿರಿಯರಿಗೆ--ಈ ಕೊಲೆಪಾತಕನ ಮಗನು ನನ್ನ ತಲೆ ಯನ್ನು ತೆಗೆಯುವದಕ್ಕೆ ಕಳುಹಿಸಿದ್ದನ್ನು ನೋಡಿದಿರೋ? ನೋಡಿರಿ; ಆ ಸೇವಕನು ಬಂದ ಕೂಡಲೆ ಬಾಗಲು ಮುಚ್ಚಿ ಬಾಗಲ ಬಳಿಯಲ್ಲಿ ಅವನನ್ನು ಗಟ್ಟಿಯಾಗಿ ಹಿಡಿದುಕೊಳ್ಳಿರಿ. ಅವನ ಯಜಮಾನನ ಪಾದಗಳ ಶಬ್ದವು ಅವನ ಹಿಂದೆ ಇಲ್ಲವೋ ಅಂದನು.
2 ಅರಸುಗಳು 6 : 33 (KNV)
ಅವನು ಅವರ ಸಂಗಡ ಇನ್ನೂ ಮಾತನಾಡುತ್ತಿರುವಾಗ ಇಗೋ, ಆ ಸೇವಕನು ತನ್ನ ಬಳಿಗೆ ಬಂದು--ಇಗೋ, ಈ ಕೇಡು ಕರ್ತನಿಂದ ಉಂಟಾಯಿತು; ನಾನು ಇನ್ನೂ ಕರ್ತನನ್ನು ನಿರೀಕ್ಷಿಸುವದೇನು ಅಂದನು.
❮
❯