2 ಅರಸುಗಳು 5 : 1 (KNV)
ಅರಾಮ್ಯರ ಅರಸನ ಸೈನ್ಯಾಧಿಪತಿಯಾದ ನಾಮಾನನು ತನ್ನ ಯಜಮಾನನ ಮುಂದೆ ದೊಡ್ಡವನಾಗಿಯೂ ಘನವುಳ್ಳವನಾಗಿಯೂ ಇದ್ದನು. ಕರ್ತನು ಅವನಿಂದ ಅರಾಮ್ಯರಿಗೆ ಬಿಡುಗಡೆಯನ್ನು ಉಂಟುಮಾಡಿದ್ದನು; ಇದಲ್ಲದೆ ಅವನು ಪರಾಕ್ರಮ ಶಾಲಿಯಾಗಿದ್ದನು. ಆದರೆ ಅವನು ಕುಷ್ಠರೋಗಿಯಾ ಗಿದ್ದನು.
2 ಅರಸುಗಳು 5 : 2 (KNV)
ಅರಾಮ್ಯರು ಗುಂಪುಗುಂಪಾಗಿ ಹೊರಟು ಇಸ್ರಾಯೇಲ್ ದೇಶದಿಂದ ಒಬ್ಬ ಹುಡುಗಿಯನ್ನು ಸೆರೆಯಾಗಿ ಹಿಡುಕೊಂಡು ಬಂದರು. ಅವಳು ನಾಮಾ ನನ ಹೆಂಡತಿಗೆ ಸೇವಕಳಾಗಿದ್ದಳು.
2 ಅರಸುಗಳು 5 : 3 (KNV)
ಅವಳು ತನ್ನ ಯಜಮಾನಿಗೆ--ನನ್ನ ದಣಿಯು ಸಮಾರ್ಯದಲ್ಲಿರುವ ಪ್ರವಾದಿಯ ಬಳಿಯಲ್ಲಿರುತ್ತಿದ್ದರೆ ಅವನು ಇವನ ಕುಷ್ಠರೋಗವನ್ನು ವಾಸಿಮಾಡುತ್ತಿದ್ದನು ಅಂದಳು.
2 ಅರಸುಗಳು 5 : 4 (KNV)
ಆಗ ಒಬ್ಬನು ಹೋಗಿ ಇಸ್ರಾಯೇಲ್ ದೇಶದ ಹುಡುಗಿಯು ಹೇಳಿದ್ದನ್ನು ತನ್ನ ಯಜಮಾನನಿಗೆ ತಿಳಿಸಿದನು.
2 ಅರಸುಗಳು 5 : 5 (KNV)
ಆದದರಿಂದ ಅರಾಮ್ಯರ ಅರಸನು--ನೀನು ಹೋಗಿ ಬಾ; ನಾನು ಇಸ್ರಾಯೇಲಿನ ಅರಸನಿಗೆ ಪತ್ರವನ್ನು ಕಳುಹಿಸುವೆನು ಅಂದನು. ಹಾಗೆಯೇ ಅವನು ಹತ್ತು ತಲಾಂತು ಬೆಳ್ಳಿಯನ್ನೂ ಆರು ಸಾವಿರ ಬಂಗಾರದ ನಾಣ್ಯಗಳನ್ನೂ ಹತ್ತು ದುಸ್ತು ಬಟ್ಟೆ ಗಳನ್ನೂ ತೆಗೆದುಕೊಂಡು ಹೋದನು.
2 ಅರಸುಗಳು 5 : 6 (KNV)
ಅವನು ಇಸ್ರಾಯೇಲಿನ ಅರಸನ ಬಳಿಗೆ ಆ ಪತ್ರವನ್ನು ತೆಗೆದು ಕೊಂಡು ಬಂದನು. ಅದರಲ್ಲಿ--ಈ ಪತ್ರ ನಿನಗೆ ಸೇರುವಾಗ ಇಗೋ, ನೀನು ನನ್ನ ಸೇವಕನಾದ ನಾಮಾ ನನಿಗಿರುವ ಕುಷ್ಠರೋಗವನ್ನು ವಾಸಿಮಾಡುವ ಹಾಗೆ ಅವನನ್ನು ನಿನ್ನ ಬಳಿಗೆ ಕಳುಹಿಸಿದ್ದೇನೆ ಎಂಬದು.
2 ಅರಸುಗಳು 5 : 7 (KNV)
ಇಸ್ರಾಯೇಲ್ಯರ ಅರಸನು ಆ ಪತ್ರವನ್ನು ಓದಿದ ಮೇಲೆ ತನ್ನ ವಸ್ತ್ರಗಳನ್ನು ಹರಿದುಕೊಂಡು--ಕೊಲ್ಲು ವದಕ್ಕೂ ಬದುಕಿಸುವದಕ್ಕೂ ನಾನು ದೇವರೋ? ಇವನ ಕುಷ್ಠರೋಗವನ್ನು ತಪ್ಪಿಸಿ ವಾಸಿಮಾಡುವದಕ್ಕೆ ನನ್ನ ಬಳಿಗೆ ಕಳುಹಿಸಿದ್ದೇನು? ಇವನು ನನಗೆ ವಿರೋಧ ವಾಗಿ ಜಗಳಕ್ಕೆ ಕಾರಣ ಹುಡುಕುವದನ್ನು ನೀವು ನೋಡಿ ತಿಳುಕೊಳ್ಳಿರಿ ಅಂದನು.
2 ಅರಸುಗಳು 5 : 8 (KNV)
ಇಸ್ರಾಯೇಲ್ಯರ ಅರಸನು ತನ್ನ ವಸ್ತ್ರಗಳನ್ನು ಹರಿದು ಕೊಂಡನೆಂದು ದೇವರ ಮನುಷ್ಯನಾದ ಎಲೀಷನು ಕೇಳಿದಾಗ--ನೀನು ನಿನ್ನ ವಸ್ತ್ರಗಳನ್ನು ಹರಿದುಕೊಂಡ ದ್ದೇನು? ಇಸ್ರಾಯೇಲಿನಲ್ಲಿ ಪ್ರವಾದಿ ಇದ್ದಾನೆಂದು ಅವನು ತಿಳುಕೊಳ್ಳುವ ಹಾಗೆ ಅವನು ನನ್ನ ಬಳಿಗೆ ಬರಲಿ ಎಂದು ಅರಸನಿಗೆ ಹೇಳಿ ಕಳುಹಿಸಿದನು.
2 ಅರಸುಗಳು 5 : 9 (KNV)
ಹಾಗೆಯೇ ನಾಮಾನನು ತನ್ನ ಕುದುರೆಗಳ ಸಂಗ ಡಲೂ ರಥದ ಸಂಗಡಲೂ ಬಂದು ಎಲೀಷನ ಮನೆಯ ಬಾಗಲ ಬಳಿಯಲ್ಲಿ ನಿಂತನು.
2 ಅರಸುಗಳು 5 : 10 (KNV)
ಆಗ ಎಲೀಷನುನೀನು ಹೋಗಿ ಯೊರ್ದನಿನಲ್ಲಿ ಏಳು ಸಾರಿ ಸ್ನಾನ ಮಾಡು; ಆಗ ನಿನ್ನ ಶರೀರವು ಮೊದಲಿನಂತೆ ಮಾರ್ಪ ಡುವದು; ನೀನು ಶುದ್ಧನಾಗುವಿ ಎಂದು ಹೇಳಿ ಅವನ ಬಳಿಗೆ ಸೇವಕನನ್ನು ಕಳುಹಿಸಿದನು.
2 ಅರಸುಗಳು 5 : 11 (KNV)
ಆಗ ನಾಮಾ ನನು ರೌದ್ರಗೊಂಡು ಹೊರಟು ಹೋಗಿ--ಇಗೋ, ಅವನು ನಿಶ್ಚಯವಾಗಿ ನನ್ನ ಬಳಿಗೆ ಹೊರಟುಬಂದು ತನ್ನ ದೇವರಾದ ಕರ್ತನ ಹೆಸರನ್ನು ಕರೆದು ಆ ಸ್ಥಳದ ಮೇಲೆ ತನ್ನ ಕೈಯಾಡಿಸಿ ಕುಷ್ಠರೋಗವನ್ನು ವಾಸಿ ಮಾಡುವನೆಂದು ನಾನು ಯೋಚಿಸಿಕೊಂಡೆನು.
2 ಅರಸುಗಳು 5 : 12 (KNV)
ನಾನು ಹೊಳೆಗಳಲ್ಲಿ ಸ್ನಾನ ಮಾಡಿ ಶುದ್ಧನಾಗುವ ಹಾಗೆ ದಮಸ್ಕದ ನದಿಗಳಾದ ಅಬಾನಾ ಪರ್ಪರ್ ಇಸ್ರಾಯೇಲಿನ ಎಲ್ಲಾ ನೀರಿಗಿಂತ ಉತ್ತಮವಲ್ಲವೋ ಎಂದು ಹೇಳಿ ತಿರುಗಿಕೊಂಡು ಕೋಪದಿಂದ ಹೋದನು.
2 ಅರಸುಗಳು 5 : 13 (KNV)
ಆದರೆ ಅವನ ಸೇವಕರು ನಾಮಾನನ ಬಳಿಗೆ ಬಂದು ಅವನ ಸಂಗಡ ಮಾತನಾಡಿ--ನನ್ನ ತಂದೆಯೇ, ಪ್ರವಾದಿಯು ದೊಡ್ಡ ಕಾರ್ಯವನ್ನು ನಿನಗೆ ಹೇಳಿದ್ದರೆ ನೀನು ಮಾಡುತ್ತಿದ್ದಿಯಲ್ಲವೋ? ಅವನು ನಿನಗೆ ಸ್ನಾನಮಾಡಿ ಶುದ್ಧನಾಗೆಂದು ಹೇಳಿದರೆ ಅಡ್ಡಿ ಏನು ಅಂದರು.
2 ಅರಸುಗಳು 5 : 14 (KNV)
ಆಗ ಅವನು ಇಳಿದುಹೋಗಿ ದೇವರ ಮನುಷ್ಯನ ವಾಕ್ಯದ ಪ್ರಕಾರ ಯೊರ್ದನಿನಲ್ಲಿ ಏಳುಸಾರಿ ಮುಣುಗಿದನು; ಆಗ ಅವನ ಶರೀರವು ಚಿಕ್ಕ ಮಗುವಿನ ಶರೀರದ ಹಾಗೆ ಮಾರ್ಪಟ್ಟಿತು; ಅವನು ಶುದ್ಧನಾದನು.
2 ಅರಸುಗಳು 5 : 15 (KNV)
ಆಗ ಅವನೂ ಅವನ ಎಲ್ಲಾ ಪರಿವಾರದವರೂ ದೇವರ ಮನುಷ್ಯನ ಬಳಿಗೆ ತಿರುಗಿ ಬಂದರು. ಅವನು ಪ್ರವಾದಿಯ ಮುಂದೆ ನಿಂತು--ಇಗೋ, ಇಸ್ರಾಯೇ ಲಿನಲ್ಲಿರುವ ದೇವರ ಹೊರತಾಗಿ ಭೂಮಿಯಲ್ಲೆ ಲ್ಲಿಯೂ ಬೇರೆ ದೇವರು ಇಲ್ಲವೆಂದು ನಾನು ಬಲ್ಲೆನು; ಆದಕಾರಣ ನೀನು ದಯಮಾಡಿ ನಿನ್ನ ಸೇವಕನಿಂದ ಕಾಣಿಕೆಯನ್ನು ತಕ್ಕೋ ಅಂದನು.
2 ಅರಸುಗಳು 5 : 16 (KNV)
ಆದರೆ ಅವನುನಾನು ಯಾವಾತನ ಮುಂದೆ ನಿಲ್ಲುತ್ತೇನೋ ಆ ಕರ್ತನ ಜೀವದಾಣೆ, ನಾನು ಏನೂ ತಕ್ಕೊಳ್ಳುವದಿಲ್ಲ ಅಂದ ನು. ಅವನು ತಕ್ಕೊಳ್ಳಬೇಕೆಂದು ನಾಮಾನನು ಬಲವಂತ ಮಾಡಿದರೂ ಬೇಡ ಅಂದನು.
2 ಅರಸುಗಳು 5 : 17 (KNV)
ಆಗ ನಾಮಾನನುಹಾಗಾದರೆ ಎರಡು ಹೇಸರ ಕತ್ತೆಗಳು ಹೊರತಕ್ಕ ಮಣ್ಣು ನಿನ್ನ ಸೇವಕನಿಗೆ ದಯಮಾಡಬೇಕಲ್ಲಾ. ನಿನ್ನ ಸೇವಕನು ಇನ್ನು ಮೇಲೆ ಕರ್ತನಿಗೆ ಹೊರತಾಗಿ ಅನ್ಯದೇವರುಗಳಿಗೆ ದಹನಬಲಿಯನ್ನಾದರೂ ಬಲಿ ಯನ್ನಾದರೂ ಅರ್ಪಿಸನು.
2 ಅರಸುಗಳು 5 : 18 (KNV)
ಈ ಕಾರ್ಯವನ್ನು ಕರ್ತನು ನಿನ್ನ ಸೇವಕನಿಗೆ ಮನ್ನಿಸಲಿ; ಏನಂದರೆ, ನನ್ನ ಯಜಮಾನನು ಆರಾಧನೆಗೋಸ್ಕರ ರಿಮ್ಮೋನನ ಮನೆಯಲ್ಲಿ ಪ್ರವೇಶಿಸಿ ಅವನು ನನ್ನ ಕೈಯ ಮೇಲೆ ಆತುಕೊಳ್ಳುವಾಗ ರಿಮ್ಮೋನನ ಮನೆಯಲ್ಲಿ ನಾನು ಅಡ್ಡಬಿದ್ದರೆ ಕರ್ತನು ನಿನ್ನ ಸೇವಕನಿಗೆ ಈ ಕಾರ್ಯವನ್ನು ಮನ್ನಿಸಲಿ ಅಂದನು.
2 ಅರಸುಗಳು 5 : 19 (KNV)
ಎಲೀಷನು ಅವನಿಗೆ--ಸಮಾ ಧಾನದಿಂದ ಹೋಗು ಅಂದನು. ಆಗ ಅವನನ್ನು ಬಿಟ್ಟು ಸ್ವಲ್ಪ ದೂರವಾಗಿ ಹೋದನು.
2 ಅರಸುಗಳು 5 : 20 (KNV)
ಆದರೆ ದೇವರ ಮನುಷ್ಯನಾದ ಎಲೀಷನ ಸೇವಕ ನಾಗಿರುವ ಗೇಹಜಿಯು--ಇಗೋ, ನನ್ನ ಯಜಮಾ ನನು ಈ ಅರಾಮ್ಯನಾದ ನಾಮಾನನು ತಕ್ಕೊಂಡು ಬಂದದ್ದನ್ನು ಅವನ ಕೈಯಿಂದ ತಕ್ಕೊಳ್ಳದೆ ಸುಮ್ಮನೆ ಕಳುಹಿಸಿದ್ದಾನೆ. ಆದರೆ ಕರ್ತನ ಜೀವದಾಣೆ, ನಾನು ಅವನ ಹಿಂದೆ ಓಡಿಹೋಗಿ ಅವನ ಕೈಯಿಂದ ಏನಾ ದರೂ ತಕ್ಕೊಳ್ಳುವೆನು ಅಂದುಕೊಂಡನು.
2 ಅರಸುಗಳು 5 : 21 (KNV)
ಹಾಗೆಯೇ ಗೇಹಜಿಯು ನಾಮಾನನ ಹಿಂದೆ ಹೋದನು. ನಾಮಾನನು ತನ್ನ ಹಿಂದೆ ಓಡಿ ಬರುವವನನ್ನು ನೋಡಿ ದಾಗ ಅವನನ್ನು ಎದುರುಗೊಳ್ಳಲು ರಥದಿಂದ ಇಳಿದು ಅವನಿಗೆ--ಎಲ್ಲಾ ಕ್ಷೇಮವೋ ಅಂದನು.
2 ಅರಸುಗಳು 5 : 22 (KNV)
ಅವನುಕ್ಷೇಮ; ಇಗೋ, ಪ್ರವಾದಿಗಳ ಮಕ್ಕಳಲ್ಲಿ ಇಬ್ಬರು ಯೌವನಸ್ಥರು ಎಫ್ರಾಯಾಮ್ ಬೆಟ್ಟದಿಂದ ಈಗಲೇ ನನ್ನ ಬಳಿಗೆ ಬಂದಿದ್ದಾರೆ; ನೀನು ದಯಮಾಡಿ ಅವರಿಗೆ ಒಂದು ತಲಾಂತು ಬೆಳ್ಳಿಯನ್ನೂ ಎರಡು ದುಸ್ತು ಬಟ್ಟೆ ಗಳನ್ನೂ ಕೊಡಬೇಕೆಂದು ನಿನಗೆ ಹೇಳು ಎಂದು ನನ್ನ ಯಜಮಾನನು ಕಳುಹಿಸಿದ್ದಾನೆ ಅಂದನು.
2 ಅರಸುಗಳು 5 : 23 (KNV)
ಆಗ ನಾಮಾನನು--ನೀನು ದಯಮಾಡಿ ಎರಡು ತಲಾಂತು ಗಳನ್ನು ತಕ್ಕೋ ಎಂದು ಹೇಳಿ ಅವನನ್ನು ಬಲವಂತ ಮಾಡಿದನು. ಹಾಗೆಯೇ ಎರಡು ತಲಾಂತು ಬೆಳ್ಳಿಯನ್ನು ಎರಡು ಚೀಲಗಳಲ್ಲಿ ಕಟ್ಟಿಸಿ ಅದರ ಸಂಗಡ ಎರಡು ದುಸ್ತು ಬಟ್ಟೆಗಳನ್ನು ಕೊಟ್ಟು ತನ್ನ ಸೇವಕರಲ್ಲಿ ಇಬ್ಬರ ಮೇಲೆ ಹೊರಿಸಿದನು; ಅವರು ಇವನ ಮುಂದೆ ಹೊತ್ತುಕೊಂಡು ಹೋದರು.
2 ಅರಸುಗಳು 5 : 24 (KNV)
ಅವನು ದುರ್ಗಕ್ಕೆ ಬಂದು ಅವುಗಳನ್ನು ಅವರ ಕೈಯಿಂದ ತಕ್ಕೊಂಡು ಮನೆಯಲ್ಲಿಟ್ಟು ಆ ಮನುಷ್ಯರನ್ನು ಕಳುಹಿಸಿಬಿಟ್ಟದ್ದರಿಂದ ಅವರು ಹೋದರು.
2 ಅರಸುಗಳು 5 : 25 (KNV)
ಆಗ ಇವನು ಒಳಗೆ ಪ್ರವೇಶಿಸಿ ತನ್ನ ಯಜಮಾನನ ಮುಂದೆ ನಿಂತನು. ಎಲೀಷನು ಅವನಿಗೆ--ಗೇಹಜಿಯೇ, ಎಲ್ಲಿಂದ ಬಂದಿ ಅಂದನು. ಅದಕ್ಕವನು--ನಿನ್ನ ಸೇವಕನು ಎಲ್ಲಿಗೂ ಹೋಗಲಿಲ್ಲ ಅಂದನು.
2 ಅರಸುಗಳು 5 : 26 (KNV)
ಆಗ ಅವನು ಇವನಿಗೆ--ಆ ಮನುಷ್ಯನು ನಿನ್ನನ್ನು ಎದುರುಗೊಳ್ಳಲು ತನ್ನ ರಥದಿಂದ ಇಳಿದು ನಿನ್ನ ಬಳಿಗೆ ಬಂದಾಗ ನನ್ನ ಹೃದಯವು ನಿನ್ನ ಸಂಗಡ ಹೋಗಲಿಲ್ಲವೋ? ದ್ರವ್ಯವನ್ನೂ ವಸ್ತ್ರಗಳನ್ನೂ ಆಲಿದ್ ತೋಪುಗಳನ್ನೂ ದ್ರಾಕ್ಷೆಯ ತೋಟಗಳನ್ನೂ ಕುರಿ ದನಗಳನ್ನೂ ದಾಸದಾಸಿಯರನ್ನೂ ಪಡಕೊಳ್ಳುವದಕ್ಕೆ ಇದು ಸಮಯವೋ?
2 ಅರಸುಗಳು 5 : 27 (KNV)
ಆದದರಿಂದ ನಾಮಾನನ ಕುಷ್ಠರೋಗವು ನಿನಗೂ ನಿನ್ನ ಸಂತಾನಕ್ಕೂ ನಿತ್ಯವಾಗಿ ಹತ್ತುವದು ಅಂದನು. ಆಗ ಅವನು ಮಂಜಿನ ಹಾಗೆಯೇ ಕುಷ್ಠರೋಗಿಯಾಗಿ ಅವನ ಸಮ್ಮುಖದಿಂದ ಹೊರಟುಹೋದನು.

1 2 3 4 5 6 7 8 9 10 11 12 13 14 15 16 17 18 19 20 21 22 23 24 25 26 27