2 ಅರಸುಗಳು 15 : 1 (KNV)
ಇಸ್ರಾಯೇಲಿನ ಅರಸನಾದ ಯಾರೊ ಬ್ಬಾಮನ ಆಳ್ವಿಕೆಯ ಇಪ್ಪತ್ತೇಳನೇ ವರುಷ ದಲ್ಲಿ ಯೆಹೂದದ ಅರಸನಾಗಿರುವ ಅಮಚ್ಯನ ಮಗ ನಾದ ಅಜರ್ಯನು ಆಳಲು ಆರಂಭಿಸಿದನು.
2 ಅರಸುಗಳು 15 : 2 (KNV)
ಅವನು ಆಳಲು ಆರಂಭಿಸಿದಾಗ ಹದಿನಾರು ವರುಷದವ ನಾಗಿದ್ದು ಯೆರೂಸಲೇಮಿನಲ್ಲಿ ಐವತ್ತೆರಡು ವರುಷ ಆಳಿದನು. ಅವನ ತಾಯಿಯ ಹೆಸರು ಯೆಕೊಲ್ಯಳು; ಅವಳು ಯೆರೂಸಲೇಮಿನವಳು.
2 ಅರಸುಗಳು 15 : 3 (KNV)
ಅವನು ತನ್ನ ತಂದೆಯಾದ ಅಮಚ್ಯನು ಮಾಡಿದ ಎಲ್ಲಾದರ ಹಾಗೆ ಕರ್ತನ ಸನ್ನಿಧಿಯಲ್ಲಿ ಒಳ್ಳೆಯದನ್ನು ಮಾಡಿದನು.
2 ಅರಸುಗಳು 15 : 4 (KNV)
ಆದರೆ ಉನ್ನತ ಸ್ಥಳಗಳು ಕೆಡವಲ್ಪಡಲಿಲ್ಲ; ಜನರು ಇನ್ನೂ ಉನ್ನತ ಸ್ಥಳಗಳ ಮೇಲೆ ಬಲಿಗಳನ್ನು ಅರ್ಪಿಸಿ ಧೂಪವನ್ನು ಅರ್ಪಿಸುತ್ತಿದ್ದರು.
2 ಅರಸುಗಳು 15 : 5 (KNV)
ಕರ್ತನು ಅರಸನನ್ನು ಹೊಡೆದದ್ದರಿಂದ ಅವನು ತನ್ನ ಜೀವದಿಂದಿರು ವರೆಗೂ ಕುಷ್ಠರೋಗಿಯಾಗಿದ್ದು ಪ್ರತ್ಯೇಕವಾದ ಮನೆಯಲ್ಲಿ ವಾಸವಾಗಿದ್ದನು. ಅರಸನ ಮಗನಾದ ಯೋತಾಮನು ಮನೆ ಯಜಮಾನನಾಗಿದ್ದು ದೇಶದ ಜನರಿಗೆ ನ್ಯಾಯ ತೀರಿಸುತ್ತಿದ್ದನು.
2 ಅರಸುಗಳು 15 : 6 (KNV)
ಅಜರ್ಯನ ಇತರ ಕ್ರಿಯೆಗಳೂ ಅವನು ಮಾಡಿದ ಎಲ್ಲವೂ ಯೆಹೂದದ ಅರಸುಗಳ ವೃತಾಂತಗಳ ಪುಸ್ತಕದಲ್ಲಿ ಬರೆಯಲ್ಪಡಲಿಲ್ಲವೋ?
2 ಅರಸುಗಳು 15 : 7 (KNV)
ಅಜರ್ಯನು ತನ್ನ ಪಿತೃಗಳ ಸಂಗಡ ನಿದ್ರಿಸಿದನು; ಅವನನ್ನು ದಾವೀದನ ಪಟ್ಟಣದಲ್ಲಿ ಅವನ ಪಿತೃಗಳ ಸ್ಮಶಾನ ಭೂಮಿಯಲ್ಲಿ ಹೂಣಿಟ್ಟರು; ಅವನ ಮಗನಾದ ಯೋತಾಮನು ಅವನಿಗೆ ಬದಲಾಗಿ ಅರಸನಾದನು.
2 ಅರಸುಗಳು 15 : 8 (KNV)
ಯೆಹೂದದ ಅರಸನಾದ ಅಜರ್ಯನ ಆಳ್ವಿಕೆಯ ಮೂವತ್ತೆಂಟನೇ ವರುಷದಲ್ಲಿ ಯಾರೊಬ್ಬಾಮನ ಮಗ ನಾದ ಜೆಕರ್ಯ ಇಸ್ರಾಯೇಲಿನ ಮೇಲೆ ಸಮಾರ್ಯ ದಲ್ಲಿ ಆರು ತಿಂಗಳು ಆಳಿದನು.
2 ಅರಸುಗಳು 15 : 9 (KNV)
ಅವನು ತನ್ನ ಪಿತೃಗಳು ಮಾಡಿದ ಪ್ರಕಾರ ಕರ್ತನ ದೃಷ್ಟಿಯಲ್ಲಿ ಕೆಟ್ಟದ್ದನ್ನು ಮಾಡಿದನು. ಅವನು ಇಸ್ರಾಯೇಲನ್ನು ಪಾಪಮಾಡಲು ಪ್ರೇರೇಪಿಸಿದ ನೆಬಾಟನ ಮಗನಾದ ಯಾರೊಬ್ಬಾಮನ ಪಾಪಗಳನ್ನು ತೊರೆದುಬಿಡಲಿಲ್ಲ.
2 ಅರಸುಗಳು 15 : 10 (KNV)
ಆಗ ಯಾಬೇಷನ ಮಗನಾದ ಶಲ್ಲೂಮನು ಅವನ ಮೇಲೆ ಒಳಸಂಚು ಮಾಡಿ ಜನರ ಮುಂದೆ ಅವನನ್ನು ಹೊಡೆದು ಕೊಂದು ಹಾಕಿ ಅವನಿಗೆ ಬದಲಾಗಿ ಅರಸನಾದನು.
2 ಅರಸುಗಳು 15 : 11 (KNV)
ಇಗೋ, ಜೆಕರ್ಯನ ಇತರ ಕ್ರಿಯೆಗಳು ಇಸ್ರಾಯೇಲಿನ ಅರಸು ಗಳ ವೃತಾಂತಗಳ ಪುಸ್ತಕದಲ್ಲಿ ಬರೆಯಲ್ಪಟ್ಟಿವೆ.
2 ಅರಸುಗಳು 15 : 12 (KNV)
ನಿನ್ನ ಕುಮಾರರು ನಾಲ್ಕನೇ ಸಂತತಿಯ ವರೆಗೂ ಇಸ್ರಾಯೇಲಿನ ಸಿಂಹಾಸನದ ಮೇಲೆ ಕುಳಿತಿರುವರು ಎಂದು ಕರ್ತನು ಯೇಹುವಿಗೆ ಹೇಳಿದ ವಾಕ್ಯವು ಇದೇ; ಹೀಗೆಯೇ ಆಯಿತು.
2 ಅರಸುಗಳು 15 : 13 (KNV)
ಯೆಹೂದದ ಅರಸನಾದ ಉಜ್ಜೀಯನ ಆಳ್ವಿಕೆಯ ಮೂವತ್ತೊಂಭತ್ತನೇ ವರುಷದಲ್ಲಿ ಯಾಬೇಷನ ಮಗ ನಾದ ಶಲ್ಲೂಮನು ಆಳಲು ಆರಂಭಿಸಿ ಸಮಾರ್ಯ ದಲ್ಲಿ ಒಂದು ತಿಂಗಳು ಆಳಿದನು.
2 ಅರಸುಗಳು 15 : 14 (KNV)
ಯಾಕಂದರೆ ಗಾದಿಯ ಮಗನಾದ ಮೆನಹೇಮನು ತಿರ್ಚದಿಂದ ಹೊರಟು ಹೋಗಿ ಸಮಾರ್ಯಕ್ಕೆ ಬಂದು ಸಮಾರ್ಯ ದಲ್ಲಿ ಯಾಬೇಷನ ಮಗನಾದ ಶಲ್ಲೂಮನನ್ನು ಹೊಡೆದು ಕೊಂದುಹಾಕಿ ಅವನಿಗೆ ಬದಲಾಗಿ ಅರಸ ನಾದನು.
2 ಅರಸುಗಳು 15 : 15 (KNV)
ಇಗೋ, ಶಲ್ಲೂಮನ ಇತರ ಕ್ರಿಯೆಗಳೂ ಅವನು ಮಾಡಿದ ಒಳಸಂಚೂ ಇಸ್ರಾಯೇಲಿನ ಅರಸು ಗಳ ವೃತಾಂತಗಳ ಪುಸ್ತಕದಲ್ಲಿ ಬರೆಯಲ್ಪಟ್ಟಿವೆ.
2 ಅರಸುಗಳು 15 : 16 (KNV)
ಆಗ ಮೆನಹೇಮನು ತಿಪ್ಸಹನ್ನೂ ಅದರಲ್ಲಿ ಇದ್ದ ಎಲ್ಲರನ್ನೂ ತಿರ್ಚ ಮೊದಲುಗೊಂಡು ಅದರ ಮೇರೆಗಳನ್ನೂ ಹಾಳುಮಾಡಿದನು. ಅವರು ತಮ್ಮ ಬಾಗಲುಗಳನ್ನು ತನಗೆ ತೆರೆಯದೆ ಇದ್ದದರಿಂದ ಅವರನ್ನು ಹೊಡೆದನು; ಅದರಲ್ಲಿರುವ ಗರ್ಭಿಣಿಯರನ್ನೆಲ್ಲಾ ಸೀಳಿಸಿದನು.
2 ಅರಸುಗಳು 15 : 17 (KNV)
ಯೆಹೂದದ ಅರಸನಾದ ಅಜರ್ಯನ ಆಳ್ವಿಕೆಯ ಮೂವತ್ತೊಂಭತ್ತನೇ ವರುಷದಲ್ಲಿ ಗಾದಿಯ ಮಗ ನಾದ ಮೆನಹೇಮನು ಇಸ್ರಾಯೇಲಿನ ಮೇಲೆ ಆಳ ಲಾರಂಭಿಸಿ ಸಮಾರ್ಯದಲ್ಲಿ ಹತ್ತು ವರುಷ ಆಳಿದನು.
2 ಅರಸುಗಳು 15 : 18 (KNV)
ಅವನು ಕರ್ತನ ದೃಷ್ಟಿಯಲ್ಲಿ ಕೆಟ್ಟದ್ದನ್ನು ಮಾಡಿದನು; ಅವನು ತನ್ನ ದಿವಸಗಳಲ್ಲೆಲ್ಲಾ ಇಸ್ರಾಯೇಲನ್ನು ಪಾಪಮಾಡಲು ಪ್ರೇರೇಪಿಸಿದ ನೆಬಾಟನ ಮಗನಾದ ಯಾರೊಬ್ಬಾಮನ ಪಾಪಗಳನ್ನು ತೊರೆದುಬಿಡಲಿಲ್ಲ.
2 ಅರಸುಗಳು 15 : 19 (KNV)
ಆದರೆ ಅಶ್ಶೂರದ ಅರಸನಾದ ಪೂಲನು ದೇಶದ ಮೇಲೆ ಬಂದನು. ಆಗ ಮೆನಹೇಮನು ರಾಜ್ಯವನ್ನು ತನ್ನ ಕೈಯಲ್ಲಿ ಧೃಢಪಡಿಸಲು ಅವನ ಕೈ ತನ್ನ ಸಂಗಡ ಇರುವ ಹಾಗೆ ಪೂಲನಿಗೆ ಸಾವಿರ ಬೆಳ್ಳಿ ತಲಾಂತು ಗಳನ್ನು ಕೊಟ್ಟನು.
2 ಅರಸುಗಳು 15 : 20 (KNV)
ಮೆನಹೇಮನು ಈ ಹಣವನ್ನು ಇಸ್ರಾಯೇಲಿನವರಿಂದ ಬರಮಾಡಿದನು. ಹೇಗಂದರೆ, ಅಶ್ಶೂರದ ಅರಸನಿಗೆ ಕೊಡಲು ಎಲ್ಲಾ ಐಶ್ವರ್ಯವಂತ ರಿಂದ ತಲಾ ಐವತ್ತು ಬೆಳ್ಳಿ ಶೆಕೇಲುಗಳನ್ನು ತೆಗೆದು ಕೊಂಡನು. ಆದದರಿಂದ ಅಶ್ಶೂರದ ಅರಸನು ದೇಶ ದಲ್ಲಿ ನಿಲ್ಲದೆ ತಿರಿಗಿ ಹೋದನು.
2 ಅರಸುಗಳು 15 : 21 (KNV)
ಮೆನಹೇಮನ ಇತರ ಕ್ರಿಯೆಗಳೂ ಅವನು ಮಾಡಿದ ಎಲ್ಲವೂ ಇಸ್ರಾಯೇಲಿನ ಅರಸುಗಳ ವೃತ್ತಾಂತಗಳ ಪುಸ್ತಕದಲ್ಲಿ ಬರೆಯಲ್ಪಡಲಿಲ್ಲವೋ?
2 ಅರಸುಗಳು 15 : 22 (KNV)
ಮೆನಹೇಮನು ತನ್ನ ಪಿತೃ ಗಳ ಸಂಗಡ ನಿದ್ರಿಸಿದನು; ಅವನ ಮಗನಾದ ಪೆಕ ಹನು ಅವನಿಗೆ ಬದಲಾಗಿ ಅರಸನಾದನು;
2 ಅರಸುಗಳು 15 : 23 (KNV)
ಯೆಹೂದದ ಅರಸನಾದ ಅಜರ್ಯನ ಆಳ್ವಿಕೆಯ ಐವತ್ತನೇ ವರುಷದಲ್ಲಿ ಮೆನಹೇಮನ ಮಗನಾದ ಪೆಕಹನು ಸಮಾರ್ಯದಲ್ಲಿ ಇಸ್ರಾಯೇಲಿನ ಮೇಲೆ ಎರಡು ವರುಷ ಆಳಿದನು.
2 ಅರಸುಗಳು 15 : 24 (KNV)
ಅವನು ಕರ್ತನ ಸಮ್ಮುಖ ದಲ್ಲಿ ಕೆಟ್ಟದ್ದನ್ನು ಮಾಡಿದನು; ಅವನು ಇಸ್ರಾಯೇಲನ್ನು ಪಾಪಮಾಡಲು ಪ್ರೇರೇಪಿಸಿದ ನೆಬಾಟನ ಮಗನಾ ದಂಥ ಯಾರೊಬ್ಬಾಮನ ಪಾಪಗಳನ್ನು ತೊರೆಯಲಿಲ್ಲ.
2 ಅರಸುಗಳು 15 : 25 (KNV)
ಆದರೆ ಅವನ ಅಧಿಪತಿಯಾದಂಥ, ರೆಮಲ್ಯನ ಮಗನಾದ ಪೆಕಹನು ಅವನ ಮೇಲೆ ಒಳಸಂಚು ಮಾಡಿ ಅರ್ಗೋಬನ್ನೂ ಅರ್ಯೇಯನ್ನೂ ಗಿಲ್ಯಾದಿನ ಜನರಲ್ಲಿ ಐವತ್ತು ಮಂದಿಯನ್ನೂ ತನ್ನ ಸಂಗಡ ಕೂಡಿಸಿ ಕೊಂಡು ಸಮಾರ್ಯದಲ್ಲಿ ಅರಸನಿಗಿದ್ದ ಅರಮನೆ ಯೊಳಗೆ ಅವನನ್ನು ಕೊಂದುಹಾಕಿ ಅವನಿಗೆ ಬದಲಾಗಿ ಅರಸನಾದನು.
2 ಅರಸುಗಳು 15 : 26 (KNV)
ಇಗೋ, ಪೆಕಹನ ಇತರ ಕ್ರಿಯೆ ಗಳೂ ಅವನು ಮಾಡಿದ್ದೆಲ್ಲವೂ ಇಸ್ರಾಯೇಲಿನ ಅರಸು ಗಳ ವೃತಾಂತಗಳ ಪುಸ್ತಕದಲ್ಲಿ ಬರೆಯಲ್ಪಟ್ಟಿವೆ.
2 ಅರಸುಗಳು 15 : 27 (KNV)
ಯೆಹೂದದ ಅರಸನಾದ ಅಜರ್ಯನ ಆಳ್ವಿಕೆಯ ಐವತ್ತೆರಡನೇ ವರುಷದಲ್ಲಿ ರೆಮಲ್ಯನ ಮಗನಾದ ಪೆಕಹನು ಇಸ್ರಾಯೇಲಿನ ಮೇಲೆ ಸಮಾರ್ಯದಲ್ಲಿ ಆಳಲು ಆರಂಭಿಸಿ ಇಪ್ಪತ್ತು ವರುಷ ಆಳಿದನು.
2 ಅರಸುಗಳು 15 : 28 (KNV)
ಅವನು ಕರ್ತನ ಸಮ್ಮುಖದಲ್ಲಿ ಕೆಟ್ಟದ್ದನ್ನು ಮಾಡಿ ದನು; ಅವನು ಇಸ್ರಾಯೇಲ್ಯರನ್ನು ಪಾಪಮಾಡಲು ಪ್ರೇರೇಪಿಸಿದ ನೆಬಾಟನ ಮಗನಾದ ಯಾರೊಬ್ಬಾಮನ ಪಾಪಗಳನ್ನು ತೊರೆದುಬಿಡಲಿಲ್ಲ.
2 ಅರಸುಗಳು 15 : 29 (KNV)
ಇಸ್ರಾಯೇಲಿನ ಅರಸನಾದ ಪೆಕಹನ ದಿವಸಗಳಲ್ಲಿ ಅಶ್ಶೂರದ ಅರಸ ನಾದ ತಿಗ್ಲತ್ಪಿಲೆಸೆರನು ಬಂದು ನೆಫ್ತಾಲಿಯ ದೇಶವಾದ ಇಯ್ಯೋನನ್ನೂ ಅಬೇಲ್ಬೆತ್ಮಾಕವನ್ನೂ ಯಾನೋಹ ವನ್ನೂ ಕೆದೆಷನ್ನೂ ಹಾಚೋರನ್ನೂ ಗಿಲ್ಯಾದನ್ನೂ ಗಲಿಲಾಯವನ್ನೂ ಹಿಡುಕೊಂಡು ಜನರನ್ನು ಸೆರೆಯಾಗಿ ಅಶ್ಯೂರಿಗೆ ಒಯ್ದನು.
2 ಅರಸುಗಳು 15 : 30 (KNV)
ಇದಲ್ಲದೆ ಉಜ್ಜೀಯನ ಮಗ ನಾದ ಯೋತಾಮನ ಇಪ್ಪತ್ತನೇ ವರುಷದಲ್ಲಿ ಏಲನ ಮಗನಾದ ಹೋಶೆಯನು ರೆಮಲ್ಯನ ಮಗನಾದ ಪೆಕಹನ ಮೇಲೆ ಒಳಸಂಚು ಮಾಡಿ ಅವನನ್ನು ಸಂಹರಿಸಿ ಅವನಿಗೆ ಬದಲಾಗಿ ಅರಸನಾದನು.
2 ಅರಸುಗಳು 15 : 31 (KNV)
ಇಗೋ, ಪೆಕಹನ ಇತರ ಕ್ರಿಯೆಗಳೂ ಅವನು ಮಾಡಿದ್ದೆಲ್ಲವೂ ಇಸ್ರಾಯೇಲಿನ ಅರಸುಗಳ ವೃತಾಂತಗಳ ಪುಸ್ತಕದಲ್ಲಿ ಬರೆಯಲ್ಪಟ್ಟಿವೆ.
2 ಅರಸುಗಳು 15 : 32 (KNV)
ಇಸ್ರಾಯೇಲಿನ ಅರಸನಾದಂಥ, ರೆಮಲ್ಯನ ಮಗನಾದ, ಪೆಕಹನ ಆಳ್ವಿಕೆಯ ಎರಡನೇ ವರುಷದಲ್ಲಿ ಯೆಹೂದದ ಅರಸನಾದಂಥ, ಉಜ್ಜೀಯನ ಮಗ ನಾದ, ಯೋತಾಮನು ಆಳಲು ಆರಂಭಿಸಿದನು.
2 ಅರಸುಗಳು 15 : 33 (KNV)
ಅವನು ಆಳಲು ಆರಂಭಿಸಿದಾಗ ಇಪ್ಪತ್ತೈದು ವರುಷ ದವನಾಗಿದ್ದು ಯೆರೂಸಲೇಮಿನಲ್ಲಿ ಹದಿನಾರು ವರುಷ ಆಳಿದನು. ಅವನ ತಾಯಿಯು ಚಾದೋಕನ ಮಗಳಾ ಗಿದ್ದ ಯೆರೂಷಳು.
2 ಅರಸುಗಳು 15 : 34 (KNV)
ಅವನು ತನ್ನ ತಂದೆಯಾದ ಉಜ್ಜೀಯನು ಮಾಡಿದ ಪ್ರಕಾರವೇ ಮಾಡಿ ಕರ್ತನ ಸಮ್ಮುಖದಲ್ಲಿ ಒಳ್ಳೆಯದಾದದ್ದನ್ನು ಮಾಡಿದನು.
2 ಅರಸುಗಳು 15 : 35 (KNV)
ಇವನು ಕರ್ತನ ಮನೆಗೆ ಎತ್ತರವಾದ ಬಾಗಲನ್ನು ಕಟ್ಟಿಸಿದನು. ಆದರೆ ಉನ್ನತ ಸ್ಥಳಗಳು ತೆಗೆಯಲ್ಪಡಲಿಲ್ಲ; ಜನರು ಇನ್ನೂ ಉನ್ನತ ಸ್ಥಳಗಳ ಮೇಲೆ ಬಲಿಗಳನ್ನೂ ಧೂಪವನ್ನೂ ಅರ್ಪಿಸುತ್ತಿದ್ದರು.
2 ಅರಸುಗಳು 15 : 36 (KNV)
ಯೋತಾಮನ ಇತರ ಕ್ರಿಯೆಗಳೂ ಅವನು ಮಾಡಿದ ಎಲ್ಲವೂ ಯೆಹೂದದ ಅರಸುಗಳ ವೃತಾಂತಗಳ ಪುಸ್ತಕದಲ್ಲಿ ಬರೆಯಲ್ಪಟ್ಟಿವೆ.
2 ಅರಸುಗಳು 15 : 37 (KNV)
ಆ ದಿವಸಗಳಲ್ಲಿ ಕರ್ತನು ಅರಾ ಮ್ಯರ ಅರಸನಾದ ರೆಚೀನನನ್ನೂ ರೆಮಲ್ಯನ ಮಗನಾದ ಪೆಕಹನನ್ನೂ ಯೆಹೂದದ ಮೇಲೆ ಕಳುಹಿಸಲು ಆರಂಭಿ ಸಿದನು.
2 ಅರಸುಗಳು 15 : 38 (KNV)
ಯೋತಾಮನು ತನ್ನ ಪಿತೃಗಳ ಸಂಗಡ ನಿದ್ರಿಸಿದನು. ಅವನನ್ನು ಅವನ ತಂದೆಯಾದ ದಾವೀ ದನ ಪಟ್ಟಣದಲ್ಲಿ ತನ್ನ ಪಿತೃಗಳ ಸ್ಮಶಾನ ಭೂಮಿಯಲ್ಲಿ ಹೂಣಿಟ್ಟರು. ಅವನ ಮಗನಾದ ಆಹಾಜನು ಅವನಿಗೆ ಬದಲಾಗಿ ಅರಸನಾದನು.

1 2 3 4 5 6 7 8 9 10 11 12 13 14 15 16 17 18 19 20 21 22 23 24 25 26 27 28 29 30 31 32 33 34 35 36 37 38