2 ಯೋಹಾನನು 1 : 1 (KNV)
ಆಯಲ್ಪಟ್ಟವಳಾದ ಅಮ್ಮನವರಿಗೂ ಆಕೆಯ ಮಕ್ಕಳಿಗೂ ಹಿರಿಯನಾದ--ಸತ್ಯದಲ್ಲಿ ನಿಮ್ಮನ್ನು ಪ್ರೀತಿಸುತ್ತೇನೆ; ನಾನು ಮಾತ್ರವಲ್ಲದೆ ಸತ್ಯವನ್ನು ತಿಳಿದಿರುವವರೆಲ್ಲರೂ ನಿಮ್ಮನ್ನು ಪ್ರೀತಿಸುತ್ತಾರೆ.
2 ಯೋಹಾನನು 1 : 2 (KNV)
ಯಾಕಂದರೆ ನಮ್ಮಲ್ಲಿ ನೆಲೆಗೊಂಡಿರುವಂಥ ಮತ್ತು ನಮ್ಮೊಂದಿಗೆ ಸದಾಕಾಲವೂ ಇರುವಂಥ ಸತ್ಯದ ನಿಮಿತ್ತವಾಗಿಯೇ ನಿಮ್ಮನ್ನು ಪ್ರೀತಿಸುತ್ತಾರೆ.
2 ಯೋಹಾನನು 1 : 3 (KNV)
ತಂದೆಯಾದ ದೇವರಿಂದಲೂ ಆ ತಂದೆಯ ಮಗನಾಗಿರುವ ಕರ್ತನಾದ ಯೇಸು ಕ್ರಿಸ್ತನಿಂದಲೂ ಕೃಪೆಯು ಕರುಣೆಯು ಮತ್ತು ಶಾಂತಿಯು ಸತ್ಯ ದಲ್ಲಿಯೂ ಪ್ರೀತಿಯಲ್ಲಿಯೂ ನಿಮ್ಮೊಂದಿಗಿರಲಿ.
2 ಯೋಹಾನನು 1 : 4 (KNV)
ನಿನ್ನ ಮಕ್ಕಳಲ್ಲಿ ಕೆಲವರು ತಂದೆಯಿಂದ ನಾವು ಹೊಂದಿದ ಆಜ್ಞಾನುಸಾರ ಸತ್ಯದಲ್ಲಿ ನಡೆಯುವದನ್ನು ಕಂಡು ನಾನು ಬಹಳ ಸಂತೋಷವುಳ್ಳವನಾದೆನು.
2 ಯೋಹಾನನು 1 : 5 (KNV)
ಅಮ್ಮನವರೇ, ನಾನು ಹೊಸ ಆಜ್ಞೆಯನ್ನು ನಿನಗೆ ಬರೆಯದೆ ಮೊದಲಿನಿಂದಲೂ ನಮಗೆ ಇದ್ದ ಆಜ್ಞೆ ಯನ್ನು ನಿನಗೆ ಬರೆಯುವವನಾಗಿ--ನಾವು ಒಬ್ಬರ ನ್ನೊಬ್ಬರು ಪ್ರೀತಿಸುವವರಾಗಿರಬೇಕೆಂದು ನಿನ್ನನ್ನು ಕೇಳಿಕೊಳ್ಳುತ್ತೇನೆ.
2 ಯೋಹಾನನು 1 : 6 (KNV)
ಆತನ ಆಜ್ಞೆಗಳನ್ನು ಅನುಸರಿಸಿ ನಡೆಯುವದೇ ಪ್ರೀತಿ; ಪ್ರೀತಿಯಲ್ಲಿ ನಡೆಯ ಬೇಕೆಂಬದೇ ನೀವು ಮೊದಲಿನಿಂದಲೂ ಕೇಳಿದ ಅಪ್ಪಣೆಯಾಗಿದೆ.
2 ಯೋಹಾನನು 1 : 7 (KNV)
ಶರೀರದಲ್ಲಿ ಬಂದಿರುವ ಯೇಸು ಕ್ರಿಸ್ತನ್ನು ಒಪ್ಪದೆ ಇರುವ ಮೋಸಗಾರರು ಅನೇಕ ಮಂದಿ ಹೊರಟು ಲೋಕದೊಳಗೆ ಹೋಗಿದ್ದಾರೆ. ಇಂಥವನೇ ಮೋಸಗಾರನೂ ಕ್ರಿಸ್ತ ವಿರೋಧಿಯೂ ಆಗಿದ್ದಾನೆ.
2 ಯೋಹಾನನು 1 : 8 (KNV)
ನಾವು ಪ್ರಯಾಸಪಟ್ಟು ಮಾಡಿದವು ಗಳನ್ನು ಕಳಕೊಳ್ಳದೆ ಪ್ರತಿಫಲವನ್ನು ಹೊಂದುವಂತೆ ನಿಮ್ಮನ್ನು ನೀವೇ ನೋಡಿಕೊಳ್ಳಿರಿ.
2 ಯೋಹಾನನು 1 : 9 (KNV)
ಕ್ರಿಸ್ತನ ಬೋಧನೆಯಲ್ಲಿ ನೆಲೆಗೊಳ್ಳದೆ ಅದನ್ನು ಅತಿಕ್ರಮಿ ಸುವವನಿಗೆ ದೇವರಿಲ್ಲ; ಕ್ರಿಸ್ತನ ಬೋಧನೆಯಲ್ಲಿ ನೆಲೆ ಗೊಂಡಿರುವವನಿಗೆ ತಂದೆಯೂ ಮಗನೂ ಇದ್ದಾರೆ.
2 ಯೋಹಾನನು 1 : 10 (KNV)
ಈ ಬೋಧನೆಯನ್ನು ತಾರದಿರುವ ಯಾವನಾದರೂ ನಿಮ್ಮ ಬಳಿಗೆ ಬಂದರೆ ಅವನನ್ನು ಮನೆಯೊಳಗೆ ಸೇರಿಸಿ ಕೊಳ್ಳಬೇಡಿರಿ; ಅವನಿಗೆ ವಂದನೆ ಎಂದು ಹೇಳಬೇಡಿರಿ.
2 ಯೋಹಾನನು 1 : 11 (KNV)
ಅವನಿಗೆ ವಂದನೆ ಎಂದು ಹೇಳುವವನು ಅವನ ದುಷ್ಕೃತ್ಯಗಳಲ್ಲಿ ಪಾಲುಗಾರನಾಗುತ್ತಾನೆ.
2 ಯೋಹಾನನು 1 : 12 (KNV)
ನಿಮಗೆ ಬರೆಯುವದಕ್ಕೆ ನನಗೆ ಅನೇಕ ವಿಷಯಗಳಿದ್ದರೂ ಅವುಗಳನ್ನು ಮಸಿಯಿಂದ ಕಾಗದದ ಮೇಲೆ ಬರೆಯುವದಕ್ಕೆ ನನಗೆ ಮನಸ್ಸಿಲ್ಲ. ಆದರೆ ನಾನು ನಿಮ್ಮ ಬಳಿಗೆ ಬಂದು ನಿಮ್ಮ ಸಂಗಡ ಮುಖಾ ಮುಖಿಯಾಗಿ ಮಾತನಾಡುವೆನೆಂದು ನಂಬುತ್ತೇನೆ; ಆಗ ನಮ್ಮ ಸಂತೋಷವು ಪರಿಪೂರ್ಣವಾಗುವದು.
2 ಯೋಹಾನನು 1 : 13 (KNV)
ಆಯಲ್ಪಟ್ಟ ನಿನ್ನ ಸಹೋದರಿಯ ಮಕ್ಕಳು ನಿನಗೆ ವಂದನೆ ಹೇಳುತ್ತಾರೆ. ಆಮೆನ್.

1 2 3 4 5 6 7 8 9 10 11 12 13