2 ಕೊರಿಂಥದವರಿಗೆ 8 : 1 (KNV)
ಇದಲ್ಲದೆ ಸಹೋದರರೇ, ಮಕೆದೋನ್ಯದ ಸಭೆಗಳಿಗೆ ಅನುಗ್ರಹಿಸಲ್ಪಟ್ಟ ದೇವರ ಕೃಪೆಯನ್ನು ನಿಮಗೆ ತಿಳಿಸುತ್ತೇನೆ.
2 ಕೊರಿಂಥದವರಿಗೆ 8 : 2 (KNV)
ಆ ಸಭೆಗಳವರು ಬಹಳ ಹಿಂಸೆಯನ್ನು ತಾಳುವವರಾದರೂ ವಿಪರೀತ ವಾದ ಬಡತನದಲ್ಲಿದ್ದರೂ ಬಹು ಆನಂದದಿಂದ ತುಂಬಿದವರಾಗಿ ಅತ್ಯಂತ ಔದಾರ್ಯವುಳ್ಳವರಾದರು.
2 ಕೊರಿಂಥದವರಿಗೆ 8 : 3 (KNV)
ಅವರು ಶಕ್ತ್ಯಾನುಸಾರವಾಗಿ ಮಾತ್ರ ಕೊಡಲಿಲ್ಲ; ಹೌದು, ಶಕ್ತಿಯನ್ನು ವಿಾರಿ ತಮ್ಮಷ್ಟಕ್ಕೆ ತಾವೇ ಕೊಟ್ಟರು; ಇದಕ್ಕೆ ನಾನು ಸಾಕ್ಷಿ.
2 ಕೊರಿಂಥದವರಿಗೆ 8 : 4 (KNV)
ಪರಿಶುದ್ಧರಿಗೆ ದಾನ ಕೊಡುವ ಅನ್ಯೋನ್ಯತೆಯಲ್ಲಿ ತಾವು ಪಾಲುಗಾರ ರಾಗುವಂತೆ ನಮ್ಮನ್ನು ಬಹಳವಾಗಿ ಬೇಡಿಕೊಂಡರು.
2 ಕೊರಿಂಥದವರಿಗೆ 8 : 5 (KNV)
ನಾವು ನಿರೀಕ್ಷಿಸಿದ ಪ್ರಕಾರವಾಗಿ ಅವರು ಕೊಡದೆ ಮೊದಲು ತಮ್ಮನ್ನೇ ಕರ್ತನಿಗೆ ಒಪ್ಪಿಸಿಕೊಟ್ಟರು; ಅನಂತರ ದೇವರ ಚಿತ್ತಾನುಸಾರವಾಗಿ ನಮಗೂ ತಮ್ಮನ್ನು ಒಪ್ಪಿಸಿಕೊಟ್ಟರು.
2 ಕೊರಿಂಥದವರಿಗೆ 8 : 6 (KNV)
ಹೀಗಿರಲಾಗಿ ಈ ಕೃಪಾಕಾರ್ಯವನ್ನು ಪ್ರಾರಂಭಿಸಿದ ತೀತನು ನಿಮ್ಮಲ್ಲಿ ಸಹ ಅದನ್ನು ಕೊನೆಗಾಣಿಸಬೇಕೆಂದು ನಾವು ಅವನನ್ನು ಬೇಡಿಕೊಂಡೆವು.
2 ಕೊರಿಂಥದವರಿಗೆ 8 : 7 (KNV)
ಆದದರಿಂದ ನೀವು ಎಲ್ಲವುಗಳಲ್ಲಿ ಅಂದರೆ ನಂಬಿಕೆಯಲ್ಲಿಯೂ ಮಾತಿ ನಲ್ಲಿಯೂ ಜ್ಞಾನದಲ್ಲಿಯೂ ಎಲ್ಲಾ ಆಸಕ್ತಿಯಲ್ಲಿಯೂ ನಮ್ಮ ಕಡೆಗಿರುವ ನಿಮ್ಮ ಪ್ರೀತಿಯಲ್ಲಿಯೂ ಸಮೃದ್ಧರಾಗಿರುವಂತೆಯೇ ಈ ಕೃಪೆಯಲ್ಲಿಯೂ ಸಮೃದ್ಧರಾಗಿರ್ರಿ.
2 ಕೊರಿಂಥದವರಿಗೆ 8 : 8 (KNV)
ನಾನು ಇದನ್ನು ಆಜ್ಞೆಯಂತೆ ಹೇಳದೆ ಇತರರ ಆಸಕ್ತಿಯನ್ನು ತೋರಿಸಿಕೊಟ್ಟು ನಿಮ್ಮ ಪ್ರೀತಿಯು ಯಥಾರ್ಥವಾದದ್ದೆಂಬದನ್ನು ಸಿದ್ಧಾಂತಪಡಿಸುವದ ಕ್ಕಾಗಿಯೇ ಹೇಳುತ್ತೇನೆ.
2 ಕೊರಿಂಥದವರಿಗೆ 8 : 9 (KNV)
ನಮ್ಮ ಕರ್ತನಾದ ಯೇಸು ಕ್ರಿಸ್ತನ ಕೃಪೆಯನ್ನು ನೀವು ಅರಿತವರಾಗಿದ್ದೀರಿ; ಹೇಗಂದರೆ ಆತನು ಐಶ್ವರ್ಯವಂತನಾಗಿದ್ದರೂ ಆತನ ಬಡತನದ ಮೂಲಕ ನೀವು ಐಶ್ವರ್ಯವಂತ ರಾಗುವಂತೆ ಆತನು ನಿಮಗೋಸ್ಕರ ಬಡವನಾದನು.
2 ಕೊರಿಂಥದವರಿಗೆ 8 : 10 (KNV)
ಈ ಕಾರ್ಯವನ್ನು ಕುರಿತು ನನ್ನ ಅಭಿಪ್ರಾಯವನ್ನು ತಿಳಿಸುತ್ತೇನೆ; ಇದನ್ನು ಒಂದು ವರುಷದ ಹಿಂದೆ ನಡಿಸುವದಕ್ಕೆ ತೊಡಗುವದರಲ್ಲಿಯೂ ಅದನ್ನು ನಡಿಸಬೇಕೆಂದು ಮಾಡುವದರಲ್ಲಿಯೂ ನೀವು ಮುಂದಾಗಿದ್ದದರಿಂದ ಅದು ನಿಮಗೆ ವಿಹಿತವಾಗಿದೆ.
2 ಕೊರಿಂಥದವರಿಗೆ 8 : 11 (KNV)
ಈ ಕಾರ್ಯವನ್ನು ಮಾಡುವದಕ್ಕೆ ಹೇಗೆ ನಿಮ್ಮಲ್ಲಿ ಸಿದ್ದಮನಸ್ಸು ಇತ್ತೋ ಹಾಗೆಯೇ ನೆರವೇರಿಸಿರಿ; ಹೀಗೆ ನಿಮಗಿರುವದರೊಳಗಿಂದ ಆ ಕಾರ್ಯವನ್ನು ಪೂರ್ತಿ ಮಾಡಿರಿ.
2 ಕೊರಿಂಥದವರಿಗೆ 8 : 12 (KNV)
ಒಬ್ಬನು ಕೊಡುವದಕ್ಕೆ ಮನಸ್ಸಿದ್ದರೆ ಅವನು ತನಗೆ ಇಲ್ಲದ್ದಕ್ಕನುಸಾರವಾಗಿ ಅಲ್ಲ, ಆದರೆ ಇರುವದಕ್ಕನುಸಾರವಾಗಿಯೇ ಕೊಟ್ಟರೆ ಅದು ಸಮರ್ಪ ಕವಾಗಿರುವದು.
2 ಕೊರಿಂಥದವರಿಗೆ 8 : 13 (KNV)
ಇತರರ ಭಾರವು ಪರಿಹಾರವಾಗ ಬೇಕೆಂದೂ ನಿಮಗೆ ಭಾರವಾಗಬೇಕೆಂದೂ ನನ್ನ ತಾತ್ಪರ್ಯವಲ್ಲ.
2 ಕೊರಿಂಥದವರಿಗೆ 8 : 14 (KNV)
ಸಮಾನತ್ವವಿರಬೇಕೆಂದೇ ನನ್ನ ತಾತ್ಪರ್ಯ. ಸದ್ಯಕ್ಕೆ ನಿಮ್ಮ ಸಮೃದ್ಧಿಯು ಅವರ ಕೊರತೆ ಯನ್ನು ನೀಗಿಸುತ್ತದೆ; ಮುಂದೆ ಅವರ ಸಮೃದ್ಧಿಯು ನಿಮ್ಮ ಕೊರತೆಯನ್ನು ನೀಗಿಸುವದು; ಹೀಗೆ ಸಮಾನತ್ವವುಂಟಾಗುವದು.
2 ಕೊರಿಂಥದವರಿಗೆ 8 : 15 (KNV)
ಬಹಳ ಕೂಡಿಸಿದವನಿಗೆ ಏನೂ ಹೆಚ್ಚಾಗಲಿಲ್ಲ; ಸ್ವಲ್ಪವಾಗಿ ಕೂಡಿಸಿದವನಿಗೆ ಏನೂ ಕಡಿಮೆಯಾಗಲಿಲ್ಲ ಎಂದು ಬರೆದಿರುವ ಪ್ರಕಾರವಾಗುವದು.
2 ಕೊರಿಂಥದವರಿಗೆ 8 : 16 (KNV)
ಆದರೆ ನಿಮ್ಮ ವಿಷಯವಾಗಿ ಅದೇ ಹಿತಚಿಂತನೆ ಯನ್ನು ದೇವರು ತೀತನ ಹೃದಯದಲ್ಲಿ ಹುಟ್ಟಿಸಿದ್ದಕ್ಕಾಗಿ ದೇವರಿಗೆ ಸ್ತೋತ್ರವಾಗಲಿ.
2 ಕೊರಿಂಥದವರಿಗೆ 8 : 17 (KNV)
ಅವನು ನಿಮ್ಮ ಬಳಿಗೆ ಹೋಗಬೇಕೆಂದು ನಾವು ಕೇಳಿಕೊಂಡಾಗ ನಿಜ ವಾಗಿಯೂ ಒಪ್ಪಿದ್ದಲ್ಲದೆ ಅತ್ಯಾಸಕ್ತನಾಗಿದ್ದು ತನ್ನಷ್ಟಕ್ಕೆ ತಾನೇ ನಿಮ್ಮ ಬಳಿಗೆ ಬಂದಿದ್ದಾನೆ.
2 ಕೊರಿಂಥದವರಿಗೆ 8 : 18 (KNV)
ಇದಲ್ಲದೆ ಸುವಾರ್ತೆಯ ವಿಷಯದಲ್ಲಿ ಎಲ್ಲಾ ಸಭೆಗಳಲ್ಲಿಯೂ ಹೆಸರುಗೊಂಡಿದ್ದ ಸಹೋದರನನ್ನು ಅವನ ಜೊತೆ ಯಲ್ಲಿ ಕಳುಹಿಸಿದ್ದೇವೆ.
2 ಕೊರಿಂಥದವರಿಗೆ 8 : 19 (KNV)
ಮಾತ್ರವಲ್ಲದೆ ಈ ಕೃಪಾ ಕಾರ್ಯವು ನಮ್ಮ ಮೂಲಕ ಕರ್ತನ ಮಹಿಮೆಗಾಗಿ ನಡೆಯುವಂತೆ ನಿಮ್ಮ ಸಿದ್ಧಮನಸ್ಸನ್ನು ಪ್ರಕಟಿಸುವದಕ್ಕಾಗಿ ನಮ್ಮ ಜೊತೆಯಲ್ಲಿ ಪ್ರಯಾಣ ಮಾಡುವದಕ್ಕೆ ಇವನು ಸಹ ಸಭೆಗಳಿಂದ ಆರಿಸಲ್ಪಟ್ಟಿದ್ದಾನೆ.
2 ಕೊರಿಂಥದವರಿಗೆ 8 : 20 (KNV)
ನಾವು ಪಾರುಪತ್ಯ ಮಾಡುವ ಈ ಸಮೃದ್ಧಿಯ ವಿಷಯದಲ್ಲಿ ಒಬ್ಬರೂ ನಮ್ಮ ಮೇಲೆ ತಪ್ಪುಹೊರಿಸುವದಕ್ಕೆ ಆಸ್ಪದ ವಿರಬಾರದು.
2 ಕೊರಿಂಥದವರಿಗೆ 8 : 21 (KNV)
ಯಾಕಂದರೆ ಕರ್ತನ ದೃಷ್ಟಿಯಲ್ಲಿ ಮಾತ್ರವಲ್ಲದೆ ಮನುಷ್ಯರ ದೃಷ್ಟಿಯಲ್ಲಿಯೂ ಗೌರವ ವಾದವುಗಳನ್ನು ಯೋಚನೆಗೆ ತಂದುಕೊಳ್ಳುವವರಾ ಗಿದ್ದೇವೆ.
2 ಕೊರಿಂಥದವರಿಗೆ 8 : 22 (KNV)
ಅವರ ಸಂಗಡ ನಮ್ಮ ಸಹೋದರನನ್ನು ಕಳುಹಿಸಿದ್ದೇವೆ;ನಾವು ಅನೇಕ ಸಮಯಗಳಲ್ಲಿಯೂ ಅನೇಕ ಕಾರ್ಯಗಳಲ್ಲಿಯೂ ಅವನನ್ನು ಪರೀಕ್ಷಿಸಿ ಆಸಕ್ತಿಯುಳ್ಳವನೆಂದು ತಿಳುಕೊಂಡಿದ್ದೇವೆ; ಈಗಲಾ ದರೋ ಅವನು ನಿಮ್ಮಲ್ಲಿಟ್ಟಿರುವ ವಿಶೇಷ ಭರವಸದಿಂದ ಇನ್ನೂ ಬಹು ಹೆಚ್ಚಾಗಿ ಆಸಕ್ತಿಯುಳ್ಳವನಾಗಿದ್ದಾನೆ.
2 ಕೊರಿಂಥದವರಿಗೆ 8 : 23 (KNV)
ತೀತನನ್ನು ಕುರಿತು ಕೇಳುತ್ತೀರೋ, ಅವನು ನನ್ನ ಪಾಲುಗಾರನೂ ನಿಮ್ಮ ವಿಷಯವಾಗಿ ನನಗೆ ಜೊತೆ ಸಹಕಾರಿಯೂ ಆಗಿದ್ದಾನೆ; ನಮ್ಮ ಸಹೋದರರನ್ನು ಕುರಿತು ಕೇಳುತ್ತೀರೋ, ಅವರು ಸಭೆಗಳ ಸೇವಕರೂ ಕ್ರಿಸ್ತನಮಹಿಮೆಯೂ ಆಗಿದ್ದಾರೆ.
2 ಕೊರಿಂಥದವರಿಗೆ 8 : 24 (KNV)
ಆದಕಾರಣ ನಿಮ್ಮ ಪ್ರೀತಿಯನ್ನೂ ನಿಮ್ಮ ವಿಷಯವಾಗಿರುವ ನಮ್ಮ ಹೊಗಳಿ ಕೆಯನ್ನೂ ಇವರಿಗೂ ಸಭೆಗಳಿಗೂ ವ್ಯಕ್ತಪಡಿಸಿರಿ.
❮
❯