2 ಕೊರಿಂಥದವರಿಗೆ 7 : 1 (KNV)
ಅತಿ ಪ್ರಿಯರೇ, ಈ ವಾಗ್ದಾನಗಳು ನಮಗಿರುವದರಿಂದ ನಾವು ಶರೀರಾತ್ಮಗಳ ಕಲ್ಮಶದಿಂದ ನಮ್ಮನ್ನು ಶುಚಿಮಾಡಿಕೊಂಡು ದೇವರ ಭಯದಲ್ಲಿ ಪವಿತ್ರತ್ವನ್ನು ಸಿದ್ದಿಗೆ ತರೋಣ.
2 ಕೊರಿಂಥದವರಿಗೆ 7 : 2 (KNV)
ನಮ್ಮನ್ನು ಸೇರಿಸಿಕೊಳ್ಳಿರಿ; ನಾವು ಯಾರಿಗೂ ಅನ್ಯಾಯಮಾಡಲಿಲ್ಲ. ಯಾರನ್ನೂ ಕೆಡಿಸಲಿಲ್ಲ, ಯಾರನ್ನೂ ವಂಚಿಸಲಿಲ್ಲ.
2 ಕೊರಿಂಥದವರಿಗೆ 7 : 3 (KNV)
ನಿಮ್ಮ ಮೇಲೆ ತಪ್ಪು ಹೊರಿಸಬೇಕೆಂದು ನಾನು ಇದನ್ನು ಹೇಳುವದಿಲ್ಲ; ಯಾಕಂದರೆ ನಿಮ್ಮೊಂದಿಗೆ ಸಾಯುವದಕ್ಕೂ ಬದುಕು ವದಕ್ಕೂ ನೀವು ನಮ್ಮ ಹೃದಯಗಳಲ್ಲಿದ್ದೀರೆಂದು ಮೊದಲೇ ಹೇಳಿದ್ದೇನೆ.
2 ಕೊರಿಂಥದವರಿಗೆ 7 : 4 (KNV)
ನಿಮ್ಮೊಂದಿಗೆ ಮಾತನಾಡು ವದಕ್ಕೆ ನನಗೆ ಬಹಳ ಧೈರ್ಯವೂ ನಿಮ್ಮ ವಿಷಯದಲ್ಲಿ ನನಗೆ ಬಹಳ ಹೆಚ್ಚಳವೂ ಉಂಟು; ನಾನು ಆದರಣೆ ಯಿಂದ ತುಂಬಿದವನಾಗಿ ನಮಗಾಗುವ ಎಲ್ಲಾ ಸಂಕಟಗಳಲ್ಲಿ ಅತ್ಯಧಿಕವಾದ ಸಂತೋಷದಿಂದ ಇದ್ದೇನೆ.
2 ಕೊರಿಂಥದವರಿಗೆ 7 : 5 (KNV)
ನಾವು ಮಕೆದೋನ್ಯಕ್ಕೆ ಬಂದಾಗ ನಮ್ಮ ಶರೀರಕ್ಕೆ ಏನೂ ವಿಶ್ರಾಂತಿಯಾಗಲಿಲ್ಲ; ಆದರೆ ಎಲ್ಲಾ ಕಡೆಯಲ್ಲಿಯೂ ನಮಗೆ ಕಳವಳವಿತ್ತು ಹೊರಗೆ ಕಲಹ; ಒಳಗೆ ಭಯವಿತ್ತು.
2 ಕೊರಿಂಥದವರಿಗೆ 7 : 6 (KNV)
ಆದಾಗ್ಯೂ ಕುಗ್ಗಿಹೋದ ವರನ್ನು ಸಂತೈಸುವ ದೇವರು ತೀತನ ಬರುವಿಕೆಯಿಂದ ನಮ್ಮನ್ನು ಸಂತೈಸಿದನು.
2 ಕೊರಿಂಥದವರಿಗೆ 7 : 7 (KNV)
ಅವನ ಬರುವಿಕೆಯಿಂದಮಾತ್ರವಲ್ಲದೆ ಅವನು ನಿಮ್ಮ ಯಥಾರ್ಥವಾದ ಹಂಬಲ, ನಿಮ್ಮ ಗೋಳಾಟ, ನನ್ನ ಕಡೆಗಿರುವ ನಿಮ್ಮ ಆಸಕ್ತಿಯ ಮನಸ್ಸು ಮತ್ತು ತಾನು ನಿಮ್ಮಲ್ಲಿ ಹೊಂದಿದ ಆದರಣೆ ಇವುಗಳನ್ನು ನಮಗೆ ತಿಳಿಸಿದಾಗ ನಾನು ಹೆಚ್ಚಾಗಿ ಸಂತೋಷಪಟ್ಟೆನು.
2 ಕೊರಿಂಥದವರಿಗೆ 7 : 8 (KNV)
ನಾನು ಪತ್ರದಿಂದ ನಿಮ್ಮನ್ನು ದುಃಖಪಡಿಸಿದಕ್ಕೆ ನನಗೆ ವ್ಯಸನವಾದರೂ ನಾನು ಪಶ್ಚಾತ್ತಾಪಪಡು ವದಿಲ್ಲ, ಯಾಕಂದರೆ ಆ ಪತ್ರಿಕೆಯು ನಿಮ್ಮನ್ನು ದುಃಖ ಪಡಿಸಿದಾಗ್ಯೂ ಅದು ಸ್ವಲ್ಪ ಕಾಲಕ್ಕೆ ಎಂದು ನಾನು ತಿಳಿಯುತ್ತೇನೆ.
2 ಕೊರಿಂಥದವರಿಗೆ 7 : 9 (KNV)
ಆದರೂ ನಿಮಗೆ ದುಃಖವಾಯಿತೆಂದು ನಾನು ಸಂತೋಷಪಡದೆ ನೀವು ದುಃಖಪಟ್ಟು ಮಾನಸಾಂತರ ಹೊಂದಿದ್ದಕ್ಕಾಗಿ ಈಗ ಸಂತೋಷ ಪಡುತ್ತೇನೆ; ಯಾಕಂದರೆ ನೀವು ದೇವರ ಚಿತ್ತಾನುಸಾರ ವಾಗಿ ದುಃಖಿಸಿದ್ದರಿಂದ ನಮ್ಮಿಂದ ಯಾವದರಲ್ಲಿಯೂ ನೀವು ನಷ್ಟಪಡಲಿಲ್ಲವಲ್ಲಾ.
2 ಕೊರಿಂಥದವರಿಗೆ 7 : 10 (KNV)
ದೇವರ ಚಿತ್ತಾನುಸಾರ ವಾಗಿರುವ ದುಃಖವು ರಕ್ಷಣೆಗಾಗಿ ಮಾನಸಾಂತರ ವನ್ನುಂಟು ಮಾಡುತ್ತದೆ. ಮಾನಸಾಂತರದಲ್ಲಿ ಪಶ್ಚಾತ್ತಾಪಕ್ಕೆ ಅಸ್ಪದವಿಲ್ಲ; ಆದರೆ ಲೋಕಸಂಬಂಧ ವಾದ ದುಃಖವು ಮರಣವನ್ನುಂಟುಮಾಡುತ್ತದೆ.
2 ಕೊರಿಂಥದವರಿಗೆ 7 : 11 (KNV)
ಯಾಕಂದರೆ ದೇವರ ಚಿತ್ತಾನುಸಾರವಾದ ಈ ದುಃಖವು ನಿಮ್ಮಲ್ಲಿ ಎಂಥ ಎಚ್ಚರಿಕೆಯನ್ನೂ ಎಂಥ ನಿರ್ದೋಷತ್ವವನ್ನೂ ಎಂಥ ರೋಷವನ್ನೂ ಎಂಥ ಭಯವನ್ನೂ ಎಂಥ ಅಧಿಕವಾದ ಹಂಬಲವನ್ನೂ ಎಂಥ ಆಸಕ್ತಿಯನ್ನೂ ಎಂಥ ಪ್ರತಿಕಾರವನ್ನೂ ಹುಟ್ಟಿಸಿತೆಂದು ನೋಡಿರಿ. ಇದರಲ್ಲಿ ನೀವೆಲ್ಲಾ ನಿರ್ದೋಷಿಗಳೆಂದು ತೋರಿಸಿಕೊಂ
2 ಕೊರಿಂಥದವರಿಗೆ 7 : 12 (KNV)
ನಾನು ಹೀಗೆ ನಿಮಗೆ ಬರೆದದ್ದು ಅನ್ಯಾಯ ಮಾಡಿದವನಿ ಗೋಸ್ಕರವಲ್ಲ, ಅನ್ಯಾಯ ಸಹಿಸಿದವನಿಗೋಸ್ಕರವೂ ಅಲ್ಲ; ದೇವರ ದೃಷ್ಟಿಯಲ್ಲಿ ನಿಮಗೋಸ್ಕರ ನಮಗಿರುವ ಚಿಂತೆಯು ನಿಮಗೆ ತೋರಿ ಬರುವದಕ್ಕೋಸ್ಕರವೇ ಬರೆದೆನು.
2 ಕೊರಿಂಥದವರಿಗೆ 7 : 13 (KNV)
ಆದಕಾರಣ ನಿಮ್ಮ ಸಂತೈಸುವಿಕೆಯಿಂದ ನಮಗೆ ಆದರಣೆ ಉಂಟಾಯಿತು. ಹೌದು, ನಿಮ್ಮೆಲ್ಲರಿಂದ ತೀತನ ಮನಸ್ಸಿಗೆ ಉಪಶಮನವಾದ ಕಾರಣ ನಾವು ಅವನ ಸಂತೋಷಕ್ಕಾಗಿ ಹೆಚ್ಚಾಗಿ ಸಂತೋಷಪಟ್ಟೆವು.
2 ಕೊರಿಂಥದವರಿಗೆ 7 : 14 (KNV)
ಯಾಕಂದರೆ ನಾನು ಅವನ ಮುಂದೆ ನಿಮ್ಮನ್ನು ಹೊಗಳಿದ್ದರಲ್ಲಿ ನಾಚಿಕೆಪಡಬೇಕಾಗಿ ಬರಲಿಲ್ಲ. ನಾವು ನಿಮಗೆ ಹೇಳಿದವುಗಳೆಲ್ಲಾ ಹೇಗೆ ಸತ್ಯವಾಗಿದ್ದವೋ ಹಾಗೆಯೇ ನಾವು ತೀತನ ಮುಂದೆ ಆಡಿದ ಹೊಗಳಿಕೆಯೂ ಸತ್ಯವೆಂದು ಕಂಡುಬಂತು.
2 ಕೊರಿಂಥದವರಿಗೆ 7 : 15 (KNV)
ನೀವು ಭಯದಿಂದ ನಡಗುವವರಾಗಿ ಅವನನ್ನು ಸೇರಿಸಿ ಕೊಂಡದ್ದರಲ್ಲಿ ನಿಮ್ಮೆಲ್ಲರ ವಿಧೇಯತೆಯನ್ನು ಅವನು ಜ್ಞಾಪಕಮಾಡಿಕೊಳ್ಳುವಾಗ ನಿಮ್ಮ ಮೇಲೆ ಅವನ ಮಮತೆಯು ಹೆಚ್ಚಾಗುವದು.
2 ಕೊರಿಂಥದವರಿಗೆ 7 : 16 (KNV)
ಸರ್ವವಿಷಯದಲ್ಲೂ ನಿಮ್ಮನ್ನು ಕುರಿತು ನನಗೆ ಭರವಸವಿರುವದರಿಂದ ಸಂತೋಷಪಡುತ್ತೇನೆ.

1 2 3 4 5 6 7 8 9 10 11 12 13 14 15 16

BG:

Opacity:

Color:


Size:


Font: