2 ಕೊರಿಂಥದವರಿಗೆ 6 : 1 (KNV)
ಆದದರಿಂದ ನಾವು ಆತನೊಂದಿಗೆ ಕೆಲಸ ನಡಿಸುವವರಾಗಿದ್ದೇವೆ; ನೀವು ಸಹ ಹೊಂದಿದ ದೇವರ ಕೃಪೆಯನ್ನು ವ್ಯರ್ಥಮಾಡಿ ಕೊಳ್ಳಬೇಡಿರಿ ಎಂದು ನಿಮ್ಮನ್ನು ಬೇಡಿಕೊಳ್ಳುತ್ತೇವೆ.
2 ಕೊರಿಂಥದವರಿಗೆ 6 : 2 (KNV)
(ಆತನು--ಅಂಗೀಕಾರದ ಸಮಯದಲ್ಲಿ ನಾನು ನಿನ್ನ ಮನವಿಯನ್ನು ಕೇಳಿದೆನು, ರಕ್ಷಣೆಯ ದಿನದಲ್ಲಿ ನಾನು ನಿನಗೆ ಸಹಾಯಮಾಡಿದೆನು ಎಂದು ಹೇಳುತ್ತಾನೆ; ಇಗೋ, ಈಗಲೇ ಆ ಅಂಗೀಕಾರದ ಸಮಯ; ಇಗೋ, ಈಗಲೇ ಆ ರಕ್ಷಣೆಯ ದಿನ).
2 ಕೊರಿಂಥದವರಿಗೆ 6 : 3 (KNV)
ಸೇವೆಯು ದೂಷಿಸಲ್ಪಡದಂತೆ ಯಾವ ವಿಷಯ ದಲ್ಲಿಯೂ ನಿಂದೆಗೆ ಅವಕಾಶ ಕೊಡಬೇಡಿರಿ;
2 ಕೊರಿಂಥದವರಿಗೆ 6 : 4 (KNV)
ಆದರೆ ಎಲ್ಲಾ ಸಂಗತಿಗಳಲ್ಲಿ ಹೆಚ್ಚು ತಾಳ್ಮೆಯಲ್ಲಿಯೂ ಸಂಕಟ ಗಳಲ್ಲಿಯೂ ಕೊರತೆಗಳಲ್ಲಿಯೂ ಇಕ್ಕಟ್ಟುಗಳಲ್ಲಿಯೂ
2 ಕೊರಿಂಥದವರಿಗೆ 6 : 5 (KNV)
ಪೆಟ್ಟುಗಳಲ್ಲಿಯೂ ಸೆರೆಮನೆಗಳಲ್ಲಿಯೂ ಕಲಹಗಳ ಲ್ಲಿಯೂ ಪ್ರಯಾಸಗಳಲ್ಲಿಯೂ ನಿದ್ದೆಗೇಡುಗಳಲ್ಲಿಯೂ ಉಪವಾಸಗಳಲ್ಲಿಯೂ ದೇವರ ಸೇವಕರೆಂದು ನಮ್ಮನ್ನು ಸಮ್ಮತರಾಗ ಮಾಡಿಕೊಳ್ಳುತ್ತೇವೆ.
2 ಕೊರಿಂಥದವರಿಗೆ 6 : 6 (KNV)
ಶುದ್ಧತೆಯಿಂದ, ಜ್ಞಾನದಿಂದ, ದೀರ್ಘಶಾಂತಿಯಿಂದ, ದಯೆಯಿಂದ, ಪವಿತ್ರಾತ್ಮನಿಂದ, ಕಪಟವಿಲ್ಲದ ಪ್ರೀತಿಯಿಂದ,
2 ಕೊರಿಂಥದವರಿಗೆ 6 : 7 (KNV)
ಸತ್ಯವಾಕ್ಯದಿಂದ, ದೇವರ ಶಕ್ತಿಯಿಂದ, ಎಡಬಲಗೈ ಗಳಲ್ಲಿ ನೀತಿಯೆಂಬ ಆಯುಧಗಳಿಂದ,
2 ಕೊರಿಂಥದವರಿಗೆ 6 : 8 (KNV)
ಮಾನ ಅವಮಾನಗಳಿಂದ, ಕೀರ್ತಿ ಅಪಕೀರ್ತಿಗಳಿಂದ, ಕೂಡಿದವರಾಗಿದ್ದು ಮೋಸಗಾರರೆನಿಸಿಕೊಂಡರೂ ಸತ್ಯವಂತರೂ
2 ಕೊರಿಂಥದವರಿಗೆ 6 : 9 (KNV)
ಅಪರಿಚಿತರೆನಿಸಿಕೊಂಡರೂ ಪರಿಚಿತರೂ ಸಾಯುವವರಾಗಿ ತೋರಿದರೂ ಇಗೋ, ನಾವು ಬದುಕುವವರೂ ಆಗಿದ್ದೇವೆ; ಶಿಕ್ಷೆ ಹೊಂದುವ ವರಾಗಿದ್ದರೂ ಕೊಲ್ಲಲ್ಪಡದವರೂ
2 ಕೊರಿಂಥದವರಿಗೆ 6 : 10 (KNV)
ದುಃಖಪಡುವ ವರಾಗಿದ್ದರೂ ಯಾವಾಗಲೂ ಸಂತೋಷಪಡು ವವರೂ ಬಡವರಾಗಿದ್ದರೂ ಅನೇಕರಿಗೆ ಐಶ್ವರ್ಯ ವನ್ನುಂಟು ಮಾಡುವವರೂ ಏನೂ ಇಲ್ಲದವ ರಾಗಿದ್ದರೂ ಎಲ್ಲಾ ಇದ್ದವರೂ ಆಗಿದ್ದೇವೆ.
2 ಕೊರಿಂಥದವರಿಗೆ 6 : 11 (KNV)
ಓ ಕೊರಿಂಥದವರೇ, ನಮ್ಮ ಹೃದಯವು ವಿಶಾಲವಾಗಿರುವದರಿಂದ ನಾವು ನಿಮ್ಮೊಡನೆ ಧಾರಳವಾಗಿ ಮಾತನಾಡುತ್ತಾ ಇದ್ದೇವೆ;
2 ಕೊರಿಂಥದವರಿಗೆ 6 : 12 (KNV)
ನಿಮ್ಮ ಮೇಲಿರುವ ನಮ್ಮ ಪ್ರೀತಿಯು ಸಂಕೋಚವಾದದ್ದಲ್ಲ, ನಮ್ಮ ವಿಷಯದಲ್ಲಿ ನಿಮ್ಮ ಪ್ರೀತಿಯೇ ಸಂಕೋಚ ವಾದದ್ದು.
2 ಕೊರಿಂಥದವರಿಗೆ 6 : 13 (KNV)
ನಿಮ್ಮ ವಿಷಯದಲ್ಲಿ ನಮ್ಮ ಅಂತಃ ಕರುಣೆಯ ಫಲವಾಗಿ ನೀವು ನಿಮ್ಮ ಹೃದಯವನ್ನು ವಿಶಾಲಮಾಡಿಕೊಳ್ಳಿರಿ; (ನೀವು ನನ್ನ ಮಕ್ಕಳೆಂದು ನಾನು ಹೇಳುತ್ತೇನೆ).
2 ಕೊರಿಂಥದವರಿಗೆ 6 : 14 (KNV)
ನೀವು ಅವಿಶ್ವಾಸಿಗಳೊಂದಿಗೆ ಸೇರಿ ಸಮವಲ್ಲದ ನೊಗವನ್ನು ಹೊರಬೇಡಿರಿ; ಯಾಕಂದರೆ ಅನೀತಿಯ ಕೂಡ ನೀತಿಗೆ ಅನ್ಯೋನ್ಯತೆ ಏನು? ಕತ್ತಲೆಯ ಕೂಡ ಬೆಳಕಿಗೆ ಐಕ್ಯವೇನು?
2 ಕೊರಿಂಥದವರಿಗೆ 6 : 15 (KNV)
ಬೆಲಿಯಾಳನ ಕೂಡ ಕ್ರಿಸ್ತನಿಗೆ ಒಪ್ಪಂದವೇನು? ನಂಬದಿರುವವನ ಕೂಡ ನಂಬುವ ವನಿಗೆ ಪಾಲುಗಾರಿಕೆ ಏನು?
2 ಕೊರಿಂಥದವರಿಗೆ 6 : 16 (KNV)
ವಿಗ್ರಹಗಳ ಕೂಡ ದೇವರ ಮಂದಿರಕ್ಕೆ ಒಪ್ಪಿಗೆ ಏನು? ಯಾಕಂದರೆ ನೀವು ಜೀವವುಳ್ಳ ದೇವರ ಮಂದಿರವಾಗಿದ್ದೀರಲ್ಲಾ, ಇದರ ಸಂಬಂಧವಾಗಿ ದೇವರು--ನಾನು ಅವರಲ್ಲಿ ವಾಸಿಸುತ್ತಾ ತಿರುಗಾಡುವೆನು, ನಾನು ಅವರಿಗೆ ದೇವರಾಗಿರುವೆನು, ಅವರು ನನಗೆ ಪ್ರಜೆಯಾಗಿರುವರು ಎಂದು ಹೇಳಿದ್ದಾನೆ.
2 ಕೊರಿಂಥದವರಿಗೆ 6 : 17 (KNV)
ಆದದರಿಂದ--ಅವರ ಮಧ್ಯದಲ್ಲಿಂದ ನೀವು ಹೊರಗೆ ಬಂದು ಪ್ರತ್ಯೇಕವಾಗಿರಿ. ಇದಲ್ಲದೆ ಅಶುದ್ಧವಾದ ಯಾವದನ್ನೂ ಮುಟ್ಟದಿರಿ ಎಂದು ಕರ್ತನು ಹೇಳುತ್ತಾನೆ.
2 ಕೊರಿಂಥದವರಿಗೆ 6 : 18 (KNV)
ನಾನು ನಿಮ್ಮನ್ನು ಸೇರಿಸಿಕೊಂಡು ನಿಮಗೆ ತಂದೆಯಾಗಿರುವೆನು; ನೀವು ನನಗೆ ಕುಮಾರ ಕುಮಾರ್ತೆಯರಾಗಿರುವಿರಿ ಎಂದು ಸರ್ವಶಕ್ತನಾದ ಕರ್ತನು ಹೇಳುತ್ತಾನೆ.

1 2 3 4 5 6 7 8 9 10 11 12 13 14 15 16 17 18