2 ಕೊರಿಂಥದವರಿಗೆ 3 : 1 (KNV)
ನಮ್ಮನ್ನು ನಾವೇ ತಿರಿಗಿ ಹೊಗಳಿಕೊಳ್ಳು ವದಕ್ಕೆ ಪ್ರಾರಂಭಿಸುತ್ತೇವೋ? ಇಲ್ಲವೆ ಕೆಲವರಿಗೆ ಬೇಕಾಗಿರುವ ಪ್ರಕಾರ ನಿಮಗೆ ತೋರಿಸತಕ್ಕ ಯೋಗ್ಯತಾ ಪತ್ರಗಳು ನಮಗೆ ಅಗತ್ಯವೋ? ಅಥವಾ ಅಂಥ ಪತ್ರಗಳನ್ನು ನಿಮ್ಮಿಂದ ಪಡಕೊಳ್ಳ ಬೇಕೋ?
2 ಕೊರಿಂಥದವರಿಗೆ 3 : 2 (KNV)
ನಮ್ಮನ್ನು ನಾವೇ ತಿರಿಗಿ ಹೊಗಳಿಕೊಳ್ಳು ವದಕ್ಕೆ ಪ್ರಾರಂಭಿಸುತ್ತೇವೋ? ಇಲ್ಲವೆ ಕೆಲವರಿಗೆ ಬೇಕಾಗಿರುವ ಪ್ರಕಾರ ನಿಮಗೆ ತೋರಿಸತಕ್ಕ ಯೋಗ್ಯತಾ ಪತ್ರಗಳು ನಮಗೆ ಅಗತ್ಯವೋ? ಅಥವಾ ಅಂಥ ಪತ್ರಗಳನ್ನು ನಿಮ್ಮಿಂದ ಪಡಕೊಳ್ಳ ಬೇಕೋ?
2 ಕೊರಿಂಥದವರಿಗೆ 3 : 3 (KNV)
ನೀವು ಕ್ರಿಸ್ತನು ನಮ್ಮ ಕೈಯಿಂದ ಬರೆಯಿಸಿ ಕೊಟ್ಟ ಪತ್ರಿಕೆಯಾಗಿದ್ದೀರೆಂಬದು ಪ್ರತ್ಯಕ್ಷವಾಗಿಯೇ ಇದೆ; ಅದು ಮಸಿಯಿಂದ ಬರೆದದ್ದಲ್ಲ, ಆದರೆ ಜೀವವುಳ್ಳ ದೇವರ ಆತ್ಮನಿಂದಲೇ ಬರೆದದ್ದು; ಕಲ್ಲಿನ ಹಲಿಗೆಗಳ ಮೇಲೆಯಲ್ಲ, ಮನುಷ್ಯನ ಹೃದಯವೆಂಬ ಹಲಿಗೆಗಳ ಮೇಲೆ ಬರೆದದ್ದು.
2 ಕೊರಿಂಥದವರಿಗೆ 3 : 4 (KNV)
ಇಂಥ ಭರವಸವು ಕ್ರಿಸ್ತನ ಮೂಲಕವೇ ದೇವರ ಮುಂದೆ ನಮಗುಂಟು.
2 ಕೊರಿಂಥದವರಿಗೆ 3 : 5 (KNV)
ನಮ್ಮಿಂದಲೇ ಏನಾದರೂ ಉಂಟಾಯಿ ತೆಂದು ಆಲೋಚಿಸಿಕೊಳ್ಳುವದಕ್ಕೆ ನಮ್ಮಷ್ಟಕ್ಕೆ ನಾವೇ ಸಮರ್ಥರೆಂತಲ್ಲ; ನಮಗಿರುವ ಸಾಮರ್ಥ್ಯವು ದೇವರಿಂದಲೇ ಬಂದದ್ದು;
2 ಕೊರಿಂಥದವರಿಗೆ 3 : 6 (KNV)
ಆತನು ನಮ್ಮನ್ನು ಸಹ ಹೊಸ ಒಡಂಬಡಿಕೆಗೆ ಸಮರ್ಥರಾದ ಸೇವಕರನ್ನಾಗಿ ಮಾಡಿದ್ದಾನೆ; ಅಕ್ಷರಕ್ಕನುಸಾರವಾಗಿ ಅಲ್ಲ; ಆತ್ಮನಿಗನು ಸಾರವಾಗಿಯೇ. ಯಾಕಂದರೆ ಅಕ್ಷರವು ಮರಣ ವನ್ನುಂಟು ಮಾಡುತ್ತದೆ; ಆತ್ಮವು ಜೀವವನ್ನುಂಟು ಮಾಡುತ್ತದೆ.
2 ಕೊರಿಂಥದವರಿಗೆ 3 : 7 (KNV)
ಆದರೆ ಮರಣದ ಸೇವೆಯು ಕಲ್ಲಿನ ಮೇಲೆ ಲಿಖಿತವಾದ ಅಕ್ಷರಗಳಲ್ಲಿದ್ದರೂ ಪ್ರಭಾವದಿಂದ ಕೂಡಿದ್ದಾಗಿತ್ತು; ಆ ಪ್ರಭಾವದಿಂದ ಮೋಶೆಯ ಮುಖಕ್ಕೆ ಬಂದ ಪ್ರಕಾಶವು ಕುಂದಿ ಹೋಗುವಂಥ ದ್ದಾಗಿದ್ದರೂ ಅದರ ನಿಮಿತ್ತ ಇಸ್ರಾಯೇಲ್ಯರು ಅವನ ಮುಖವನ್ನು ದೃಷ್ಟಿಸಿ ನೋಡಲಾರದೆ ಇದ್ದರು.
2 ಕೊರಿಂಥದವರಿಗೆ 3 : 8 (KNV)
ಹೀಗಿದ್ದ ಮೇಲೆ ಆತ್ಮ ಸಂಬಂಧವಾದ ಸೇವೆಯು ಎಷ್ಟೋ ಹೆಚ್ಚಾಗಿ ಪ್ರಭಾವದಿಂದಿರುವದಲ್ಲವೇ?
2 ಕೊರಿಂಥದವರಿಗೆ 3 : 9 (KNV)
ಅಪರಾಧ ನಿರ್ಣಯದ ಸೇವೆಯು ಪ್ರಭಾವದಿಂದಿರುವದಾದರೆ ನೀತಿಯ ಸೇವೆಯು ಎಷ್ಟೋ ಅಧಿಕವಾದ ಪ್ರಭಾವವುಳ್ಳದ್ದಾಗಿರಬೇಕು.
2 ಕೊರಿಂಥದವರಿಗೆ 3 : 10 (KNV)
ಈಗ ಅತ್ಯಧಿಕವಾದ ಪ್ರಭಾವವುಳ್ಳದ್ದು ಬಂದದ್ದರಿಂದ ಪ್ರಭಾವವಾಗಿದ್ದದ್ದು ಈ ವಿಷಯದಲ್ಲಿ ಪ್ರಭಾವ ವಿಲ್ಲದ್ದಾಯಿತು.
2 ಕೊರಿಂಥದವರಿಗೆ 3 : 11 (KNV)
ಇಲ್ಲದೆ ಹೋಗುವಂಥದ್ದು ಪ್ರಭಾವ ವುಳ್ಳದ್ದಾಗಿದ್ದರೆ ಇರುವಂಥದ್ದು ಬಹು ಹೆಚ್ಚಾಗಿ ಪ್ರಭಾವವುಳ್ಳದ್ದಾಗಿರಬೇಕಲ್ಲವೇ?
2 ಕೊರಿಂಥದವರಿಗೆ 3 : 12 (KNV)
ನಮಗೆ ಇಂಥ ನಿರೀಕ್ಷೆ ಇರುವಲ್ಲಿ ನಾವು ಅತಿ ಸ್ಪಷ್ಟವಾಗಿ ಮಾತನಾಡುತ್ತೇವೆ.
2 ಕೊರಿಂಥದವರಿಗೆ 3 : 13 (KNV)
ಗತಿಸಿಹೋಗು ವದರ ಅಂತ್ಯವನ್ನು ಇಸ್ರಾಯೇಲ್ಯರು ದೃಷ್ಟಿಸಿ ನೋಡಲಾರದಂತೆ ತನ್ನ ಮುಖದ ಮೇಲೆ ಮುಸುಕು ಹಾಕಿಕೊಳ್ಳುವ ಮೋಶೆಯ ಹಾಗೆ ಅಲ್ಲ.
2 ಕೊರಿಂಥದವರಿಗೆ 3 : 14 (KNV)
ಆದರೆ ಅವರ ಬುದ್ದಿಮಂದವಾಯಿತು, ಆ ಮುಸುಕು ಕ್ರಿಸ್ತನಲ್ಲಿ ತೆಗೆದು ಹಾಕಲ್ಪಟ್ಟಿರುವದರಿಂದ ಹಳೇ ಒಡಂಬಡಿಕೆಯು ಪಾರಾಯಣವಾಗುವಾಗೆಲ್ಲಾ ಈ ದಿನದ ವರೆಗೂ ಅವರಿಗೆ ಆ ಮುಸುಕು ತೆಗೆಯಲ್ಪಡದೆ ಉಳಿದಿದೆ.
2 ಕೊರಿಂಥದವರಿಗೆ 3 : 15 (KNV)
ಆದರೆ ಈ ದಿನದವರೆಗೂ ಮೋಶೆಯ ಗ್ರಂಥಪಾರಾಯಣವು ಆಗುವಾಗೆಲ್ಲಾ ಮುಸುಕು ಅವರ ಹೃದಯದ ಮೇಲೆ ಇರುತ್ತದೆ.
2 ಕೊರಿಂಥದವರಿಗೆ 3 : 16 (KNV)
ಆದಾಗ್ಯೂ ಅವರ ಹೃದಯವು ಕರ್ತನ ಕಡೆಗೆ ತಿರುಗಿಕೊಂಡಾಗಲೇ ಆ ಮುಸುಕು ತೆಗೆಯಲ್ಪಡುವದು.
2 ಕೊರಿಂಥದವರಿಗೆ 3 : 17 (KNV)
ಕರ್ತನು ಆ ಆತ್ಮನೇ ಆಗಿದ್ದಾನೆ; ಕರ್ತನ ಆತ್ಮನು ಯಾರಲ್ಲಿದ್ದಾನೋ ಅವರಿಗೆ ಬಿಡುಗಡೆ ಉಂಟು.
2 ಕೊರಿಂಥದವರಿಗೆ 3 : 18 (KNV)
ಆದರೆ ನಾವೆಲ್ಲರೂ ತೆರೆದ ಮುಖವುಳ್ಳವರಾಗಿ ದರ್ಪಣದಲ್ಲಿ ಕಾಣುವಂತೆ ಕರ್ತನ ಮಹಿಮೆಯನ್ನು ನೋಡುತ್ತಾ ಕರ್ತನ ಆತ್ಮನಿಂದಲೋ ಎಂಬಂತೆ ಅದೇ ಸಾರೂಪ್ಯಕ್ಕೆ ಮಹಿಮೆಯಿಂದ ಮಹಿಮೆಗೆ ಮಾರ್ಪಡುತ್ತೇವೆ.

1 2 3 4 5 6 7 8 9 10 11 12 13 14 15 16 17 18

BG:

Opacity:

Color:


Size:


Font: