2 ಕೊರಿಂಥದವರಿಗೆ 12 : 1 (KNV)
ಹೆಚ್ಚಳಪಡುವದು ಹೇಗೂ ವಿಹಿತವಲ್ಲ ದಿದ್ದರೂ ಅದು ನನಗೆ ಅವಶ್ಯವಾಗಿದೆ; ಆದದರಿಂದ ಕರ್ತನು ನನಗೆ ದಯಪಾಲಿಸಿದ ದರ್ಶನಗಳ ಮತ್ತು ಪ್ರಕಟನೆಗಳ ವಿಷಯವಾಗಿ ಹೇಳುತ್ತೇನೆ.
2 ಕೊರಿಂಥದವರಿಗೆ 12 : 2 (KNV)
ಕ್ರಿಸ್ತನಲ್ಲಿದ್ದ ಒಬ್ಬ ಮನುಷ್ಯನನ್ನು ಬಲ್ಲೆನು, ಅವನು ಹದಿನಾಲ್ಕು ವರುಷಗಳ ಹಿಂದೆ ಮೂರನೇ ಪರಲೋಕಕ್ಕೆ ಒಯ್ಯಲ್ಪಟ್ಟನು. (ಅವನ ದೇಹಸಹಿತನಾಗಿ ಒಯ್ಯಲ್ಪಟ್ಟನೋ ದೇಹರಹಿತನಾಗಿ ಒಯ್ಯಲ್ಪಟ್ಟನೋ ನಾನು ಹೇಳಲಾರೆನು; ದೇವರೇ ಬಲ್ಲನು.)
2 ಕೊರಿಂಥದವರಿಗೆ 12 : 3 (KNV)
ಅಂಥ ಮನುಷ್ಯನೊಬ್ಬನನ್ನು ನಾನು ಬಲ್ಲೆನು; (ಅವನು ದೇಹಸಹಿತನಾಗಿದ್ದನೋ ದೇಹ ರಹಿತನಾಗಿದ್ದನೋ ನಾನು ಹೇಳಲಾರೆನು, ದೇವರೇ ಬಲ್ಲನು;)
2 ಕೊರಿಂಥದವರಿಗೆ 12 : 4 (KNV)
ಅಂಥ ಮನುಷ್ಯನು ಪರದೈಸಕ್ಕೆ ಒಯ್ಯಲ್ಪಟ್ಟು ಮನುಷ್ಯನು ನುಡಿಯಲಶಕ್ಯವಾದ ಆಡಲಾಗದ ಮಾತುಗಳನ್ನು ಕೇಳಿದನು.
2 ಕೊರಿಂಥದವರಿಗೆ 12 : 5 (KNV)
ಅಂಥವನನ್ನು ಕುರಿತು ಹೆಚ್ಚಳಪಡುವೆನು, ನನ್ನನ್ನು ಕುರಿತಾದರೋ ನನ್ನ ನಿರ್ಬಲಾವಸ್ಥೆಗಳಲ್ಲಿಯೇ ಹೊರತು ಬೇರೆ ಹೆಚ್ಚಳ ಪಡುವದಿಲ್ಲ.
2 ಕೊರಿಂಥದವರಿಗೆ 12 : 6 (KNV)
ಹೊಗಳಿಕೊಳ್ಳುವದಕ್ಕೆ ನನಗೆ ಮನಸ್ಸಿ ದ್ದರೂ ನಾನು ಬುದ್ದಿಹೀನನಾಗುವದಿಲ್ಲ. ಯಾಕಂದರೆ ಸತ್ಯವನ್ನೇ ಹೇಳುತ್ತಿರುವೆನು. ಆದರೂ ಯಾವನೂ ನನ್ನಲ್ಲಿ ಕಾಣುವದಕ್ಕಿಂತಲೂ ನನ್ನಿಂದ ಕೇಳುವದ ಕ್ಕಿಂತಲೂ ಹೆಚ್ಚಾಗಿ ನನ್ನನ್ನು ಕುರಿತು ಎಣಿಸದಂತೆ ನಾನು ಮೌನವಾಗಿರುವೆನು;
2 ಕೊರಿಂಥದವರಿಗೆ 12 : 7 (KNV)
ಇದಲ್ಲದೆ ಹೇರಳವಾದ ಪ್ರಕಟಣೆಗಳ ಮೂಲಕ ನಾನು ಮಿತಿವಿಾರಿ ಹೆಚ್ಚಿಸಿ ಕೊಳ್ಳಬಾರದೆಂದು ನನ್ನನ್ನು ಗುದ್ದುವದಕ್ಕಾಗಿ ಸೈತಾನನ ದೂತನಂತೆ ನನ್ನ ಶರೀರದಲ್ಲಿ ಒಂದು ಮುಳ್ಳು ನನಗೆ ಕೊಡಲ್ಪಟ್ಟಿದೆ; ಹೀಗೆ ನಾನು ಮಿತಿವಿಾರಿ ಹೆಚ್ಚಿಸಿ ಕೊಳ್ಳಲಾರದಂತೆ ಇದಾಯಿತು.
2 ಕೊರಿಂಥದವರಿಗೆ 12 : 8 (KNV)
ಈ ವಿಷಯದಲ್ಲಿ ಅದು ನನ್ನನ್ನು ಬಿಟ್ಟುಹೋಗಬೇಕೆಂದು ಮೂರು ಸಾರಿ ಕರ್ತನನ್ನು ಬೇಡಿಕೊಂಡೆನು.
2 ಕೊರಿಂಥದವರಿಗೆ 12 : 9 (KNV)
ಅದಕ್ಕಾತನು--ನನ್ನ ಕೃಪೆಯೇ ನಿನಗೆ ಸಾಕು; ಬಲಹೀನತೆಯಲ್ಲಿಯೇ ನನ್ನ ಬಲವು ಪರಿಪೂರ್ಣವಾಗುತ್ತದೆ ಎಂದು ನನಗೆ ಹೇಳಿದನು. ಹೀಗಿರಲಾಗಿ ಕ್ರಿಸ್ತನ ಬಲವು ನನ್ನಲ್ಲಿ ನೆಲೆಸಿ ಕೊಂಡಿರಬೇಕೆಂದು ನನಗುಂಟಾಗುವ ನಿರ್ಬಲಾ ವಸ್ಥೆಗಳ ವಿಷಯದಲ್ಲಿಯೇ ಬಹು ಸಂತೋಷವಾಗಿ ಹೆಚ್ಚಳಪಡುವೆನು.
2 ಕೊರಿಂಥದವರಿಗೆ 12 : 10 (KNV)
ಆದದರಿಂದ ನಾನು ಕ್ರಿಸ್ತನ ನಿಮಿತ್ತ ನಿರ್ಬಲಾವಸ್ಥೆಗಳಲ್ಲಿ ಅವಮಾನಗಳಲ್ಲಿ ಕೊರತೆ ಗಳಲ್ಲಿ ಹಿಂಸೆಗಳಲ್ಲಿ ಇಕ್ಕಟ್ಟುಗಳಲ್ಲಿ ಸಂತೋಷವಾಗಿ ದ್ದೇನೆ; ಯಾಕಂದರೆ ನಾನು ಯಾವಾಗ ನಿರ್ಬಲ ನಾಗಿದ್ದೇನೋ ಅವಾಗಲೇ ಬಲವುಳ್ಳವನಾಗಿದ್ದೇನೆ.
2 ಕೊರಿಂಥದವರಿಗೆ 12 : 11 (KNV)
ನಾನು ಹೀಗೆ ಹೊಗಳಿಕೊಳ್ಳುವದರಲ್ಲಿ ಬುದ್ಧಿಹೀನ ನಾದೆನು; ಅದಕ್ಕೆ ನೀವೇ ನನ್ನನ್ನು ಬಲವಂತ ಮಾಡಿದಿರಿ. ನಿಮ್ಮಿಂದಲೇ ನನಗೆ ಹೊಗಳಿಕೆಯು ಉಂಟಾಗಬೇಕಾಗಿತ್ತು; ಯಾಕಂದರೆ ನಾನು ಏನೂ ಅಲ್ಲದವನಾದರೂ ಅತಿಶ್ರೇಷ್ಠರಾದ ಅಪೊಸ್ತಲರಿಗಿಂತ ಯಾವದರಲ್ಲಿಯೂ ನಾನು ಕಡಿಮೆಯಾದವನಲ್ಲ.
2 ಕೊರಿಂಥದವರಿಗೆ 12 : 12 (KNV)
ಎಲ್ಲಾ ತಾಳ್ಮೆಯಲ್ಲಿಯೂ ಸೂಚಕಕಾರ್ಯಗಳನ್ನು ಅದ್ಭುತಗಳನ್ನು ಮಹತ್ಕಾರ್ಯಗಳನ್ನು ನಡಿಸಿದ್ದ ರಲ್ಲಿಯೂ ಅಪೊಸ್ತಲನಿಗೆ ಇರತಕ್ಕ ಲಕ್ಷಣಗಳು ನಿಜ ವಾಗಿ ನಿಮ್ಮ ಮಧ್ಯದಲ್ಲಿ ತೋರಿದವು.
2 ಕೊರಿಂಥದವರಿಗೆ 12 : 13 (KNV)
ಭಾರವನ್ನು ನಾನು ನಿಮ್ಮ ಮೇಲೆ ಹಾಕಲಿಲ್ಲವೆಂಬ ಒಂದೇ ವಿಷಯದಲ್ಲಿ ಹೊರತು ಇನ್ನಾವ ವಿಷಯ ದಲ್ಲಿಯೂ ನಿಮ್ಮನ್ನು ಮಿಕ್ಕಾದ ಸಭೆಗಳವರಿಗಿಂತ ಕಡಿಮೆ ಮಾಡಲಿಲ್ಲವಲ್ಲಾ; ನಾನು ಮಾಡಿದ ಈ ಅನ್ಯಾಯವನ್ನು ಕ್ಷಮಿಸಿರಿ.
2 ಕೊರಿಂಥದವರಿಗೆ 12 : 14 (KNV)
ಇಗೋ, ನಾನು ನಿಮ್ಮ ಬಳಿಗೆ ಬರುವದಕ್ಕೆ ಸಿದ್ಧವಾಗಿರುವದು ಇದು ಮೂರನೆಯ ಸಾರಿ; ನಾನು ನಿಮಗೆ ಭಾರವಾಗಿ ರುವದಿಲ್ಲ; ನಾನು ನಿಮ್ಮ ಸೊತ್ತನು ಆಶಿಸದೆ ನಿಮ್ಮನ್ನೇ ಆಶಿಸುತ್ತೇನೆ. ಯಾಕಂದರೆ ಮಕ್ಕಳು ತಂದೆತಾಯಿ ಗಳಿಗೋಸ್ಕರ ಆಸ್ತಿಯನ್ನು ಕೂಡಿಸಿಡುವದು ತಕ್ಕದ್ದಲ್ಲ, ತಂದೆತಾಯಿಗಳು ಮಕ
2 ಕೊರಿಂಥದವರಿಗೆ 12 : 15 (KNV)
ನಾನಂತೂ ನನಗಿರುವದನ್ನು ನಿಮಗೋಸ್ಕರ ಅತಿ ಸಂತೋಷದಿಂದ ವೆಚ್ಚಮಾಡುತ್ತೇನೆ, ನನ್ನನ್ನೇ ವೆಚ್ಚ ಮಾಡಿಕೊಳ್ಳುತ್ತೇನೆ. ನಾನು ನಿಮ್ಮನ್ನು ಹೆಚ್ಚಾಗಿ ಪ್ರೀತಿಸಿದರೆ ನೀವು ನನ್ನನ್ನು ಕಡಿಮೆಯಾಗಿ ಪ್ರೀತಿಸುತ್ತೀರಿ.
2 ಕೊರಿಂಥದವರಿಗೆ 12 : 16 (KNV)
ಅದಿರಲಿ, ನಾನು ನಿಮಗೆ ಭಾರವಿಲ್ಲದ ವನಾಗಿದ್ದಾಗ್ಯೂ ಯುಕ್ತಿಯುಳ್ಳವನಾಗಿ ನಾನು ನಿಮ್ಮನ್ನು ಉಪಾಯದಿಂದ ಹಿಡಿದೆನು.
2 ಕೊರಿಂಥದವರಿಗೆ 12 : 17 (KNV)
ನಿಮ್ಮ ಬಳಿಗೆ ಕಳುಹಿಸಿದವರಲ್ಲಿ ಯಾವನ ಮೂಲಕವಾಗಿಯಾಗಲಿ ನಿಮ್ಮಿಂದ ನಾನು ಲಾಭ ಪಡೆದುಕೊಂಡೆನೋ?
2 ಕೊರಿಂಥದವರಿಗೆ 12 : 18 (KNV)
ನಾನು ತೀತನನ್ನು ಅಪೇಕ್ಷಿಸಿ ಅವನ ಜೊತೆಯಲ್ಲಿ ಒಬ್ಬ ಸಹೋದರನನ್ನು ಕಳುಹಿಸಿಕೊಟ್ಟೆನು; ತೀತನು ನಿಮ್ಮಿಂದ ಏನಾದರೂ ಲಾಭವನ್ನು ಪಡೆದು ಕೊಂಡನೋ? ನಾವಿಬ್ಬರೂ ಒಂದೇ ಆತ್ಮನಿಂದ ನಡೆಯಲಿಲ್ಲವೋ? ನಾವು ಒಂದೇ ತರವಾದ ಹೆಜ್ಜೆ ಜಾಡಿನಲ್ಲಿ ನಡೆಯಲಿಲ್ಲವೋ?
2 ಕೊರಿಂಥದವರಿಗೆ 12 : 19 (KNV)
ನಾವು ತಪ್ಪಿಲ್ಲದವರೆಂದು ನಿಮಗೆ ಹೇಳುತ್ತೇ ವೆಂದು ನೆನಸುತ್ತೀರೋ? ದೇವರ ಸನ್ನಿಧಾನದಲ್ಲಿಯೇ ನಾವು ಕ್ರಿಸ್ತನಲ್ಲಿದ್ದು ಮಾತನಾಡುವವರಾಗಿದ್ದೇವೆ. ಅತಿ ಪ್ರಿಯರೇ, ನಾವು ಮಾಡುವದನ್ನೆಲ್ಲಾ ನಿಮ್ಮ ಭಕ್ತಿವೃದ್ದಿಗೋಸ್ಕರವೇ ಮಾಡುತ್ತೇವೆ.
2 ಕೊರಿಂಥದವರಿಗೆ 12 : 20 (KNV)
ನಾನು ಬಂದಾಗ ಒಂದು ವೇಳೆ ನೀವು ನನ್ನ ಇಷ್ಟದ ಪ್ರಕಾರ ಇರುವದಿಲ್ಲವೇನೋ, ನಾನು ನಿಮ್ಮ ಇಷ್ಟದ ಪ್ರಕಾರ ತೋರುವದಿಲ್ಲವೇನೋ, ಒಂದು ವೇಳೆ ನಿಮ್ಮಲ್ಲಿ ವಾಗ್ವಾದಗಳು ಹೊಟ್ಟೆಕಿಚ್ಚು ಕೋಪ ಜಗಳ ಚಾಡಿ ಹೇಳುವದು ಕಿವಿಯೂದುವದು ಉಬ್ಬಿಕೊಳ್ಳುವದು ಕಲಹ ಎಬ್ಬಿಸುವದು ಇವುಗಳು ಕಾಣಬ
2 ಕೊರಿಂಥದವರಿಗೆ 12 : 21 (KNV)
ಇದಲ್ಲದೆ ನಾನು ತಿರಿಗಿ ಬಂದಾಗ ನಿಮ್ಮ ಮಧ್ಯದಲ್ಲಿ ನಾನು ಕುಂದಿಹೋಗು ವಂತೆ ನನ್ನ ದೇವರು ಮಾಡಾನೆಂತಲೂ ಅಶುದ್ಧತೆ ಹಾದರತನ ಬಂಡುತನಗಳನ್ನು ನಡಿಸಿ ಪಶ್ಚಾತ್ತಾಪ ಪಡದೆ ಆಗಲೇ ಪಾಪ ಮಾಡಿದ ಅನೇಕರ ವಿಷಯವಾಗಿ ನಾನು ವ್ಯಥೆಪಡಬೇಕಾದೀತೆಂತಲೂ ನನಗೆ ಭಯವುಂಟು.

1 2 3 4 5 6 7 8 9 10 11 12 13 14 15 16 17 18 19 20 21