2 ಕೊರಿಂಥದವರಿಗೆ 11 : 1 (KNV)
ನನ್ನ ಬುದ್ಧಿಹೀನತೆಯನ್ನು ನೀವು ಸ್ವಲ್ಪ ಮಟ್ಟಿಗೆ ಸಹಿಸಿಕೊಳ್ಳಬೇಕೆಂದು ನಾನು ಅಪೇಕ್ಷಿಸುತ್ತೇನೆ; ನಿಜವಾಗಿಯೂ ನನ್ನನ್ನು ಸಹಿಸಿ ಕೊಳ್ಳಿರಿ;
2 ಕೊರಿಂಥದವರಿಗೆ 11 : 2 (KNV)
ದೈವಾಸಕ್ತಿಯಿಂದಲೇ ನಾನು ನಿಮ್ಮ ವಿಷಯದಲ್ಲಿ ಆಸಕ್ತನಾಗಿದ್ದೇನೆ; ನಿಮ್ಮನ್ನು ಕ್ರಿಸ್ತನೆಂಬ ಒಬ್ಬನೇ ಪುರುಷನಿಗೆ ಶುದ್ದ ಕನ್ಯೆಯಾಗಿ ಒಪ್ಪಿಸಬೇಕೆಂದು ನಿಮ್ಮನ್ನು ಆತನಿಗೆ ನಿಶ್ಚಯ ಮಾಡಿದೆನಲ್ಲಾ.
2 ಕೊರಿಂಥದವರಿಗೆ 11 : 3 (KNV)
ಆದರೆ ಹವ್ವಳು ಸರ್ಪದ ಕುಯುಕ್ತಿಗೆ ಒಳಬಿದ್ದು ಹೇಗೆ ಮೋಸ ಹೋದಳೋ ಹಾಗೆಯೇ ನಿಮ್ಮ ಮನಸ್ಸುಗಳು ಕ್ರಿಸ್ತನ ವಿಷಯದಲ್ಲಿರಬೇಕಾದ ಸರಳತೆಯನ್ನು ಬಿಟ್ಟು ಕೆಟ್ಟು ಹೋದೀತೆಂದು ನನಗೆ ಭಯವುಂಟು.
2 ಕೊರಿಂಥದವರಿಗೆ 11 : 4 (KNV)
ಯಾಕಂದರೆ ನಾವು ಸಾರದಿದ್ದ ಬೇರೊಬ್ಬ ಯೇಸುವನ್ನು ನಿಮ್ಮ ಬಳಿಗೆ ಬರುವವನು ಪ್ರಕಟಿಸುವಾಗಲೂ ನೀವು ಹೊಂದದೆ ಇದ್ದ ಬೇರೊಂದು ಆತ್ಮವನ್ನು ಹೊಂದುವಾಗಲೂ ಅಂಗೀಕರಿಸದಿದ್ದ ಬೇರೊಂದು ಸುವಾರ್ತೆಯನ್ನು ಸ್ವೀಕರಿಸುವಾಗಲೂ ನೀವು ಚೆನ್ನಾಗಿ ಸಹಿಸಿಕೊಳ್ಳು ತ್ತಿದ್ದೀರಿ.
2 ಕೊರಿಂಥದವರಿಗೆ 11 : 5 (KNV)
ಅತಿ ಶ್ರೇಷ್ಠರಾದ ಅಪೊಸ್ತಲರೆನಿಸಿಕೊಳ್ಳು ವವರಿಗಿಂತ ನಾನು ಒಂದರಲ್ಲಾದರೂ ಕಡಿಮೆಯಾದ ವನಲ್ಲವೆಂದು ಭಾವಿಸುತ್ತೇನೆ.
2 ಕೊರಿಂಥದವರಿಗೆ 11 : 6 (KNV)
ನಾನು ಮಾತನಾಡು ವದರಲ್ಲಿ ಒರಟಾಗಿದ್ದರೂ ಜ್ಞಾನದಲ್ಲಿ ಅಲ್ಲ, ಎಲ್ಲವು ಗಳಲ್ಲಿ ನಿಮ್ಮ ಮಧ್ಯದಲ್ಲಿ ನಾವು ನಮ್ಮನ್ನು ತೋರ್ಪಡಿಸಿದ್ದೇವೆ.
2 ಕೊರಿಂಥದವರಿಗೆ 11 : 7 (KNV)
ನೀವು ಹೆಚ್ಚಿಸಲ್ಪಡಬೇಕೆಂದು ನನ್ನನ್ನು ನಾನೇ ತಗ್ಗಿಸಿಕೊಂಡು ದೇವರ ಸುವಾರ್ತೆಯನ್ನು ನಿಮಗೆ ಉಚಿತವಾಗಿ ಸಾರಿದ್ದು ಅಪರಾಧವೋ?
2 ಕೊರಿಂಥದವರಿಗೆ 11 : 8 (KNV)
ನಿಮ್ಮ ಸೇವೆ ಮಾಡುವದಕ್ಕೋಸ್ಕರ ನಾನು ಇತರ ಸಭೆಗಳಿಂದ ಸಂಬಳ ತೆಗೆದುಕೊಂಡು ಅವುಗಳನ್ನು ಸುಲುಕೊಂಡೆನು.
2 ಕೊರಿಂಥದವರಿಗೆ 11 : 9 (KNV)
ನಾನು ನಿಮ್ಮಲ್ಲಿದ್ದು ಕೊರತೆಯುಳ್ಳವನಾಗಿದ್ದಾಗ ಯಾರ ಮೇಲೆಯೂ ಭಾರಹಾಕಲಿಲ್ಲ; ಮಕೆದೋನ್ಯ ದಿಂದ ಬಂದ ಸಹೋದರರು ನನಗೆ ಬೇಕಾದದ್ದೆಲ್ಲವನ್ನು ಕೊಟ್ಟರು; ನಾನು ನಿಮಗೆ ಯಾವದರಲ್ಲಿಯೂ ಭಾರವಾಗಿರಬಾರದೆಂದು ನೋಡಿಕೊಳ್ಳುತ್ತಿದ್ದೆನು, ಇನ್ನು ಮೇಲೆಯೂ ನೋಡಿಕೊಳ್ಳುವೆನು.
2 ಕೊರಿಂಥದವರಿಗೆ 11 : 10 (KNV)
ಕ್ರಿಸ್ತನ ಸತ್ಯವು ನನ್ನಲ್ಲಿರುವದರಿಂದ ಈ ನನ್ನ ಹೊಗಳಿಕೆಯನ್ನು ಅಕಾಯದ ಪ್ರಾಂತ್ಯಗಳಲ್ಲಿ ಒಬ್ಬರೂ ನಿಲ್ಲಿಸಬಾರದು.
2 ಕೊರಿಂಥದವರಿಗೆ 11 : 11 (KNV)
ಯಾಕೆ? ನಿಮ್ಮ ಮೇಲೆ ಪ್ರೀತಿ ಇಲ್ಲದ್ದರಿಂದಲೋ? ದೇವರೇ ಬಲ್ಲನು.
2 ಕೊರಿಂಥದವರಿಗೆ 11 : 12 (KNV)
ಆದರೆ ನನ್ನನ್ನು ನಿಂದಿಸುವದಕ್ಕೆ ಆಸ್ಪದವನ್ನು ಹುಡುಕುವವರಿಗೆ ಯಾವ ಎಡೆಯೂ ಸಿಕ್ಕದಂತೆ ನಾನು ಮಾಡುವದನ್ನು ಇನ್ನು ಮುಂದೆಯೂ ಮಾಡುವೆನು; ಅವರು ಯಾವದರಲ್ಲಿ ಹೊಗಳು ತ್ತಾರೋ ಅದರಲ್ಲಿ ನಮ್ಮಂತೆಯೇ ಕಂಡುಬರಲಿ.
2 ಕೊರಿಂಥದವರಿಗೆ 11 : 13 (KNV)
ಅಂಥವರು ಸುಳ್ಳು ಅಪೊಸ್ತಲರೂ ಮೋಸಗಾರರಾದ ಕೆಲಸದವರೂ ಕ್ರಿಸ್ತನ ಅಪೊಸ್ತಲರಂತೆ ಕಾಣಿಸಿಕೊಳ್ಳು ವದಕ್ಕೆ ತಮ್ಮನ್ನು ತಾವೇ ಮಾರ್ಪಡಿಸಿಕೊಳ್ಳುವವರೂ ಆಗಿದ್ದಾರೆ.
2 ಕೊರಿಂಥದವರಿಗೆ 11 : 14 (KNV)
ಇದೇನೂ ಆಶ್ಚರ್ಯವಲ್ಲ; ಯಾಕಂದರೆ ಸೈತಾನನು ಬೆಳಕಿನ ದೂತನಂತೆ ಕಾಣಿಸಿಕೊಳ್ಳುವ ಹಾಗೆ ತನ್ನನ್ನು ತಾನೇ ಮಾರ್ಪಡಿಸಿಕೊಳ್ಳುತ್ತಾನೆ.
2 ಕೊರಿಂಥದವರಿಗೆ 11 : 15 (KNV)
ಅವನ ಸೇವಕರು ಸಹ ನೀತಿಗೆ ಸೇವಕರಾಗಿ ಕಾಣಿಸಿಕೊಳ್ಳುವದಕ್ಕೆ ಮಾರ್ಪಡಿಸಿಕೊಳ್ಳುವದು ದೊಡ್ಡ ದಲ್ಲ. ಅವರ ಅಂತ್ಯವು ಅವರ ಕೃತ್ಯಗಳಿಗೆ ತಕ್ಕ ಹಾಗೆಯೇ ಆಗುವದು.
2 ಕೊರಿಂಥದವರಿಗೆ 11 : 16 (KNV)
ನನ್ನನ್ನು ಬುದ್ಧಿಹೀನನೆಂದು ಯಾರೂ ನೆನಸಬಾರ ದೆಂದು ತಿರಿಗಿ ನಾನು ಹೇಳುತ್ತೇನೆ ಹಾಗೆ ನೆನಸಿದರೂ ನನ್ನನ್ನು ಬುದ್ಧಿಹೀನನಾಗಿಯಾದರೂ ಸೇರಿಸಿಕೊಳ್ಳಿರಿ; ಯಾಕಂದರೆ ನಾನು ಸಹ ಅಲ್ಪ ಸ್ವಲ್ಪ ಹೊಗಳಿಕೊಳ್ಳ ಬೇಕೆಂದಿದ್ದೇನೆ.
2 ಕೊರಿಂಥದವರಿಗೆ 11 : 17 (KNV)
ನಾನು ಈಗ ಆಡುವ ಮಾತುಗಳನ್ನು ಕರ್ತನ ಮಾತಿನ ಪ್ರಕಾರ ಹೇಳದೆ ಭರವಸದಿಂದ ಹೊಗಳಿಕೊಳ್ಳುವ ಬುದ್ಧಿ ಹೀನನಂತೆ ಆಡುತ್ತೇನೆ.
2 ಕೊರಿಂಥದವರಿಗೆ 11 : 18 (KNV)
ಅನೇಕರು ಶಾರೀರಿಕ ರೀತಿಯಲ್ಲಿ ಹೊಗಳಿಕೊಳ್ಳು ವದರಿಂದ ನಾನೂ ಹೊಗಳಿಕೊಳ್ಳುತ್ತೇನೆ.
2 ಕೊರಿಂಥದವರಿಗೆ 11 : 19 (KNV)
ನೀವು ಬುದ್ಧಿವಂತರಾಗಿದ್ದು ಬುದ್ಧಿಹೀನರನ್ನು ಸಂತೋಷದಿಂದ ಸಹಿಸಿಕೊಳ್ಳುತ್ತೀರಲ್ಲಾ.
2 ಕೊರಿಂಥದವರಿಗೆ 11 : 20 (KNV)
ಒಬ್ಬನು ನಿಮ್ಮನ್ನು ತನಗೆ ವಶಮಾಡಿಕೊಂಡರೂ ಒಬ್ಬನು ನಿಮ್ಮನ್ನು ನುಂಗಿ ಬಿಟ್ಟರೂ ಒಬ್ಬನು ನಿಮ್ಮನ್ನು ಮರುಳುಗೊಳಿಸಿ ಹಿಡಿದರೂ ಒಬ್ಬನು ತನ್ನನ್ನು ಹೆಚ್ಚಿಸಿಕೊಂಡರೂ ಒಬ್ಬನು ನಿಮ್ಮ ಮುಖದ ಮೇಲೆ ಹೊಡೆದರೂ ನೀವು ಸಹಿಸಿಕೊಳ್ಳುತ್ತೀರಲ್ಲಾ.
2 ಕೊರಿಂಥದವರಿಗೆ 11 : 21 (KNV)
ನಾವು ಬಲವಿಲ್ಲದವರೋ ಎಂಬಂತೆ ಅವ ಮಾನದ ವಿಷಯವಾಗಿ ನಾನು ಮಾತನಾಡುತ್ತೇನೆ. ಹೇಗಿದ್ದರೂ ಯಾವನಾದರೂ ಧೈರ್ಯವುಳ್ಳವ ನಾಗಿದ್ದರೆ (ನಾನು ಬುದ್ಧಿಹೀನನಂತೆ ಮಾತ ನಾಡುತ್ತೇನೆ) ನಾನು ಸಹ ಧೈರ್ಯವುಳ್ಳವನಾಗಿದ್ದೇನೆ.
2 ಕೊರಿಂಥದವರಿಗೆ 11 : 22 (KNV)
ಅವರು ಇಬ್ರಿಯರೋ? ನಾನೂ ಇಬ್ರಿಯನು; ಅವರು ಇಸ್ರಾಯೇಲ್ಯರೊ? ನಾನೂ ಇಸ್ರಾಯೇ ಲ್ಯನು; ಅವರು ಅಬ್ರಹಾಮನ ವಂಶದವರೋ? ನಾನೂ ಅದೇ ವಂಶದವನು;
2 ಕೊರಿಂಥದವರಿಗೆ 11 : 23 (KNV)
ಅವರು ಕ್ರಿಸ್ತನ ಸೇವಕರೋ? (ನಾನು ಬುದ್ಧಿಹೀನನಂತೆ ಮಾತನಾಡು ತ್ತೇನೆ) ಅವರಿಗಿಂತ ನಾನು ಹೆಚ್ಚಾಗಿ ಸೇವೆ ಮಾಡುವವ ನಾಗಿದ್ದೇನೆ; ಹೆಚ್ಚಾಗಿ ಪ್ರಯಾಸಪಟ್ಟೆನು. ಮಿತಿವಿಾರಿ ಪೆಟ್ಟುಗಳನ್ನು ತಿಂದೆನು; ಹೆಚ್ಚಾಗಿ ಸೆರೆಮನೆಗಳಲ್ಲಿ ಬಿದ್ದೆನು; ಅನೇಕ ಸಾರಿ ಮರಣಗಳಲ್ಲಿ ಸಿಕ್ಕಿಕೊಂಡೆನು.
2 ಕೊರಿಂಥದವರಿಗೆ 11 : 24 (KNV)
ಐದು ಸಾರಿ ಯೆಹೂದ್ಯರಿಂದ ನನಗೆ ಒಂದು ಕಡಿಮೆ ನಾಲ್ವತ್ತು ಏಟುಗಳು ಬಿದ್ದವು;
2 ಕೊರಿಂಥದವರಿಗೆ 11 : 25 (KNV)
ನಾನು ಮೂರು ಸಾರಿ ಚಡಿಗಳಿಂದ ಹೊಡಿಸಿಕೊಂಡೆನು. ಒಂದು ಸಾರಿ ನನ್ನ ಮೇಲೆ (ಕೊಲ್ಲುವದಕ್ಕೆ) ಕಲ್ಲೆಸೆದರು; ಮೂರು ಸಾರಿ ನಾನಿದ್ದ ಹಡಗು ಒಡೆದುಹೋಯಿತು; ಒಂದು ರಾತ್ರಿ ಒಂದು ಹಗಲು ಸಮುದ್ರದಲ್ಲಿ ಇದ್ದೆನು.
2 ಕೊರಿಂಥದವರಿಗೆ 11 : 26 (KNV)
ಎಷ್ಟೋ ಪ್ರಯಾಣಗಳನ್ನು ಮಾಡಿದೆನು; ನೀರಿನ ಅಪಾಯಗಳು ಕಳ್ಳರ ಅಪಾಯಗಳೂ ಸ್ವಂತ ಜನರಿಂದ ಅಪಾಯಗಳೂ ಅನ್ಯಜನರಿಂದ ಅಪಾಯಗಳೂ ಪಟ್ಟಣದಲ್ಲಿ ಅಪಾಯಗಳೂ ಕಾಡಿನಲ್ಲಿ ಅಪಾಯ ಗಳೂ ಸಮುದ್ರದಲ್ಲಿ ಅಪಾಯಗಳೂ ಸುಳ್ಳು ಸಹೋ ದರರೊಳಗೆ ಇರುವಾಗ ಅಪಾಯಗಳೂ ನನಗೆ ಸಂಭವಿಸಿದವು.
2 ಕೊರಿಂಥದವರಿಗೆ 11 : 27 (KNV)
ಪ್ರಯಾಸ ಪರಿಶ್ರಮಗಳಿಂದ ಆನೇಕ ಸಾರಿ ನಿದ್ದೆಗೆಟ್ಟು ಹಸಿವೆ ಬಾಯಾರಿಕೆಗಳನ್ನ ನುಭವಿಸಿ ಅನೇಕ ಸಾರಿ ಉಪವಾಸವಾಗಿಯೂ ಚಳಿಯಲ್ಲಿಯೂ ವಸ್ತ್ರವಿಲ್ಲದೆಯೂ ಇದ್ದು ಆತನನ್ನು ಸೇವಿಸಿದ್ದೇನೆ.
2 ಕೊರಿಂಥದವರಿಗೆ 11 : 28 (KNV)
ಇನ್ನೂ ಬೇರೆ ಹೊರಗಿನವುಗಳಲ್ಲದೆ ಎಲ್ಲಾ ಸಭೆಗಳ ವಿಷಯವಾದ ಚಿಂತೆಯನ್ನು ಪ್ರತಿ ದಿನವೂ ನಾನು ಹೊರುತ್ತಿದ್ದೇನೆ.
2 ಕೊರಿಂಥದವರಿಗೆ 11 : 29 (KNV)
ಯಾರಾದರೂ ಬಲವಿಲ್ಲದವನಾದರೆ ನಾನು ಬಲವಿಲ್ಲದವನಾಗದೆ ಇರುವೆನೋ? ಯಾರಾದರೂ ಮುಗ್ಗರಿಸಿದರೆ ನಾನು ತಾಪಪಡದೆ ಇರುವೆನೋ?
2 ಕೊರಿಂಥದವರಿಗೆ 11 : 30 (KNV)
ನಾನು ಹೆಚ್ಚಳಪಡಲೇಬೇಕಾದರೆ ನನ್ನ ಬಲ ಹೀನತೆಗಳಲ್ಲಿ ಹೆಚ್ಚಳಪಡುವೆನು.
2 ಕೊರಿಂಥದವರಿಗೆ 11 : 31 (KNV)
ನಾನು ಸುಳ್ಳಾಡು ವದಿಲ್ಲವೆಂದು ನಮ್ಮ ಕರ್ತನಾದ ಯೇಸುಕ್ರಿಸ್ತನ ತಂದೆಯೂ ನಿರಂತರ ಸ್ತುತಿ ಹೊಂದತಕ್ಕವನೂ ಆಗಿರುವ ದೇವರೇ ಬಲ್ಲನು.
2 ಕೊರಿಂಥದವರಿಗೆ 11 : 32 (KNV)
ದಮಸ್ಕದಲ್ಲಿ ಅರಸನಾದ ಅರೇತನ ಅಧೀನದಲ್ಲಿದ್ದ ಅಧಿಪತಿಯು ನನ್ನನ್ನು ಹಿಡಿಯಬೇಕೆಂದು ದಮಸ್ಕದವರ ಪಟ್ಟಣವನ್ನು ಸೈನ್ಯದೊಂದಿಗೆ ಕಾಯುತ್ತಿದ್ದನು.
2 ಕೊರಿಂಥದವರಿಗೆ 11 : 33 (KNV)
ಆಗ ನಾನು ಒಂದು ಕಲ್ಲಿಯಲ್ಲಿ ಕೂತು ಗೋಡೆಯಲ್ಲಿದ್ದ ಕಿಟಕಿ ಯೊಳಗಿಂದ ಇಳಿಸಲ್ಪಟ್ಟು ಅವನ ಕೈಯಿಂದ ತಪ್ಪಿಸಿಕೊಂಡೆನು.
❮
❯