2 ಪೂರ್ವಕಾಲವೃತ್ತಾ 7 : 1 (KNV)
ಸೊಲೊಮೋನನು ಪ್ರಾರ್ಥಿಸಿ ತೀರಿಸಿದಾಗ ಬೆಂಕಿಯು ಆಕಾಶದಿಂದ ಇಳಿದು ದಹನ ಬಲಿಗಳನ್ನೆಲ್ಲಾ ದಹಿಸಿಬಿಟ್ಟಿತು.
2 ಪೂರ್ವಕಾಲವೃತ್ತಾ 7 : 2 (KNV)
ಮಹಿಮೆಯು ಆಲಯವನ್ನು ತುಂಬಿತು. ಕರ್ತನ ಮಹಿಮೆಯು ಕರ್ತನ ಆಲಯವನ್ನು ತುಂಬಿದ್ದರಿಂದ ಯಾಜಕರು ಕರ್ತನ ಮನೆಯಲ್ಲಿ ಹೋಗಲಾರದೆ ಇದ್ದರು.
2 ಪೂರ್ವಕಾಲವೃತ್ತಾ 7 : 3 (KNV)
ಇಸ್ರಾಯೇ ಲಿನ ಮಕ್ಕಳೆಲ್ಲರೂ ಬೆಂಕಿಯು ಇಳಿದದ್ದನ್ನು ಮನೆಯ ಮೇಲೆ ಇರುವ ಕರ್ತನ ಮಹಿಮೆಯನ್ನು ಕಂಡಾಗ ನೆಲಕ್ಕೆ ತಮ್ಮ ಮುಖಗಳನ್ನು ಬಾಗಿಸಿ ಆರಾಧಿಸಿ ಕರ್ತ ನನ್ನು ಕೊಂಡಾಡಿ--ಆತನು ಒಳ್ಳೆಯವನು, ಆತನ ಕೃಪೆಯು ಯುಗಯುಗಕ್ಕೂ ಇರುವದು ಎಂದು ಹೇಳಿ ದರು.
2 ಪೂರ್ವಕಾಲವೃತ್ತಾ 7 : 4 (KNV)
ಆಗ ಅರಸನೂ ಸಮಸ್ತ ಜನರೂ ಕರ್ತ ನಿಗೆ ಬಲಿಗಳನ್ನು ಅರ್ಪಿಸಿದರು.
2 ಪೂರ್ವಕಾಲವೃತ್ತಾ 7 : 5 (KNV)
ಅರಸನಾದ ಸೊಲೊ ಮೋನನು ಇಪ್ಪತ್ತೆರಡು ಸಾವಿರ ಎತ್ತುಗಳನ್ನೂ ಲಕ್ಷದ ಇಪ್ಪತ್ತುಸಾವಿರ ಕುರಿಗಳನ್ನೂ ಬಲಿಯಾಗಿ ಅರ್ಪಿಸಿ ದನು. ಹೀಗೆಯೇ ಅರಸನೂ ಸಮಸ್ತ ಜನರೂ ದೇವರ ಆಲಯವನ್ನು ಪ್ರತಿಷ್ಠೆಮಾಡಿದರು.
2 ಪೂರ್ವಕಾಲವೃತ್ತಾ 7 : 6 (KNV)
ಯಾಜಕರು ತಮ್ಮ ತಮ್ಮ ಸೇವೆಯಲ್ಲಿ ನಿಲ್ಲುತ್ತಿದ್ದರು; ಹಾಗೆಯೇ ದಾವೀ ದನು ತಮ್ಮ ಸೇವೆಗಾಗಿ ಹೊಗಳುತ್ತಾ ಕರ್ತನ ಕೃಪೆಯು ಯುಗಯುಗಕ್ಕೂ ಇರುವದೆಂದು ಅರಸನಾದ ದಾವೀ ದನು ಆತನನ್ನು ಕೊಂಡಾಡುವದಕ್ಕೆ ಮಾಡಿಸಿದ ಕರ್ತನ ಗೀತವಾದ್ಯಗಳನ್ನು ಲೇವಿಯರು ಹಿಡುಕೊಂಡಿದ್ದರು. ಯಾಜಕರು ಅವರ ಮುಂದೆ ತುತೂರಿಗಳನ್ನು ಊದಿ ದರು; ಸಮಸ್ತ ಇಸ್ರಾಯೇಲ್ಯರು ನಿಂತಿದ್ದರು.
2 ಪೂರ್ವಕಾಲವೃತ್ತಾ 7 : 7 (KNV)
ಇದ ಲ್ಲದೆ ಸೊಲೊಮೋನನು ಕರ್ತನ ಆಲಯದ ಮುಂದಿ ರುವ ಮಧ್ಯ ಅಂಗಳವನ್ನು ಪರಿಶುದ್ಧಮಾಡಿದನು; ಯಾಕಂದರೆ ಸೊಲೊಮೋನನು ಮಾಡಿಸಿದ ತಾಮ್ರದ ಪೀಠದ ಮೇಲೆ ದಹನಬಲಿಗಳನ್ನೂ ಕಾಣಿಕೆಗಳನ್ನೂ ಕೊಬ್ಬನ್ನೂ ಇಡುವದಕ್ಕೆ ಸ್ಥಳ ಸಾಲದೆ ಇದ್ದದ್ದರಿಂದ ಅಲ್ಲಿ ಅವನು ದಹನಬಲಿಗಳನ್ನೂ ಸಮಾಧಾನದ ಬಲಿಗಳ ಕೊಬ್ಬನ್ನೂ ಅರ್ಪಿಸಿದನು.
2 ಪೂರ್ವಕಾಲವೃತ್ತಾ 7 : 8 (KNV)
ಅದೇ ಕಾಲ ದಲ್ಲಿ ಸೊಲೊಮೋನನು ಅವನ ಸಂಗಡ ಹಮಾತಿನ ಪ್ರದೇಶ ಮೊದಲುಗೊಂಡು ಐಗುಪ್ತ ನದಿಯ ವರೆಗೆ ಇರುವ ಮಹಾ ಸಭೆಯಾದ ಸಮಸ್ತ ಇಸ್ರಾಯೇಲ್ಯರು ಏಳು ದಿವಸ ಹಬ್ಬವನ್ನು ಮಾಡಿದರು.
2 ಪೂರ್ವಕಾಲವೃತ್ತಾ 7 : 9 (KNV)
ಎಂಟನೇ ದಿವಸದಲ್ಲಿ ಪರಿಶುದ್ಧ ಸಂಘವನ್ನು ಮಾಡಿಕೊಂಡರು; ಬಲಿಪೀಠದ ಪ್ರತಿಷ್ಠೆಯನ್ನೂ ಹಬ್ಬವನ್ನೂ ಏಳು ದಿವಸ ಕೈಕೊಂಡರು;
2 ಪೂರ್ವಕಾಲವೃತ್ತಾ 7 : 10 (KNV)
ಏಳನೇ ತಿಂಗಳಿನ ಇಪ್ಪತ್ತ ಮೂರನೇ ದಿವಸದಲ್ಲಿ ಅವನು ಜನರನ್ನು ತಮ್ಮ ಡೇರೆ ಗಳಿಗೆ ಕಳುಹಿಸಿಬಿಟ್ಟನು. ಕರ್ತನು ದಾವೀದನಿಗೂ ಸೊಲೊಮೋನನಿಗೂ ತನ್ನ ಜನವಾದ ಇಸ್ರಾಯೇ ಲಿಗೂ ಮಾಡಿದ ಉಪಕಾರಕ್ಕೋಸ್ಕರ ಅವರು ಹೃದಯ ದಲ್ಲಿ ಆನಂದವಾಗಿ ಸಂತೋಷಪಡುತ್ತಾ ಹೋದರು.
2 ಪೂರ್ವಕಾಲವೃತ್ತಾ 7 : 11 (KNV)
ಹೀಗೆಯೇ ಸೊಲೊಮೋನನು ಕರ್ತನ ಆಲಯ ವನ್ನೂ ಅರಸನ ಮನೆಯನ್ನೂ ಕಟ್ಟಿಸಿ ಮುಗಿಸಿದನು. ಕರ್ತನ ಆಲಯದಲ್ಲಿಯೂ ತನ್ನ ಮನೆಯಲ್ಲಿಯೂ ಮಾಡಲು ಸೊಲೊಮೋನನ ಹೃದಯದಲ್ಲಿ ಬಂದ ದ್ದನ್ನೆಲ್ಲಾ ಅವನು ಸಫಲವಾಗುವಂತೆ ಸಾಧಿಸಿದನು.
2 ಪೂರ್ವಕಾಲವೃತ್ತಾ 7 : 12 (KNV)
ಕರ್ತನು ರಾತ್ರಿಯಲ್ಲಿ ಸೊಲೊಮೋನನಿಗೆ ಕಾಣಿಸಿ ಕೊಂಡು ಅವನಿಗೆ--ನಾನು ನಿನ್ನ ಪ್ರಾರ್ಥನೆಯನ್ನು ಕೇಳಿ ಬಲಿಯರ್ಪಿಸುವ ಆಲಯವಾಗಿ ನನಗೆ ಈ ಸ್ಥಳವನ್ನು ಆದುಕೊಂಡಿದ್ದೇನೆ.
2 ಪೂರ್ವಕಾಲವೃತ್ತಾ 7 : 13 (KNV)
ಮಳೆ ಇಲ್ಲದ ಹಾಗೆ ನಾನು ಆಕಾಶವನ್ನು ಮುಚ್ಚಿದರೂ ದೇಶವನ್ನು ತಿಂದು ಬಿಡಲು ಮಿಡಿತೆಗಳಿಗೆ ಆಜ್ಞಾಪಿಸಿದರೂ
2 ಪೂರ್ವಕಾಲವೃತ್ತಾ 7 : 14 (KNV)
ಇಲ್ಲವೆ ನನ್ನ ಜನರ ಮಧ್ಯದಲ್ಲಿ ಜಾಡ್ಯವನ್ನು ಕಳುಹಿಸಿದರೂ ನನ್ನ ಹೆಸರಿನಿಂದ ಕರೆಯಲ್ಪಟ್ಟ ನನ್ನ ಜನರು ತಮ್ಮನ್ನು ತಗ್ಗಿಸಿಕೊಂಡು ಪ್ರಾರ್ಥನೆ ಮಾಡಿ ನನ್ನ ಮುಖವನ್ನು ಹುಡುಕಿ ತಮ್ಮ ದುರ್ಮಾರ್ಗಗಳಿಂದ ತಿರುಗಿದರೆ ನಾನು ಆಕಾಶದಿಂದ ಕೇಳಿ ಅವರ ಪಾಪವನ್ನು ಮನ್ನಿಸಿ ಅವರ ದೇಶವನ್ನು ಗುಣಮಾಡುವೆನು.
2 ಪೂರ್ವಕಾಲವೃತ್ತಾ 7 : 15 (KNV)
ಈಗ ಈ ಸ್ಥಳದ ಪ್ರಾರ್ಥನೆಗೆ ನನ್ನ ಕಣ್ಣುಗಳು ತೆರೆದಿರುವವು, ನನ್ನ ಕಿವಿಗಳು ಆಲೈಸುತ್ತಿರುವವು.
2 ಪೂರ್ವಕಾಲವೃತ್ತಾ 7 : 16 (KNV)
ನನ್ನ ಹೆಸರು ಯುಗಯುಗಾಂತರಕ್ಕೂ ಅಲ್ಲಿ ಇರುವ ಹಾಗೆ ಈ ಮನೆಯನ್ನು ಆದುಕೊಂಡು ಪರಿಶುದ್ಧ ಮಾಡಿದ್ದೇನೆ; ನನ್ನ ಕಣ್ಣುಗಳೂ ನನ್ನ ಹೃದಯವೂ ಅಲ್ಲಿ ಯಾವಾಗಲೂ ಇರುವವು.
2 ಪೂರ್ವಕಾಲವೃತ್ತಾ 7 : 17 (KNV)
ನೀನಾದರೋ ನಿನ್ನ ತಂದೆಯಾದ ದಾವೀ ದನು ನಡೆದ ಹಾಗೆ ನೀನೂ ನನ್ನ ಮುಂದೆ ನಡೆದು ನಾನು ನಿನಗೆ ಆಜ್ಞಾಪಿಸಿದ್ದೆಲ್ಲಾದರ ಪ್ರಕಾರ ಮಾಡಿ ನನ್ನ ನಿಯಮಗಳನ್ನೂ ನ್ಯಾಯಗಳನ್ನೂ ಕೈಕೊಂಡರೆ
2 ಪೂರ್ವಕಾಲವೃತ್ತಾ 7 : 18 (KNV)
ಇಸ್ರಾಯೇಲನ್ನು ಆಳುವ ಮನುಷ್ಯನು ನಿನಗೆ ಕೊರತೆ ಯಾಗುವದಿಲ್ಲವೆಂದು ನಿನ್ನ ತಂದೆಯಾದ ದಾವೀದನ ಸಂಗಡ ನಾನು ಮಾಡಿದ ಒಡಂಬಡಿಕೆಯ ಪ್ರಕಾರ ನಿನ್ನ ರಾಜ್ಯದ ಸಿಂಹಾಸನವನ್ನು ಸ್ಥಿರಪಡಿಸುತ್ತೇನೆ.
2 ಪೂರ್ವಕಾಲವೃತ್ತಾ 7 : 19 (KNV)
ಆದರೆ ನೀವು ಹಿಂದಿರುಗಿ ನಾನು ನಿಮ್ಮ ಮುಂದೆ ಇಟ್ಟ ನನ್ನ ಕಟ್ಟಳೆಗಳನ್ನೂ ಆಜ್ಞೆಗಳನ್ನೂ ತೊರೆದು ಅನ್ಯದೇವರುಗಳನ್ನು ಸೇವಿಸಿ ಅವುಗಳಿಗೆ ಅಡ್ಡಬಿದ್ದರೆ
2 ಪೂರ್ವಕಾಲವೃತ್ತಾ 7 : 20 (KNV)
ನಾನು ಅವರಿಗೆ ಕೊಟ್ಟ ನನ್ನ ದೇಶದೊಳಗಿಂದ ಅವರನ್ನು ನಿರ್ಮೂಲ ಮಾಡುವೆನು. ಇದಲ್ಲದೆ ನನ್ನ ಹೆಸರಿಗೋಸ್ಕರ ನಾನು ಪರಿಶುದ್ಧ ಮಾಡಿದ ಈ ಆಲ ಯವನ್ನು ನನ್ನ ಸಮ್ಮುಖದಿಂದ ತಳ್ಳಿ ಅದನ್ನು ಸಮಸ್ತ ಜನಗಳಲ್ಲಿ ಗಾದೆಯಾಗಿಯೂ ಹಾಸ್ಯವಾಗಿಯೂ ಮಾಡುವೆನು.
2 ಪೂರ್ವಕಾಲವೃತ್ತಾ 7 : 21 (KNV)
ಎತ್ತರವಾಗಿರುವ ಈ ಮನೆಯು ಹಾದು ಹೋಗುವ ಪ್ರತಿ ಮನುಷ್ಯನಿಗೆ ಆಶ್ಚರ್ಯ ವಾಗಿರುವದು; ಅವನು ಈ ದೇಶಕ್ಕೂ ಈ ಮನೆಗೂ ಕರ್ತನು ಹೀಗೆ ಯಾಕೆ ಮಾಡಿದನು ಅನ್ನುವನು.
2 ಪೂರ್ವಕಾಲವೃತ್ತಾ 7 : 22 (KNV)
ಅದಕ್ಕೆ ಅವರು ತಂದೆಗಳನ್ನು ಐಗುಪ್ತದೇಶ ದೊಳಗಿಂದ ಬರಮಾಡಿದ ತಮ್ಮ ದೇವರಾದ ಕರ್ತ ನನ್ನು ತೊರೆದು ಅನ್ಯದೇವರುಗಳನ್ನು ಹಿಂಬಾಲಿಸಿ ಅವುಗಳಿಗೆ ಅಡ್ಡಬಿದ್ದು ಸೇವಿಸಿದ್ದರಿಂದ ಆತನು ಈ ಕೇಡೆಲ್ಲಾ ಅವರ ಮೇಲೆ ಬರಮಾಡಿದನು ಎಂದು ಹೇಳುವರು.

1 2 3 4 5 6 7 8 9 10 11 12 13 14 15 16 17 18 19 20 21 22

BG:

Opacity:

Color:


Size:


Font: