2 ಪೂರ್ವಕಾಲವೃತ್ತಾ 15 : 1 (KNV)
ಆಗ ದೇವರ ಆತ್ಮನು ಓದೇದನ ಮಗನಾದ ಅಜರ್ಯನ ಮೇಲೆ ಬಂದದ್ದರಿಂದ ಅವನು ಆಸನನ್ನು ಎದುರುಗೊಳ್ಳಲು ಹೊರಟುಬಂದು ಅವನಿಗೆ--
2 ಪೂರ್ವಕಾಲವೃತ್ತಾ 15 : 2 (KNV)
ಆಸನೇ, ಯೆಹೂದ ಬೆನ್ಯಾವಿಾನನ ಸಮಸ್ತರೇ, ನನ್ನ ಮಾತನ್ನು ಕೇಳಿರಿ. ನೀವು ಕರ್ತನ ಸಂಗಡ ಇರುವ ವರೆಗೂ ಆತನು ನಿಮ್ಮ ಸಂಗಡ ಇರುವನು; ನೀವು ಆತನನ್ನು ಹುಡುಕಿದರೆ ಆತನು ನಿಮಗೆ ಸಿಕ್ಕುವನು;
2 ಪೂರ್ವಕಾಲವೃತ್ತಾ 15 : 3 (KNV)
ಆತನನ್ನು ಬಿಟ್ಟುಬಿಟ್ಟರೆ ಆತನು ನಿಮ್ಮನ್ನು ಬಿಟ್ಟುಬಿಡುವನು ಅಂದನು. ಬಹುಕಾಲ ಇಸ್ರಾಯೇಲ್ಯರು ನಿಜವಾದ ದೇವರಿಲ್ಲದೆ ಬೋಧಿಸುವ ಯಾಜಕನಿಲ್ಲದೆ ನ್ಯಾಯಪ್ರಮಾಣವಿಲ್ಲದೆ ಇದ್ದರು.
2 ಪೂರ್ವಕಾಲವೃತ್ತಾ 15 : 4 (KNV)
ಆದರೆ ಅವರು ತಮ್ಮ ಇಕ್ಕಟ್ಟಿನಲ್ಲಿ ಇಸ್ರಾಯೇಲಿನ ದೇವರಾದ ಕರ್ತನ ಕಡೆಗೆ ತಿರಿಗಿ ಆತನನ್ನು ಹುಡುಕಿ ದಾಗ ಆತನು ಅವರಿಗೆ ಸಿಕ್ಕಿದನು.
2 ಪೂರ್ವಕಾಲವೃತ್ತಾ 15 : 5 (KNV)
ಆ ಕಾಲಗಳಲ್ಲಿ ಹೊರಗೆ ಹೋಗುವವನಿಗೂ ಒಳಗೆ ಬರುವವನಿಗೂ ಸಮಾಧಾನವಿಲ್ಲದೆ ಇತ್ತು; ದೇಶದ ನಿವಾಸಿಗಳು ಬಹಳ ವಾಗಿ ಹೆದರಿದ್ದರು.
2 ಪೂರ್ವಕಾಲವೃತ್ತಾ 15 : 6 (KNV)
ಜನಾಂಗವು ಜನಾಂಗದಿಂದಲೂ ಪಟ್ಟಣವು ಪಟ್ಟಣದಿಂದಲೂ ನಾಶವಾಯಿತು. ಯಾಕಂದರೆ ದೇವರು ಸಕಲ ಇಕ್ಕಟ್ಟುಗಳಿಂದ ಅವ ರನ್ನು ತೊಂದರೆಪಡಿಸಿದನು.
2 ಪೂರ್ವಕಾಲವೃತ್ತಾ 15 : 7 (KNV)
ಆದದರಿಂದ ನೀವು ಬಲವಾಗಿರ್ರಿ; ನಿಮ್ಮ ಕೈಗಳು ಬಲಹೀನವಾಗದೆ ಇರಲಿ;ನಿಮ್ಮ ಕೆಲಸಕ್ಕೆ ಪ್ರತಿಫಲ ಸಿಕ್ಕುವದು ಅಂದನು.
2 ಪೂರ್ವಕಾಲವೃತ್ತಾ 15 : 8 (KNV)
ಆಸನು ಈ ಮಾತುಗಳನ್ನೂ ಪ್ರವಾದಿಯಾದ ಓದೇದನ ಪ್ರವಾದನೆಯನ್ನೂ ಕೇಳಿದಾಗ ಅವನು ಬಲಗೊಂಡು ಯೆಹೂದ ಬೆನ್ಯಾವಿಾನನ ಸಮಸ್ತ ದೇಶದೊಳಗಿಂದಲೂ ಎಫ್ರಾಯಾಮಿನ ಬೆಟ್ಟದಲ್ಲಿ ತಾನು ಹಿಡಿದ ಪಟ್ಟಣಗಳೊಳಗಿಂದಲೂ ಅಸಹ್ಯ ವಿಗ್ರಹಗಳನ್ನು ತೆಗೆದುಹಾಕಿ ಕರ್ತನ ದ್ವಾರಾಂಗಳದ ಮುಂದೆ ಇದ್ದ ಕರ್ತನ ಬಲಿಪೀಠವನ್ನು ನೂತನ ಪಡಿಸಿದನು.
2 ಪೂರ್ವಕಾಲವೃತ್ತಾ 15 : 9 (KNV)
ಇದಲ್ಲದೆ ಅವನು ಯೆಹೂದದ ಬೆನ್ಯಾ ವಿಾನನ ಸಮಸ್ತರನ್ನೂ ಎಫ್ರಾಯಾಮಿನಿಂದಲೂ ಮನಸ್ಸೆಯಿಂದಲೂ ಸಿಮೆಯೋನಿನಿಂದಲೂ ಅವರ ಕಡೆಗೆ ಬಂದ ಅನ್ಯರನ್ನೂ ಕೂಡಿಸಿದನು. ಅವನ ದೇವರಾದ ಕರ್ತನು ಅವನ ಸಂಗಡ ಇದ್ದಾನೆಂದು ಇವರು ಕಂಡು ಇಸ್ರಾಯೇಲಿನೊಳಗಿಂದ ಅನೇಕರು ಅವನ ಕಡೆಗೆ ಹೋದರು.
2 ಪೂರ್ವಕಾಲವೃತ್ತಾ 15 : 10 (KNV)
ಹೀಗೆಯೇ ಆಸನ ಆಳಿಕೆಯ ಹದಿನೈದನೇ ವರುಷದ ಮೂರನೇ ತಿಂಗಳಲ್ಲಿ ಅವರು ಯೆರೂಸಲೇಮಿನಲ್ಲಿ ಕೂಡಿ ಕೊಂಡರು.
2 ಪೂರ್ವಕಾಲವೃತ್ತಾ 15 : 11 (KNV)
ಅದೇ ಕಾಲದಲ್ಲಿ ತಾವು ತಂದ ಕೊಳ್ಳೆಯಿಂದ ಏಳುನೂರು ಎತ್ತುಗಳನ್ನೂ ಏಳು ಸಾವಿರ ಕುರಿಗಳನ್ನೂ ಕರ್ತನಿಗೆ ಬಲಿಅರ್ಪಿಸಿದರು.
2 ಪೂರ್ವಕಾಲವೃತ್ತಾ 15 : 12 (KNV)
ತಮ್ಮ ಪಿತೃಗಳ ದೇವರಾದ ಕರ್ತನನ್ನು ತಮ್ಮ ಪೂರ್ಣಹೃದಯದಿಂದಲೂ ಪೂರ್ಣಪ್ರಾಣದಿಂದ ಲೂ ಹುಡುಕಬೇಕೆಂದೂ
2 ಪೂರ್ವಕಾಲವೃತ್ತಾ 15 : 13 (KNV)
ಯಾವನಾದರೂ ಇಸ್ರಾ ಯೇಲಿನ ದೇವರಾದ ಕರ್ತನನ್ನು ಹುಡುಕದೆ ಹೋದರೆ ಹಿರಿಯನಾದರೂ ಕಿರಿಯನಾದರೂ ಪುರುಷನಾದರೂ ಸ್ತ್ರೀಯಾದರೂ ಸಾಯಬೇಕೆಂದೂ ಒಡಂಬಡಿಕೆಯನ್ನು ಮಾಡಿಕೊಂಡರು.
2 ಪೂರ್ವಕಾಲವೃತ್ತಾ 15 : 14 (KNV)
ಮಹಾಶಬ್ದದಿಂದಲೂ ಆರ್ಭಟ ದಿಂದಲೂ ತುತೂರಿಗಳ ಶಬ್ದದಿಂದಲೂ ಕೊಂಬು ಗಳ ಶಬ್ದದಿಂದಲೂ ಕರ್ತನ ಮುಂದೆ ಆಣೆಯಿಟ್ಟರು.
2 ಪೂರ್ವಕಾಲವೃತ್ತಾ 15 : 15 (KNV)
ಇದಲ್ಲದೆ ಯೆಹೂದದವರೆಲ್ಲರೂ ಪ್ರಮಾಣಕ್ಕೆ ಸಂತೋಷಪಟ್ಟರು. ಅವರು ತಮ್ಮ ಪೂರ್ಣಹೃದಯ ದಿಂದ ಆಣೆ ಇಟ್ಟು ತಮ್ಮ ಪೂರ್ಣ ಇಷ್ಟದಿಂದ ಆತನನ್ನು ಹುಡುಕಲು ಆತನು ಅವರಿಗೆ ಸಿಕ್ಕಿದನು. ಕರ್ತನು ಸುತ್ತಲೂ ಅವರಿಗೆ ವಿಶ್ರಾಂತಿ ಕೊಟ್ಟನು.
2 ಪೂರ್ವಕಾಲವೃತ್ತಾ 15 : 16 (KNV)
ಇದಲ್ಲದೆ ಅರಸನಾಗಿರುವ ಆಸನ ತಾಯಿಯಾದ ಮಾಕಳನ್ನು ಕುರಿತು ಏನಂದರೆ, ಅವಳು ಒಂದು ವಿಗ್ರಹವನ್ನು ಮಾಡಿಸಿ ತೋಪಿನಲ್ಲಿ ಇರಿಸಿದ್ದರಿಂದ ಅವಳನ್ನು ರಾಣಿಯಾಗಿರದ ಹಾಗೆ ತೆಗೆದುಹಾಕಿದನು. ಇದಲ್ಲದೆ ಆಸನು ಅವಳ ವಿಗ್ರಹವನ್ನು ಕಡಿದುಹಾಕಿ ಅದನ್ನು ತುಳಿದು ಕಿದ್ರೋನ್ ಹಳ್ಳದ ಬಳಿಯಲ್ಲಿ ಅದನ್ನು ಸುಟ್ಟುಬಿಟ್ಟನು.
2 ಪೂರ್ವಕಾಲವೃತ್ತಾ 15 : 17 (KNV)
ಇಸ್ರಾಯೇಲಿನೊಳಗಿಂದ ಉನ್ನತ ಸ್ಥಳಗಳು ತೆಗೆದುಹಾಕಲ್ಪಡಲಿಲ್ಲ. ಆದರೂ ಆಸನ ಹೃದಯವು ತನ್ನ ಸಮಸ್ತ ದಿವಸಗಳಲ್ಲಿ ದೋಷ ವಿಲ್ಲದ್ದಾಗಿತ್ತು.
2 ಪೂರ್ವಕಾಲವೃತ್ತಾ 15 : 18 (KNV)
ಅವನು ದೇವರ ಆಲಯದಲ್ಲಿ ತನ್ನ ತಂದೆಯೂ ತಾನೂ ಪರಿಶುದ್ಧ ಮಾಡಿದ ಬೆಳ್ಳಿಯನ್ನೂ ಬಂಗಾರವನ್ನೂ ಪಾತ್ರೆಗಳನ್ನೂ ಸೇರಿಸಿದನು.
2 ಪೂರ್ವಕಾಲವೃತ್ತಾ 15 : 19 (KNV)
ಆಸನ ಆಳ್ವಿಕೆಯಲ್ಲಿ ಮೂವತ್ತೈದನೇ ವರುಷದ ಪರಿಯಂತರ ಯುದ್ಧವಿಲ್ಲದೆ ಇತ್ತು.
❮
❯