2 ಪೂರ್ವಕಾಲವೃತ್ತಾ 11 : 1 (KNV)
ರೆಹಬ್ಬಾಮನು ಯೆರೂಸಲೇಮಿಗೆ ಬಂದ ತರುವಾಯ ಅವನು ತನಗೆ ರಾಜ್ಯವನ್ನು ತಿರಿಗಿ ಬರಮಾಡುವ ಹಾಗೆ ಇಸ್ರಾಯೇಲಿಗೆ ವಿರೋಧವಾಗಿ ಯುದ್ಧಮಾಡಲು ಯೆಹೂದ ಬೆನ್ಯಾ ವಿಾನಿನವರೊಳಗಿಂದ ಯುದ್ಧಮಾಡತಕ್ಕವರಾಗಿರುವ ಆಯಲ್ಪಟ್ಟ ಲಕ್ಷದ ಎಂಭತ್ತು ಸಾವಿರ ಜನ ರನ್ನು ಕೂಡಿಸಿದಾಗ
2 ಪೂರ್ವಕಾಲವೃತ್ತಾ 11 : 2 (KNV)
ಕರ್ತನ ವಾಕ್ಯವು ದೇವರ ಮನುಷ್ಯನಾಗಿರುವ ಶೆಮಾಯನಿಗೆ ಉಂಟಾಯಿತು;
2 ಪೂರ್ವಕಾಲವೃತ್ತಾ 11 : 3 (KNV)
ಏನಂದರೆ -- ನೀನು ಯೆಹೂದದ ಅರಸನಾದ ಸೊಲೊಮೋನನ ಮಗನಾಗಿರುವ ರೆಹಬ್ಬಾಮನಿಗೂ ಯೆಹೂದ ಬೆನ್ಯಾವಿಾನ್ಯರಲ್ಲಿರುವ
2 ಪೂರ್ವಕಾಲವೃತ್ತಾ 11 : 4 (KNV)
ಸಮಸ್ತ ಇಸ್ರಾ ಯೇಲ್ಯರಿಗೂ ಹೇಳಬೇಕಾದದ್ದೇನಂದರೆ--ಕರ್ತನು ಹೀಗೆ ಹೇಳುತ್ತಾನೆ--ನೀವು ನಿಮ್ಮ ಸಹೋದರರಿಗೆ ವಿರೋಧವಾಗಿ ಯುದ್ಧಮಾಡುವದಕ್ಕೆ ಹೋಗ ಬೇಡಿರಿ; ಪ್ರತಿ ಮನುಷ್ಯನು ತನ್ನ ಮನೆಗೆ ಹಿಂತಿ ರುಗಲಿ. ಈ ಕಾರ್ಯವು ನನ್ನಿಂದ ಉಂಟಾಯಿತು ಅಂದನು. ಆದಕಾರಣ ಅವರು ಕರ್ತನ ವಾಕ್ಯವನ್ನು ಕೇಳಿ ಯಾರೊಬ್ಬಾಮನ ಮೇಲೆ ಹೋಗದೆ ಹಿಂತಿರುಗಿದರು.
2 ಪೂರ್ವಕಾಲವೃತ್ತಾ 11 : 5 (KNV)
ರೆಹಬ್ಬಾಮನು ಯೆರೂಸಲೇಮಿನಲ್ಲಿ ವಾಸಮಾಡಿ ಯೆಹೂದದಲ್ಲಿ ಕಾವಲು ಪಟ್ಟಣಗಳನ್ನು ಕಟ್ಟಿಸಿದನು.
2 ಪೂರ್ವಕಾಲವೃತ್ತಾ 11 : 6 (KNV)
ಯಾವವಂದರೆ ಬೇತ್ಲೆಹೇಮ್ ಏತಾಮ್ ತೆಕೋವ
2 ಪೂರ್ವಕಾಲವೃತ್ತಾ 11 : 7 (KNV)
ಬೇತ್ಚೂರ ಸೋಕೋ
2 ಪೂರ್ವಕಾಲವೃತ್ತಾ 11 : 8 (KNV)
ಅದುಲ್ಲಾಮ್ ಗತ್ಊರು ಮಾರೇಷ್
2 ಪೂರ್ವಕಾಲವೃತ್ತಾ 11 : 9 (KNV)
ಜೀಫ್ ಅದೋರೈಮ್ ಲಾಕೀಷ್ ಅಜೇಕ
2 ಪೂರ್ವಕಾಲವೃತ್ತಾ 11 : 10 (KNV)
ಚೋರ್ಗ ಅಯ್ಯಾಲೋನ್ ಹೆಬ್ರೋನ್ ಕಟ್ಟಿಸಿದನು. ಇವು ಯೆಹೂದ ಬೆನ್ಯಾ ವಿಾನ್ ಪ್ರಾಂತ್ಯಗಳಲ್ಲಿ ಕೋಟೆಯುಳ್ಳ ಪಟ್ಟಣ ಗಳಾಗಿವೆ.
2 ಪೂರ್ವಕಾಲವೃತ್ತಾ 11 : 11 (KNV)
ಇದಲ್ಲದೆ ಅವನು ಕೋಟೆಗಳನ್ನು ಬಲ ಪಡಿಸಿ ಅವುಗಳಲ್ಲಿ ನಾಯಕರನ್ನೂ ಆಹಾರ ಎಣ್ಣೆ ದ್ರಾಕ್ಷಾರಸ ಇರುವ ಉಗ್ರಾಣಗಳನ್ನೂ ಇಟ್ಟನು.
2 ಪೂರ್ವಕಾಲವೃತ್ತಾ 11 : 12 (KNV)
ಪ್ರತಿ ಪಟ್ಣಣದಲ್ಲಿ ಖೇಡ್ಯಗಳನ್ನೂ ಈಟಿಗಳನ್ನೂ ಇಟ್ಟು ಯೆಹೂದ ಬೆನ್ಯಾವಿಾನಿನವರು ಅವನ ಕಡೆ ಇದ್ದದ್ದರಿಂದ ಅವುಗಳನ್ನು ಬಹಳ ಭದ್ರಪಡಿಸಿದನು.
2 ಪೂರ್ವಕಾಲವೃತ್ತಾ 11 : 13 (KNV)
ಇದಲ್ಲದೆ ಸಮಸ್ತ ಇಸ್ರಾಯೇಲಿನಲ್ಲಿದ್ದ ಯಾಜ ಕರೂ ಲೇವಿಯರೂ ತಮ್ಮ ಸಮಸ್ತ ಪ್ರಾಂತ್ಯಗಳಿಂದ ಅವನ ಬಳಿಗೆ ಪುನಃ ಬಂದರು.
2 ಪೂರ್ವಕಾಲವೃತ್ತಾ 11 : 14 (KNV)
ಲೇವಿಯರು ಕರ್ತ ನಿಗೆ ಯಾಜಕ ಸೇವೆಮಾಡದ ಹಾಗೆ ಯಾರೊಬ್ಬಾ ಮನೂ ಅವನ ಮಕ್ಕಳೂ ಅವರನ್ನು ತೆಗೆದುಹಾಕಿ ಉನ್ನತ ಸ್ಥಳಗಳಿಗೋಸ್ಕರವೂ
2 ಪೂರ್ವಕಾಲವೃತ್ತಾ 11 : 15 (KNV)
ದೆವ್ವಗಳಿಗೋಸ್ಕರವೂ ಯಾರೊಬ್ಬಾಮನು ಮಾಡಿದ ಹೋರಿಗಳಿ ಗೋಸ್ಕರವೂ ತನಗೆ ಯಾಜಕರನ್ನು ನೇಮಿಸಿದ್ದರಿಂದ ಲೇವಿಯರು ತಮ್ಮ ಉಪನಗರಗಳನ್ನೂ ಸ್ವಾಸ್ತ್ಯಗಳನ್ನೂ ಬಿಟ್ಟು ಬಿಟ್ಟು ಯೆಹೂದಕ್ಕೂ ಯೆರೂಸಲೇಮಿಗೂ ಬಂದರು.
2 ಪೂರ್ವಕಾಲವೃತ್ತಾ 11 : 16 (KNV)
ಇವರ ತರುವಾಯ ಇಸ್ರಾಯೇಲಿನ ಕರ್ತನಾದ ದೇವರನ್ನು ಹುಡುಕಲು ತಮ್ಮ ಹೃದಯ ಗಳನ್ನು ಕೊಟ್ಟು ತಮ್ಮ ಪಿತೃಗಳ ದೇವರಾದ ಕರ್ತನಿಗೆ ಬಲಿ ಅರ್ಪಿಸಲು ಇಸ್ರಾಯೇಲಿನ ಸಮಸ್ತ ಗೋತ್ರ ಗಳಿಂದ ಯೆರೂಸಲೇಮಿಗೆ ಬಂದರು.
2 ಪೂರ್ವಕಾಲವೃತ್ತಾ 11 : 17 (KNV)
ಹೀಗೆಯೇ ಅವರು ಯೆಹೂದ ರಾಜ್ಯವನ್ನು ದೃಢಪಡಿಸಿ ಸೊಲೊ ಮೋನನ ಮಗನಾದ ರೆಹಬ್ಬಾಮನನ್ನು ಮೂರು ವರುಷಗಳ ವರೆಗೂ ಬಲಪಡಿಸಿದರು. ಯಾಕಂದರೆ ಅವರು ಮೂರು ವರುಷಗಳ ವರೆಗೂ ದಾವೀದ ಸೊಲೊಮೋನ ಇವರ ಮಾರ್ಗದಲ್ಲಿ ನಡೆದರು.
2 ಪೂರ್ವಕಾಲವೃತ್ತಾ 11 : 18 (KNV)
ರೆಹಬ್ಬಾಮನು ದಾವೀದನ ಮಗನಾದ ಯೆರೀ ಮೋತನಿಗೆ ಇಷಯನ ಮೊಮ್ಮಗಳೂ ಎಲೀಯಾಬನ ಮಗಳು ಆದ ಅಬೀಹೈಲಳಲ್ಲಿ ಹುಟ್ಟಿದ ಮಹ್ಲತ್ ಎಂಬಾಕೆಯನ್ನು ಹೆಂಡತಿಯನ್ನಾಗಿ ತೆಗೆದುಕೊಂಡನು.
2 ಪೂರ್ವಕಾಲವೃತ್ತಾ 11 : 19 (KNV)
ಅಬೀಹೈಲಳು ಯೆಗೂಷ್, ಶೆಮರ್ಯ, ಜಾಹಮ್ ಎಂಬ ಮಕ್ಕಳನ್ನು ಅವನಿಗೆ ಹೆತ್ತಳು.
2 ಪೂರ್ವಕಾಲವೃತ್ತಾ 11 : 20 (KNV)
ಇವಳ ತರು ವಾಯ ಅವನು ಅಬ್ಷಾಲೋಮನ ಮಗಳಾದ ಮಾಕ ಳನ್ನು ಹೆಂಡತಿಯಾಗಿ ತಕ್ಕೊಂಡನು. ಇವಳು ಅವನಿಗೆ ಅಬೀಯನ್ನೂ ಅತ್ತೈಯನ್ನೂ ಜೀಜನನ್ನೂ ಶೆಲೋ ವಿಾತನ್ನೂ ಹೆತ್ತಳು.
2 ಪೂರ್ವಕಾಲವೃತ್ತಾ 11 : 21 (KNV)
ರೆಹಬ್ಬಾಮನಿಗೆ ಹದಿನೆಂಟು ಮಂದಿ ಹೆಂಡತಿಯರೂ ಅರವತ್ತು ಮಂದಿ ಉಪ ಪತ್ನಿಯರೂ ಇದ್ದರು; ಅವನು ಇಪ್ಪತ್ತೆಂಟು ಮಂದಿ ಕುಮಾರರನ್ನೂ ಅರವತ್ತು ಮಂದಿ ಕುಮಾರ್ತೆಯರನ್ನೂ ಪಡೆದನು. ಆದರೆ ಅವನು ತನ್ನ ಎಲ್ಲಾ ಹೆಂಡತಿ ಯರಿಗಿಂತಲೂ ಉಪಪತ್ನಿಯರಿಗಿಂತಲೂ ಅಬ್ಷಾಲೋ ಮನ ಮಗಳಾದ ಮಾಕಳನ್ನು ಪ್ರೀತಿಮಾಡಿದನು.
2 ಪೂರ್ವಕಾಲವೃತ್ತಾ 11 : 22 (KNV)
ರೆಹಬ್ಬಾಮನು ಮಾಕಳ ಮಗನಾದ ಅಬೀಯನನ್ನು ಅವನ ಸಹೋದರರಲ್ಲಿ ನಾಯಕನಾಗಿರುವಂತೆ ಮುಖ್ಯ ಸ್ಥನಾಗಿ ಮಾಡಿದನು. ಅವನನ್ನು ಅರಸನಾಗಿ ಮಾಡಲು ಮನಸ್ಸುಳ್ಳವನಾಗಿದ್ದನು.
2 ಪೂರ್ವಕಾಲವೃತ್ತಾ 11 : 23 (KNV)
ಅವನು ವಿವೇಕದಿಂದ ನಡೆದು ತನ್ನ ಎಲ್ಲಾ ಮಕ್ಕಳನ್ನು ಯೆಹೂದ ಬೆನ್ಯಾವಿಾ ನಿನ ದೇಶಗಳಲ್ಲಿರುವ ಎಲ್ಲಾ ಬಲವಾದ ಪಟ್ಟಣಗ ಳಲ್ಲಿ ಚದುರಿಸಿ ಅವರಿಗೆ ಬಹಳ ದವಸಧಾನ್ಯಗಳನ್ನು ಕೊಟ್ಟನು. ಆದರೆ ಹೆಂಡತಿಯರ ಸಮೂಹವನ್ನು ಆಶಿಸಿದನು.

1 2 3 4 5 6 7 8 9 10 11 12 13 14 15 16 17 18 19 20 21 22 23

BG:

Opacity:

Color:


Size:


Font: