2 ಪೂರ್ವಕಾಲವೃತ್ತಾ 1 : 1 (KNV)
ದಾವೀದನ ಮಗನಾದ ಸೊಲೊಮೋ ನನು ತನ್ನ ರಾಜ್ಯದಲ್ಲಿ ಬಲಗೊಂಡನು. ಅವನ ದೇವರಾದ ಕರ್ತನು ಅವನ ಸಂಗಡ ಇದ್ದು ಅವನನ್ನು ಅಧಿಕವಾಗಿ ಹೆಚ್ಚಿಸಿದನು.
2 ಪೂರ್ವಕಾಲವೃತ್ತಾ 1 : 2 (KNV)
ಸೊಲೊಮೋ ನನು ಸಮಸ್ತ ಇಸ್ರಾಯೇಲ್ಯರೊಡನೆಯೂ ಸಹಸ್ರ ಶತಾಧಿಪತಿಗಳೊಡನೆಯೂ ನ್ಯಾಯಾಧಿಪತಿಗಳೊ ಡನೆಯೂ ಪ್ರಧಾನ ಪಿತೃಗಳೊಡನೆಯೂ ಇಸ್ರಾಯೇಲಿನಲ್ಲಿರುವ ಸಮಸ್ತ ಪ್ರಭುಗಳೊಡನೆಯೂ ಮಾತ ನಾಡಿದನು.
2 ಪೂರ್ವಕಾಲವೃತ್ತಾ 1 : 3 (KNV)
ಹೀಗೆ ಅವನು ಅವನ ಸಂಗಡ ಸಮಸ್ತ ಸಭೆಯವರು ಗಿಬ್ಯೋನಿನಲ್ಲಿರುವ ಉನ್ನತ ಸ್ಥಳಕ್ಕೆ ಹೋದರು. ಕರ್ತನ ಸೇವಕನಾದ ಮೋಶೆಯು ಅರಣ್ಯ ದಲ್ಲಿ ಮಾಡಿದ ದೇವರ ಸಭೆಯ ಗುಡಾರವು ಅಲ್ಲಿತ್ತು.
2 ಪೂರ್ವಕಾಲವೃತ್ತಾ 1 : 4 (KNV)
ದಾವೀದನು ಕರ್ತನ ಮಂಜೂಷವನ್ನು ಕಿರ್ಯತ್ಯಾ ರೀಮಿನಿಂದ ತಾನು ಅದಕ್ಕೊಸ್ಕರ ಸಿದ್ಧಮಾಡಿದ ಸ್ಥಳಕ್ಕೆ ತೆಗೆದುಕೊಂಡು ಬಂದಿದ್ದನು. ಯಾಕಂದರೆ ಅವನು ಯೆರೂಸಲೇಮಿನಲ್ಲಿ ಅದಕ್ಕೋಸ್ಕರ ಡೇರೆಯನ್ನು ಹಾಕಿ ಸಿದ್ದನು.
2 ಪೂರ್ವಕಾಲವೃತ್ತಾ 1 : 5 (KNV)
ಇದಲ್ಲದೆ ಹೂರನ ಮಗನಾದ ಊರೀ ಯನ ಮಗನಾದ ಬೆಚಲೇಲನು ಮಾಡಿದ ತಾಮ್ರದ ಬಲಿಪೀಠವನ್ನು ಕರ್ತನ ಗುಡಾರದ ಮುಂದೆ ಇಟ್ಟನು. ಸೊಲೊಮೋನನೂ ಸಭೆಯೂ ಅದರ ಮುಂದೆ ವಿಚಾರಿಸುತ್ತಿದ್ದರು.
2 ಪೂರ್ವಕಾಲವೃತ್ತಾ 1 : 6 (KNV)
ಆಗ ಸೊಲೊಮೋನನು ಸಭೆಯ ಗುಡಾರದ ಬಳಿಯಲ್ಲಿ ಕರ್ತನ ಮುಂದೆ ಇರುವ ತಾಮ್ರಪೀಠದ ಬಳಿಗೆ ಹೋಗಿ ಅದರ ಮೇಲೆ ಸಹಸ್ರ ದಹನಬಲಿಗಳನ್ನು ಅರ್ಪಿಸಿದನು.
2 ಪೂರ್ವಕಾಲವೃತ್ತಾ 1 : 7 (KNV)
ಅದೇ ರಾತ್ರಿಯಲ್ಲಿ ದೇವರು ಸೊಲೊಮೋನನಿಗೆ ಕಾಣಿಸಿಕೊಂಡು--ನಾನು ನಿನಗೆ ಕೊಡಬೇಕಾದದ್ದನ್ನು ಕೇಳಿಕೋ ಅಂದನು.
2 ಪೂರ್ವಕಾಲವೃತ್ತಾ 1 : 8 (KNV)
ಆಗ ಸೊಲೊಮೋನನು ದೇವ ರಿಗೆ--ನೀನು ನನ್ನ ತಂದೆಯಾದ ದಾವೀದನಿಗೆ ಬಹು ಕೃಪೆಯನ್ನು ತೋರಿಸಿ ಅವನಿಗೆ ಬದಲಾಗಿ ನಾನು ಆಳುವಂತೆ ಮಾಡಿದಿ.
2 ಪೂರ್ವಕಾಲವೃತ್ತಾ 1 : 9 (KNV)
ಈಗ ಕರ್ತನಾದ ದೇವರೇ, ನನ್ನ ತಂದೆಯಾದ ದಾವೀದನಿಗೆ ನೀನು ಮಾಡಿದ ವಾಗ್ದಾನವು ಸ್ಥಾಪಿತವಾಗಲಿ, ಲೆಕ್ಕದಲ್ಲಿ ಧೂಳಿಯ ಹಾಗೆ ಹೆಚ್ಚಾಗಿರುವ ಜನರ ಮೇಲೆ ನನ್ನನ್ನು ಅರಸನಾಗ ಮಾಡಿದಿ.
2 ಪೂರ್ವಕಾಲವೃತ್ತಾ 1 : 10 (KNV)
ನಾನು ಈ ಜನರ ಮುಂದೆ ಹೊರಡುವ ಹಾಗೆಯೂ ಬರುವ ಹಾಗೆಯೂ ನನಗೆ ಜ್ಞಾನವನ್ನೂ ತಿಳುವಳಿಕೆಯನ್ನೂ ಕೊಡು. ಈ ನಿನ್ನ ಮಹಾಜನಕ್ಕೆ ನ್ಯಾಯ ತೀರಿಸತಕ್ಕವನು ಯಾರು ಅಂದನು.
2 ಪೂರ್ವಕಾಲವೃತ್ತಾ 1 : 11 (KNV)
ಆಗ ದೇವರು ಸೊಲೊಮೋನನಿಗೆ--ಇದು ನಿನ್ನ ಹೃದಯ ದಲ್ಲಿ ಇದ್ದದರಿಂದಲೂ ಐಶ್ವರ್ಯವನ್ನೂ ಸ್ಥಿತಿಯನ್ನೂ ಘನವನ್ನೂ ನಿನ್ನ ಶತ್ರುಗಳ ಪ್ರಾಣವನ್ನೂ ಹೆಚ್ಚಾದ ದಿವಸಗಳನ್ನೂ ನೀನು ಕೇಳದೆ ನಾನು ಯಾರ ಮೇಲೆ ನಿನ್ನನ್ನು ಅರಸನಾಗಿ ಮಾಡಿದೆನೋ ಆ ನನ್ನ ಜನರಿಗೆ ನ್ಯಾಯ ತೀರಿಸುವ ಹಾಗೆ ಜ್ಞಾನವನ್ನೂ ತಿಳುವಳಿಕೆ ಯನ್ನೂ ನೀನು ಕೇಳಿದ್ದರಿಂದ ಅವು ನಿನಗೆ ಕೊಡ ಲ್ಪಟ್ಟವು.
2 ಪೂರ್ವಕಾಲವೃತ್ತಾ 1 : 12 (KNV)
ಇದಲ್ಲದೆ ನಿನಗಿಂತ ಮುಂಚೆ ಇದ್ದ ಅರಸುಗಳಲ್ಲಿ ಯಾರಿಗೂ ಇಲ್ಲದಂಥ ನಿನ್ನ ತರುವಾಯ ಯಾರಿಗೂ ಇರದಂಥ ಐಶ್ವರ್ಯವನ್ನೂ ಸ್ಥಿತಿಯನ್ನೂ ಘನವನ್ನೂ ಕೊಡುವೆನು ಅಂದನು.
2 ಪೂರ್ವಕಾಲವೃತ್ತಾ 1 : 13 (KNV)
ತರುವಾಯ ಸೊಲೊಮೋನನು ಸಭೆಯ ಗುಡಾರವನ್ನು ಬಿಟ್ಟು ಗಿಬ್ಯೋನಿನಲ್ಲಿರುವ ಉನ್ನತ ಸ್ಥಳದಿಂದ ಯೆರೂಸ ಲೇಮಿಗೆ ಬಂದು ಇಸ್ರಾಯೇಲನ್ನು ಆಳಿದನು.
2 ಪೂರ್ವಕಾಲವೃತ್ತಾ 1 : 14 (KNV)
ಸೊಲೊಮೋನನು ರಥಗಳನ್ನೂ ರಾಹುತರನ್ನೂ ಕೂಡಿಸಿದನು. ಅವನ ರಥಗಳು ಸಾವಿರದ ನಾನೂರು ರಾಹುತರು ಹನ್ನೆರಡು ಸಾವಿರ, ಇವರನ್ನು ರಥದ ಪಟ್ಟಣಗಳಲ್ಲಿಯೂ ಯೆರೂಸಲೇಮಿನಲ್ಲಿ ಅರಸನ ಬಳಿಯಲ್ಲಿಯೂ ಇರಿಸಿದನು.
2 ಪೂರ್ವಕಾಲವೃತ್ತಾ 1 : 15 (KNV)
ಅರಸನು ಯೆರೂ ಸಲೇಮಿನಲ್ಲಿ ಬೆಳ್ಳಿಬಂಗಾರವನ್ನು ಕಲ್ಲುಗಳ ಹಾಗೆಯೂ ದೇವದಾರು ಮರಗಳನ್ನು ತಗ್ಗಿನಲ್ಲಿರುವ ಆಲದ ಮರ ಗಳ ಹಾಗೆಯೂ ಮಾಡಿದನು.
2 ಪೂರ್ವಕಾಲವೃತ್ತಾ 1 : 16 (KNV)
ಇದಲ್ಲದೆ ಸೊಲೊ ಮೋನನಿಗೋಸ್ಕರ ಐಗುಪ್ತದಿಂದ ಕುದುರೆಗಳೂ ಸಣ ಬಿನ ನೂಲೂ ತರಲ್ಪಟ್ಟವು; ಅರಸನ ವರ್ತಕರು ಈ ಸಣಬಿನ ನೂಲನ್ನು ಕ್ರಯಕ್ಕೆ ತೆಗೆದುಕೊಂಡರು.
2 ಪೂರ್ವಕಾಲವೃತ್ತಾ 1 : 17 (KNV)
ಹಾಗೆಯೇ ಐಗುಪ್ತದಿಂದ ಒಂದು ರಥಕ್ಕೆ ಆರು ನೂರು ಬೆಳ್ಳಿ ಶೇಕೆಲುಗಳ ಕ್ರಯವಾಗಿ ತಕ್ಕೊಂಡರು. ಒಂದು ಕುದುರೆಗೆ ನೂರೈವತ್ತು ಬೆಳ್ಳಿ ಶೇಕೆಲುಗಳ ಕ್ರಯವಾಗಿ ತರಿಸಿದರು. ಈ ಪ್ರಕಾರ ಹಿತ್ತಿಯರ ಅರಸುಗಳೆಲ್ಲರೂ ಅರಾಮಿನ ಅರಸುಗಳೆಲ್ಲರೂ ಅವರ ಮೂಲಕವಾಗಿ ತರಿಸಿಕೊಂಡರು.
❮
❯