1 ತಿಮೊಥೆಯನಿಗೆ 4 : 1 (KNV)
ಕಡೇಕಾಲಗಳಲ್ಲಿ ಕೆಲವರು ವಂಚಿಸುವ ಆತ್ಮಗಳಿಗೂ ದೆವ್ವಗಳ ಬೋಧನೆಗಳಿಗೂ ಲಕ್ಷ್ಯಕೊಟ್ಟು ನಂಬಿಕೆಯಿಂದ ತೊಲಗಿಹೋಗುವ ರೆಂದು ಆತ್ಮನು ಸ್ಪಷ್ಟವಾಗಿ ಹೇಳುತ್ತಾನೆ.
1 ತಿಮೊಥೆಯನಿಗೆ 4 : 2 (KNV)
ಅವರು ಕಪಟದಲ್ಲಿ ಸುಳ್ಳಾಡುವವರೂ ತಮ್ಮ ಮನಸ್ಸಾಕ್ಷಿಯ ಮೇಲೆ ಕಾಸಿದ ಕಬ್ಬಿಣದಿಂದ ಬರೆ ಹಾಕಲ್ಪಟ್ಟವರೂ ಆಗಿದ್ದು
1 ತಿಮೊಥೆಯನಿಗೆ 4 : 3 (KNV)
ಮದುವೆಯಾಗಬಾರದೆಂತಲೂ ಯಾರು ನಂಬುವವರಾಗಿದ್ದು ಸತ್ಯವನ್ನು ಗ್ರಹಿಸಿಕೊಂಡಿದ್ದಾರೋ ಅವರು ಕೃತಜ್ಞತಾಸ್ತುತಿ ಮಾಡಿ ತಿನ್ನುವದಕ್ಕೋಸ್ಕರ ದೇವರು ಉಂಟು ಮಾಡಿದ ಆಹಾರವನ್ನು ತಿನ್ನಬಾರ ದೆಂತಲೂ ಆಜ್ಞಾಪಿಸುತ್ತಾರೆ.
1 ತಿಮೊಥೆಯನಿಗೆ 4 : 4 (KNV)
ದೇವರ ಪ್ರತಿಯೊಂದು ಸೃಷ್ಟಿಯೂ ಒಳ್ಳೇದಾಗಿದೆ; ಸ್ತೋತ್ರ ಮಾಡಿ ತೆಗೆದು ಕೊಳ್ಳುವ ಪಕ್ಷಕ್ಕೆ ಯಾವದನ್ನೂ ನಿರಾಕರಿಸಬಾರದು.
1 ತಿಮೊಥೆಯನಿಗೆ 4 : 5 (KNV)
ದೇವರ ವಾಕ್ಯದಿಂದಲೂ ಪ್ರಾರ್ಥನೆಯಿಂದಲೂ ಅದು ಪವಿತ್ರವಾಗುತ್ತದಲ್ಲಾ.
1 ತಿಮೊಥೆಯನಿಗೆ 4 : 6 (KNV)
ಈ ಸಂಗತಿಗಳನ್ನು ಸಹೋದರರಿಗೆ ತಿಳಿಸಿದರೆ ನೀನು ಅನುಸರಿಸುವ ನಂಬಿಕೆಯ ಮತ್ತು ಸುಬೋಧನೆಯ ವಾಕ್ಯಗಳಲ್ಲಿ ಪೋಷಣೆ ಹೊಂದುವವರಾಗಿ ಯೇಸು ಕ್ರಿಸ್ತನ ಒಳ್ಳೇ ಸೇವಕನಾಗಿರುವಿ.
1 ತಿಮೊಥೆಯನಿಗೆ 4 : 7 (KNV)
ಆದರೆ ಅಜ್ಜೀಕಥೆಗಳಂತಿರುವ ಅಶುದ್ಧವಾದ ಆ ಕಥೆಗಳನ್ನು ನಿರಾಕರಿಸಿ ನೀನು ದೇವ ಭಕ್ತಿಯ ವಿಷಯದಲ್ಲಿಯೇ ಸಾಧನೆ ಮಾಡಿಕೋ.
1 ತಿಮೊಥೆಯನಿಗೆ 4 : 8 (KNV)
ದೇಹಸಾಧನೆಯು ಸ್ವಲ್ಪ ಮಟ್ಟಿಗೆ ಲಾಭಕರವಾಗಿದೆ, ಭಕ್ತಿಯಾದರೋ ಎಲ್ಲಾ ವಿಧದಲ್ಲಿ ಲಾಭಕರವಾದದ್ದು; ಆದಕ್ಕೆ ಈಗಲೂ ಮುಂದೆ ಬರುವದಕ್ಕೂ ಜೀವಾಗ್ದಾನ ಉಂಟು.
1 ತಿಮೊಥೆಯನಿಗೆ 4 : 9 (KNV)
ಈ ಮಾತು ನಂಬತಕ್ಕದ್ದಾಗಿಯೂ ಸರ್ವಾಂಗೀಕಾರಕ್ಕೆ ಯೋಗ್ಯವಾದದ್ದಾಗಿಯೂ ಅದೆ.
1 ತಿಮೊಥೆಯನಿಗೆ 4 : 10 (KNV)
ಆದದರಿಂದ ಇದಕ್ಕಾಗಿ ನಾವು ಕಷ್ಟಪಡುವವರೂ ನಿಂದೆಯನ್ನನುಭವಿಸುವವರೂ ಆಗಿದ್ದೇವೆ; ಯಾಕಂದರೆ ಎಲ್ಲಾ ಮನುಷ್ಯರಿಗೆ ವಿಶೇಷವಾಗಿ ನಂಬುವವರಿಗೆ ರಕ್ಷಕನಾಗಿರುವ ಜೀವವುಳ್ಳ ದೇವರನ್ನು ನಾವು ನಂಬಿ ದ್ದೇವೆ.
1 ತಿಮೊಥೆಯನಿಗೆ 4 : 11 (KNV)
ಈ ವಿಷಯಗಳನ್ನು ಆಜ್ಞಾಪಿಸಬೇಕು ಮತ್ತು ಬೋಧಿಸಬೇಕು.
1 ತಿಮೊಥೆಯನಿಗೆ 4 : 12 (KNV)
ಯೌವನಸ್ಥನೆಂದು ನಿನ್ನನ್ನು ಅಸಡ್ಡೆ ಮಾಡುವದಕ್ಕೆ ಯಾರಿಗೂ ಅವಕಾಶಕೊಡದೆ ನಂಬು ವವರಿಗೆ ನಡೆ ನುಡಿ ಪ್ರೀತಿ ಆತ್ಮ ನಂಬಿಕೆ ಶುದ್ಧತ್ವದಲ್ಲಿ ನೀನೇ ಮಾದರಿಯಾಗಿರು.
1 ತಿಮೊಥೆಯನಿಗೆ 4 : 13 (KNV)
ನಾನು ಬರುವ ತನಕ ಓದುವದರಲ್ಲಿಯೂ ಎಚ್ಚರಿಸುವದರಲ್ಲಿಯೂ ಬೋಧಿ ಸುವದರಲ್ಲಿಯೂ ಲಕ್ಷ್ಯಕೊಡು.
1 ತಿಮೊಥೆಯನಿಗೆ 4 : 14 (KNV)
ನಿನ್ನಲ್ಲಿರುವ ವರವನ್ನು ಅಲಕ್ಷ್ಯಮಾಡಬೇಡ; ಸಭೆಯ ಹಿರಿಯರು ಪ್ರವಾದನೆಯಿಂದ ನಿನ್ನ ಮೇಲೆ ಹಸ್ತಗಳನ್ನಿಟ್ಟಾಗ ಅದು ನಿನಗೆ ಕೊಡಲ್ಪಟ್ಟಿತಲ್ಲಾ.
1 ತಿಮೊಥೆಯನಿಗೆ 4 : 15 (KNV)
ಈ ವಿಷಯಗಳನ್ನು ಧ್ಯಾನಿಸು ವವನಾಗಿರು; ನಿನ್ನನ್ನು ಸಂಪೂರ್ಣವಾಗಿ ಅವುಗಳಿಗೆ ಒಪ್ಪಿಸಿಕೊಡು; ಹೀಗೆ ನಿನಗಾದ ಲಾಭವು ಎಲ್ಲರಿಗೂ ತೋರಿಬಂದೀತು.
1 ತಿಮೊಥೆಯನಿಗೆ 4 : 16 (KNV)
ನಿನ್ನ ವಿಷಯದಲ್ಲಿಯೂ ಉಪ ದೇಶದ ವಿಷಯದಲ್ಲಿಯೂ ಎಚ್ಚರಿಕೆಯಾಗಿರು. ನೀನು ಇವುಗಳಲ್ಲಿ ನಿರತನಾಗಿರು; ಹೀಗೆ ಮಾಡುವದರಿಂದ ನೀನು ನಿನ್ನನ್ನೂ ನಿನ್ನ ಉಪದೇಶ ಕೇಳುವವರನ್ನೂ ರಕ್ಷಿಸುವಿ.

1 2 3 4 5 6 7 8 9 10 11 12 13 14 15 16

BG:

Opacity:

Color:


Size:


Font: