1 ತಿಮೊಥೆಯನಿಗೆ 1 : 1 (KNV)
ನಮ್ಮ ರಕ್ಷಕನಾದ ದೇವರ ಮತ್ತು ನಮ್ಮ ನಿರೀಕ್ಷೆಯಾಗಿರುವ ಕರ್ತನಾದ ಯೇಸು ಕ್ರಿಸ್ತನ ಆಜ್ಞಾನುಸಾರ ಯೇಸು ಕ್ರಿಸ್ತನ ಅಪೊಸ್ತಲನಾದ ಪೌಲನು
1 ತಿಮೊಥೆಯನಿಗೆ 1 : 2 (KNV)
ನಂಬಿಕೆಯ ವಿಷಯದಲ್ಲಿ ನನ್ನ ಸ್ವಂತಮಗನಾಗಿರುವ ತಿಮೊಥೆಯನಿಗೆ ನಮ್ಮ ತಂದೆಯಾದ ದೇವರಿಂದಲೂ ನಮ್ಮ ಕರ್ತನಾದ ಯೇಸು ಕ್ರಿಸ್ತನಿಂದಲೂ ನಿನಗೆ ಕೃಪೆಯೂ ಕರುಣೆಯೂ ಶಾಂತಿಯೂ ಆಗಲಿ.
1 ತಿಮೊಥೆಯನಿಗೆ 1 : 3 (KNV)
ನಾನು ಮಕೆದೋನ್ಯಕ್ಕೆ ಹೋದಾಗ ನೀನು ಎಫೆಸ ದಲ್ಲಿ ಇದ್ದುಕೊಂಡು ಅವರು ಬೇರೆ ಯಾವ ಬೋಧನೆ ಯನ್ನು ಉಪದೇಶಿಸಬಾರದೆಂತಲೂ
1 ತಿಮೊಥೆಯನಿಗೆ 1 : 4 (KNV)
ಕಲ್ಪನಾ ಕಥೆ ಗಳಿಗೂ ಕೊನೆಯಿಲ್ಲದ ವಂಶಾವಳಿಗಳಿಗೂ ಲಕ್ಷ್ಯ ಕೊಡಬಾರದೆಂತಲೂ ಆಜ್ಞಾಪಿಸಬೇಕೆಂಬದಾಗಿ ನಾನು ನಿನಗೆ ಖಂಡಿತವಾಗಿ ಹೇಳಿದ ಪ್ರಕಾರ ಈಗಲೂ ಹೇಳುತ್ತೇನೆ. ಅಂಥ ಕಥೆಗಳೂ ವಂಶಾವಳಿಗಳೂ ವಿವಾದಕ್ಕೆ ಆಸ್ಪದವಾಗಿವೆಯೇ ಹೊರತು ನಂಬಿಕೆ ಯಿಂದುಂಟಾಗುವ ದೈವಭಕ್ತಿಯನ್ನು ವೃದ್ಧಿಮಾಡುವ
1 ತಿಮೊಥೆಯನಿಗೆ 1 : 5 (KNV)
ಶುದ್ಧ ಹೃದಯದಿಂದಲೂ ಒಳ್ಳೇಮನಸ್ಸಾಕ್ಷಿ ಯಿಂದಲೂ ನಿಷ್ಕಪಟವಾದ ನಂಬಿಕೆಯಿಂದಲೂ ಉಂಟಾಗುವ ಪ್ರೀತಿಯೇ ಆಜ್ಞೆಯ ಅಂತ್ಯವಾಗಿದೆ.
1 ತಿಮೊಥೆಯನಿಗೆ 1 : 6 (KNV)
ಕೆಲವರು ಈ ಗುರಿ ತಪ್ಪಿ ವ್ಯರ್ಥವಾದ ವಿಚಾರ ಗಳಿಗೆ ತಿರುಗಿಕೊಂಡಿದ್ದಾರೆ;
1 ತಿಮೊಥೆಯನಿಗೆ 1 : 7 (KNV)
ಅವರು ನ್ಯಾಯ ಪ್ರಮಾಣದ ಉಪದೇಶಕರಾಗಿರಬೇಕೆಂದಿದ್ದರೂ ತಾವು ಹೇಳುವದಾಗಲೀ ತಾವು ದೃಢವಾಗಿ ಮಾತನಾಡುವ ವಿಷಯವಾಗಲೀ ಇಂಥದ್ದೆಂದು ತಿಳಿಯದವರಾಗಿ ದ್ದಾರೆ.
1 ತಿಮೊಥೆಯನಿಗೆ 1 : 8 (KNV)
ಒಬ್ಬನು ನ್ಯಾಯಪ್ರಮಾಣವನ್ನು ನ್ಯಾಯ ಸಮ್ಮತವಾಗಿ ಉಪಯೋಗಿಸುವದಾದರೆ ಅದು ಒಳ್ಳೇ ದೆಂದು ನಾವು ಬಲ್ಲೆವು.
1 ತಿಮೊಥೆಯನಿಗೆ 1 : 9 (KNV)
ನ್ಯಾಯಪ್ರಮಾಣವು ನೀತಿ ವಂತರಿಗೋಸ್ಕರ ಅಲ್ಲ, ಆದರೆ ಅದು ಅಕ್ರಮ ಗಾರರಿಗೂ ಅವಿಧೇಯರಿಗೂ ಭಕ್ತಿಹೀನರಿಗೂ ಪಾಪಿಷ್ಠ ರಿಗೂ ಅಶುದ್ಧರಿಗೂ ಅಪವಿತ್ರಮಾಡುವವರಿಗೂ ತಂದೆತಾಯಿಗಳನ್ನು ಕೊಲ್ಲುವವರಿಗೂ ನರಹತ್ಯ ಮಾಡುವವರಿಗೂ
1 ತಿಮೊಥೆಯನಿಗೆ 1 : 10 (KNV)
ಜಾರರಿಗೂ ಪುರುಷಗಾಮಿ ಗಳಿಗೂ ನರಚೋರರಿಗೂ ಸುಳ್ಳುಗಾರರಿಗೂ ಅಬದ್ಧ ಪ್ರಮಾಣಿಕರಿಗೂ ಸ್ವಸ್ಥಬೋಧನೆಗೆ ಪ್ರತಿಕೂಲವಾಗಿ ಬೇರೆ ಏನಾದರೂ ಇದ್ದರೆ ಅದನ್ನು ಮಾಡುವವರಿಗೂ ನೇಮಕ ವಾಗಿದೆಯೆಂದು ನಮಗೆ ತಿಳಿದದೆ.
1 ತಿಮೊಥೆಯನಿಗೆ 1 : 11 (KNV)
ಈ ಬೋಧನೆಯು ಸ್ತುತ್ಯನಾದ ದೇವರ ಮಹಿಮೆಯ ಸುವಾರ್ತೆಗೆ ಅನುಸಾರವಾಗಿದೆ. ಈ ಸುವಾರ್ತೆಯು ನನ್ನ ವಶಕ್ಕೆ ಕೊಡಲ್ಪಟ್ಟಿತು.
1 ತಿಮೊಥೆಯನಿಗೆ 1 : 12 (KNV)
ನನಗೆ ಬಲವನ್ನು ದಯಪಾಲಿಸಿದಾತನು ನಮ್ಮ ಕರ್ತನಾದ ಕ್ರಿಸ್ತ ಯೇಸುವೇ; ಆತನು ನನ್ನನ್ನು ನಂಬಿಗಸ್ತನೆಂದು ಎಣಿಸಿ ಈ ಸೇವೆಯಲ್ಲಿ ನೇಮಿಸಿ ಕೊಂಡದ್ದಕ್ಕಾಗಿ ನಾನು ಆತನಿಗೆ ಸ್ತೋತ್ರ ಸಲ್ಲಿಸುತ್ತೇನೆ.
1 ತಿಮೊಥೆಯನಿಗೆ 1 : 13 (KNV)
ಮೊದಲು ದೇವದೂಷಕನೂ ಹಿಂಸಕನೂ ಕೇಡು ಮಾಡುವವನೂ ಆಗಿದ್ದ ನಾನು ಅವಿಶ್ವಾಸಿಯಾಗಿ ತಿಳಿಯದೆ ಹಾಗೆ ಮಾಡಿದ್ದರಿಂದ ನನ್ನ ಮೇಲೆ ಕರುಣೆ ಉಂಟಾಯಿತು.
1 ತಿಮೊಥೆಯನಿಗೆ 1 : 14 (KNV)
ನಮ್ಮ ಕರ್ತನ ಕೃಪೆಯು ಕ್ರಿಸ್ತ ಯೇಸುವಿನಲ್ಲಿರುವ ನಂಬಿಕೆ ಮತ್ತು ಪ್ರೀತಿಯೊಂದಿಗೆ ಅತ್ಯಧಿಕವಾಯಿತು.
1 ತಿಮೊಥೆಯನಿಗೆ 1 : 15 (KNV)
ಕ್ರಿಸ್ತ ಯೇಸು ಪಾಪಿಗಳನ್ನು ರಕ್ಷಿಸುವದಕ್ಕೋಸ್ಕರ ಈ ಲೋಕಕ್ಕೆ ಬಂದನು ಎಂದು ಹೇಳುವದು ನಂಬತಕ್ಕದ್ದಾಗಿಯೂ ಸರ್ವಾಂಗೀಕಾರಕ್ಕೆ ಯೋಗ್ಯವಾದದ್ದಾಗಿಯೂ ಅದೆ; ಆ ಪಾಪಿಗಳಲ್ಲಿ ನಾನೇ ಮುಖ್ಯನು.
1 ತಿಮೊಥೆಯನಿಗೆ 1 : 16 (KNV)
ಹೇಗಿದ್ದರೂ ಇನ್ನು ಮುಂದೆ ನಿತ್ಯ ಜೀವಕ್ಕಾಗಿ ತನ್ನ ಮೇಲೆ ನಂಬಿಕೆಯಿಡುವವರಿಗೆ ದೃಷ್ಟಾಂತವಿರಬೇಕೆಂದು ಯೇಸು ಕ್ರಿಸ್ತನು ಮೊದಲು ನನ್ನನ್ನು ಕರುಣಿಸಿ ನನ್ನಲ್ಲಿ ತನ್ನ ಪೂರ್ಣದೀರ್ಘ ಶಾಂತಿಯನ್ನು ತೋರ್ಪಡಿಸಿದನು.
1 ತಿಮೊಥೆಯನಿಗೆ 1 : 17 (KNV)
ನಿತ್ಯನಾದ ಅರಸನೂ ನಿರ್ಲಯನೂ ಅದೃಶ್ಯನೂ ಆಗಿರುವ ಜ್ಞಾನಿಯಾದ ಒಬ್ಬನೇ ದೇವರಿಗೆ ಘನವೂ ಮಹಿಮೆಯೂ ಎಂದೆಂದಿಗೂ ಇರಲಿ. ಆಮೆನ್.
1 ತಿಮೊಥೆಯನಿಗೆ 1 : 18 (KNV)
ಮಗನಾದ ತಿಮೊಥೆಯನೇ, ನಿನ್ನ ವಿಷಯದಲ್ಲಿ ಮುಂಚೆ ಉಂಟಾದ ಪ್ರವಾದನೆಗಳ ಪ್ರಕಾರ ನೀನು ಅವುಗಳಿಂದ ಒಳ್ಳೇ ಯುದ್ಧವನ್ನು ನಡಿಸಬೇಕೆಂದು ನಿನಗೆ ಆಜ್ಞಾಪಿಸುತ್ತೇನೆ.
1 ತಿಮೊಥೆಯನಿಗೆ 1 : 19 (KNV)
ನಂಬಿಕೆಯನ್ನೂ ಒಳ್ಳೇ ಮನಸ್ಸಾಕ್ಷಿಯನ್ನೂ ಹಿಡಿದುಕೋ; ಕೆಲವರು ನಂಬಿಕೆ ಯನ್ನು ತಳ್ಳಿಬಿಟ್ಟು ಅದರ ವಿಷಯದಲ್ಲಿ ಹಡಗು ಒಡೆದ ವರಂತೆ ಇದ್ದಾರೆ;
1 ತಿಮೊಥೆಯನಿಗೆ 1 : 20 (KNV)
ಹುಮೆನಾಯನೂ ಅಲೆಕ್ಸಾಂದ ರನೂ ಅವರಲ್ಲಿದ್ದಾರೆ. ಇವರು ದೇವದೂಷಣೆ ಮಾಡ ಬಾರದೆಂಬದನ್ನು ಕಲಿತುಕೊಳ್ಳುವಂತೆ ನಾನು ಇವರನ್ನು ಸೈತಾನನಿಗೆ ಒಪ್ಪಿಸಿಕೊಟ್ಟೆನು.
❮
❯