1 ಥೆಸಲೊನೀಕದವರಿಗೆ 5 : 1 (KNV)
ಸಹೋದರರೇ, ಈ ಕಾಲಗಳನ್ನೂ ಗಳಿಗೆಗಳನ್ನೂ ಕುರಿತು ನಿಮಗೆ ಬರೆಯು ವದು ಅವಶ್ಯವಿಲ್ಲ.
1 ಥೆಸಲೊನೀಕದವರಿಗೆ 5 : 2 (KNV)
ರಾತ್ರಿ ಕಾಲದಲ್ಲಿ ಕಳ್ಳನು ಹೇಗೆ ಬರುತ್ತಾನೋ ಹಾಗೆಯೇ ಕರ್ತನ ದಿನವು ಬರುವ ದೆಂದು ನೀವೇ ಚೆನ್ನಾಗಿ ತಿಳಿದಿದ್ದೀರಲ್ಲಾ.
1 ಥೆಸಲೊನೀಕದವರಿಗೆ 5 : 3 (KNV)
ಆದರೆ--ಸಮಾಧಾನವಾಗಿಯೂ ಸುರಕ್ಷಿತವಾಗಿಯೂ ಇರುತ್ತೇ ವೆಂದು ಜನರು ಹೇಳುತ್ತಿರುವಾಗಲೇ ಅವರ ಮೇಲೆ ನಾಶನವು ಗರ್ಭಿಣಿಗೆ ಪ್ರಸವವೇದನೆ ಬರುವ ಪ್ರಕಾರ ಬರುವದು; ಅವರು ಹೇಗೂ ತಪ್ಪಿಸಿಕೊಳ್ಳಲಾರರು.
1 ಥೆಸಲೊನೀಕದವರಿಗೆ 5 : 4 (KNV)
ಆದರೆ ಸಹೋದರರೇ, ಆ ದಿನವು ಕಳ್ಳನಂತೆ ನಿಮ್ಮ ಮೇಲೆ ಬರತಕ್ಕದ್ದಲ್ಲ; ನೀವು ಕತ್ತಲೆಯಲ್ಲಿರುವವರಲ್ಲ.
1 ಥೆಸಲೊನೀಕದವರಿಗೆ 5 : 5 (KNV)
ನೀವೆಲ್ಲರೂ ಬೆಳಕಿನ ಮಕ್ಕಳೂ ಹಗಲಿನ ಮಕ್ಕಳೂ ಆಗಿದ್ದೀರಷ್ಟೆ; ನಾವು ರಾತ್ರಿಯವರೂ ಅಲ್ಲ, ಕತ್ತಲೆ ಯವರೂ ಅಲ್ಲ.
1 ಥೆಸಲೊನೀಕದವರಿಗೆ 5 : 6 (KNV)
ಆದಕಾರಣ ನಾವು ಇತರರಂತೆ ನಿದ್ರೆಮಾಡದೆ ಎಚ್ಚರವಾಗಿರೋಣ, ಸ್ವಸ್ಥಚಿತ್ತರಾಗಿ ರೋಣ.
1 ಥೆಸಲೊನೀಕದವರಿಗೆ 5 : 7 (KNV)
ನಿದ್ರೆ ಮಾಡುವವರು ರಾತ್ರಿಯಲ್ಲಿ ನಿದ್ರೆ ಮಾಡುತ್ತಾರೆ. ಅಮಲೇರುವವರು ರಾತ್ರಿಯಲ್ಲಿ ಅಮ ಲೇರುತ್ತಾರೆ.
1 ಥೆಸಲೊನೀಕದವರಿಗೆ 5 : 8 (KNV)
ನಾವಾದರೋ ಹಗಲಿನವರಾಗಿರಲಾಗಿ ವಿಶ್ವಾಸ ಪ್ರೀತಿಗಳೆಂಬ ಎದೆಕವಚವನ್ನೂ ರಕ್ಷಣೆಯ ನಿರೀಕ್ಷೆಯೆಂಬ ಶಿರಸ್ತ್ರಾಣವನ್ನೂ ಧರಿಸಿಕೊಂಡು ಸ್ವಸ್ಥ ಚಿತ್ತರಾಗಿರೋಣ.
1 ಥೆಸಲೊನೀಕದವರಿಗೆ 5 : 9 (KNV)
ಯಾಕಂದರೆ ದೇವರು ನಮ್ಮನ್ನು ಕೋಪಕ್ಕೆ ಗುರಿಯಾಗುವಂತೆ ನೇಮಿಸದೆ ನಾವು ನಮ್ಮ ಕರ್ತನಾದ ಯೇಸು ಕ್ರಿಸ್ತನ ಮೂಲಕವಾಗಿ ರಕ್ಷಣೆಯನ್ನು ಹೊಂದುವಂತೆ ನೇಮಿಸಿದನು.
1 ಥೆಸಲೊನೀಕದವರಿಗೆ 5 : 10 (KNV)
ನಾವು ಎಚ್ಚರವಾಗಿ ದ್ದರೂ ಸರಿಯೇ, ನಿದ್ರೆಯಲ್ಲಿದ್ದರೂ ಸರಿಯೇ, ತನ್ನ ಜೊತೆಯಲ್ಲಿಯೇ ನಾವು ಜೀವಿಸಬೇಕೆಂದು ಆತನು ನಮಗೋಸ್ಕರ ಸತ್ತನು.
1 ಥೆಸಲೊನೀಕದವರಿಗೆ 5 : 11 (KNV)
ಆದದರಿಂದ ನೀವು ಈಗ ಮಾಡುತ್ತಿರುವ ಪ್ರಕಾರವೇ ಒಬ್ಬರನ್ನೊಬ್ಬರು ಸಂತೈಸಿ ಕೊಳ್ಳುತ್ತಾ ಒಬ್ಬರ ಭಕ್ತಿಯನ್ನೊಬ್ಬರು ವೃದ್ಧಿಪಡಿಸುತ್ತಾ ಇರ್ರಿ.
1 ಥೆಸಲೊನೀಕದವರಿಗೆ 5 : 12 (KNV)
ಸಹೋದರರೇ, ಯಾರು ನಿಮ್ಮಲ್ಲಿ ಪ್ರಯಾಸಪಟ್ಟು ಕರ್ತನ ಕಾರ್ಯಗಳಲ್ಲಿ ನಿಮ್ಮ ಮೇಲೆ ಮುಖ್ಯಸ್ಥರಾಗಿದ್ದು ನಿಮಗೆ ಬುದ್ಧಿಹೇಳುತ್ತಾರೋ ಅವರನ್ನು ಲಕ್ಷಿಸಿರಿ.
1 ಥೆಸಲೊನೀಕದವರಿಗೆ 5 : 13 (KNV)
ಇದಲ್ಲದೆ ಅವರ ಕೆಲಸದ ನಿಮಿತ್ತ ಅವರನ್ನು ಪ್ರೀತಿ ಯಿಂದ ಬಹಳವಾಗಿ ಸನ್ಮಾನ ಮಾಡಬೇಕೆಂದು ನಿಮ್ಮನ್ನು ಬೇಡಿಕೊಳ್ಳುತ್ತೇವೆ; ನಿಮ್ಮ ನಿಮ್ಮೊಳಗೆ ಸಮಾಧಾನವಾಗಿರ್ರಿ.
1 ಥೆಸಲೊನೀಕದವರಿಗೆ 5 : 14 (KNV)
ಸಹೋದರರೇ, ಅಕ್ರಮವಾಗಿ ನಡೆಯುವವ ರನ್ನು ಎಚ್ಚರಿಸಿರಿ, ಮನಗುಂದಿದವರನ್ನಾದರಿಸಿರಿ. ಬಲ ಹೀನರಿಗೆ ಆಧಾರವಾಗಿರ್ರಿ. ಎಲ್ಲರಲ್ಲಿಯೂ ತಾಳ್ಮೆಯುಳ್ಳ ವರಾಗಿರ್ರಿ ಎಂದು ನಿಮ್ಮನ್ನು ಪ್ರಬೋಧಿಸುತ್ತೇವೆ.
1 ಥೆಸಲೊನೀಕದವರಿಗೆ 5 : 15 (KNV)
ಯಾರೂ ಅಪಕಾರಕ್ಕೆ ಅಪಕಾರ ಮಾಡದಂತೆ ನೋಡಿ ಕೊಳ್ಳಿರಿ; ಯಾವಾಗಲೂ ನೀವು ಒಬ್ಬರಿಗೊಬ್ಬರು ಹಿತವನ್ನು ಮಾಡಿಕೊಂಡಿರುವದಲ್ಲದೆ ಎಲ್ಲರಿಗೂ ಹಿತ ವನ್ನು ಮಾಡುವವರಾಗಿರ್ರಿ.
1 ಥೆಸಲೊನೀಕದವರಿಗೆ 5 : 16 (KNV)
ಯಾವಾಗಲೂ ಸಂತೋಷಿಸಿರಿ;
1 ಥೆಸಲೊನೀಕದವರಿಗೆ 5 : 17 (KNV)
ಎಡೆಬಿಡದೆ ಪ್ರಾರ್ಥನೆ ಮಾಡಿರಿ.
1 ಥೆಸಲೊನೀಕದವರಿಗೆ 5 : 18 (KNV)
ಎಲ್ಲಾದರಲ್ಲಿಯೂ ಕೃತಜ್ಞತಾ ಸ್ತುತಿ ಮಾಡಿರಿ; ಯಾಕಂದರೆ ಇದೇ ನಿಮ್ಮ ವಿಷಯ ವಾಗಿ ಕ್ರಿಸ್ತ ಯೇಸುವಿನಲ್ಲಿರುವ ದೇವರ ಚಿತ್ತವಾಗಿದೆ.
1 ಥೆಸಲೊನೀಕದವರಿಗೆ 5 : 19 (KNV)
ಆತ್ಮನನ್ನು ನಂದಿಸಬೇಡಿರಿ;
1 ಥೆಸಲೊನೀಕದವರಿಗೆ 5 : 20 (KNV)
ಪ್ರವಾದನೆಗಳನ್ನು ಹೀನೈಸಬೇಡಿರಿ;
1 ಥೆಸಲೊನೀಕದವರಿಗೆ 5 : 21 (KNV)
ಆದರೆ ಎಲ್ಲವನ್ನು ಪರಿಶೋಧಿಸಿ ಒಳ್ಳೇದನ್ನೇ ಭದ್ರವಾಗಿ ಹಿಡಿದುಕೊಳ್ಳಿರಿ.
1 ಥೆಸಲೊನೀಕದವರಿಗೆ 5 : 22 (KNV)
ಸಕಲ ವಿಧವಾದ ಕೆಟ್ಟತನದ ತೋರಿಕೆಗೆ ದೂರವಾಗಿರ್ರಿ.
1 ಥೆಸಲೊನೀಕದವರಿಗೆ 5 : 23 (KNV)
ಶಾಂತಿದಾಯಕನಾದ ದೇವರು ತಾನೇ ನಿಮ್ಮನ್ನು ಪರಿಪೂರ್ಣವಾಗಿ ಪವಿತ್ರ ಮಾಡಲಿ; ಇದಲ್ಲದೆ ನಮ್ಮ ಕರ್ತನಾದ ಯೇಸು ಕ್ರಿಸ್ತನ ಬರೋಣದಲ್ಲಿ ನಿಮ್ಮ ಆತ್ಮ ಪ್ರಾಣ ಶರೀರಗಳು ದೋಷವಿಲ್ಲದೆ ಸಂಪೂರ್ಣ ವಾಗಿ ಕಾಣಿಸುವಂತೆ ಮಾಡಲಿ.
1 ಥೆಸಲೊನೀಕದವರಿಗೆ 5 : 24 (KNV)
ನಿಮ್ಮನ್ನು ಕರೆಯು ವಾತನು ನಂಬಿಗಸ್ತನು. ಆತನು ತನ್ನ ಕಾರ್ಯವನ್ನು ಸಾಧಿಸುವನು.
1 ಥೆಸಲೊನೀಕದವರಿಗೆ 5 : 25 (KNV)
ಸಹೋದರರೇ, ನಮಗೋಸ್ಕರ ಪ್ರಾರ್ಥನೆ ಮಾಡಿರಿ.
1 ಥೆಸಲೊನೀಕದವರಿಗೆ 5 : 26 (KNV)
ಪವಿತ್ರವಾದ ಮುದ್ದಿಟ್ಟು ಸಹೋದರ ರೆಲ್ಲರನ್ನೂ ವಂದಿಸಿರಿ.
1 ಥೆಸಲೊನೀಕದವರಿಗೆ 5 : 27 (KNV)
ಈ ಪತ್ರಿಕೆಯನ್ನು ಪರಿಶುದ್ಧ ಸಹೋದರರೆಲ್ಲರಿಗೂ ಓದಿ ಹೇಳಬೇಕೆಂದು ನಿಮಗೆ ಕರ್ತನಿಂದ ಆಜ್ಞಾಪಿಸುತ್ತೇನೆ.
1 ಥೆಸಲೊನೀಕದವರಿಗೆ 5 : 28 (KNV)
ನಮ್ಮ ಕರ್ತನಾದ ಯೇಸು ಕ್ರಿಸ್ತನ ಕೃಪೆಯು ನಿಮ್ಮೊಂದಿಗಿರಲಿ. ಆಮೆನ್.

1 2 3 4 5 6 7 8 9 10 11 12 13 14 15 16 17 18 19 20 21 22 23 24 25 26 27 28

BG:

Opacity:

Color:


Size:


Font: