1 ಥೆಸಲೊನೀಕದವರಿಗೆ 4 : 1 (KNV)
ಸಹೋದರರೇ, ನೀವು ಹೇಗೆ ನಡೆದು ಕೊಂಡು ದೇವರನ್ನು ಮೆಚ್ಚಿಸಬೇಕೆಂದು ನಮ್ಮಿಂದ ಕೇಳಿರುವ ಪ್ರಕಾರವೇ ನೀವು ಹೆಚ್ಚೆಚ್ಚಾಗಿ ಅಭಿವೃದ್ಧಿಯಾಗಬೇಕೆಂದು ನಾವು ಕರ್ತನಾದ ಯೇಸು ವಿನ ಮೂಲಕ ನಿಮ್ಮನ್ನು ಬೇಡಿಕೊಂಡು ಎಚ್ಚರಿಸುತ್ತೇವೆ.
1 ಥೆಸಲೊನೀಕದವರಿಗೆ 4 : 2 (KNV)
ನಾವು ಕರ್ತನಾದ ಯೇಸುವಿನ ಮೂಲಕ ನಿಮಗೆ ಕೊಟ್ಟ ಆಜ್ಞೆಗಳನ್ನು ನೀವು ತಿಳಿದಿದ್ದೀರಿ.
1 ಥೆಸಲೊನೀಕದವರಿಗೆ 4 : 3 (KNV)
ದೇವರ ಚಿತ್ತವೇನಂದರೆ, ನೀವು ಶುದ್ಧರಾಗಿರಬೇಕೆಂಬದೇ; ಆದದರಿಂದ ಹಾದರಕ್ಕೆ ದೂರವಾಗಿರಬೇಕು.
1 ಥೆಸಲೊನೀಕದವರಿಗೆ 4 : 4 (KNV)
ನಿಮ್ಮಲ್ಲಿ ಪ್ರತಿಯೊಬ್ಬನು ಪವಿತ್ರತೆಯಿಂದಲೂ ಘನತೆ ಯಿಂದಲೂ ತನ್ನ ದೇಹವನ್ನು ಕಾಪಾಡಿಕೊಳ್ಳಲು ತಿಳಿಯಬೇಕು.
1 ಥೆಸಲೊನೀಕದವರಿಗೆ 4 : 5 (KNV)
ದೇವರನ್ನರಿಯದ ಅನ್ಯಜನಗಳಂತೆ ಕಾಮಾಭಿಲಾಷೆಗೆ ಒಳಪಡಬಾರದು.
1 ಥೆಸಲೊನೀಕದವರಿಗೆ 4 : 6 (KNV)
ಈ ವಿಷಯದಲ್ಲಿ ಯಾರೂ ಅತಿಕ್ರಮಿಸಿ ತನ್ನ ಸಹೋದರನನ್ನು ವಂಚಿಸಬಾರದು; ನಾವು ಮುಂಚೆ ತಿಳಿಸಿ ನಿಮಗೆ ಖಂಡಿತವಾಗಿ ಹೇಳಿದ ಪ್ರಕಾರ ಇವೆಲ್ಲವುಗಳ ವಿಷಯದಲ್ಲಿ ಕರ್ತನು ಮುಯ್ಯಿಗೆ ಮುಯ್ಯಿ ತೀರಿಸುವ ವನಾಗಿದ್ದಾನೆ.
1 ಥೆಸಲೊನೀಕದವರಿಗೆ 4 : 7 (KNV)
ದೇವರು ನಮ್ಮನ್ನು ಅಶುದ್ಧತೆಗೆ ಕರೆಯದೆ ಶುದ್ಧತೆಗೆ ಕರೆದನು.
1 ಥೆಸಲೊನೀಕದವರಿಗೆ 4 : 8 (KNV)
ಹೀಗಿರಲು ತಾತ್ಸಾರ ಮಾಡು ವವನು ಮನುಷ್ಯನನ್ನಲ್ಲ, ತನ್ನ ಪರಿಶುದ್ಧಾತ್ಮನನ್ನು ನಮಗೆ ದಯಪಾಲಿಸಿರುವ ದೇವರನ್ನೇ ತಾತ್ಸಾರ ಮಾಡುತ್ತಾನೆ.
1 ಥೆಸಲೊನೀಕದವರಿಗೆ 4 : 9 (KNV)
ಆದರೆ ಸಹೋದರ ಪ್ರೀತಿಯ ವಿಷಯದಲ್ಲಿ ನಿಮಗೆ ಬರೆಯುವದು ಅವಶ್ಯವಿಲ್ಲ; ಒಬ್ಬರನ್ನೊಬ್ಬರು ಪ್ರೀತಿಸ ಬೇಕೆಂಬ ಉಪದೇಶವನ್ನು ನೀವೇ ದೇವರಿಂದ ಹೊಂದಿದವರಾಗಿದ್ದೀರಿ.
1 ಥೆಸಲೊನೀಕದವರಿಗೆ 4 : 10 (KNV)
ಸಮಸ್ತ ಮಕೆದೋನ್ಯ ದಲ್ಲಿರುವ ಸಹೋದರರನ್ನೆಲ್ಲಾ ಪ್ರೀತಿಸುವವರಾಗಿಯೇ ಇದ್ದೀರಿ; ಆದರೂ ಸಹೋದರರೇ, ನೀವು ಪ್ರೀತಿಯಲ್ಲಿ ಇನ್ನೂ ಹೆಚ್ಚುತ್ತಾ ಬರಬೇಕೆಂದು ನಾವು ನಿಮ್ಮನ್ನು ಬೇಡಿಕೊಳ್ಳುತ್ತೇವೆ.
1 ಥೆಸಲೊನೀಕದವರಿಗೆ 4 : 11 (KNV)
ಇದಲ್ಲದೆ ನಾವು ನಿಮಗೆ ಆಜ್ಞೆ ಕೊಟ್ಟ ಪ್ರಕಾರ ನೀವು ಸುಮ್ಮನಿದ್ದು ಸ್ವಂತಕಾರ್ಯವನ್ನೇ ನಡಿಸಿಕೊಂಡು ಕೈಯಾರೆ ಕೆಲಸಮಾಡುವದನ್ನು ಕಲಿಯಿರಿ.
1 ಥೆಸಲೊನೀಕದವರಿಗೆ 4 : 12 (KNV)
ಹೀಗಿದ್ದರೆ ನೀವು ಹೊರಗಿನವರ ಎದುರಿ ನಲ್ಲಿ ಪ್ರಾಮಾಣಿಕರಾಗಿ ನಡೆದುಕೊಳ್ಳುವಿರಿ. ನಿಮಗೆ ಯಾವದಕ್ಕೂ ಕೊರತೆಯಿರುವದಿಲ್ಲ.
1 ಥೆಸಲೊನೀಕದವರಿಗೆ 4 : 13 (KNV)
ಇದಲ್ಲದೆ ಸಹೋದರರೇ, ನಿರೀಕ್ಷೆಯಿಲ್ಲದ ಬೇರೆಯವರ ಹಾಗೆ ದುಃಖಿಸಿದಂತೆ ನಿದ್ರೆಹೋದವರ ವಿಷಯದಲ್ಲಿ ನೀವು ತಿಳಿದಿರಬೇಕೆಂದು ನಾನು ಇಚ್ಚಿಸುತ್ತೇನೆ.
1 ಥೆಸಲೊನೀಕದವರಿಗೆ 4 : 14 (KNV)
ಯೇಸು ಸತ್ತು ತಿರಿಗಿ ಎದ್ದನೆಂದು ನಾವು ನಂಬಿದ ಮೇಲೆ ಅದರಂತೆ ಯೇಸುವಿನ ಲ್ಲಿದ್ದುಕೊಂಡು ನಿದ್ರೆಹೋಗುವವರನ್ನು ಸಹ ದೇವರು ಆತನೊಡನೆ ಕರೆದುಕೊಂಡು ಬರುವನೆಂದು ನಂಬ ಬೇಕಲ್ಲವೇ.
1 ಥೆಸಲೊನೀಕದವರಿಗೆ 4 : 15 (KNV)
ನಾವು ಕರ್ತನ ಮಾತಿನ ಆಧಾರದಿಂದ ನಿಮಗೆ ಹೇಳುವದೇನಂದರೆ, ಕರ್ತನು ಪ್ರತ್ಯಕ್ಷನಾಗು ವವರೆಗೂ ಜೀವದಿಂದುಳಿದಿರುವ ನಾವು ನಿದ್ರೆಹೋದ ವರಿಗಿಂತ ಮುಂದಾಗುವದೇ ಇಲ್ಲ.
1 ಥೆಸಲೊನೀಕದವರಿಗೆ 4 : 16 (KNV)
ಕರ್ತನು ತಾನೇ ಆಜ್ಞಾಘೋಷದೊಡನೆಯೂ ಪ್ರಧಾನ ದೂತನ ಶಬ್ದದೊಡನೆಯೂ ದೇವರ ತುತೂರಿಯೊಡನೆಯೂ ಆಕಾಶದಿಂದ ಇಳಿದು ಬರುವನು; ಆಗ ಕ್ರಿಸ್ತನಲ್ಲಿರುವ ಸತ್ತವರು ಮೊದಲು ಎದ್ದು ಬರುವರು;
1 ಥೆಸಲೊನೀಕದವರಿಗೆ 4 : 17 (KNV)
ಆಮೇಲೆ ಜೀವದಿಂದುಳಿದಿರುವ ನಾವು ಅಂತರಿಕ್ಷದಲ್ಲಿ ಕರ್ತನನ್ನು ಎದುರುಗೊಳ್ಳುವದಕ್ಕಾಗಿ ಅವರ ಸಂಗಡಲೇ ಮೇಘ ಗಳಲ್ಲಿ ಒಯ್ಯಲ್ಪಡುವೆವು. ಹೀಗಾಗಿ ನಾವು ಸದಾ ಕಾಲವೂ ಕರ್ತನ ಜೊತೆಯಲ್ಲಿರುವೆವು.
1 ಥೆಸಲೊನೀಕದವರಿಗೆ 4 : 18 (KNV)
ಆದ ಕಾರಣ ಈ ಮಾತುಗಳಿಂದ ಒಬ್ಬರನ್ನೊಬ್ಬರು ಸಂತೈಸಿರಿ.

1 2 3 4 5 6 7 8 9 10 11 12 13 14 15 16 17 18