1 ಥೆಸಲೊನೀಕದವರಿಗೆ 1 : 1 (KNV)
ತಂದೆಯಾದ ದೇವರಲ್ಲಿಯೂ ಕರ್ತನಾದ ಯೇಸು ಕ್ರಿಸ್ತನಲ್ಲಿಯೂ ಇರುವ ಥೆಸಲೊ ನೀಕದವರ ಸಭೆಗೆ ಪೌಲ ಸಿಲ್ವಾನ ತಿಮೊಥೆಯ ಎಂಬ ನಾವು ಬರೆಯುವದೇನಂದರೆ--ನಮ್ಮ ತಂದೆಯಾದ ದೇವರಿಂದಲೂ ಕರ್ತನಾದ ಯೇಸು ಕ್ರಿಸ್ತನಿಂದಲೂ ನಿಮಗೆ ಕೃಪೆಯೂ ಶಾಂತಿಯೂ ಆಗಲಿ.
1 ಥೆಸಲೊನೀಕದವರಿಗೆ 1 : 2 (KNV)
ನಮ್ಮ ಪ್ರಾರ್ಥನೆಗಳಲ್ಲಿ ನಿಮ್ಮನ್ನು ಜ್ಞಾಪಕ ಮಾಡಿ ಕೊಂಡು ನಾವು ಯಾವಾಗಲೂ ನಿಮ್ಮೆಲ್ಲರ ವಿಷಯವಾಗಿ ದೇವರಿಗೆ ಕೃತಜ್ಞತಾಸ್ತುತಿ ಸಲ್ಲಿಸುತ್ತೇವೆ.
1 ಥೆಸಲೊನೀಕದವರಿಗೆ 1 : 3 (KNV)
ನಂಬಿಕೆಯ ಫಲವಾದ ನಿಮ್ಮ ಕೆಲಸವನ್ನೂ ಪ್ರೀತಿಪೂರ್ವಕವಾದ ನಿಮ್ಮ ಪ್ರಯಾಸವನ್ನೂ ನಮ್ಮ ಕರ್ತನಾದ ಯೇಸು ಕ್ರಿಸ್ತನ ಮೇಲಣ ನಿರೀಕ್ಷೆಯಿಂದುಂಟಾದ ನಿಮ್ಮ ಸೈರಣೆ ಯನ್ನೂ ನಾವು ನಮ್ಮ ತಂದೆಯಾದ ದೇವರ ಮುಂದೆ ಎಡೆಬಿಡದೆ ಜ್ಞಾಪಕಮಾಡಿಕೊಳ್ಳುತ್ತೇವೆ.
1 ಥೆಸಲೊನೀಕದವರಿಗೆ 1 : 4 (KNV)
ಪ್ರಿಯ ಸಹೋದರರೇ, ದೇವರು ನಿಮ್ಮನ್ನು ಆದುಕೊಂಡಿ ದ್ದಾನೆಂಬದ್ದನ್ನು ಬಲ್ಲೆವು.
1 ಥೆಸಲೊನೀಕದವರಿಗೆ 1 : 5 (KNV)
ನಮ್ಮ ಸುವಾರ್ತೆಯು ನಿಮಗೆ ಬರೀ ಮಾತಾಗಿ ಬಾರದೆ ಶಕ್ತಿಯಲ್ಲಿಯೂ ಪವಿತ್ರಾತ್ಮ ದಲ್ಲಿಯೂ ಬಹು ನಿಶ್ಚಯತ್ವದಲ್ಲಿಯೂ ಬಂತೆಂಬದನ್ನು ತಿಳಿದಿದ್ದೇವೆ. ನಾವು ನಿಮ್ಮಲ್ಲಿದ್ದು ನಿಮಗೋಸ್ಕರ ಎಂಥವರಾಗಿ ವರ್ತಿಸಿದೆವೆಂಬದನ್ನು ನೀವೂ ತಿಳಿದಿ ದ್ದೀರಿ.
1 ಥೆಸಲೊನೀಕದವರಿಗೆ 1 : 6 (KNV)
ಇದಲ್ಲದೆ ನೀವು ಬಹಳ ಹಿಂಸೆಯನ್ನು ಅನುಭವಿಸಬೇಕಾಗಿದ್ದರೂ ಪವಿತ್ರಾತ್ಮನಿಂದುಂಟಾದ ಆನಂದದೊಡನೆ ವಾಕ್ಯವನ್ನು ಅಂಗೀಕರಿಸಿ ನಮ್ಮನ್ನೂ ಕರ್ತನನ್ನೂ ಅನುಸರಿಸುವವರಾದಿರಿ.
1 ಥೆಸಲೊನೀಕದವರಿಗೆ 1 : 7 (KNV)
ಹೀಗೆ ಮಕೆ ದೋನ್ಯದಲ್ಲಿಯೂ ಅಕಾಯದಲ್ಲಿಯೂ ನಂಬುವವ ರೆಲ್ಲರಿಗೆ ನೀವು ಮಾದರಿಯಾದಿರಿ;
1 ಥೆಸಲೊನೀಕದವರಿಗೆ 1 : 8 (KNV)
ಕರ್ತನ ವಾಕ್ಯವು ನಿಮ್ಮಿಂದಲೇ ಮಕೆದೋನ್ಯದಲ್ಲಿಯೂ ಅಕಾಯ ದಲ್ಲಿಯೂ ಘೋಷಿತವಾದದ್ದಲ್ಲದೆ ದೇವರ ಮೇಲೆ ನೀವು ಇಟ್ಟಿರುವ ನಂಬಿಕೆಯು ಎಲ್ಲಾ ಸ್ಥಳಗಳಲ್ಲಿಯೂ ಪ್ರಸಿದ್ಧವಾಯಿತು; ಆದದರಿಂದ ಆ ವಿಷಯದಲ್ಲಿ ನಾವು ಏನೂ ಹೇಳಬೇಕಾದದ್ದಿಲ್ಲ.
1 ಥೆಸಲೊನೀಕದವರಿಗೆ 1 : 9 (KNV)
ನಾವು ನಿಮ್ಮಲ್ಲಿ ಹೇಗೆ ಪ್ರವೇಶಿಸಿದೆವೆಂಬದನ್ನೂ ನೀವು ಹೇಗೆ ವಿಗ್ರಹಗಳನ್ನು ಬಿಟ್ಟುಬಿಟ್ಟು ದೇವರ ಕಡೆಗೆ ತಿರುಗಿಕೊಂಡು ಜೀವವುಳ್ಳ ಸತ್ಯದೇವರನ್ನು ಸೇವಿಸುವವರಾದಿರೆಂಬದನ್ನೂ ಅವರು ತಾವೇ ಹೇಳುತ್ತಾರೆ.
1 ಥೆಸಲೊನೀಕದವರಿಗೆ 1 : 10 (KNV)
ಇದಲ್ಲದೆ ಆತನು ಸತ್ತವರೊಳ ಗಿಂದ ಎಬ್ಬಿಸಿದಂಥ ಮತ್ತು ಪರಲೋಕದಿಂದ ಬರುವಂಥ ಆತನ ಕುಮಾರನನ್ನು ಎದುರು ನೋಡುವವರಾದಿರೆಂಬ ದನ್ನೂ ತಿಳಿಸುತ್ತಾರೆ. ಈ ಯೇಸುವು ಮುಂದೆ ಬರುವ ಕೋಪದಿಂದ ನಮ್ಮನ್ನು ತಪ್ಪಿಸಿದನು.

1 2 3 4 5 6 7 8 9 10

BG:

Opacity:

Color:


Size:


Font: