1 ಸಮುವೇಲನು 7 : 1 (KNV)
ಕಿರ್ಯತ್ಯಾರೀಮಿನ ಮನುಷ್ಯರು ಬಂದು ಕರ್ತನ ಮಂಜೂಷವನ್ನು ತಕ್ಕೊಂಡು ಗುಡ್ಡದ ಮೇಲೆ ಇರುವ ಅಬೀನಾದಾಬನ ಮನೆಯಲ್ಲಿ ತಂದಿಟ್ಟು ಕರ್ತನ ಮಂಜೂಷವನ್ನು ಕಾಯುವದ ಕ್ಕೋಸ್ಕರ ಅವನ ಕುಮಾರನಾದ ಎಲ್ಲಾಜಾರನನ್ನು ಪ್ರತಿಷ್ಠಿಸಿದರು.
1 ಸಮುವೇಲನು 7 : 2 (KNV)
ಮಂಜೂಷವು ಕಿರ್ಯತ್ಯಾರೀಮಿನಲ್ಲಿ ಬಂದು ಬಹಳ ದಿವಸಗಳು ಅಂದರೆ ಇಪ್ಪತ್ತು ವರುಷ ಇದ್ದಾಗ ಇಸ್ರಾಯೇಲ್ ಮನೆತನದವರೆಲ್ಲರು ಕರ್ತನಿಗೋ ಸ್ಕರ ಗೋಳಾಡುತ್ತಿದ್ದರು.
1 ಸಮುವೇಲನು 7 : 3 (KNV)
ಆಗ ಸಮುವೇಲನು ಇಸ್ರಾಯೇಲ್ ಮನೆಯವರಿಗೆಲ್ಲಾ ಮಾತನಾಡಿ--ನೀವು ನಿಮ್ಮ ಪೂರ್ಣಹೃದಯದಿಂದ ಕರ್ತನ ಕಡೆಗೆ ತಿರುಗಿ ನಿಮ್ಮಲ್ಲಿರುವ ಅನ್ಯದೇವರುಗಳನ್ನೂ ಅಷ್ಟೋ ರೆತ್ನ್ನೂ ನಿಮ್ಮ ಮಧ್ಯದಲ್ಲಿಂದ ತೆಗೆದುಹಾಕಿ ನಿಮ್ಮ ಹೃದಯವನ್ನು ಕರ್ತನಿಗೆ ಸಿದ್ಧಮಾಡಿ ಆತನೊಬ್ಬನನ್ನೇ ಸೇವಿಸಿದರೆ ಆತನು ನಿಮ್ಮನ್ನು ಫಿಲಿಷ್ಟಿಯರ ಕೈಗಳೊ ಳಗಿಂದ ತಪ್ಪಿಸುವನು.
1 ಸಮುವೇಲನು 7 : 4 (KNV)
ಆಗ ಇಸ್ರಾಯೇಲ್ ಮಕ್ಕಳು ಬಾಳನ್ನೂ ಅಷ್ಟೋರೆತ್ನ್ನೂ ತೆಗೆದುಹಾಕಿ ಕರ್ತ ನೊಬ್ಬನನ್ನೇ ಸೇವಿಸಿದರು.
1 ಸಮುವೇಲನು 7 : 5 (KNV)
ಸಮುವೇಲನು--ನಾನು ನಿಮಗೋಸ್ಕರವಾಗಿ ಕರ್ತನನ್ನು ಪ್ರಾರ್ಥಿಸುವ ಹಾಗೆ ಇಸ್ರಾಯೇಲನ್ನೆಲ್ಲಾ ಮಿಚ್ಪೆಯಲ್ಲಿ ಕೂಡಿಸಿಕೊಳ್ಳಿರಿ ಅಂದನು. ಅವರೆಲ್ಲರು ಮಿಚ್ಪೆಯಲ್ಲಿ ಒಟ್ಟುಕೂಡಿ ಬಂದು ಕರ್ತನ ಮುಂದೆ ನೀರು ತಂದು ಹೊಯ್ದು ಆ ದಿವಸದಲ್ಲಿ ಉಪವಾಸಮಾಡಿ--
1 ಸಮುವೇಲನು 7 : 6 (KNV)
ಕರ್ತನಿಗೆ ವಿರೋಧವಾಗಿ ಪಾಪ ಮಾಡಿದ್ದೇವೆ ಎಂದು ಅಲ್ಲಿ ಹೇಳಿದರು. ಸಮುವೇಲನು ಇಸ್ರಾಯೇಲ್ ಮಕ್ಕಳಿಗೆ ಮಿಚ್ಪೆಯಲ್ಲಿ ನ್ಯಾಯ ತೀರಿಸುತ್ತಿದ್ದನು.
1 ಸಮುವೇಲನು 7 : 7 (KNV)
ಆದರೆ ಇಸ್ರಾಯೇಲ್ ಮಕ್ಕಳು ಮಿಚ್ಪೆಯಲ್ಲಿ ಕೂಡಿಬಂದರೆಂದು ಫಿಲಿಷ್ಟಿಯರು ಕೇಳಿದಾಗ ಫಿಲಿಷ್ಟಿ ಯರ ಅಧಿಪತಿಗಳು ಇಸ್ರಾಯೇಲ್ಯರಿಗೆ ವಿರೋಧವಾಗಿ ಬಂದರು.
1 ಸಮುವೇಲನು 7 : 8 (KNV)
ಆಗ ಇಸ್ರಾಯೇಲ್ ಮಕ್ಕಳು ಇದನ್ನು ಕೇಳಿ ಫಿಲಿಷ್ಟಿಯರಿಗೋಸ್ಕರ ಭಯಪಟ್ಟು ಸಮುವೇಲ ನಿಗೆ--ನಮ್ಮ ದೇವರಾದ ಕರ್ತನು ನಮ್ಮನ್ನು ಫಿಲಿಷ್ಟಿ ಯರ ಕೈಯಿಂದ ತಪ್ಪಿಸಿ ರಕ್ಷಿಸುವ ಹಾಗೆ ನೀನು ನಮಗೋಸ್ಕರವಾಗಿ ಮೌನವಾಗಿರದೆ ಆತನಿಗೆ ಮೊರೆ ಯಿಡು ಅಂದರು.
1 ಸಮುವೇಲನು 7 : 9 (KNV)
ಆಗ ಸಮುವೇಲನು ಹಾಲು ಕುಡಿಯುವ ಕುರಿಮರಿಯನ್ನು ತೆಗೆದುಕೊಂಡು ಕರ್ತ ನಿಗೆ ಪೂರ್ಣ ದಹನಬಲಿಯನ್ನು ಅರ್ಪಿಸಿದನು; ಸಮುವೇಲನು ಇಸ್ರಾಯೇಲಿಗೋಸ್ಕರ ಕರ್ತನಿಗೆ ಮೊರೆಯಿಟ್ಟನು. ಕರ್ತನು ಅವನಿಗೆ ಕಿವಿಗೊಟ್ಟನು.
1 ಸಮುವೇಲನು 7 : 10 (KNV)
ಸಮುವೇಲನು ದಹನಬಲಿಯನ್ನು ಅರ್ಪಿಸುವಾಗ ಫಿಲಿಷ್ಟಿಯರು ಇಸ್ರಾಯೇಲಿನ ಮೇಲೆ ಯುದ್ಧಮಾಡಲು ಸವಿಾಪಕ್ಕೆ ಬಂದರು. ಆಗ ಕರ್ತನು ಫಿಲಿಷ್ಟಿಯರ ಮೇಲೆ ದೊಡ್ಡ ಶಬ್ದದಿಂದ ಗುಡುಗಿ ಅವರನ್ನು ಸೋಲಿ ಸಿದನು; ಅವರು ಇಸ್ರಾಯೇಲಿನ ಮುಂದೆ ಹೊಡೆ ಯಲ್ಪಟ್ಟರು.
1 ಸಮುವೇಲನು 7 : 11 (KNV)
ಆಗ ಇಸ್ರಾಯೇಲ್ಯರು ಮಿಚ್ಛೆಯಿಂದ ಹೊರಟು ಫಿಲಿಷ್ಟಿಯರನ್ನು ಹಿಂದಟ್ಟಿ ಬೇತ್ಕರಿನ ವರೆಗೂ ಅವರನ್ನು ಹೊಡೆದರು.
1 ಸಮುವೇಲನು 7 : 12 (KNV)
ಸಮುವೇಲನು ಒಂದು ಕಲ್ಲನ್ನು ತೆಗೆದುಕೊಂಡು ಮಿಚ್ಪೆಗೂ ಶೇನಿಗೂ ಮಧ್ಯ ದಲ್ಲಿ ನಿಲ್ಲಿಸಿ--ಈವರೆಗೂ ಕರ್ತನು ನಮಗೆ ಸಹಾಯ ಮಾಡಿದ್ದಾನೆಂದು ಹೇಳಿ ಅದಕ್ಕೆ ಎಬೆನೆಜೆರ ಎಂದು ಹೆಸರಿಟ್ಟನು.
1 ಸಮುವೇಲನು 7 : 13 (KNV)
ಫಿಲಿಷ್ಟಿಯರು ತಗ್ಗಿಸಲ್ಪಟ್ಟು ಇಸ್ರಾ ಯೇಲಿನ ಮೇರೆಯಲ್ಲಿ ಬಾರದೆ ಇದ್ದರು. ಇದಲ್ಲದೆ ಸಮುವೇಲನು ಇದ್ದ ದಿವಸಗಳೆಲ್ಲಾ ಕರ್ತನ ಕೈ ಫಿಲಿಷ್ಟಿ ಯರಿಗೆ ವಿರೋಧವಾಗಿತ್ತು.
1 ಸಮುವೇಲನು 7 : 14 (KNV)
ಫಿಲಿಷ್ಟಿಯರು ಇಸ್ರಾ ಯೇಲಿನಿಂದ ತೆಗೆದುಕೊಂಡಿದ್ದ ಎಕ್ರೋನ್ ಮೊದಲು ಗೊಂಡು ಗತ್ ವರೆಗೂ ಇರುವ ಪಟ್ಟಣಗಳು ಇಸ್ರಾ ಯೇಲಿಗೆ ತಿರಿಗಿ ಕೊಡಲ್ಪಟ್ಟವು. ಅವುಗಳ ಮೇರೆ ಗಳನ್ನು ಇಸ್ರಾಯೇಲ್ಯರು ಫಿಲಿಷ್ಟಿಯರ ಕೈಯಿಂದ ಬಿಡಿಸಿ ಕೊಂಡರು. ಇಸ್ರಾಯೇಲಿಗೂ ಅಮೋರಿಯರಿಗೂ ಮಧ್ಯ ಸಮಾಧಾನ ಉಂಟಾಗಿತ್ತು.
1 ಸಮುವೇಲನು 7 : 15 (KNV)
ಇದಲ್ಲದೆ ಸಮುವೇಲನು ತಾನು ಬದುಕಿದ ಎಲ್ಲಾ ದಿವಸಗಳಲ್ಲಿ ಇಸ್ರಾಯೇಲಿಗೆ ನ್ಯಾಯತೀರಿಸಿದನು.
1 ಸಮುವೇಲನು 7 : 16 (KNV)
ಅವನು ಪ್ರತಿವರುಷ ಹೊರಟು ಬೇತೇಲ್ ಗಿಲ್ಗಾಲ್ ಮಿಚ್ಪೆಯನ್ನೂ ಸುತ್ತಿಕೊಂಡುಹೋಗಿ ಆ ಸ್ಥಳಗಳಲ್ಲಿ ಇಸ್ರಾಯೇಲಿಗೆ ನ್ಯಾಯತೀರಿಸಿದನು.
1 ಸಮುವೇಲನು 7 : 17 (KNV)
ಅವನು ರಾಮಕ್ಕೆ ತಿರಿಗಿ ಬರುತ್ತಿದ್ದನು. ಯಾಕಂದರೆ ಅಲ್ಲಿ ಅವನ ಮನೆ ಇತ್ತು; ಅಲ್ಲಿ ಇಸ್ರಾಯೇಲಿಗೆ ನ್ಯಾಯ ತೀರಿಸಿ ದನು; ಕರ್ತನಿಗೆ ಅಲ್ಲಿ ಒಂದು ಯಜ್ಞವೇದಿಯನ್ನು ಕಟ್ಟಿಸಿದನು.

1 2 3 4 5 6 7 8 9 10 11 12 13 14 15 16 17

BG:

Opacity:

Color:


Size:


Font: