1 ಸಮುವೇಲನು 29 : 1 (KNV)
ಆದರೆ ಫಿಲಿಷ್ಟಿಯರು ತಮ್ಮ ಎಲ್ಲಾ ಸೈನ್ಯಗಳನ್ನು ಅಫೇಕದಲ್ಲಿ ಕೂಡಿಸಿ ಕೊಂಡರು. ಹಾಗೆಯೇ ಇಸ್ರಾಯೇಲ್ಯರು ಇಜ್ರೇಲ್ ನಲ್ಲಿರುವ ಬುಗ್ಗೆಯ ಬಳಿಯಲ್ಲಿ ದಂಡಿಳಿದರು.
1 ಸಮುವೇಲನು 29 : 2 (KNV)
ಫಿಲಿಷ್ಟಿ ಯರ ಅಧಿಪತಿಗಳು ನೂರು ನೂರಾಗಿಯೂ ಸಾವಿರ ಸಾವಿರವಾಗಿಯೂ ನಡೆದು ಬಂದರು; ಆದರೆ ದಾವೀ ದನೂ ಅವನ ಮನುಷ್ಯರೂ ಆಕೀಷನ ಸಂಗಡ ಹಿಂದಿನ ದಂಡಿನಲ್ಲಿ ಬಂದರು.
1 ಸಮುವೇಲನು 29 : 3 (KNV)
ಆಗ ಫಿಲಿಷ್ಟಿಯರ ಅಧಿಪತಿ ಗಳು--ಈ ಇಬ್ರಿಯರು ಯಾಕೆ ಅಂದರು. ಆಕೀಷನು ಫಿಲಿಷ್ಟಿಯರ ಅಧಿಪತಿಗಳಿಗೆ--ಇಸ್ರಾಯೇಲಿನ ಅರಸ ನಾದ ಸೌಲನ ಸೇವಕ ಈ ದಾವೀದನು ಇಷ್ಟು ದಿವಸ ಗಳೂ ಇಷ್ಟು ವರುಷಗಳೂ ನನ್ನ ಸಂಗಡ ಇದ್ದದ್ದಿ ಲ್ಲವೋ? ಇವನು ನಮ್ಮ ಬಳಿಗೆ ಬಂದು ಇದ್ದ ದಿವಸದ ಮೊದಲುಗೊಂಡು ಇಂದಿನ ವರೆಗೂ ನಾನು ಅವ ನಲ್ಲಿ ಒಂದು ಅಪರಾಧವನ್ನಾದರೂ ಕಂಡುಕೊಳ್ಳಲಿಲ್ಲ ಅಂದನು.
1 ಸಮುವೇಲನು 29 : 4 (KNV)
ಆದರೆ ಫಿಲಿಷ್ಟಿಯರ ಅಧಿಪತಿಗಳು ಅವನ ಮೇಲೆ ರೌದ್ರವಾಗಿ ಅವನಿಗೆ--ಇವನು ಯುದ್ಧದಲ್ಲಿ ನಮಗೆ ಶತ್ರುವಾಗಿರದ ಹಾಗೆ ಯುದ್ಧಕ್ಕೆ ನಮ್ಮ ಸಂಗಡ ಇವನನ್ನು ಬರಗೊಡದೆ ನೀನು ಅವನಿಗೆ ನೇಮಿಸಿದ ತನ್ನ ಸ್ಥಳಕ್ಕೆ ತಿರಿಗಿ ಹೋಗುವ ಹಾಗೆ ಅವನನ್ನು ಕಳುಹಿಸಿಬಿಡು. ಇವನು ಯಾತರಿಂದ ತನ್ನ ದೊರೆಗೆ ತನ್ನನ್ನು ಇಷ್ಟನಾಗ ಮಾಡಿಕೊಳ್ಳುವನು. ಅದು ಈ ಮನುಷ್ಯರ ತಲೆಗಳಿಂದಲ್ಲವೇ?
1 ಸಮುವೇಲನು 29 : 5 (KNV)
ಸೌಲನು ಸಾವಿರ ಜನರನ್ನೂ ದಾವೀದನು ಹತ್ತು ಸಾವಿರ ಜನರನ್ನೂ ಹೊಡೆದನೆಂದು ನಾಟ್ಯದಲ್ಲಿ ಒಬ್ಬರಿಗೊಬ್ಬರು ಹಾಡಿದ್ದು ಈ ದಾವೀದನನ್ನು ಕುರಿತಲ್ಲವೋ ಅಂದರು.
1 ಸಮುವೇಲನು 29 : 6 (KNV)
ಆಗ ಆಕೀಷನು ದಾವೀದನನ್ನು ಕರೆದು ಅವನಿಗೆ--ನಿಜವಾಗಿಯೂ ಕರ್ತನಾಣೆ, ನೀನು ಯಥಾರ್ಥನು, ನೀನು ನನ್ನ ಸಂಗಡ ದಂಡಿನಲ್ಲಿ ಹೋಗುತ್ತಾ ಬರುತ್ತಾ ಇರುವದು ನನ್ನ ದೃಷ್ಟಿಗೆ ಒಳ್ಳೇದು. ನೀನು ನನ್ನ ಬಳಿಗೆ ಬಂದ ದಿನದಿಂದ ಈವರೆಗೂ ನಿನ್ನಲ್ಲಿ ಕೆಟ್ಟದ್ದನ್ನು ಕಂಡದ್ದಿಲ್ಲ.
1 ಸಮುವೇಲನು 29 : 7 (KNV)
ಆದರೆ ಈಗ ನೀನು ಅಧಿಪತಿಗಳ ದೃಷ್ಟಿಗೆ ಒಳ್ಳೆಯವನಲ್ಲ. ಆದದರಿಂದ ನೀನು ಫಿಲಿಷ್ಟಿಯರ ಅಧಿಪತಿಗಳ ದೃಷ್ಟಿಗೆ ಮೆಚ್ಚಿಕೆ ಇಲ್ಲದ್ದನ್ನು ಮಾಡದ ಹಾಗೆ ಈಗ ಸಮಾಧಾನವಾಗಿ ಹಿಂದಕ್ಕೆ ನಿನ್ನ ಸ್ಥಳಕ್ಕೆ ಹೋಗು ಅಂದನು.
1 ಸಮುವೇಲನು 29 : 8 (KNV)
ದಾವೀದನು ಆಕೀಷನಿಗೆ--ನನ್ನ ಯಜಮಾನನಾದ ಅರಸನ ಶತ್ರುಗಳ ಸಂಗಡ ಯುದ್ಧ ಮಾಡಲು ಹೋಗದ ಹಾಗೆ ನಾನೇನು ಮಾಡಿ ದೆನು? ನಿನ್ನ ದಾಸನು ನಿನ್ನ ಬಳಿಗೆ ಬಂದಂದಿನಿಂದ ಈ ದಿನದ ವರೆಗೂ ನನ್ನಲ್ಲಿ ಏನು ಕಂಡುಕೊಂಡಿ ಅಂದನು.
1 ಸಮುವೇಲನು 29 : 9 (KNV)
ಆಕೀಷನು ದಾವೀದನಿಗೆ ಪ್ರತ್ಯುತ್ತರವಾಗಿನೀನು ನನ್ನ ದೃಷ್ಟಿಯಲ್ಲಿ ಒಬ್ಬ ದೇವದೂತನ ಹಾಗೆಯೇ ಉತ್ತಮನಾಗಿದ್ದೀ ಎಂದು ನಾನು ಬಲ್ಲೆನು. ಆದರೆ ಯುದ್ಧಕ್ಕೆ ಇವನು ನಮ್ಮ ಸಂಗಡ ಬರಬಾರದೆಂದು ಫಿಲಿಷ್ಟಿಯರ ಅಧಿಪತಿಗಳು ಹೇಳಿದ್ದಾರೆ.
1 ಸಮುವೇಲನು 29 : 10 (KNV)
ಆದದರಿಂದ ನಾಳೆ ಉದಯಕ್ಕೆ ಎದ್ದು ನಿನ್ನ ಸಂಗಡ ಬಂದ ನಿನ್ನ ದೊರೆಯ ಸೇವಕರನ್ನು ಕರಕೊಂಡು ಏಳುತ್ತಲೇ ಅವರ ಸಂಗಡ ಉದಯದಲ್ಲಿ ಬೆಳಕು ಆಗುವಾಗ ಹೊರಟು ಹೋಗು ಅಂದನು.
1 ಸಮುವೇಲನು 29 : 11 (KNV)
ಹಾಗೆಯೇ ದಾವೀದನೂ ಅವನ ಜನರೂ ಉದಯದಲ್ಲಿ ಫಿಲಿಷ್ಟಿಯರ ದೇಶಕ್ಕೆ ತಿರಿಗಿ ಹೋಗಲು ಮುಂಜಾನೆ ಎದ್ದರು. ಆದರೆ ಫಿಲಿಷ್ಟಿ ಯರು ಇಜ್ರೇಲಿಗೆ ಹೊರಟುಹೋದರು.
❮
❯