1 ಸಮುವೇಲನು 23 : 1 (KNV)
ಇಗೋ, ಫಿಲಿಷ್ಟಿಯರು ಕೆಯಾಲಾಕ್ಕೆ ವಿರೋಧವಾಗಿ ಯುದ್ಧಮಾಡಿ ಕಣಗಳನ್ನು ಕೊಳ್ಳೆಮಾಡುತ್ತಿದ್ದಾರೆಂದು ದಾವೀದನಿಗೆ ತಿಳಿಸಿದರು.
1 ಸಮುವೇಲನು 23 : 2 (KNV)
ಆದದರಿಂದ ದಾವೀದನು--ನಾನು ಈ ಫಿಲಿಷ್ಟಿ ಯರನ್ನು ಹೊಡೆಯಲು ಹೋಗಲೋ ಎಂದು ಕರ್ತ ನನ್ನು ಕೇಳಿದನು; ಅದಕ್ಕೆ ಕರ್ತನು--ನೀನು ಹೋಗಿ ಫಿಲಿಷ್ಟಿಯರನ್ನು ಹೊಡೆದು ಕೆಯಾಲಾವನ್ನು ರಕ್ಷಿಸು ಅಂದನು.
1 ಸಮುವೇಲನು 23 : 3 (KNV)
ಆಗ ದಾವೀದನ ಮನುಷ್ಯರು ಅವನಿಗೆಇಗೋ, ನಾವು ಇಲ್ಲಿ ಯೆಹೂದದಲ್ಲಿರುವಾಗಲೇ ಭಯಪಡುತ್ತೇವೆ; ಆದರೆ ನಾವು ಫಿಲಿಷ್ಟಿಯರ ಸೈನ್ಯ ಗಳಿಗೆ ವಿರೋಧವಾಗಿ ಕೆಯಾಲಾಕ್ಕೆ ಹೋದರೆ ಎಷ್ಟು ಅಧಿಕವಾದ ಭಯವಾಗುವದು ಅಂದರು.
1 ಸಮುವೇಲನು 23 : 4 (KNV)
ದಾವೀ ದನು ತಿರಿಗಿ ಕರ್ತನನ್ನು ಕೇಳಿದನು. ಅದಕ್ಕೆ ಕರ್ತನು ಪ್ರತ್ಯುತ್ತರವಾಗಿ--ನೀನೆದ್ದು ಕೆಯಾಲಾಕ್ಕೆ ಹೋಗು; ನಾನು ಫಿಲಿಷ್ಟಿಯರನ್ನು ನಿನ್ನ ಕೈಯಲ್ಲಿ ಒಪ್ಪಿಸಿಕೊಡು ವೆನು ಅಂದನು.
1 ಸಮುವೇಲನು 23 : 5 (KNV)
ಹಾಗೆಯೇ ದಾವೀದನೂ ತನ್ನ ಮನುಷ್ಯರೂ ಕೆಯಾಲಾಕ್ಕೆ ಹೋಗಿ ಫಿಲಿಷ್ಟಿಯರ ಸಂಗಡ ಯುದ್ಧಮಾಡಿ ಅವರ ದನಗಳನ್ನು ಹಿಡುಕೊಂಡು ಬಂದು ಅವರನ್ನು ಪೂರ್ಣವಾಗಿ ಸಂಹರಿಸಿದನು. ಈ ಪ್ರಕಾರ ದಾವೀದನು ಕೆಯಾಲಾದ ನಿವಾಸಿಗಳನ್ನು ರಕ್ಷಿಸಿದನು.
1 ಸಮುವೇಲನು 23 : 6 (KNV)
ಆದರೆ ಅಹೀಮೆಲೆಕನ ಮಗನಾದ ಎಬ್ಯಾತಾರನು ಕೆಯಾಲಾದಲ್ಲಿ ಇರುವ ದಾವೀದನ ಬಳಿಗೆ ಓಡಿಬಂದಾಗ ಅವನ ಕೈಯಲ್ಲಿ ಎಫೋದು ಇತ್ತು.
1 ಸಮುವೇಲನು 23 : 7 (KNV)
ದಾವೀದನು ಕೆಯಾಲಾಕ್ಕೆ ಬಂದಿದ್ದಾನೆಂದು ಸೌಲನಿಗೆ ತಿಳಿಸಲ್ಪಟ್ಟಾಗ ಸೌಲನು--ದೇವರು ಅವನನ್ನು ನನ್ನ ಕೈಯಲ್ಲಿ ಒಪ್ಪಿಸಿಕೊಟ್ಟನು, ಯಾಕಂದರೆ ಅವನು ಬಾಗಲುಗಳೂ ಅಗುಳಿಗಳೂ ಇರುವ ಪಟ್ಟಣದ ಒಳಗೆ ಪ್ರವೇಶಿಸಿದ್ದರಿಂದ ಮುಚ್ಚಲ್ಪಟ್ಟಿ ದ್ದಾನೆ ಅಂದುಕೊಂಡನು.
1 ಸಮುವೇಲನು 23 : 8 (KNV)
ಸೌಲನು ದಾವೀದನನ್ನೂ ಅವನ ಮನುಷ್ಯರನ್ನೂ ಮುತ್ತಿಕೊಳ್ಳುವ ಹಾಗೆ ತನ್ನವರನೆಲ್ಲಾ ಕೆಯಾಲಾಕ್ಕೆ ಯುದ್ಧಕ್ಕೆ ಹೋಗಲು ಕರೆದನು.
1 ಸಮುವೇಲನು 23 : 9 (KNV)
ಸೌಲನು ತನಗೆ ಕೇಡನ್ನು ಮಾಡಲು ಗುಟ್ಟಾಗಿ ಯೋಚಿಸುತ್ತಿದ್ದಾನೆಂದು ದಾವೀದನು ತಿಳಿದಿ ದ್ದರಿಂದ ಯಾಜಕನಾದ ಎಬ್ಯಾತಾರನಿಗೆ--ಎಫೋದನ್ನು ಇಲ್ಲಿಗೆ ತಕ್ಕೊಂಡು ಬಾ ಅಂದನು.
1 ಸಮುವೇಲನು 23 : 10 (KNV)
ದಾವೀದನುಓ ಇಸ್ರಾಯೇಲ್ ದೇವರಾದ ಕರ್ತನೇ, ಸೌಲನು ಕೆಯಾಲಾಕ್ಕೆ ಬಂದು ನನ್ನ ನಿಮಿತ್ತ ಪಟ್ಟಣವನ್ನು ಕೆಡಿಸಲು ಹುಡುಕುತ್ತಿದ್ದಾನೆಂದು ನಿನ್ನ ಸೇವಕನು ಖಂಡಿತವಾಗಿ ಕೇಳಿದನು.
1 ಸಮುವೇಲನು 23 : 11 (KNV)
ಕೆಯಾಲಾ ಪಟ್ಟಣದವರು ನನ್ನನ್ನು ಅವನ ಕೈಯಲ್ಲಿ ಒಪ್ಪಿಸಿಕೊಡುವರೋ? ನಿನ್ನ ಸೇವಕನು ಕೇಳಿದ ಹಾಗೆ ಸೌಲನು ಇಲ್ಲಿಗೆ ಬರುವನೋ? ಇಸ್ರಾಯೇಲಿನ ದೇವರಾದ ಕರ್ತನೇ, ದಯ ಮಾಡಿ ಇದನ್ನು ನಿನ್ನ ಸೇವಕನಿಗೆ ತಿಳಿಸು ಅಂದನು. ಅದಕ್ಕೆ ಕರ್ತನು--ಅವನು ಬರುವನು ಅಂದನು.
1 ಸಮುವೇಲನು 23 : 12 (KNV)
ಕೆಯಾಲಾ ಪಟ್ಟಣದವರು ನನ್ನನ್ನು ನನ್ನ ಜನರನ್ನು ಸೌಲನ ಕೈಯಲ್ಲಿ ಒಪ್ಪಿಸಿಕೊಡುವರೋ ಎಂದು ದಾವೀದನು ಕೇಳಿದಾಗ ಕರ್ತನು--ಅವರು ಒಪ್ಪಿಸಿ ಕೊಡುವರು ಅಂದನು.
1 ಸಮುವೇಲನು 23 : 13 (KNV)
ಆದದರಿಂದ ದಾವೀದನು ಹೆಚ್ಚು ಕಡಿಮೆ ಆರು ನೂರು ಮಂದಿಯಾದ ತನ್ನ ಜನರು ಎದ್ದು ಕೆಯಾಲಾವನ್ನು ಬಿಟ್ಟು ಹೊರಟು ತಾವು ಹೋಗಬೇಕಾದಲ್ಲಿಗೆ ಹೋದರು. ದಾವೀದನು ಕೆಯಾಲಾದಿಂದ ತಪ್ಪಿಸಿಕೊಂಡು ಹೋದನೆಂದು ಸೌಲನಿಗೆ ತಿಳಿಸಲ್ಪಟ್ಟಾಗ ಅವನು ಹೊರಡುವದನ್ನು ನಿಲ್ಲಿಸಿಬಿಟ್ಟನು.
1 ಸಮುವೇಲನು 23 : 14 (KNV)
ದಾವೀದನು ಅರಣ್ಯದಲ್ಲಿರುವ ಬಲವಾದ ಕೋಟೆಗಳಲ್ಲಿಯೂ ಜೀಫ್ ಎಂಬ ಅರಣ್ಯದ ಬೆಟ್ಟದ ಲ್ಲಿಯೂ ವಾಸವಾಗಿದ್ದನು. ಸೌಲನು ದಿನಾಲು ಅವ ನನ್ನು ಹುಡುಕುತ್ತಿದ್ದನು; ಆದರೆ ದೇವರು ಅವನನ್ನು ಅವನ ಕೈಯಲ್ಲಿ ಒಪ್ಪಿಸಿಕೊಡಲಿಲ್ಲ.
1 ಸಮುವೇಲನು 23 : 15 (KNV)
ತನ್ನ ಪ್ರಾಣವನ್ನು ಹುಡುಕುವದಕ್ಕೆ ಸೌಲನು ಹೊರಟನೆಂದು ದಾವೀದನು ತಿಳಿದಾಗ ತಾನು ಜೀಫ್ ಎಂಬ ಅಡವಿಯೊಳಗೆ ಅರಣ್ಯದ ಒಂದು ಸ್ಥಳದಲ್ಲಿದ್ದನು.
1 ಸಮುವೇಲನು 23 : 16 (KNV)
ಆಗ ಸೌಲನ ಮಗನಾದ ಯೋನಾತಾನನು ಎದ್ದು ಅರಣ್ಯದಲ್ಲಿರುವ ದಾವೀದನ ಬಳಿಗೆ ಹೋಗಿ ದೇವರಲ್ಲಿ ಅವನ ಕೈಯನ್ನು ಬಲಪಡಿಸಿ ಅವನಿಗೆ--ಭಯಪಡಬೇಡ;
1 ಸಮುವೇಲನು 23 : 17 (KNV)
ನನ್ನ ತಂದೆಯಾದ ಸೌಲನ ಕೈ ನಿನ್ನನ್ನು ಹಿಡಿಯುವದಿಲ್ಲ. ನೀನು ಇಸ್ರಾಯೇಲಿನ ಮೇಲೆ ಅರಸನಾಗಿರುವಿ; ನಾನು ನಿನ್ನ ತರುವಾಯ ಇರುವೆನು. ಹೀಗೆ ಆಗುವದೆಂದು ನನ್ನ ತಂದೆಯಾದ ಸೌಲನು ಸಹ ತಿಳಿದಿದ್ದಾನೆ ಅಂದನು.
1 ಸಮುವೇಲನು 23 : 18 (KNV)
ಅವರಿಬ್ಬರೂ ಕರ್ತನ ಮುಂದೆ ಒಡಂಬಡಿಕೆಯನ್ನು ಮಾಡಿಕೊಂಡರು. ದಾವೀದನು ಅರಣ್ಯದಲ್ಲೇ ಉಳಿದನು; ಆದರೆ ಯೋನಾತಾನನು ತನ್ನ ಮನೆಗೆ ಹೋದನು.
1 ಸಮುವೇಲನು 23 : 19 (KNV)
ಜೀಫ್ಯರು ಗಿಬೆಯಲ್ಲಿದ್ದ ಸೌಲನ ಬಳಿಗೆ ಬಂದುದಾವೀದನು ನಮ್ಮ ಪಕ್ಷವಾಗಿಯೇ ಯೆಷಿಮೋನಿನ ದಕ್ಷಿಣದಲ್ಲಿ ಹಕೀಲಾ ಗುಡ್ಡದಲ್ಲಿರುವ ಘೋರಾರಣ್ಯ ದಲ್ಲಿ ನಮ್ಮೊಂದಿಗೆ ಅಡಗಿಕೊಂಡಿದ್ದಾನಲ್ಲವೇ?
1 ಸಮುವೇಲನು 23 : 20 (KNV)
ಅರಸನೇ, ನೀನು ನಿನ್ನ ಪ್ರಾಣದ ಇಚ್ಛೆ ಇದ್ದ ಹಾಗೆ ಇಳಿದು ಬಾ; ಅವನನ್ನು ಅರಸನ ಕೈಯಲ್ಲಿ ಒಪ್ಪಿಸಿಕೊಡುವ ಭಾರವು ನಮ್ಮದು ಅಂದರು.
1 ಸಮುವೇಲನು 23 : 21 (KNV)
ಆಗ ಸೌಲನು--ನೀವು ನನ್ನ ಮೇಲೆ ಕನಿಕರಪಟ್ಟ ಕಾರಣ ಕರ್ತನಿಂದ ನಿಮಗೆ ಆಶೀರ್ವಾದವಾಗಲಿ.
1 ಸಮುವೇಲನು 23 : 22 (KNV)
ನೀವು ದಯಮಾಡಿ ಹೋಗಿ ಅವನ ಹೆಜ್ಜೆ ಇಡುವ ಸ್ಥಳವನ್ನೂ ಅಲ್ಲಿ ಅವನನ್ನು ನೋಡಿದವರು ಯಾರು ಎಂಬದನ್ನೂ ಇನ್ನೂ ಸೂಕ್ಷ್ಮವಾಗಿ ತಿಳುಕೊಂಡು ನೋಡಿರಿ;
1 ಸಮುವೇಲನು 23 : 23 (KNV)
ಅವನು ಬಹು ಉಪಾಯದಿಂದ ಪ್ರವರ್ತಿಸುತ್ತಾ ನೆಂದು ನನಗೆ ಹೇಳುತ್ತಾರೆ. ಅವನು ಅಡಗಿಕೊಂಡಿರುವ ಎಲ್ಲಾ ರಹಸ್ಯ ಸ್ಥಳಗಳನ್ನು ನೋಡಿ ತಿಳುಕೊಂಡು ನಿಜವಾದ ವರ್ತಮಾನವನ್ನು ನನ್ನ ಬಳಿಗೆ ತಕ್ಕೊಂಡು ಬನ್ನಿರಿ; ಆಗ ನಾನು ನಿಮ್ಮ ಸಂಗಡ ಬಂದು ಅವನು ದೇಶದಲ್ಲಿದ್ದರೆ ಯೆಹೂದದ ಸಹಸ್ರಗಳಲ್ಲಿ ಅವನನ್ನು ಹುಡುಕ ಹೋಗುವೆನು ಅಂದನು.
1 ಸಮುವೇಲನು 23 : 24 (KNV)
ಆದದರಿಂದ ಅವರು ಎದ್ದು ಸೌಲನ ಮುಂದೆ ಜೀಫಕ್ಕೆ ಹೊರಟು ಹೋದರು. ಆದರೆ ದಾವೀದನೂ ಅವನ ಜನರೂ ಯೆಷಿಮೋನಿನ ದಕ್ಷಿಣ ದಿಕ್ಕಿನ ಬೈಲಲ್ಲಿರುವ ಮಾವೋನಿನ ಅರಣ್ಯದಲ್ಲಿದ್ದರು.
1 ಸಮುವೇಲನು 23 : 25 (KNV)
ಸೌಲನೂ ಅವನ ಮನುಷ್ಯರೂ ಅವನನ್ನು ಹುಡುಕಲು ಬಂದರು. ಇದು ದಾವೀದನಿಗೆ ತಿಳಿಸಲ್ಪಟ್ಟಾಗ ಅವನು ಬಂಡೆಗೆ ಇಳಿದು ಮಾವೋನಿನ ಅರಣ್ಯದಲ್ಲಿ ವಾಸಿಸಿದನು. ಅದನ್ನು ಸೌಲನು ಕೇಳಿ ಮಾವೋನಿನ ಅರಣ್ಯದಲ್ಲಿ ದಾವೀದ ನನ್ನು ಹಿಂದಟ್ಟಿದನು.
1 ಸಮುವೇಲನು 23 : 26 (KNV)
ಸೌಲನು ಬೆಟ್ಟದ ಇನ್ನೊಂದು ಕಡೆಯಲ್ಲಿ ಹೋದನು; ದಾವೀದನೂ ಅವನ ಜನರೂ ಬೆಟ್ಟದ ಆ ಕಡೆಯಲ್ಲಿ ಹೋದರು; ಸೌಲನಿಗೆ ಭಯ ಪಟ್ಟು ತಪ್ಪಿಸಿಕೊಂಡು ಹೋಗಲು ದಾವೀದನು ತ್ವರೆ ಮಾಡುವಾಗ ಸೌಲನೂ ಅವನ ಮನುಷ್ಯರೂ ಹಿಡಿ ಯುವ ಹಾಗೆ ಅವರನ್ನು ಸುತ್ತಿಕೊಂಡರು.
1 ಸಮುವೇಲನು 23 : 27 (KNV)
ಆದರೆ ಒಬ್ಬ ದೂತನು ಸೌಲನ ಬಳಿಗೆ ಬಂದು--ನೀನು ತ್ವರೆಯಾಗಿ ಬಾ; ಯಾಕಂದರೆ ಫಿಲಿಷ್ಟಿಯರು ದೇಶದ ಮೇಲೆ ದಂಡೆತ್ತಿ ಬಂದಿದ್ದಾರೆ ಅಂದನು.
1 ಸಮುವೇಲನು 23 : 28 (KNV)
ಸೌಲನು ದಾವೀದನನ್ನು ಹಿಂದಟ್ಟುವದನ್ನು ಬಿಟ್ಟು ಫಿಲಿಷ್ಟಿಯ ರಿಗೆ ಎದುರಾಗಿ ಹೋದನು. ಆದಕಾರಣ ಆ ಸ್ಥಳಕ್ಕೆ ಶಿಲಾಹಮಹ್ಲೆಕೋತ್ ಎಂದು ಹೆಸರಿಟ್ಟರು.
1 ಸಮುವೇಲನು 23 : 29 (KNV)
ದಾವೀದನು ಆ ಸ್ಥಳವನ್ನು ಬಿಟ್ಟುಹೋಗಿ ಏಂಗೆದಿ ಯಲ್ಲಿರುವ ಬಲವಾದ ಗವಿಗಳಲ್ಲಿ ವಾಸಿಸಿದನು.

1 2 3 4 5 6 7 8 9 10 11 12 13 14 15 16 17 18 19 20 21 22 23 24 25 26 27 28 29

BG:

Opacity:

Color:


Size:


Font: