1 ಸಮುವೇಲನು 13 : 1 (KNV)
ಸೌಲನು ಒಂದು ವರುಷ ಆಳಿದನು;ಇಸ್ರಾಯೇಲ್ಯರನ್ನು ಎರಡು ವರುಷ ಆಳಿ ದಾಗ ಸೌಲನು ಇಸ್ರಾಯೇಲ್ಯರಲ್ಲಿ ಮೂರು ಸಾವಿರ ಜನರನ್ನು ಆದುಕೊಂಡನು.
1 ಸಮುವೇಲನು 13 : 2 (KNV)
ಮೂರು ಸಾವಿರ ಜನರಲ್ಲಿ ಎರಡು ಸಾವಿರ ಜನರು ಸೌಲನು ಇರುವ ಮಿಕ್ಮಾಷಿ ನಲ್ಲಿಯೂ ಬೇತೇಲಿನ ಪರ್ವತದಲ್ಲಿಯೂ ಇದ್ದರು; ಸಾವಿರ ಜನರು ಯೋನಾತಾನನ ಸಂಗಡ ಬೆನ್ಯಾವಿಾನ್ ದೇಶದ ಗಿಬೆಯದಲ್ಲಿದ್ದರು. ಉಳಿದ ಜನರನ್ನು ಅವರ ವರ ಡೇರೆಗಳಿಗೆ ಕಳುಹಿಸಿಬಿಟ್ಟನು.
1 ಸಮುವೇಲನು 13 : 3 (KNV)
ಯೋನಾತಾನನು ಗಿಬೆಯದಲ್ಲಿ ಫಿಲಿಷ್ಟಿಯರ ಠಾಣವನ್ನು ಹೊಡೆದನು; ಫಿಲಿಷ್ಟಿಯರಿಗೆ ಅದು ಕೇಳಿಬಂತು. ಆದದರಿಂದ ಸೌಲನು ದೇಶದಲ್ಲೆಲ್ಲಾ ಇಬ್ರಿಯರು ಕೇಳಲೆಂದು ತುತೂರಿಯನ್ನು ಊದಿಸಿದನು.
1 ಸಮುವೇಲನು 13 : 4 (KNV)
ಫಿಲಿಷ್ಟಿಯರ ಠಾಣ ವನ್ನು ಸೌಲನು ಹೊಡೆದನೆಂದೂ ಫಿಲಿಷ್ಟಿಯರಿಗೆ ಇಸ್ರಾಯೇಲ್ಯರು ಅಸಹ್ಯವಾದವರಾದರೆಂದೂ ಸಮಸ್ತ ಇಸ್ರಾಯೇಲ್ಯರು ಕೇಳಿದಾಗ ಸೌಲನ ಹಿಂದೆ ಹೋಗಲು ಗಿಲ್ಗಾಲಿಗೆ ಕರೆಸಿಕೊಳ್ಳಲ್ಪಟ್ಟರು.
1 ಸಮುವೇಲನು 13 : 5 (KNV)
ಆಗ ಇಸ್ರಾಯೇಲ್ಯರ ಸಂಗಡ ಯುದ್ಧಮಾಡಲು ಫಿಲಿಷ್ಟಿಯರ ಮೂವತ್ತು ಸಾವಿರ ರಥಗಳೂ ಆರು ಸಾವಿರ ಕುದುರೆ ರಾಹುತರೂ ಸಮುದ್ರತೀರದ ಮರಳಷ್ಟು ಜನವೂ ಕೂಡಿಕೊಂಡು ಬೇತಾವೆನಿನ ಪೂರ್ವದಿಕ್ಕಿನಲ್ಲಿರುವ ಮಿಕ್ಮಾಷಿನಲ್ಲಿ ಇಳುಕೊಂಡರು.
1 ಸಮುವೇಲನು 13 : 6 (KNV)
ಆಗ ಇಸ್ರಾಯೇಲ್ ಜನರು ತಮಗೆ ಶ್ರಮೆ ಉಂಟಾದ್ದದರಿಂದ ತಾವು ಇಕ್ಕಟ್ಟಿನಲ್ಲಿ ಇರುವದನ್ನು ನೋಡಿ ಗವಿಗಳಲ್ಲಿಯೂ ಮುಳ್ಳಿನ ಪೊದೆಗಳಲ್ಲಿಯೂ ಗುಡ್ಡಗಳಲ್ಲಿಯೂ ದುರ್ಗಗಳಲ್ಲಿಯೂ ಕುಣಿಗಳಲ್ಲಿಯೂ ಅಡಗಿಕೊಂಡರು.
1 ಸಮುವೇಲನು 13 : 7 (KNV)
ಇದಲ್ಲದೆ ಇಬ್ರಿಯರಲ್ಲಿರುವ ಕೆಲವರು ಯೊರ್ದನನ್ನು ದಾಟಿ ಗಾದ್ ದೇಶಕ್ಕೂ ಗಿಲ್ಯಾದಿಗೂ ಹೋದರು. ಆದರೆ ಸೌಲನು ಇನ್ನೂ ಗಿಲ್ಗಾಲಿನಲ್ಲಿದ್ದನು; ಜನರೆಲ್ಲರು ನಡುಗಿದವರಾಗಿ ಅವನನ್ನು ಹಿಂಬಾಲಿಸಿದರು.
1 ಸಮುವೇಲನು 13 : 8 (KNV)
ಸೌಲನು ತನಗೆ ಸಮುವೇಲನು ನೇಮಿಸಿದ ಕಾಲದ ಪ್ರಕಾರ ಏಳು ದಿವಸ ಕಾದಿದ್ದನು. ಸಮುವೇಲನು ಗಿಲ್ಗಾಲಿಗೆ ಬಾರದೆ ಇದ್ದದರಿಂದ ಜನರು ಅವನನ್ನು ಬಿಟ್ಟು ಚದರಿಹೋದರು.
1 ಸಮುವೇಲನು 13 : 9 (KNV)
ಆಗ ಸೌಲನು--ದಹನ ಬಲಿಯನ್ನೂ ಸಮಾಧಾನದ ಬಲಿಗಳನ್ನೂ ನನ್ನ ಬಳಿಗೆ ತಕ್ಕೊಂಡು ಬನ್ನಿರಿ ಎಂದು ಹೇಳಿ ದಹನಬಲಿಯನ್ನು ಅರ್ಪಿಸಿದನು.
1 ಸಮುವೇಲನು 13 : 10 (KNV)
ಅವನು ದಹನಬಲಿಯನ್ನು ಅರ್ಪಿಸಿ ತೀರಿಸುವಷ್ಟರೊಳಗೆ ಇಗೋ, ಸಮುವೇಲನು ಬಂದನು. ಆಗ ಸೌಲನು ಅವನನ್ನು ವಂದಿಸುವದಕ್ಕಾಗಿ ಎದುರುಗೊಳ್ಳಲು ಹೋದನು.
1 ಸಮುವೇಲನು 13 : 11 (KNV)
ಸಮುವೇಲನುನೀನೇನು ಮಾಡಿದಿ ಎಂದು ಸೌಲನನ್ನು ಕೇಳಿದಾಗ ಅವನು--ಜನರು ನನ್ನನ್ನು ಬಿಟ್ಟು ಚದರಿಹೋದದ್ದನ್ನೂ ನೇಮಿಸಿದ ದಿವಸಗಳ ಪ್ರಕಾರಕ್ಕೆ ನೀನು ಬಾರದ್ದನ್ನೂ ಫಿಲಿಷ್ಟಿಯರು ಮಿಕ್ಮಾಷಿನಲ್ಲಿ ಕೂಡಿಕೊಂಡಿರುವದನ್ನೂ
1 ಸಮುವೇಲನು 13 : 12 (KNV)
ನಾನು ಕಂಡಿದ್ದರಿಂದ ಫಿಲಿಷ್ಟಿಯರು ಗಿಲ್ಗಾಲಿನಲ್ಲಿ ರುವ ನನ್ನ ಬಳಿಗೆ ಬರುವರು ಎಂದೂ ನಾನು ಕರ್ತನ ದಯೆ ಬೇಡಿಕೊಳ್ಳಲಿಲ್ಲವೆಂದೂ ಹೇಳಿ ಮುಂದಾಗಿ ದಹನಬಲಿಯನ್ನು ಅರ್ಪಿಸಿದೆನು ಅಂದನು.
1 ಸಮುವೇಲನು 13 : 13 (KNV)
ಸಮು ವೇಲನು ಸೌಲನಿಗೆ--ನೀನು ಬುದ್ಧಿಹೀನವಾದ ಕೆಲಸ ಮಾಡಿದ್ದೀ; ನಿನ್ನ ದೇವರಾದ ಕರ್ತನು ನಿನಗೆ ಆಜ್ಞಾಪಿಸಿದ ಆಜ್ಞೆಯನ್ನು ಕೈಕೊಳ್ಳಲಿಲ್ಲ. ಕರ್ತನು ಇಸ್ರಾಯೇಲ್ಯರಲ್ಲಿ ನಿನ್ನ ರಾಜ್ಯವನ್ನು ಎಂದೆಂದಿಗೂ ಸ್ಥಿರಪಡಿಸುವದಕ್ಕೆ ಇದ್ದನು.
1 ಸಮುವೇಲನು 13 : 14 (KNV)
ಆದರೆ ಈಗ ನಿನ್ನ ರಾಜ್ಯವು ನಿಲ್ಲಲಾರದು. ಕರ್ತನು ನಿನಗೆ ಆಜ್ಞಾಪಿಸಿ ದ್ದನ್ನು ನೀನು ಕೈಕೊಳ್ಳದೆ ಹೋದದರಿಂದ ಆತನು ತನ್ನ ಹೃದಯಕ್ಕೆ ಅನುಸರಣೆಯಾದ ಒಬ್ಬ ಮನುಷ್ಯ ನನ್ನು ಹುಡುಕಿ ಅವನನ್ನು ತನ್ನ ಜನರ ಮೇಲೆ ನಾಯಕನನ್ನಾಗಿ ನೇಮಿಸಿದ್ದಾನೆ ಅಂದನು.
1 ಸಮುವೇಲನು 13 : 15 (KNV)
ಸಮು ವೇಲನು ಎದ್ದು ಗಿಲ್ಗಾಲಿನಿಂದ ಬೆನ್ಯಾವಿಾನ್ ದೇಶದ ಗಿಬೆಯಕ್ಕೆ ಹೋದನು. ಸೌಲನು ತನ್ನ ಸಂಗಡ ಇದ್ದ ಜನರನ್ನು ಲೆಕ್ಕಮಾಡಿದಾಗ ಅವರು ಸುಮಾರು ಆರು ನೂರು ಜನರಿದ್ದರು.
1 ಸಮುವೇಲನು 13 : 16 (KNV)
ಸೌಲನೂ ಅವನ ಮಗನಾದ ಯೋನಾತಾನನೂ ಅವನ ಸಂಗಡ ಇರುವ ಜನರೂ ಸಹಿತವಾಗಿ ಬೆನ್ಯಾ ವಿಾನ್ ದೇಶದ ಗಿಬೆಯಲ್ಲಿದ್ದರು. ಆದರೆ ಫಿಲಿಷ್ಟಿಯರು ಮಿಕ್ಮಾಷಿನಲ್ಲಿ ಇಳಿದುಕೊಂಡಿದ್ದರು.
1 ಸಮುವೇಲನು 13 : 17 (KNV)
ಆಗ ಫಿಲಿಷ್ಟಿ ಯರ ಪಾಳೆಯದಿಂದ ಸುಲುಕೊಳ್ಳುವವರು ಮೂರು ಗುಂಪಾಗಿ ಹೊರಟರು; ಒಂದು ಗುಂಪು ಒಫ್ರದ ಮಾರ್ಗವಾಗಿ ಶುವಲ್ ದೇಶದ ಕಡೆಗೆ ಹೋಯಿತು;
1 ಸಮುವೇಲನು 13 : 18 (KNV)
ಮತ್ತೊಂದು ಗುಂಪು ಬೇತ್ಹೋರೋನಿನ ಮಾರ್ಗ ವಾಗಿ ಹೋಯಿತು; ಬೇರೊಂದು ಗುಂಪು ಅರಣ್ಯಕ್ಕೆ ಎದುರಾಗಿರುವ ಜೆಬೋಯಾಮ್ ತಗ್ಗಿಗೆದುರಾದ ಮೇರೆಯ ಮಾರ್ಗವಾಗಿ ಹೋಯಿತು.
1 ಸಮುವೇಲನು 13 : 19 (KNV)
ಆದರೆ ಇಬ್ರಿಯರು ತಮಗೆ ಕತ್ತಿಯನ್ನಾದರೂ ಈಟಿಯನ್ನಾ ದರೂ ಮಾಡಿಕೊಳ್ಳಬಾರದು ಎಂದು ಫಿಲಿಷ್ಟಿಯರು ಹೇಳಿಕೊಂಡದ್ದರಿಂದ ಆಗ ಇಸ್ರಾಯೇಲ್ ದೇಶದಲ್ಲಿ ಒಬ್ಬ ಕಮ್ಮಾರನಾದರೂ ಸಿಕ್ಕಲಿಲ್ಲ.
1 ಸಮುವೇಲನು 13 : 20 (KNV)
ಆದದರಿಂದ ಇಸ್ರಾಯೇಲ್ಲೆಲ್ಲಾ ತಮ್ಮ ತಮ್ಮ ನೇಗಲಿನ ಗುಳಗಳನ್ನೂ ಸಲಿಕೆಗಳನ್ನೂ ಕೊಡಲಿಗಳನ್ನೂ ಗುದ್ದಲಿಗಳನ್ನೂ ಮೊನೆ ಮಾಡುವದಕ್ಕೆ ಫಿಲಿಷ್ಟಿಯರ ಬಳಿಗೆ ಹೋಗಬೇಕಾ ಗಿತ್ತು.
1 ಸಮುವೇಲನು 13 : 21 (KNV)
ಆದರೆ ಗುದ್ದಲಿಗಳನ್ನೂ ಗುಂಟಿಗೆಗಳನ್ನೂ ಗುಶಿಮೊಳೆಗಳನ್ನೂ ಕೊಡಲಿಗಳನ್ನೂ ಅಂಕುಶಗಳನ್ನೂ ಹದಮಾಡುವದಕ್ಕೆ ಅವರಲ್ಲಿ ಅರವು ಮಾತ್ರ ಇತ್ತು.
1 ಸಮುವೇಲನು 13 : 22 (KNV)
ಯುದ್ಧದ ದಿವಸದಲ್ಲಿ ಸೌಲನ ಸಂಗಡ ಯೋನಾ ತಾನನ ಸಂಗಡ ಇರುವ ಸಮಸ್ತ ಜನರ ಕೈಯಲ್ಲಿ ಕತ್ತಿಯಾದರೂ ಈಟಿಯಾದರೂ ಇಲ್ಲದೆ ಇತ್ತು. ಆದರೆ ಸೌಲನಿಗೂ ಅವನ ಕುಮಾರನಾದ ಯೋನಾತಾನ ನಿಗೂ ಮಾತ್ರವೇ ಇತ್ತು.
1 ಸಮುವೇಲನು 13 : 23 (KNV)
ಆಗ ಫಿಲಿಷ್ಟಿಯರ ದಂಡು ಮಿಕ್ಮಾಷಿನ ಕಣಿವೆಯ ಮಾರ್ಗಕ್ಕೆ ಹೊರಟಿತು.

1 2 3 4 5 6 7 8 9 10 11 12 13 14 15 16 17 18 19 20 21 22 23