1 ಪೇತ್ರನು 4 : 1 (KNV)
ಕ್ರಿಸ್ತನು ಶರೀರದಲ್ಲಿ ನಮಗೋಸ್ಕರ ಬಾಧೆಪಟ್ಟದ್ದರಿಂದ ನೀವು ಸಹ ಆತನಿಗಿದ್ದ ಮನಸ್ಸನ್ನು ಧರಿಸಿಕೊಳ್ಳಿರಿ. ಯಾಕಂದರೆ ಶರೀರ ದಲ್ಲಿ ಬಾಧೆಪಟ್ಟವನು ಪಾಪಮಾಡುವದನ್ನು ನಿಲ್ಲಿಸಿ ಬಿಟ್ಟಿದ್ದಾನೆ.
1 ಪೇತ್ರನು 4 : 2 (KNV)
ಹೀಗೆ ಶರೀರದಲ್ಲಿ ಇನ್ನು ಉಳಿದಿರುವ ತನ್ನ ಜೀವಿತಕಾಲದಲ್ಲಿ ಮನುಷ್ಯರ ದುರಾಶೆಗಳ ಪ್ರಕಾರ ಬದುಕದೆ ದೇವರ ಚಿತ್ತದ ಪ್ರಕಾರ ಬದುಕುವನು.
1 ಪೇತ್ರನು 4 : 3 (KNV)
ಬಂಡುತನ ದುರಾಶೆ ಕುಡಿಕತನ ದುಂದೌತನ ಮದ್ಯಪಾನಗೋಷ್ಠಿ ಅಸಹ್ಯವಾದ ವಿಗ್ರಹಾರಾಧನೆ ಗಳು ಇವುಗಳನ್ನು ನಡಿಸುವದರಲ್ಲಿಯೂ ಅನ್ಯಜನರಿಗೆ ಇಷ್ಟವಾದದ್ದನ್ನು ಮಾಡುವದರಲ್ಲಿಯೂ ನಮ್ಮ ಜೀವಿತ ದಲ್ಲಿ ಕಳೆದುಹೋದ ಕಾಲವೇ ಸಾಕು.
1 ಪೇತ್ರನು 4 : 4 (KNV)
ತಾವು ಮಾಡುವ ಅಪರಿಮಿತವಾದ ಪಟಿಂಗತನದಲ್ಲಿ ನೀವು ಅವರೊಂದಿಗೆ ಸೇರದೆ ಇದ್ದದ್ದಕ್ಕೆ ಅವರು ಆಶ್ಚರ್ಯ ಪಟ್ಟು ನಿಮ್ಮನ್ನು ದೂಷಿಸುತ್ತಾರೆ.
1 ಪೇತ್ರನು 4 : 5 (KNV)
ಅವರು ಬದುಕುವ ವರಿಗೂ ಸತ್ತವರಿಗೂ ನ್ಯಾಯತೀರಿಸುವದಕ್ಕಾಗಿ ಸಿದ್ಧ ವಾಗಿರುವಾತನಿಗೆ ಲೆಕ್ಕ ಒಪ್ಪಿಸುವರು.
1 ಪೇತ್ರನು 4 : 6 (KNV)
ಈ ಕಾರಣದಿಂದ ಸತ್ತಿರುವವರು ಶರೀರದಲ್ಲಿ ಮನುಷ್ಯರಿಗೆ ತಕ್ಕಂತೆ ನ್ಯಾಯತೀರ್ಪನ್ನು ಹೊಂದಿ ಆತ್ಮದಲ್ಲಿ ದೇವರಿಗಾಗಿ ಜೀವಿಸುವಂತೆ ಅವರಿಗೂ ಸುವಾರ್ತೆ ಸಾರಲ್ಪಟ್ಟಿತು.
1 ಪೇತ್ರನು 4 : 7 (KNV)
ಎಲ್ಲವುಗಳ ಅಂತ್ಯವು ಹತ್ತಿರವಾಗಿದೆ; ಆದದರಿಂದ ನೀವು ಸ್ವಸ್ಥಚಿತ್ತರಾಗಿಯೂ ಪ್ರಾರ್ಥನೆಗೆ ಎಚ್ಚರ ವಾಗಿಯೂ ಇರ್ರಿ.
1 ಪೇತ್ರನು 4 : 8 (KNV)
ಎಲ್ಲವುಗಳಿಗೆ ಮಿಗಿಲಾಗಿ ನಿಮ್ಮ ನಿಮ್ಮೊಳಗೆ ಯಥಾರ್ಥವಾದ ಪ್ರೀತಿಯಿರಲಿ; ಯಾಕಂದರೆ ಪ್ರೀತಿಯು ಎಷ್ಟೋ ಪಾಪಗಳನ್ನು ಮುಚ್ಚುತ್ತದೆ.
1 ಪೇತ್ರನು 4 : 9 (KNV)
ಗುಣುಗುಟ್ಟದೆ ಒಬ್ಬರಿಗೊಬ್ಬರು ಅತಿಥಿ ಸತ್ಕಾರ ಮಾಡಿರಿ.
1 ಪೇತ್ರನು 4 : 10 (KNV)
ನೀವೆಲ್ಲರು ದೇವರ ವಿವಿಧ ಕೃಪೆಯ ವಿಷಯದಲ್ಲಿ ಒಳ್ಳೇ ಮನೆವಾರ್ತೆಯವರಾಗಿದ್ದು ಪ್ರತಿಯೊಬ್ಬನು ತಾನು ಹೊಂದಿದ ವರವನ್ನು ಎಲ್ಲರ ಸೇವೆಯಲ್ಲಿ ಉಪಯೋಗಿಸಲಿ.
1 ಪೇತ್ರನು 4 : 11 (KNV)
ಒಬ್ಬನು ಬೋಧಿಸು ವವನಾದರೆ ದೈವೋಕ್ತಿಗಳನ್ನು ನುಡಿಯುವವನಾಗಿ ಬೋಧಿಸಲಿ. ಒಬ್ಬನು ಸೇವೆ ಮಾಡುವವನಾದರೆ ದೇವರಿಂದ ಶಕ್ತಿಯನ್ನು ಹೊಂದಿದವನಾಗಿ ಮಾಡಲಿ. ಇದರಿಂದ ಎಲ್ಲಾದರಲ್ಲಿ ಯೇಸು ಕ್ರಿಸ್ತನ ಮೂಲಕ ದೇವರಿಗೆ ಮಹಿಮೆ ಉಂಟಾಗುವದು. ಯೇಸು ಕ್ರಿಸ್ತನಿಗೆ ಸ್ತೋತ್ರವೂ ಆಧಿಪತ್ಯವೂ
1 ಪೇತ್ರನು 4 : 12 (KNV)
ಪ್ರಿಯರೇ, ನಿಮ್ಮನ್ನು ಶೋಧಿಸುವದಕ್ಕೆ ಅಗ್ನಿ ಯಂತಿರುವ ಪರಿಶೋಧನೆಗಾಗಿ ನೀವು ಆಶ್ಚರ್ಯಪಡ ಬೇಡಿರಿ; ಅಪೂರ್ವವಾದ ಸಂಗತಿ ನಿಮಗೆ ಸಂಭವಿಸಿ ತೆಂದು ಯೋಚಿಸಬೇಡಿರಿ.
1 ಪೇತ್ರನು 4 : 13 (KNV)
ನೀವು ಕ್ರಿಸ್ತನ ಬಾಧೆ ಗಳಲ್ಲಿ ಪಾಲುಗಾರರಾಗಿರುವದರಿಂದ ಸಂತೋಷವುಳ್ಳ ವರಾಗಿರ್ರಿ; ಇದಲ್ಲದೆ ಆತನ ಮಹಿಮೆಯ ಪ್ರತ್ಯಕ್ಷತೆ ಯಲ್ಲಿ ನೀವು ಸಂತೋಷಪಟ್ಟು ಅತ್ಯಂತ ಉಲ್ಲಾಸಗೊಳ್ಳುವಿರಿ.
1 ಪೇತ್ರನು 4 : 14 (KNV)
ನೀವು ಕ್ರಿಸ್ತನ ಹೆಸರಿನ ನಿಮಿತ್ತ ನಿಂದೆಗೆ ಗುರಿಯಾದರೆ ಸಂತೋಷಪಡಿರಿ; ಯಾಕಂದರೆ ಮಹಿಮೆ ಯುಳ್ಳ ದೇವರ ಆತ್ಮನು ನಿಮ್ಮ ಮೇಲೆ ನೆಲೆಗೊಂಡಿ ದ್ದಾನಲ್ಲಾ. ಅವರ ವಿಷಯದಲ್ಲಿ ಆತನು ದೂಷಿಸ ಲ್ಪಡುತ್ತಾನೆ; ಆದರೆ ನಿಮ್ಮ ವಿಷಯದಲ್ಲಿ ಆತನು ಮಹಿಮೆ ಹೊಂದುತ್ತಾನೆ.
1 ಪೇತ್ರನು 4 : 15 (KNV)
ನಿಮ್ಮಲ್ಲಿ ಯಾವನಾದರೂ ಕೊಲೆಗಾರನು ಕಳ್ಳನು ದುಷ್ಟನು ಪರರಕಾರ್ಯಗಳಲ್ಲಿ ತಲೆಹಾಕುವವನು ಆಗಿದ್ದು ಬಾಧೆಯನ್ನನುಭವಿಸ ಬಾರದು.
1 ಪೇತ್ರನು 4 : 16 (KNV)
ಕ್ರೈಸ್ತನಾಗಿ ಬಾಧೆಪಟ್ಟರೆ ಅವನು ನಾಚಿಕೆ ಪಡದೆ ಅದರಲ್ಲಿಯೇ ದೇವರನ್ನು ಘನಪಡಿಸಲಿ.
1 ಪೇತ್ರನು 4 : 17 (KNV)
ದೇವರ ಮನೆಯಲ್ಲಿ ಪ್ರಾರಂಭವಾಗತಕ್ಕ ನ್ಯಾಯ ತೀರ್ಪಿನ ಸಮಯವು ಬಂದದೆ; ಅದು ಮೊದಲು ನಮ್ಮಲ್ಲಿ ಪ್ರಾರಂಭವಾದರೆ ದೇವರ ಸುವಾರ್ತೆಗೆ ಅವಿಧೇಯರಾದವರ ಅಂತ್ಯವು ಏನಾಗಿರುವದು?
1 ಪೇತ್ರನು 4 : 18 (KNV)
ನೀತಿವಂತನೇ ರಕ್ಷಣೆಹೊಂದುವದು ಕಷ್ಟವಾದರೆ ಭಕ್ತಿಹೀನನೂ ಪಾಪಿಷ್ಠನೂ ನಿಲ್ಲುವದು ಎಲ್ಲಿ?
1 ಪೇತ್ರನು 4 : 19 (KNV)
ಹೀಗಿರಲಾಗಿ ದೇವರ ಚಿತ್ತಾನುಸಾರ ಬಾಧೆಪಡು ವವರು ಒಳ್ಳೇದನ್ನು ಮಾಡುವವರಾಗಿದ್ದು ತಮ್ಮ ಆತ್ಮಗಳನ್ನು ನಂಬಿಗಸ್ತನಾದ ಸೃಷ್ಟಿಕರ್ತನಿಗೆ ಒಪ್ಪಿಸಲಿ.
❮
❯