1 ಅರಸುಗಳು 22 : 1 (KNV)
ಆದರೆ ಅರಾಮ್ಯರಿಗೂ ಇಸ್ರಾಯೇಲ್ಯ ರಿಗೂ ಮೂರು ವರುಷ ಯುದ್ಧವಿಲ್ಲದೆ ಇತ್ತು.
1 ಅರಸುಗಳು 22 : 2 (KNV)
ಮೂರನೇ ವರುಷದಲ್ಲಿ ಏನಾಯಿತಂದರೆ, ಯೆಹೂದದ ಅರಸನಾದ ಯೆಹೋಷಾಫಾಟನು ಇಸ್ರಾಯೇಲಿನ ಅರಸನ ಬಳಿಗೆ ಬಂದನು.
1 ಅರಸುಗಳು 22 : 3 (KNV)
ಇಸ್ರಾ ಯೇಲಿನ ಅರಸನು ತನ್ನ ಸೇವಕರಿಗೆ--ಗಿಲ್ಯಾದಿನ ಲ್ಲಿರುವ ರಾಮೋತ್ ನಮ್ಮದೆಂದು ಅರಿಯಿರಾ? ನಾವು ಅದನ್ನು ಅರಾಮಿನ ಅರಸನ ಕೈಯಿಂದ ತೆಗೆದು ಕೊಳ್ಳದೆ ಸುಮ್ಮನೆ ಇದ್ದೇವೆ ಅಂದನು.
1 ಅರಸುಗಳು 22 : 4 (KNV)
ಆಗ ಅವನು ಯೆಹೋಷಾಫಾಟನಿಗೆ -- ನೀನು ಗಿಲ್ಯಾದಿನಲ್ಲಿರುವ ರಾಮೋತಿನ ಮೇಲೆ ಯುದ್ಧಮಾಡಲು ನನ್ನ ಸಂಗಡ ಬರುತ್ತೀಯಾ ಅಂದನು. ಯೆಹೋಷಾಫಾಟನು ಇಸ್ರಾ ಯೇಲಿನ ಅರಸನಿಗೆ--ನಿನ್ನ ಹಾಗೆಯೇ ನಾನೂ ನಿನ್ನ ಜನರ ಹಾಗೆಯೇ ನನ್ನ ಜನರೂ ನಿನ್ನ ಕುದುರೆಗಳ ಹಾಗೆಯೇ ನನ್ನ ಕುದುರೆಗಳೂ ಇದ್ದೇವೆ ಅಂದನು.
1 ಅರಸುಗಳು 22 : 5 (KNV)
ಆದರೆ ಯೆಹೂಷಾಫಾಟನು ಇಸ್ರಾಯೇಲಿನ ಅರಸ ನಿಗೆ--ನೀನು ದಯಮಾಡಿ ಇಂದು ಕರ್ತನ ವಾಕ್ಯವನ್ನು ವಿಚಾರಿಸು ಅಂದನು.
1 ಅರಸುಗಳು 22 : 6 (KNV)
ಆಗ ಇಸ್ರಾಯೇಲಿನ ಅರಸನು ಹೆಚ್ಚು ಕಡಿಮೆ ನಾನೂರು ಮಂದಿ ಪ್ರವಾದಿಗಳನ್ನು ಕೂಡಿಸಿ--ನಾನು ಗಿಲ್ಯಾದಿನಲ್ಲಿರುವ ರಾಮೋತಿನ ಮೇಲೆ ಯುದ್ಧಕ್ಕೆ ಹೋಗಬಹುದೋ ಬೇಡವೋ ಎಂದು ಅವರನ್ನು ಕೇಳಿದನು. ಅದಕ್ಕವರು--ಹೋಗು; ಕರ್ತನು ಅದನ್ನು ಅರಸನ ಕೈಯಲ್ಲಿ ಒಪ್ಪಿಸಿಕೊಡುವನು ಅಂದರು.
1 ಅರಸುಗಳು 22 : 7 (KNV)
ಆದರೆ ಯೆಹೋಷಾಫಾಟನು--ಇವರು ಹೊರತಾಗಿ ನಾವು ವಿಚಾರಿಸುವ ಹಾಗೆ ಇಲ್ಲಿ ಕರ್ತನ ಪ್ರವಾದಿಯು ಯಾವನೂ ಇರುವದಿಲ್ಲವೋ ಅಂದನು.
1 ಅರಸುಗಳು 22 : 8 (KNV)
ಆಗ ಇಸ್ರಾಯೇಲಿನ ಅರಸನು ಯೆಹೋಷಾಫಾಟ ನಿಗೆ -- ನಾವು ಕರ್ತನನ್ನು ವಿಚಾರಿಸುವ ಹಾಗೆ ಇಮ್ಲನ ಮಗನಾದ ವಿಾಕಾಯೆಹುನೆಂಬ ಇನ್ನೊಬ್ಬನಿದ್ದಾನೆ; ಆದರೆ ನಾನು ಅವನನ್ನು ಹಗೆಮಾಡುತ್ತೇನೆ; ಯಾಕಂದರೆ ಅವನು ನನ್ನನ್ನು ಕುರಿತು ಒಳ್ಳೇದನ್ನಲ್ಲ, ಕೆಟ್ಟದ್ದನ್ನು ಪ್ರವಾದಿಸುತ್ತಾನೆ ಅಂದನು. ಅದಕ್ಕೆ ಯೆಹೋಷಾಫಾಟನು--ಅರಸನು ಹಾಗೆ ಹೇಳದಿರಲಿ ಅಂದನು.
1 ಅರಸುಗಳು 22 : 9 (KNV)
ಆಗ ಇಸ್ರಾಯೇಲಿನ ಅರಸನು ಒಬ್ಬ ಅಧಿಕಾರಿಯನ್ನು ಕರೆದು--ಇಮ್ಲನ ಮಗನಾದ ವಿಾಕಾ ಯೆಹುನನ್ನು ಶೀಘ್ರವಾಗಿ ಕರಕೊಂಡು ಬಾ ಅಂದನು.
1 ಅರಸುಗಳು 22 : 10 (KNV)
ಆದರೆ ಇಸ್ರಾಯೇಲಿನ ಅರಸನೂ ಯೆಹೂದದ ಅರಸನಾದ ಯೆಹೂಷಾಫಾಟನೂ ವಸ್ತ್ರಗಳನ್ನು ಧರಿಸಿ ಕೊಂಡು ಸಮಾರ್ಯದ ಬಾಗಲ ಮುಂದಣ ಕಣದಲ್ಲಿ ತನ್ನ ಸಿಂಹಾಸನದ ಮೇಲೆ ಕುಳಿತಿದ್ದರು; ಸಕಲ ಪ್ರವಾದಿ ಗಳೂ ಅವರ ಮುಂದೆ ಪ್ರವಾದಿಸಿದರು.
1 ಅರಸುಗಳು 22 : 11 (KNV)
ಆಗ ಕೆನಾನನ ಮಗನಾದ ಚಿದ್ಕೀಯನು ತನಗೆ ಕಬ್ಬಿಣದ ಕೊಂಬುಗಳನ್ನು ಮಾಡಿಕೊಂಡು--ಇವುಗಳಿಂದ ನೀನು ಅರಾಮ್ಯರನ್ನು ನಿರ್ಮೂಲ ಮಾಡುವವರೆಗೂ ಇರಿದು ಹಾಕುವಿ ಎಂದು ಕರ್ತನು ಹೇಳುತ್ತಾನೆ ಅಂದನು
1 ಅರಸುಗಳು 22 : 12 (KNV)
ಸಮಸ್ತ ಪ್ರವಾದಿಗಳೂ ಹಾಗೆಯೇ ಪ್ರವಾದಿಸಿ--ಗಿಲ್ಯಾದಿನ ರಾಮೋತಿಗೆ ಹೋಗಿ ಸಾಫಲ್ಯ ಹೊಂದು; ಕರ್ತನು ಅದನ್ನು ಅರಸನ ಕೈಯಲ್ಲಿ ಒಪ್ಪಿಸಿಕೊಡುವನು ಅಂದರು.
1 ಅರಸುಗಳು 22 : 13 (KNV)
ಆದರೆ ವಿಾಕಾಯೆಹುನನ್ನು ಕರೆಯಲು ಹೋದ ದೂತನು ಅವನಿಗೆ--ಇಗೋ, ಪ್ರವಾದಿಗಳ ವಾಕ್ಯಗಳು ಒಂದೇ ಬಾಯಿಂದ ಅರಸನಿಗೆ ಒಳ್ಳೇದನ್ನೇ ಪ್ರಕಟಿಸುತ್ತವೆ; ನಿನ್ನ ವಾಕ್ಯವು ಅವರಲ್ಲಿರುವ ಒಬ್ಬನ ವಾಕ್ಯದ ಹಾಗೆಯೇ ಇರಲಿ; ಒಳ್ಳೇ ಮಾತು ಆಡು ಅಂದನು.
1 ಅರಸುಗಳು 22 : 14 (KNV)
ಅದಕ್ಕೆ ವಿಾಕಾಯೆಹು--ಕರ್ತನ ಜೀವ ದಾಣೆ, ಕರ್ತನು ನನಗೆ ಏನು ಹೇಳುವನೋ ಅದನ್ನು ಮಾತನಾಡುವೆನು ಅಂದನು. ಹೀಗೆ ಅವನು ಅರಸನ ಬಳಿಗೆ ಬಂದನು.
1 ಅರಸುಗಳು 22 : 15 (KNV)
ಅರಸನು ಅವನಿಗೆ--ವಿಾಕಾಯೆ ಹುವೇ, ನಾವು ಗಿಲ್ಯಾದಿನಲ್ಲಿರುವ ರಾಮೋತಿನ ಮೇಲೆ ಯುದ್ಧಕ್ಕೆಹೋಗಬಹುದೋ ಹೋಗಬಾ ರದೋ ಅಂದನು. ಇವನು ಪ್ರತ್ಯುತ್ತರವಾಗಿ--ಹೋಗಿ ಸಾಫಲ್ಯ ಹೊಂದು; ಕರ್ತನು ಅದನ್ನು ಅರಸನ ಕೈಯಲ್ಲಿ ಒಪ್ಪಿಸಿಕೊಡುವನು ಅಂದನು.
1 ಅರಸುಗಳು 22 : 16 (KNV)
ಆಗ ಅರಸನು ಅವನಿಗೆ--ನೀನು ಕರ್ತನ ಹೆಸರಿನಲ್ಲಿ ಸತ್ಯವನ್ನಲ್ಲದೆ ಬೇರೊಂದು ನನಗೆ ಹೇಳಬಾರದೆಂದು ನಾನು ಎಷ್ಟು ಸಾರಿ ನಿನಗೆ ಆಣೆ ಇಡಬೇಕು ಅಂದನು.
1 ಅರಸುಗಳು 22 : 17 (KNV)
ಅದಕ್ಕ ವನು ಕಾಯುವವನಿಲ್ಲದ ಕುರಿಗಳ ಹಾಗೆಯೇ ಬೆಟ್ಟ ಗಳ ಮೇಲೆ ಚದರಿಸಲ್ಪಟ್ಟ ಸಮಸ್ತ ಇಸ್ರಾಯೇಲನ್ನು ನೋಡಿದೆನು. ಆಗ ಕರ್ತನು--ಇವರಿಗೆ ಯಜಮಾ ನನು ಇಲ್ಲದೆ ಪ್ರತಿ ಮನುಷ್ಯನು ತನ್ನ ತನ್ನ ಮನೆಗೆ ಸಮಾಧಾನವಾಗಿ ಹಿಂತಿರಿಗಿ ಹೋಗಲಿ ಅಂದನು.
1 ಅರಸುಗಳು 22 : 18 (KNV)
ಆಗ ಇಸ್ರಾಯೇಲಿನ ಅರಸನು ಯೆಹೋಷಾಫಾಟ ನಿಗೆ--ಇವನು ನನ್ನನ್ನು ಕುರಿತು ಒಳ್ಳೇದನ್ನಲ್ಲ, ಕೆಟ್ಟದ್ದನ್ನೇ ಪ್ರವಾದಿಸುವನೆಂದು ನಾನು ನಿನಗೆ ಹೇಳಲಿಲ್ಲವೇ ಅಂದನು.
1 ಅರಸುಗಳು 22 : 19 (KNV)
ವಿಾಕಾಯೆಹುವು--ಆದದರಿಂದ ಕರ್ತನ ವಾಕ್ಯವನ್ನು ಕೇಳು--ಕರ್ತನು ತನ್ನ ಸಿಂಹಾಸನದ ಮೇಲೆ ಕುಳಿತುಕೊಂಡಿರುವದನ್ನೂ ಆಕಾಶದ ಸಮಸ್ತ ಸೈನ್ಯವು ಆತನ ಬಲಪಾರ್ಶ್ವದಲ್ಲಿಯೂ ಎಡಪಾರ್ಶ್ವದಲ್ಲಿಯೂ ನಿಂತಿರುವದನ್ನೂ ನೋಡಿದೆನು ಅಂದನು.
1 ಅರಸುಗಳು 22 : 20 (KNV)
ಆಗ ಕರ್ತನು--ಅಹಾಬನು ಹೋಗಿ ಗಿಲ್ಯಾದಿನ ರಾಮೋ ತಿನ ಬಳಿಯಲ್ಲಿ ಬೀಳುವ ಹಾಗೆ ಅವನನ್ನು ಮರುಳು ಗೊಳಿಸುವವನು ಯಾರು ಅಂದನು.
1 ಅರಸುಗಳು 22 : 21 (KNV)
ಒಬ್ಬನು ಹೀಗೆಯೂ ಮತ್ತೊಬ್ಬನು ಹಾಗೆಯೂ ಹೇಳುತ್ತಿರುವಾಗ ಒಂದು ಆತ್ಮವು ಹೊರಟು ಬಂದು ಕರ್ತನ ಮುಂದೆ ನಿಂತು--ನಾನು ಅವನನ್ನು ಮರುಳುಗೊಳಿಸುತ್ತೇನೆ ಅಂದಿತು.
1 ಅರಸುಗಳು 22 : 22 (KNV)
ಆಗ ಕರ್ತನು ಅದಕ್ಕೆ--ಯಾವದರಿಂದ ಅಂದನು. ಅದಕ್ಕದು-- ನಾನು ಹೊರಟು ಅವನ ಎಲ್ಲಾ ಪ್ರವಾದಿಗಳ ಬಾಯಿಯಲ್ಲಿ ಸುಳ್ಳಾದ ಆತ್ಮನಾಗಿ ರುವೆನು ಅಂದಿತು.
1 ಅರಸುಗಳು 22 : 23 (KNV)
ಅದಕ್ಕೆ ಆತನು--ನೀನು ಅವ ನನ್ನು ಮರುಳುಗೊಳಿಸುವಿ ಮತ್ತು ಜಯಿಸುವಿ. ನೀನು ಹೋಗಿ ಹಾಗೆ ಮಾಡು ಅಂದನು. ಆದದರಿಂದ ಇಗೋ, ಈಗ ಕರ್ತನು ಈ ಎಲ್ಲಾ ನಿನ್ನ ಪ್ರವಾದಿಗಳ ಬಾಯಿಯಲ್ಲಿ ಸುಳ್ಳಾದ ಆತ್ಮವನ್ನು ಇಟ್ಟಿದ್ದಾನೆ; ಇದ ಲ್ಲದೆ ಕರ್ತನು ನಿನ್ನನ್ನು ಕುರಿತು ಕೇಡನ್ನು ಹೇಳಿದ್ದಾನೆ ಅಂದನು.
1 ಅರಸುಗಳು 22 : 24 (KNV)
ಆಗ ಕೆನಾನನ ಮಗನಾದ ಚಿದ್ಕೀಯನು ಸವಿಾ ಪಕ್ಕೆ ಬಂದು ವಿಾಕಾಯೆಹುವಿನ ಕೆನ್ನೆಯ ಮೇಲೆ ಹೊಡೆದು--ಕರ್ತನ ಆತ್ಮವು ನನ್ನನ್ನು ಬಿಟ್ಟು ನಿನ್ನ ಸಂಗಡ ಮಾತನಾಡಲು ಯಾವ ಮಾರ್ಗವಾಗಿ ಹೋಯಿತು ಅಂದನು.
1 ಅರಸುಗಳು 22 : 25 (KNV)
ಅದಕ್ಕೆ ವಿಾಕಾಯೆಹುವುಇಗೋ, ನಿನ್ನನ್ನು ಬಚ್ಚಿಟ್ಟುಕೊಳ್ಳಲು ಒಳಕೊಠಡಿ ಯೊಳಗೆ ನೀನು ಹೋಗುವ ದಿವಸದಲ್ಲಿ ನೋಡುವಿ ಅಂದನು.
1 ಅರಸುಗಳು 22 : 26 (KNV)
ಆಗ ಇಸ್ರಾಯೇಲಿನ ಅರಸನು ಹೇಳಿದ್ದೇ ನಂದರೆ -- ವಿಾಕಾಯೆಹುನನ್ನು ಹಿಡಿದು ಪಟ್ಟಣದ ಅಧಿಪತಿಯಾದ ಆಮೋನನ ಬಳಿಗೂ ಅರಸನ ಮಗ ನಾದ ಯೋವಾಷನ ಬಳಿಗೂ ಅವನನ್ನು ಹಿಂದಕ್ಕೆ ತಕ್ಕೊಂಡುಹೋಗಿ
1 ಅರಸುಗಳು 22 : 27 (KNV)
ನೀವು ಇವನನ್ನು ಸೆರೆಮನೆಯ ಲ್ಲಿಟ್ಟು ನಾನು ಸಮಾಧಾನವಾಗಿ ತಿರಿಗಿ ಬರುವ ವರೆಗೂ ಅವನಿಗೆ ಬಾಧೆಯ ರೊಟ್ಟಿಯನ್ನೂ ಬಾಧೆಯ ನೀರನ್ನೂ ಕೊಡಿರಿ ಎಂದು ಅರಸನು ಹೇಳುತ್ತಾನೆಂದು ಹೇಳಿರಿ ಅಂದನು.
1 ಅರಸುಗಳು 22 : 28 (KNV)
ಅದಕ್ಕೆ ವಿಾಕಾಯೆಹುವು ನೀನು ಸಮಾ ಧಾನದಿಂದ ತಿರಿಗಿ ನಿಜವಾಗಿ ಬಂದರೆ ಕರ್ತನು ನನ್ನ ಮುಖಾಂತರ ಮಾತನಾಡಿದ್ದಿಲ್ಲವೆಂದು ಜನರೇ, ನೀವೆ ಲ್ಲರೂ ಕೇಳಿರಿ ಅಂದನು.
1 ಅರಸುಗಳು 22 : 29 (KNV)
ಹೀಗೆಯೇ ಇಸ್ರಾಯೇಲಿನ ಅರಸನೂ ಯೆಹೂ ದದ ಅರಸನಾದ ಯೆಹೋಷಾಫಾಟನೂ ಗಿಲ್ಯಾದಿನ ರಾಮೋತಿಗೆ ಹೋದರು.
1 ಅರಸುಗಳು 22 : 30 (KNV)
ಆಗ ಇಸ್ರಾಯೇಲಿನ ಅರಸನು ಯೆಹೋಷಾಫಾಟನಿಗೆ--ನಾನು ನನ್ನನ್ನು ಮರೆಮಾಡಿ ಯುದ್ಧದೊಳಗೆ ಪ್ರವೇಶಿಸುವೆನು; ಆದರೆ ನೀನು ನಿನ್ನ ವಸ್ತ್ರಗಳನ್ನು ಧರಿಸಿಕೊಂಡಿರು ಅಂದನು. ಹಾಗೆಯೇ ಇಸ್ರಾಯೇಲಿನ ಅರಸನು ತನ್ನನ್ನು ಮರೆ ಮಾಡಿ ಯುದ್ಧಕ್ಕೆ ಹೋದನು.
1 ಅರಸುಗಳು 22 : 31 (KNV)
ಆದರೆ ಅರಾಮಿನ ಅರಸನು ತನ್ನ ರಥಗಳ ಮೇಲೆ ಅಧಿಕಾರವುಳ್ಳ ಮೂವತ್ತೈರಡು ಮಂದಿ ಪ್ರಧಾನರಿಗೆ--ನೀವು ಹಿರಿಕಿರಿ ಯರ ಸಂಗಡ ಯುದ್ಧ ಮಾಡದೆ ಇಸ್ರಾಯೇಲಿನ ಅರಸನ ಸಂಗಡಲೇ ಯುದ್ಧಮಾಡಿರಿ ಎಂದು ಆಜ್ಞಾಪಿ ಸಿದನು.
1 ಅರಸುಗಳು 22 : 32 (KNV)
ಆದದರಿಂದ ರಥಾಧಿಪತಿಗಳು ಯೆಹೋ ಷಾಫಾಟನನ್ನು ನೋಡಿದಾಗ--ನಿಶ್ಚಯವಾಗಿ ಇವನು ಇಸ್ರಾಯೇಲಿನ ಅರಸನೆಂದು ಹೇಳಿ ಅವನ ಸಂಗಡ ಯುದ್ಧಮಾಡುವದಕ್ಕೆ ತಿರುಗಿಕೊಂಡರು; ಆಗ ಯೆಹೋಷಾಫಾಟನು ಕೂಗಿಕೊಂಡನು.
1 ಅರಸುಗಳು 22 : 33 (KNV)
ಆಗ ಅವನು ಇಸ್ರಾಯೇಲಿನ ಅರಸನಲ್ಲವೆಂದು ರಥಾಧಿಪತಿ ಗಳು ನೋಡಿದಾಗ ಅವನನ್ನು ಬಿಟ್ಟು ಓರೆಯಾಗಿ ಹೋದರು.
1 ಅರಸುಗಳು 22 : 34 (KNV)
ಆದರೆ ಒಬ್ಬ ಮನುಷ್ಯನು ಗುರಿಯಿಡದೆ ಬಿಲ್ಲಿಗೆ ಬಾಣವನ್ನೇರಿಸಿ ಇಸ್ರಾಯೇಲಿನ ಅರಸನನ್ನು ಕವಚದ ಸಂದುಗಳಲ್ಲಿ ಹೊಡೆದನು; ಆದದರಿಂದ ಅವನು ತನ್ನ ರಥನಡಿಸುವವನಿಗೆ--ನೀನು ರಥವನ್ನು ತಿರುಗಿಸಿ ನನ್ನನ್ನು ಸೈನ್ಯದೊಳಗಿಂದ ಆಚೇ ಕಡೆಗೆ ತಕ್ಕೊಂಡು ಹೋಗು. ಯಾಕಂದರೆ ನಾನು ಗಾಯಗೊಂಡಿದ್ದೇನೆ ಅಂದನು.
1 ಅರಸುಗಳು 22 : 35 (KNV)
ಆ ದಿವಸ ಯುದ್ಧವು ಬಲವಾದದರಿಂದ ಅರಸನು ಅರಾಮ್ಯರಿಗೆದುರಾಗಿ ರಥದಲ್ಲಿಯೇ ಇದ್ದು ಸಾಯಂಕಾಲದಲ್ಲಿ ಸತ್ತುಹೋದನು; ಆದರೆ ಆ ಗಾಯದ ರಕ್ತವು ರಥದ ಮಧ್ಯದಲ್ಲಿ ಹರಿಯಿತು.
1 ಅರಸುಗಳು 22 : 36 (KNV)
ಸೂರ್ಯ ಮುಣುಗುವಾಗ ಪ್ರತಿ ಮನುಷ್ಯನು ತನ್ನ ತನ್ನ ಪಟ್ಟಣಕ್ಕೂ ಪ್ರತಿ ಮನುಷ್ಯನು ತನ್ನ ತನ್ನ ದೇಶಕ್ಕೂ ಹೋಗಲಿ ಎಂದು ದಂಡಿನಲ್ಲಿ ಪ್ರಕಟ ಮಾಡಲ್ಪಟ್ಟಿತು.
1 ಅರಸುಗಳು 22 : 37 (KNV)
ಹಾಗೆಯೇ ಅರಸನು ಸತ್ತುಹೋಗಿ ಸಮಾರ್ಯಕ್ಕೆ ತರಲ್ಪಟ್ಟಾಗ ಅವರು ಅರಸನನ್ನು ಸಮಾ ರ್ಯದಲ್ಲಿ ಹೂಣಿಟ್ಟರು.
1 ಅರಸುಗಳು 22 : 38 (KNV)
ಆ ರಥವು ಸಮಾರ್ಯದ ಕೆರೆಯಲ್ಲಿ ತೊಳೆಯಲ್ಪಡುವಾಗ ಕರ್ತನು ಹೇಳಿದ ವಾಕ್ಯದ ಪ್ರಕಾರವೇ ನಾಯಿಗಳು ಅವನ ರಕ್ತವನ್ನು ನೆಕ್ಕಿದವು; ಹಾಗೆಯೇ ಅವರು ಕವಚವನ್ನು ತೊಳೆದರು.
1 ಅರಸುಗಳು 22 : 39 (KNV)
ಆದರೆ ಅಹಾಬನ ಇತರ ಕ್ರಿಯೆಗಳೂ ಅವನು ಮಾಡಿದ್ದೆಲ್ಲವೂ ಅವನು ಕಟ್ಟಿಸಿದ ದಂತದ ಮನೆಯೂ ಎಲ್ಲಾ ಪಟ್ಟಣಗಳೂ ಇಸ್ರಾಯೇಲಿನ ಅರಸುಗಳ ವೃತಾಂತಗಳ ಪುಸ್ತಕದಲ್ಲಿ ಬರೆಯಲ್ಪಡಲಿಲ್ಲವೋ?
1 ಅರಸುಗಳು 22 : 40 (KNV)
ಹೀಗೆಯೇ ಅಹಾಬನು ತನ್ನ ಪಿತೃಗಳ ಸಂಗಡ ಮಲಗಿದನು; ಅವನ ಮಗನಾದ ಅಹಜ್ಯನು ಅವನಿಗೆ ಬದಲಾಗಿ ಆಳಿದನು.
1 ಅರಸುಗಳು 22 : 41 (KNV)
ಆಸನ ಮಗನಾದ ಯೆಹೋಷಾಫಾಟನು ಇಸ್ರಾ ಯೇಲಿನ ಅರಸನಾದ ಅಹಾಬನ ನಾಲ್ಕನೇ ವರುಷ ದಲ್ಲಿ ಯೆಹೂದದ ಮೇಲೆ ಆಳುವದಕ್ಕೆ ಆರಂಭಿಸಿದನು.
1 ಅರಸುಗಳು 22 : 42 (KNV)
ಯೆಹೋಷಾಫಾಟನು ಅರಸನಾಗುವಾಗ ಮೂವ ತ್ತೈದು ವರುಷದವನಾಗಿದ್ದು ಯೆರೂಸಲೇಮಿನಲ್ಲಿ ಇಪ್ಪತ್ತೈದು ವರುಷ ಆಳಿದನು. ಅವನ ತಾಯಿಯ ಹೆಸರು ಅಜೂಬಳು; ಅವಳು ಶಿಲ್ಹಿಯ ಮಗಳು.
1 ಅರಸುಗಳು 22 : 43 (KNV)
ಅವನು ತನ್ನ ತಂದೆಯಾದ ಆಸನ ಎಲ್ಲಾ ಮಾರ್ಗ ಗಳಲ್ಲಿ ನಡೆದು ಅದನ್ನು ಬಿಟ್ಟು ತೊಲಗದೆ ಕರ್ತನ ಸಮ್ಮುಖದಲ್ಲಿ ಯಥಾರ್ಥವಾದದ್ದನ್ನು ಮಾಡಿದನು. ಆದರೂ ಉನ್ನತ ಸ್ಥಳಗಳನ್ನು ತೆಗೆದುಹಾಕಲಿಲ್ಲ; ಜನರು ಉನ್ನತ ಸ್ಥಳಗಳ ಮೇಲೆ ಬಲಿಗಳನ್ನೂ ಧೂಪಗಳನ್ನೂ ಅರ್ಪಿಸುತ್ತಿದ್ದರು.
1 ಅರಸುಗಳು 22 : 44 (KNV)
ಯೆಹೋಷಾಫಾಟನು ಇಸ್ರಾ ಯೇಲಿನ ಅರಸನ ಸಂಗಡ ಸಮಾಧಾನ ಮಾಡಿ ಕೊಂಡನು.
1 ಅರಸುಗಳು 22 : 45 (KNV)
ಯೆಹೋಷಾಫಾಟನ ಇತರ ಕ್ರಿಯೆ ಗಳೂ ಅವನು ತೋರಿಸಿದ ಪರಾಕ್ರಮವೂ ಅವನು ಯುದ್ಧ ಮಾಡಿದ ವಿಧವೂ ಯೆಹೂದದ ಅರಸು ಗಳ ವೃತಾಂತಗಳ ಪುಸ್ತಕದಲ್ಲಿ ಬರೆಯಲ್ಪಡಲಿಲ್ಲವೋ?
1 ಅರಸುಗಳು 22 : 46 (KNV)
ಅವನ ತಂದೆಯಾದ ಆಸನ ದಿವಸಗಳಲ್ಲಿ ಉಳಿದ ಪುರುಷಗಾಮಿಗಳನ್ನು ಅವನು ದೇಶದಿಂದ ತೆಗೆದು ಹಾಕಿದನು.
1 ಅರಸುಗಳು 22 : 47 (KNV)
ಆ ಕಾಲದಲ್ಲಿ ಎದೋಮಿನೊಳಗೆ ಅರಸ ನಿರಲಿಲ್ಲ; ಅಧಿಪತಿಯು ಆಳುತ್ತಿದ್ದನು.
1 ಅರಸುಗಳು 22 : 48 (KNV)
ಯೆಹೋ ಷಾಫಾಟನು ಬಂಗಾರಕ್ಕೋಸ್ಕರ ಓಫೀರಿಗೆ ಹೋಗು ವದಕ್ಕೆ ತಾರ್ಷೀಷಿನ ಹಡಗುಗಳನ್ನು ಮಾಡಿಸಿದನು. ಆದರೆ ಅವು ಹೋಗಲಿಲ್ಲ; ಯಾಕಂದರೆ ಆ ಹಡಗು ಗಳು ಎಚ್ಯೋನ್ಗೆಬೆರಿನ ಬಳಿಯಲ್ಲಿ ಒಡೆದುಹೋದವು.
1 ಅರಸುಗಳು 22 : 49 (KNV)
ಆಗ ಅಹಾಬನ ಮಗನಾದ ಅಹಜ್ಯನು ಯೆಹೋ ಷಾಫಾಟನಿಗೆ--ನನ್ನ ಸೇವಕರು ನಿನ್ನ ಸೇವಕರ ಸಂಗಡ ಹಡಗುಗಳಲ್ಲಿ ಹೋಗಲಿ ಅಂದನು; ಆದರೆ ಯೆಹೋ ಷಾಫಾಟನು ಸಮ್ಮತಿಸಲಿಲ್ಲ.
1 ಅರಸುಗಳು 22 : 50 (KNV)
ಯೆಹೋಷಾಫಾಟನು ತನ್ನ ಪಿತೃಗಳ ಸಂಗಡ ಮಲಗಿದನು; ತನ್ನ ತಂದೆಯಾದ ದಾವೀದನ ಪಟ್ಟಣದಲ್ಲಿ ತನ್ನ ಪಿತೃಗಳ ಸಂಗಡ ಹೂಣ ಲ್ಪಟ್ಟನು. ಆಗ ಅವನ ಮಗನಾದ ಯೆಹೋರಾಮನು ಅವನಿಗೆ ಬದಲಾಗಿ ಆಳಿದನು.
1 ಅರಸುಗಳು 22 : 51 (KNV)
ಅಹಾಬನ ಮಗನಾದ ಅಹಜ್ಯನು ಯೆಹೂದದ ಅರಸನಾದ ಯೆಹೋಷಾಫಾಟನ ಹದಿನೇಳನೆ ವರುಷ ಸಮಾರ್ಯದಲ್ಲಿ ಇಸ್ರಾಯೇಲಿನ ಮೇಲೆ ಆಳಲಾ ರಂಭಿಸಿ ಎರಡು ವರುಷ ಆಳಿದನು. ಆದರೆ ಅವನು ಕರ್ತನ ಸಮ್ಮುಖದಲ್ಲಿ ಕೆಟ್ಟದ್ದನ್ನುಮಾಡಿ
1 ಅರಸುಗಳು 22 : 52 (KNV)
ತನ್ನ ತಂದೆಯ ಮಾರ್ಗದಲ್ಲಿಯೂ ತನ್ನ ತಾಯಿಯ ಮಾರ್ಗ ದಲ್ಲಿಯೂ ಇಸ್ರಾಯೆಲ್ಯರನ್ನು ಪಾಪಮಾಡಲು ಪ್ರೇರೇ ಪಿಸಿದ ನೆಬಾಟನ ಮಗನಾದ ಯಾರೊಬ್ಬಾಮನಮಾರ್ಗದಲ್ಲಿಯೂ ನಡೆದನು.
1 ಅರಸುಗಳು 22 : 53 (KNV)
ಅವನು ಬಾಳನನ್ನು ಸೇವಿಸಿ ಅದಕ್ಕೆ ಅಡ್ಡಬಿದ್ದು ತನ್ನ ತಂದೆಯು ಮಾಡಿದ ಎಲ್ಲಾದರ ಪ್ರಕಾರವೇ ಇಸ್ರಾಯೇಲಿನ ದೇವರಾದ ಕರ್ತನಿಗೆ ಕೋಪವನ್ನು ಎಬ್ಬಿಸಿದನು.

1 2 3 4 5 6 7 8 9 10 11 12 13 14 15 16 17 18 19 20 21 22 23 24 25 26 27 28 29 30 31 32 33 34 35 36 37 38 39 40 41 42 43 44 45 46 47 48 49 50 51 52 53

BG:

Opacity:

Color:


Size:


Font: