1 ಅರಸುಗಳು 15 : 1 (KNV)
ನೆಬಾಟನ ಮಗನಾಗಿರುವ ಅರಸನಾದ ಯಾರೊಬ್ಬಾಮನ ಹದಿನೆಂಟನೇ ವರುಷ ದಲ್ಲಿ ಅಬೀಯಾಮನು ಯೆಹೂದದ ಮೇಲೆ ಆಳುತ್ತಿ ದ್ದನು.
1 ಅರಸುಗಳು 15 : 2 (KNV)
ಅವನು ಯೆರೂಸಲೇಮಿನಲ್ಲಿ ಮೂರು ವರುಷ ಆಳಿದನು. ಅವನ ತಾಯಿ ಅಬೀಷಾಲೋಮನ ಮಗ ಳಾಗಿದ್ದು ಮಾಕಾ ಎಂಬ ಹೆಸರುಳ್ಳವಳಾಗಿದ್ದಳು.
1 ಅರಸುಗಳು 15 : 3 (KNV)
ಆದರೆ ತನ್ನ ಪಿತೃವಾದ ದಾವೀದನ ಹೃದಯದ ಪ್ರಕಾರ ತನ್ನ ಹೃದಯವು ತನ್ನ ದೇವರಾದ ಕರ್ತನ ಮುಂದೆ ಪೂರ್ಣವಾಗಿರದೆ ತನಗೆ ಮುಂಚಿದ್ದ ತನ್ನ ತಂದೆ ಮಾಡಿದ ಸಮಸ್ತ ಪಾಪಗಳಲ್ಲಿ ನಡೆದನು.
1 ಅರಸುಗಳು 15 : 4 (KNV)
ಅವನ ತರುವಾಯ ಅವನ ಮಗನನ್ನು ನೇಮಿಸುವದಕ್ಕೂ ಯೆರೂಸಲೇಮನ್ನು ಸ್ಥಿರಪಡಿಸುವದಕ್ಕೂ ತನ್ನ ದೇವರಾದ ಕರ್ತನು ದಾವೀದನ ನಿಮಿತ್ತ ಯೆರೂ ಸಲೇಮಿನಲ್ಲಿ ಅವನಿಗೆ ದೀಪವನ್ನು ಕೊಟ್ಟನು.
1 ಅರಸುಗಳು 15 : 5 (KNV)
ದಾವೀದನು ಹಿತ್ತಿಯನಾದ ಊರೀಯನ ವಿಷಯ ಹೊರತಾಗಿ ತನ್ನ ಜೀವಿತದ ಸಮಸ್ತ ದಿವಸಗಳಲ್ಲಿ ಕರ್ತನು ತನಗೆ ಆಜ್ಞಾಪಿಸಿದ ಎಲ್ಲಾದಕ್ಕೆ ತೊಲಗದೆ ಆತನ ದೃಷ್ಟಿಗೆ ಮೆಚ್ಚಿಗೆಯಾದದ್ದನ್ನು ಮಾಡಿ ದನು. ಆದರೆ ರೆಹಬ್ಬಾಮನಿಗೂ ಯಾರೊಬ್ಬಾಮನಿಗೂ ಅವರ ಜೀವಾಂತ್ಯದ ವರೆಗೆ ಯುದ್ಧಉಂಟಾಗಿತ್ತು.
1 ಅರಸುಗಳು 15 : 6 (KNV)
ಅಬೀಯಾಮನ ಮಿಕ್ಕಾದ ಕ್ರಿಯೆಗಳೂ ಅವನು ಮಾಡಿದ್ದೆಲ್ಲವೂ ಯೆಹೂದದ ಅರಸುಗಳ ವೃತಾಂತಗಳ ಪುಸ್ತಕದಲ್ಲಿ ಬರೆಯಲ್ಪಟ್ಟವಲ್ಲವೋ?
1 ಅರಸುಗಳು 15 : 7 (KNV)
ಅಬೀಯಾಮನಿಗೂ ಯಾರೂಬ್ಬಾಮನಿಗೂ ಯುದ್ಧ ನಡೆಯುತ್ತಿತ್ತು.
1 ಅರಸುಗಳು 15 : 8 (KNV)
ಅಬೀಯಾಮನು ತನ್ನ ಪಿತೃಗಳ ಸಂಗಡ ಮಲಗಿ ದನು; ದಾವೀದನ ಪಟ್ಟಣದಲ್ಲಿ ಅವನನ್ನು ಹೂಣಿ ಟ್ಟರು. ಅವನ ಮಗನಾದ ಆಸನು ಅವನಿಗೆ ಬದಲಾಗಿ ಆಳಿದನು.
1 ಅರಸುಗಳು 15 : 9 (KNV)
ಇಸ್ರಾಯೇಲಿನ ಅರಸನಾದ ಯಾರೊಬ್ಬಾಮನ ಇಪ್ಪತ್ತನೇ ವರುಷದಲ್ಲಿ ಆಸನು ಯೆಹೂದದ ಮೇಲೆ ಆಳಿದನು.
1 ಅರಸುಗಳು 15 : 10 (KNV)
ನಾಲ್ವತ್ತೊಂದು ವರುಷ ಅವನು ಯೆರೂ ಸಲೇಮಿನಲ್ಲಿ ಆಳಿದನು. ಅವನ ತಾಯಿ ಅಬೀಷಾ ಲೋಮನ ಮಗಳಾಗಿದ್ದು ಮಾಕಾಳೆಂಬ ಹೆಸರುಳ್ಳವ ಳಾಗಿದ್ದಳು.
1 ಅರಸುಗಳು 15 : 11 (KNV)
ಆಸನು ತನ್ನ ತಂದೆಯಾದ ದಾವೀದನ ಹಾಗೆ ಕರ್ತನ ಸಮ್ಮುಖದಲ್ಲಿ ಮೆಚ್ಚಿಗೆಯಾದದ್ದನ್ನು ಮಾಡಿದನು.
1 ಅರಸುಗಳು 15 : 12 (KNV)
ಅವನು ಪುರುಷ ಸಂಗಮರನ್ನು ದೇಶದಲ್ಲಿಂದ ಹೊರಡಿಸಿ ತನ್ನ ಪಿತೃಗಳು ಮಾಡಿದ ಸಮಸ್ತ ವಿಗ್ರಹಗಳನ್ನು ತೆಗೆದುಹಾಕಿದನು.
1 ಅರಸುಗಳು 15 : 13 (KNV)
ಇದಲ್ಲದೆ ಆಸನು ತನ್ನ ತಾಯಿಯಾದ ಮಾಕಾ ತೋಪಿನಲ್ಲಿ ಒಂದು ವಿಗ್ರಹವನ್ನು ಮಾಡಿಸಿ ಇಟ್ಟದ್ದರಿಂದ ಅವಳನ್ನು ರಾಣಿಯಾಗಿರದ ಹಾಗೆ ತೆಗೆದುಹಾಕಿ ಅವಳ ವಿಗ್ರಹ ವನ್ನು ಕಡಿದುಬಿಟ್ಟು ಕಿದ್ರೋನೆಂಬ ಹಳ್ಳದ ಬಳಿಯಲ್ಲಿ ಅದನ್ನು ಸುಟ್ಟುಬಿಟ್ಟನು.
1 ಅರಸುಗಳು 15 : 14 (KNV)
ಉನ್ನತ ಸ್ಥಳಗಳಾದರೋ ಅವು ತೆಗೆದು ಹಾಕಲ್ಪಟ್ಟಿದ್ದಿಲ್ಲ; ಆದಾಗ್ಯೂ ಆಸನ ಹೃದಯವು ತನ್ನ ಸಮಸ್ತ ದಿವಸಗಳಲ್ಲಿ ಕರ್ತನ ದೃಷ್ಟಿಯಲ್ಲಿ ದೋಷವಿಲ್ಲದ್ದಾಗಿತ್ತು.
1 ಅರಸುಗಳು 15 : 15 (KNV)
ತಾನೂ ತನ್ನ ತಂದೆಯೂ ಅರ್ಪಿಸಿದ ಬೆಳ್ಳಿಯೂ ಬಂಗಾರವೂ ಸಾಮಾನುಗಳೂ ಅಂತೂ ಪ್ರತಿಷ್ಠಿಸಿದವುಗಳನ್ನು ಅವನು ಕರ್ತನ ಮಂದಿರಕ್ಕೆ ತಂದನು.
1 ಅರಸುಗಳು 15 : 16 (KNV)
ಆಸನಿಗೂ ಇಸ್ರಾಯೇಲಿನ ಅರಸನಾದ ಬಾಷ ನಿಗೂ ಅವರ ಜೀವಾಂತ್ಯದ ವರೆಗೆ ಯುದ್ಧ ನಡೆಯು ತ್ತಿತ್ತು.
1 ಅರಸುಗಳು 15 : 17 (KNV)
ಆಗ ಇಸ್ರಾಯೇಲಿನ ಅರಸನಾದ ಬಾಷನು ಯೆಹೂದಕ್ಕೆ ವಿರೋಧವಾಗಿ ಹೋಗಿ ಯೆಹೂದದ ಅರಸನಾದ ಆಸನ ಬಳಿಗೆ ಒಳಗಾಗಲಿ ಹೊರಗಾಗಲಿ ಯಾರೂ ಹೋಗದ ಹಾಗೆ ರಾಮವನ್ನು ಕಟ್ಟಿಸಿದನು.
1 ಅರಸುಗಳು 15 : 18 (KNV)
ಆಗ ಆಸನು ಕರ್ತನ ಮಂದಿರದ ಬೊಕ್ಕಸಗಳನ್ನೂ ಮಿಕ್ಕ ಸಮಸ್ತ ಬೆಳ್ಳಿ ಬಂಗಾರವನ್ನು ಅರಮನೆಯ ಬೊಕ್ಕಸಗಳಲ್ಲಿ ತೆಗೆದು ತನ್ನ ಸೇವಕರ ಕೈಯಲ್ಲಿ ಒಪ್ಪಿಸಿ ದಮಸ್ಕ ಪಟ್ಟಣದಲ್ಲಿ ವಾಸವಾಗಿರುವ ಹೆಜ್ಯೋನನ ಮೊಮ್ಮಗನೂ ಟಬ್ರಿಮ್ಮೋನನ ಮಗನೂ ಆಗಿರುವ ಅರಾಮಿನ ಅರಸನಾದ ಬೆನ್ಹದದನಿಗೆ ಅವುಗಳನ್ನು ಕಳುಹಿಸಿ--ನನಗೂ ನಿನಗೂ ನನ್ನ ತಂದೆಗೂ ನಿನ್ನ ತಂದೆಗೂ ಒಡಂಬಡಿಕೆ ಉಂಟಲ್ಲಾ.
1 ಅರಸುಗಳು 15 : 19 (KNV)
ಇಗೋ, ನಾನು ಬೆಳ್ಳಿ ಬಂಗಾರವನ್ನು ಕಾಣಿಕೆಯಾಗಿ ನಿನ್ನ ಬಳಿಗೆ ಕಳುಹಿಸಿದ್ದೇನೆ. ಇಸ್ರಾಯೇಲಿನ ಅರಸನಾದ ಬಾಷನು ನನ್ನನ್ನು ಬಿಟ್ಟು ಹೋಗುವ ಹಾಗೆ ನೀನು ಬಂದು ಅವನ ಸಂಗಡ ಮಾಡಿದ ನಿನ್ನ ಒಡಂಬಡಿಕೆಯನ್ನು ಮುರಿಯಬೇಕು ಅಂದನು.
1 ಅರಸುಗಳು 15 : 20 (KNV)
ಹಾಗೆಯೇ ಬೆನ್ಹದದನು ಅರಸನಾದ ಆಸನ ಮಾತನ್ನು ಕೇಳಿ ಇಸ್ರಾಯೇಲಿನ ಪಟ್ಟಣಗಳಿಗೆ ವಿರೋಧವಾಗಿ ತನಗುಂಟಾದ ಸೈನ್ಯಗಳ ಅಧಿಪತಿ ಗಳನ್ನು ಕಳುಹಿಸಿ ಇಯ್ಯೋನ್, ದಾನ್, ಆಬೇಲ್ಬೇ ತ್ಮಾಕಾ ಸಮಸ್ತ ಕಿನ್ನೆರೋತ್, ಸಮಸ್ತ ನಫ್ತಾಲಿ ದೇಶವು, ಇವುಗಳನ್ನು ಹೊಡೆದುಬಿಟ್ಟನು.
1 ಅರಸುಗಳು 15 : 21 (KNV)
ಬಾಷನು ಅದನ್ನು ಕೇಳುತ್ತಲೆ ರಾಮವನ್ನು ಕಟ್ಟಿಸುವದನ್ನು ಬಿಟ್ಟು ತಿರ್ಚ ದಲ್ಲಿ ವಾಸಿಸಿದನು.
1 ಅರಸುಗಳು 15 : 22 (KNV)
ಆಗ ಅರಸನಾದ ಆಸನು ಯೆಹೂದದೆಲ್ಲೆಲ್ಲಿಯೂ ಸಾರಿದನು; ಒಬ್ಬರೂ ಬಿಡಲ್ಪ ಡಲಿಲ್ಲ; ಆಗ ಅವರು ಬಾಷನು ಕಟ್ಟಿಸಿದ ರಾಮದ ಕಲ್ಲುಗಳನ್ನೂ ಅದರ ಮರಗಳನ್ನೂ ತಕ್ಕೊಂಡು ಹೋದರು. ಅರಸನಾದ ಆಸನು ಅವುಗಳಿಂದ ಬೆನ್ಯಾವಿಾನನ ಗೆಬವನ್ನೂ ಮಿಚ್ಪೆಯನ್ನೂ ಕಟ್ಟಿಸಿದನು.
1 ಅರಸುಗಳು 15 : 23 (KNV)
ಆಸನ ಮಿಕ್ಕಾದ ಎಲ್ಲಾ ಕ್ರಿಯೆಗಳೂ ಅವನ ಸಮಸ್ತ ಪರಾಕ್ರಮವೂ ಅವನು ಮಾಡಿದ್ದೆಲ್ಲವೂ ಅವನು ಕಟ್ಟಿಸಿದ ಪಟ್ಟಣಗಳೂ ಯೆಹೂದದ ಅರಸುಗಳ ವೃತಾಂತಗಳ ಪುಸ್ತಕದಲ್ಲಿ ಬರೆಯ ಲ್ಪಡಲಿಲ್ಲವೋ? ಆದರೆ ತನ್ನ ವೃದ್ದಾಪ್ಯದ ಕಾಲದಲ್ಲಿ ಅವನು ತನ್ನ ಕಾಲುಗಳಲ್ಲಿ ಅಸ್ವಸ್ಥನಾಗಿದ್ದನು.
1 ಅರಸುಗಳು 15 : 24 (KNV)
ಆಸನು ತನ್ನ ಪಿತೃಗಳ ಸಂಗಡ ಮಲಗಿದನು; ತನ್ನ ತಂದೆಯಾದ ದಾವೀದನ ಪಟ್ಟಣದಲ್ಲಿ ತನ್ನ ಪಿತೃಗಳ ಸಂಗಡ ಹೂಣಿಡಲ್ಪಟ್ಟನು. ಅವನಿಗೆ ಬದ ಲಾಗಿ ಅವನ ಮಗನಾದ ಯೆಹೋಷಾಫಾಟನು ಆಳಿದನು.
1 ಅರಸುಗಳು 15 : 25 (KNV)
ಯೆಹೂದದ ಅರಸನಾದ ಆಸನ ಎರಡನೇ ವರುಷದಲ್ಲಿ ಯಾರೊಬ್ಬಾಮನ ಮಗನಾದ ನಾದಾಬನು ಇಸ್ರಾಯೇಲಿನ ಮೇಲೆ ಆಳಲು ಆರಂಭಿಸಿ ಎರಡು ವರುಷ ಆಳಿದನು.
1 ಅರಸುಗಳು 15 : 26 (KNV)
ಆದರೆ ಅವನು ಕರ್ತನ ಸಮ್ಮುಖದಲ್ಲಿ ಕೆಟ್ಟದ್ದನ್ನು ಮಾಡಿ ಪಾಪಮಾಡಲು ಇಸ್ರಾಯೇಲ್ಯರನ್ನು ಪ್ರೇರೇಪಿಸಿದ ಅವನ ತಂದೆಯ ಪಾಪದಲ್ಲಿಯೂ ಅವನ ಮಾರ್ಗದಲ್ಲಿಯೂ ನಡೆದನು.
1 ಅರಸುಗಳು 15 : 27 (KNV)
ಇಸ್ಸಾಕಾರನ ಮನೆಯವನಾಗಿರುವ ಅಹೀಯನ ಮಗನಾದ ಬಾಷನು ಅವನಿಗೆ ವಿರೋಧವಾಗಿದ್ದು ಫಿಲಿಷ್ಟಿಯರಿಗೆ ಉಂಟಾದ ಗಿಬ್ಬೆತೋನಿನಲ್ಲಿ ಅವನನ್ನು ಹೊಡೆದುಬಿಟ್ಟನು. ಯಾಕಂದರೆ ನಾದಾಬನೂ ಸಮಸ್ತ ಇಸ್ರಾಯೇಲ್ಯರೂ ಗಿಬ್ಬೆತೋನಿಗೆ ಮುತ್ತಿಗೆ ಹಾಕುತ್ತಾ ಇದ್ದರು.
1 ಅರಸುಗಳು 15 : 28 (KNV)
ಯೆಹೂದದ ಅರಸನಾದ ಆಸನ ಮೂರ ನೇ ವರುಷದಲ್ಲಿ ಬಾಷನು ನಾದಾಬನನ್ನು ಕೊಂದು ಹಾಕಿ ಅವನಿಗೆ ಬದಲಾಗಿ ಆಳಿದನು.
1 ಅರಸುಗಳು 15 : 29 (KNV)
ಅವನು ಆಳುತ್ತಿರುವಾಗ ಏನಾಯಿತಂದರೆ, ಯಾರೊಬ್ಬಾಮನ ಮನೆಯನ್ನೆಲ್ಲಾ ಹೊಡೆದುಬಿಟ್ಟನು.
1 ಅರಸುಗಳು 15 : 30 (KNV)
ಯಾರೊಬ್ಬಾ ಮನು ಪಾಪಮಾಡಿ ಇಸ್ರಾಯೇಲ್ಯರನ್ನು ಪ್ರೇರೇಪಿ ಸಿದ ನಿಮಿತ್ತವಾಗಿಯೂ ಇಸ್ರಾಯೇಲಿನ ದೇವರಾದ ಕರ್ತನಿಗೆ ಕೋಪವನ್ನು ಎಬ್ಬಿಸಿದ ನಿಮಿತ್ತವಾಗಿಯೂ ಕರ್ತನು ಶೀಲೋವಿನವನಾಗಿರುವ ತನ್ನ ಸೇವಕನಾದ ಅಹೀಯನ ಮುಖಾಂತರ ಹೇಳಿದ ಮಾತಿನ ಪ್ರಕಾರವೇ ಅವನು ಯಾರೊಬ್ಬಾಮನನ್ನು ನಾಶಮಾಡುವ ವರೆಗೆ ಶ್ವಾಸವುಳ್ಳ ಒಬ್ಬನನ್ನೂ ಉಳಿಯಗೊಡಿಸಲಿಲ್ಲ.
1 ಅರಸುಗಳು 15 : 31 (KNV)
ಆದರೆ ನಾದಾಬನ ಮಿಕ್ಕಾದ ಕ್ರಿಯೆಗಳೂ ಅವನು ಮಾಡಿದ ಸಮಸ್ತವೂ ಇಸ್ರಾಯೇಲ್ಯರ ಅರಸುಗಳ ವೃತಾಂತಗಳ ಪುಸ್ತಕದಲ್ಲಿ ಬರೆಯಲ್ಪಡಲಿಲ್ಲವೋ?
1 ಅರಸುಗಳು 15 : 32 (KNV)
ಇದಲ್ಲದೆ ಆಸನಿಗೂ ಇಸ್ರಾಯೇಲಿನ ಅರಸನಾದ ಬಾಷನಿಗೂ ಅವರ ಜೀವಾಂತ್ಯದ ವರೆಗೆ ಯುದ್ಧವಿತ್ತು.
1 ಅರಸುಗಳು 15 : 33 (KNV)
ಯೆಹೂದದ ಅರಸನಾದ ಆಸನ ಮೂರನೇ ವರುಷದಲ್ಲಿ ಅಹೀಯನ ಮಗನಾದ ಬಾಷನು ಸಮಸ್ತ ಇಸ್ರಾಯೇಲ್ಯರ ಮೇಲೆ ತಿರ್ಚದಲ್ಲಿ ಆಳಲು ಆರಂಭಿಸಿ ಇಪ್ಪತ್ತನಾಲ್ಕು ವರುಷ ಆಳಿದನು.
1 ಅರಸುಗಳು 15 : 34 (KNV)
ಆದರೆ ಅವನು ಕರ್ತನ ಸಮ್ಮುಖದಲ್ಲಿ ಕೆಟ್ಟದ್ದನ್ನು ಮಾಡಿ ಯಾರೊ ಬ್ಬಾಮನ ಮಾರ್ಗದಲ್ಲಿಯೂ ಅವನು ಇಸ್ರಾಯೇಲನ್ನು ಪಾಪಮಾಡಲು ಪ್ರೇರೇಪಿಸಿದ ಅವನ ಪಾಪದ ಲ್ಲಿಯೂ ನಡೆದನು.
❮
❯