1 ಕೊರಿಂಥದವರಿಗೆ 5 : 1 (KNV)
ನಿಮ್ಮಲ್ಲಿ ಜಾರತ್ವವಿದೆಯೆಂದು ಸಾಧಾರಣ ವಾಗಿ ಹೇಳಲ್ಪಟ್ಟಿದೆ; ಒಬ್ಬನು ತನ್ನ ಅಪ್ಪನ ಹೆಂಡತಿಯನ್ನು ಇಟ್ಟುಕೊಂಡಿದ್ದಾನಂತೆ; ಅಂಥ ಜಾರತ್ವವು ಅನ್ಯಜನರಲ್ಲಿಯೂ ಇಲ್ಲ.
1 ಕೊರಿಂಥದವರಿಗೆ 5 : 2 (KNV)
ಆದರೆ ಇಂಥ ಕೆಲಸ ಮಾಡಿದವನನ್ನು ನೀವು ನಿಮ್ಮ ಮಧ್ಯದೊಳಗಿಂದ ತೆಗೆದುಹಾಕದೆಯೂ ದುಃಖಪಡದೆಯೂ ಉಬ್ಬಿಕೊಂಡ ವರಾಗಿಯೇ ಇದ್ದೀರಿ.
1 ಕೊರಿಂಥದವರಿಗೆ 5 : 3 (KNV)
ನಾನಂತೂ ದೇಹದಿಂ ದೂರವಾಗಿದ್ದರೂ ಆತ್ಮದಿಂದ ಹತ್ತಿರದಲ್ಲಿದ್ದು ಇಂಥ ಕಾರ್ಯಮಾಡಿದವನನ್ನು ಕುರಿತು ನಿಜವಾಗಿ ಆಗಲೇ ಹತ್ತಿರವಿದ್ದವನಂತೆ ತೀರ್ಪುಮಾಡಿದ್ದೇನೆ.
1 ಕೊರಿಂಥದವರಿಗೆ 5 : 4 (KNV)
ನೀವೂ ನನ್ನಾತ್ಮವೂ ಕರ್ತನಾದ ಯೇಸುವಿನ ಸಾಮರ್ಥ್ಯ ಸಹಿತ ಒಟ್ಟುಗೂಡಿ ಬಂದಿರಲಾಗಿ
1 ಕೊರಿಂಥದವರಿಗೆ 5 : 5 (KNV)
ಕರ್ತನಾದ ಯೇಸುಕ್ರಿಸ್ತನ ಪ್ರತ್ಯಕ್ಷತೆಯ ದಿನದಲ್ಲಿ ಅಂಥವನ ಆತ್ಮವು ರಕ್ಷಣೆ ಹೊಂದುವದಕ್ಕಾಗಿ ಅವನ ಶರೀರವು ನಾಶವಾಗ ಬೇಕೆಂದು ನಮ್ಮ ಕರ್ತನಾದ ಯೇಸುವಿನ ಹೆಸರಿನಲ್ಲಿ ಅವನನ್ನು ಸೈತಾನನಿಗೆ ಒಪ್ಪಿಸಿಕೊಡಬೇಕೆಂಬದೇ.
1 ಕೊರಿಂಥದವರಿಗೆ 5 : 6 (KNV)
ನೀವು ಹಿಗ್ಗುವದು ಒಳ್ಳೇದಲ್ಲ. ಸ್ವಲ್ಪ ಹುಳಿಯು ಕಣಿಕವನ್ನೆಲ್ಲಾ ಹುಳಿ ಮಾಡುತ್ತದೆಂಬದು ನಿಮಗೆ ತಿಳಿಯದೋ?
1 ಕೊರಿಂಥದವರಿಗೆ 5 : 7 (KNV)
ಆದದರಿಂದ ನೀವು ಹುಳಿ ಇಲ್ಲದ ವರಾದ ಕಾರಣ ಹೊಸ ಕಣಿಕವಾಗಿರುವಂತೆ ಆ ಹಳೇ ಹುಳಿಯನ್ನು ತೆಗೆದುಹಾಕಿರಿ. ಯಾಕಂದರೆ ನಮ್ಮ ಪಸ್ಕವಾಗಿರುವ ಕ್ರಿಸ್ತನೇ ನಮಗೋಸ್ಕರ ಯಜ್ಞಾರ್ಪಿತ ನಾಗಿದ್ದಾನೆ.
1 ಕೊರಿಂಥದವರಿಗೆ 5 : 8 (KNV)
ಆದಕಾರಣ ನಾವು ಹಳೇ ಹುಳಿಯನ್ನು ಅಂದರೆ ದುರ್ಮಾರ್ಗತ್ವ ದುಷ್ಟತ್ವ ಎಂಬ ಹುಳಿಯನ್ನು ಇಟ್ಟುಕೊಳ್ಳದೆ ಸರಳತೆ ಸತ್ಯತೆ ಎಂಬ ಹುಳಿಯಿಲ್ಲದ ರೊಟ್ಟಿಯಿಂದ ಹಬ್ಬವನ್ನು ಆಚರಿಸೋಣ.
1 ಕೊರಿಂಥದವರಿಗೆ 5 : 9 (KNV)
ಜಾರರ ಸಹವಾಸವನ್ನು ಮಾಡಬಾರದೆಂದು ಒಂದು ಪತ್ರಿಕೆಯಲ್ಲಿ ನಿಮಗೆ ಬರೆದಿದ್ದೆನು.
1 ಕೊರಿಂಥದವರಿಗೆ 5 : 10 (KNV)
ಈ ಲೋಕದಲ್ಲಿರುವ ಜಾರರು, ಲೋಭಿಗಳು, ಸುಲು ಕೊಳ್ಳುವವರು, ವಿಗ್ರಹಾರಾಧಕರು ಇವರನ್ನು ಬಿಟ್ಟು ಬಿಡಬೇಕೆಂದು ನನ್ನ ತಾತ್ವರ್ಯವಲ್ಲ; ಹಾಗೆ ಬಿಡ ಬೇಕಾದರೆ ನೀವು ಈ ಲೋಕವನ್ನೇ ಬಿಟ್ಟು ಹೋಗ ಬೇಕಾಗುವದು.
1 ಕೊರಿಂಥದವರಿಗೆ 5 : 11 (KNV)
ಆದರೆ ಸಹೋದರ ನೆನಿಸಿಕೊಂಡ ವನು ಜಾರನಾದರೂ ಲೋಭಿಯಾದರೂ ವಿಗ್ರಹಾ ರಾಧಕನಾದರೂ ಬೈಯುವವನಾದರೂ ಕುಡುಕ ನಾದರೂ ಸುಲುಕೊಳ್ಳುವವನಾದರೂ ಆಗಿದ್ದ ಪಕ್ಷದಲ್ಲಿ ಅಂಥವನ ಸಹವಾಸ ಮಾಡಬಾರದು, ಅಂಥವನ ಸಂಗಡ ಊಟ ಮಾಡಲೂಬಾರದು ಎಂದು ನಾನು ಈಗ ಬರೆದಿದ್ದೇನೆ.
1 ಕೊರಿಂಥದವರಿಗೆ 5 : 12 (KNV)
ಹೊರಗಿನವರಿಗೆ ಸಹ ತೀರ್ಪು ಮಾಡುವದಕ್ಕೆ ನನಗೇನಿದೆ? ಒಳಗಿನವರಿಗೆ ತೀರ್ಪು ಮಾಡುವವರು ನೀವೇ ಅಲ್ಲವೇ?ಹೊರಗಿನವರಿಗೆ ತೀರ್ಪುಮಾಡುವಾತನು ದೇವರು. ಆದದರಿಂದ ಆ ದುಷ್ಟನನ್ನು ನಿಮ್ಮ ಮಧ್ಯದಿಂದ ಹೊರಗೆ ಹಾಕಿರಿ.
1 ಕೊರಿಂಥದವರಿಗೆ 5 : 13 (KNV)
ಹೊರಗಿನವರಿಗೆ ತೀರ್ಪುಮಾಡುವಾತನು ದೇವರು. ಆದದರಿಂದ ಆ ದುಷ್ಟನನ್ನು ನಿಮ್ಮ ಮಧ್ಯದಿಂದ ಹೊರಗೆ ಹಾಕಿರಿ.

1 2 3 4 5 6 7 8 9 10 11 12 13

BG:

Opacity:

Color:


Size:


Font: