1 ಕೊರಿಂಥದವರಿಗೆ 16 : 1 (KNV)
ಪರಿಶುದ್ಧರಿಗೋಸ್ಕರ ಹಣವನ್ನೆತ್ತುವ ವಿಷಯದಲ್ಲಿ ಗಲಾತ್ಯ ಸಭೆಗಳಿಗೆ ನಾನು ಅಪ್ಪಣೆಕೊಟ್ಟಂತೆ ನೀವೂ ಮಾಡಿರಿ.
1 ಕೊರಿಂಥದವರಿಗೆ 16 : 2 (KNV)
ನಾನು ಬಂದಾಗ (ಹಣ) ಕೂಡಿಸುವದು ಇರದಂತೆ ದೇವರು ಅಭಿವೃದ್ಧಿ ಪಡಿಸಿದ ಪ್ರಕಾರ ವಾರದ ಮೊದಲನೆಯ ದಿನದಲ್ಲಿ ನಿಮ್ಮಲ್ಲಿ ಪ್ರತಿಯೊಬ್ಬನು ತನ್ನ ಹತ್ತಿರ ಕೂಡಿಟ್ಟುಕೊಳ್ಳಲಿ.
1 ಕೊರಿಂಥದವರಿಗೆ 16 : 3 (KNV)
ನೀವು ಧಾರಾಳವಾಗಿ ಕೊಟ್ಟದ್ದನ್ನು ಯೆರೂಸಲೇಮಿಗೆ ತೆಗೆದುಕೊಂಡು ಹೋಗುವಂತೆ ನೀವು ನಿಮ್ಮ ಪತ್ರಗಳಿಂದ ಯಾರನ್ನು ಯೋಗ್ಯರೆಂದು ಸೂಚಿಸು ವಿರೋ ಅವರನ್ನು ನಾನು ಕಳುಹಿಸುವೆನು.
1 ಕೊರಿಂಥದವರಿಗೆ 16 : 4 (KNV)
ನಾನು ಸಹ ಹೋಗುವದು ಯುಕ್ತವಾಗಿ ತೋರಿದರೆ ಅವರು ನನ್ನ ಜೊತೆಯಲ್ಲಿ ಹೋಗಬಹುದು.
1 ಕೊರಿಂಥದವರಿಗೆ 16 : 5 (KNV)
ನಾನು ಮಕೆದೋನ್ಯವನ್ನು ಹಾದು ಹೋಗುವಾಗ ನಿಮ್ಮ ಬಳಿಗೆ ಬರುವೆನು; ಯಾಕಂದರೆ ನಾನು ಮಕೆದೋನ್ಯವನ್ನು ಹಾದು ಹೋಗಲೇಬೇಕು.
1 ಕೊರಿಂಥದವರಿಗೆ 16 : 6 (KNV)
ನಿಮ್ಮಲ್ಲಿದ್ದು ಹಿಮಕಾಲ ವನ್ನಾದರೂ ಕಳೆದೇನು; ಆಗ ನಾನು ಹೋಗಬೇಕಾದ ಸ್ಥಳಕ್ಕೆ ನೀವು ನನ್ನನ್ನು ಸಾಗ ಕಳುಹಿಸಬಹುದು.
1 ಕೊರಿಂಥದವರಿಗೆ 16 : 7 (KNV)
ಈಗ ನನ್ನ ಪ್ರಯಾಣದಲ್ಲಿ ನಿಮ್ಮನ್ನು ನೋಡಲು ನನಗೆ ಇಷ್ಟವಿಲ್ಲ, ಕರ್ತನ ಅಪ್ಪಣೆಯಾದರೆ ನಾನು ನಿಮ್ಮೊಂದಿಗೆ ಸ್ವಲ್ಪ ಕಾಲ ಇರುವದಕ್ಕೆ ನಿರೀಕ್ಷಿಸುತ್ತೇನೆ.
1 ಕೊರಿಂಥದವರಿಗೆ 16 : 8 (KNV)
ಪಂಚಾ ಶತ್ತಮ ದಿನದ ವರೆಗೆ ನಾನು ಎಫೆಸದಲ್ಲಿ ಇರುವೆನು.
1 ಕೊರಿಂಥದವರಿಗೆ 16 : 9 (KNV)
ಕಾರ್ಯಸಾಧಕವಾಗುವ ದೊಡ್ಡದೊಂದು ಬಾಗಲು ನನಗೋಸ್ಕರ ತೆರೆಯಲ್ಪಟ್ಟಿದೆ, ಅನೇಕ ವಿರೋಧಿಗಳು ಇದ್ದಾರೆ.
1 ಕೊರಿಂಥದವರಿಗೆ 16 : 10 (KNV)
ತಿಮೋಥೆಯನು ಬಂದರೆ ಅವನು ನಿಮ್ಮ ಬಳಿ ಯಲ್ಲಿ ಭಯವಿಲ್ಲದೆ ಇರುವಂತೆ ನೋಡಿಕೊಳ್ಳಿರಿ; ನನ್ನ ಹಾಗೆಯೇ ಅವನು ಕರ್ತನ ಕೆಲಸವನ್ನು ನಡಿಸುತ್ತಾನೆ.
1 ಕೊರಿಂಥದವರಿಗೆ 16 : 11 (KNV)
ಆದದರಿಂದ ಯಾರೂ ಅವನನ್ನು ಹೀನೈಸಬಾರದು; ಅವನು ನನ್ನ ಬಳಿಗೆ ಬರುವಂತೆ ಅವನನ್ನು ಸಮಾಧಾನ ದಿಂದ ಸಾಗಕಳುಹಿಸಿರಿ; ಅವನು ಸಹೋದರರೊಂದಿಗೆ ಬರುವದನ್ನು ನಾನು ಎದುರು ನೋಡುತ್ತೇನೆ.
1 ಕೊರಿಂಥದವರಿಗೆ 16 : 12 (KNV)
ಸಹೋದರನಾದ ಅಪೊಲ್ಲೋಸನು ಸಹೋದರ ರೊಂದಿಗೆ ನಿಮ್ಮ ಬಳಿಗೆ ಹೋಗಬೇಕೆಂದು ನಾನು ಬಹಳವಾಗಿ ಇಷ್ಟಪಟ್ಟೆನು. ಆದರೆ ಈಗ ಬರುವದಕ್ಕೆ ಅವನಿಗೆ ಸ್ವಲ್ಪವೂ ಮನಸ್ಸಿರಲಿಲ್ಲ; ಅನುಕೂಲವಾದ ಸಮಯ ಸಿಕ್ಕಿದಾಗ ಬರುವನು.
1 ಕೊರಿಂಥದವರಿಗೆ 16 : 13 (KNV)
ಸಹೋದರನಾದ ಅಪೊಲ್ಲೋಸನು ಸಹೋದರ ರೊಂದಿಗೆ ನಿಮ್ಮ ಬಳಿಗೆ ಹೋಗಬೇಕೆಂದು ನಾನು ಬಹಳವಾಗಿ ಇಷ್ಟಪಟ್ಟೆನು. ಆದರೆ ಈಗ ಬರುವದಕ್ಕೆ ಅವನಿಗೆ ಸ್ವಲ್ಪವೂ ಮನಸ್ಸಿರಲಿಲ್ಲ; ಅನುಕೂಲವಾದ ಸಮಯ ಸಿಕ್ಕಿದಾಗ ಬರುವನು.
1 ಕೊರಿಂಥದವರಿಗೆ 16 : 14 (KNV)
ನೀವು ಮಾಡುವದನ್ನೆಲ್ಲಾ ಪ್ರೀತಿಯಿಂದ ಮಾಡಿರಿ.
1 ಕೊರಿಂಥದವರಿಗೆ 16 : 15 (KNV)
ಸ್ತೆಫನನ ಮನೆಯವರು ಅಕಾಯದ ಪ್ರಥಮ ಫಲವೆಂದೂ ಅವರು ಪರಿಶುದ್ಧರ ಸೇವೆಯಲ್ಲಿ ತಮ್ಮನ್ನು ಒಪ್ಪಿಸಿಕೊಟ್ಟಿದ್ದರೆಂದೂ ನಿಮಗೆ ತಿಳಿದದೆ.
1 ಕೊರಿಂಥದವರಿಗೆ 16 : 16 (KNV)
ಆದದರಿಂದ ಅಂಥವರಿಗೂ ನಮ್ಮೊಂದಿಗೆ ಸಹಾಯ ಮಾಡುತ್ತಾ ಪ್ರಯಾಸಪಡುವ ಪ್ರತಿಯೊಬ್ಬನಿಗೂ ನೀವು ಅಧೀನರಾಗಬೇಕೆಂದು ನಾನು ನಿಮ್ಮನ್ನು ಬೇಡಿ ಕೊಳ್ಳುತ್ತೇನೆ.
1 ಕೊರಿಂಥದವರಿಗೆ 16 : 17 (KNV)
ಸ್ತೆಫನನೂ ಫೊರ್ತುನಾತನೂ ಅಖಾಯಿಕನೂ ಬಂದದರಿಂದ ನನಗೆ ಸಂತೋಷ ವಾಯಿತು. ನೀವು ಇಲ್ಲದ್ದರಿಂದ ಉಂಟಾದ ಕೊರತೆ ಯನ್ನು ಅವರು ನೀಗಿಸಿದರು.
1 ಕೊರಿಂಥದವರಿಗೆ 16 : 18 (KNV)
ಅವರು ನನ್ನ ಆತ್ಮವನ್ನೂ ನಿಮ್ಮ ಆತ್ಮಗಳನ್ನೂ ಉಪಶಮನ ಮಾಡಿದರು. ಇಂಥವರನ್ನು ಸನ್ಮಾನಿಸಿರಿ.
1 ಕೊರಿಂಥದವರಿಗೆ 16 : 19 (KNV)
ಆಸ್ಯ ಸಭೆಗಳವರು ನಿಮಗೆ ವಂದನೆ ಹೇಳುತ್ತಾರೆ. ಅಕ್ವಿಲನೂ ಪ್ರಿಸ್ಕಿಲ್ಲಳೂ ತಮ್ಮ ಮನೆಯಲ್ಲಿ ಕೂಡುವ ಸಭೆಯವರೊಂದಿಗೆ ಕರ್ತನಲ್ಲಿ ಅನೇಕ ವಂದನೆಗಳನ್ನು ಹೇಳುತ್ತಾರೆ.
1 ಕೊರಿಂಥದವರಿಗೆ 16 : 20 (KNV)
ಸಹೋದರ ರೆಲ್ಲರೂ ನಿಮ್ಮನ್ನು ವಂದಿಸುತ್ತಾರೆ. ಪವಿತ್ರವಾದ ಮುದ್ದಿಟ್ಟು ಒಬ್ಬರನ್ನೊಬ್ಬರು ವಂದಿಸಿರಿ.
1 ಕೊರಿಂಥದವರಿಗೆ 16 : 21 (KNV)
ಪೌಲನೆಂಬ ನಾನು ಸ್ವಂತ ಕೈಯಿಂದ ವಂದನೆ ಯನ್ನು ಬರೆದಿದ್ದೇನೆ.
1 ಕೊರಿಂಥದವರಿಗೆ 16 : 22 (KNV)
ಯಾವನಾದರೂ ಕರ್ತನಾದ ಯೇಸು ಕ್ರಿಸ್ತನನ್ನು ಪ್ರೀತಿಸದಿದ್ದರೆ ಅವನು ಅನಾಥಿಮ (ಶಾಪಗ್ರಸ್ತನಾಗಲಿ;) ಮಾರನಾಥ (ನಮ್ಮ ಕರ್ತನು ಬರುತ್ತಾನೆ).
1 ಕೊರಿಂಥದವರಿಗೆ 16 : 23 (KNV)
ನಮ್ಮ ಕರ್ತನಾದ ಯೇಸು ಕ್ರಿಸ್ತನ ಕೃಪೆಯು ನಿಮ್ಮೊಂದಿಗಿರಲಿ.
1 ಕೊರಿಂಥದವರಿಗೆ 16 : 24 (KNV)
ಕ್ರಿಸ್ತ ಯೇಸುವಿನಲ್ಲಿ ನಿಮ್ಮೆಲ್ಲರೊಂದಿಗೆ ನನ್ನ ಪ್ರೀತಿ ಇರಲಿ. ಆಮೆನ್.
❮
❯