1 ಕೊರಿಂಥದವರಿಗೆ 1 : 1 (KNV)
ದೇವರ ಚಿತ್ತಾನುಸಾರವಾಗಿ ಯೇಸು ಕ್ರಿಸ್ತನ ಅಪೊಸ್ತಲನಾಗುವದಕ್ಕೆ ಕರೆಯ ಲ್ಪಟ್ಟ ಪೌಲನೂ ನಮ್ಮ ಸಹೋದರನಾದ ಸೊಸ್ಥೆ ನನೂ
1 ಕೊರಿಂಥದವರಿಗೆ 1 : 2 (KNV)
ಕೊರಿಂಥದಲ್ಲಿನ ದೇವರ ಸಭೆಗೆ ಅಂದರೆ ಕ್ರಿಸ್ತ ಯೇಸುವಿನಲ್ಲಿ ಪ್ರತಿಷ್ಠಿತರೂ ಪರಿಶುದ್ಧರಾಗು ವದಕ್ಕೆ ಕರೆಯಲ್ಪಟ್ಟವರೂ ಆಗಿರುವವರಿಗೆ ಮತ್ತು ಅವರಿಗೂ ನಮಗೂ ಪ್ರತಿಯೊಂದು ಸ್ಥಳದಲ್ಲಿ ನಮ್ಮ ಕರ್ತನಾಗಿರುವ ಯೇಸು ಕ್ರಿಸ್ತನ ನಾಮಸ್ಮರಣೆಯನ್ನು ಮಾಡುವವರೆಲ್ಲರಿಗೂ
1 ಕೊರಿಂಥದವರಿಗೆ 1 : 3 (KNV)
ನಮ್ಮ ತಂದೆಯಾಗಿರುವ ದೇವರಿಂದಲೂ ಕರ್ತನಾದ ಯೇಸು ಕ್ರಿಸ್ತನಿಂದಲೂ ನಿಮಗೆ ಕೃಪೆಯೂ ಸಮಾಧಾನವೂ ಆಗಲಿ.
1 ಕೊರಿಂಥದವರಿಗೆ 1 : 4 (KNV)
ಯೇಸು ಕ್ರಿಸ್ತನಿಂದ ದೇವರು ನಿಮಗೆ ಅನುಗ್ರಹಿ ಸಿದ ಕೃಪೆಯ ನಿಮಿತ್ತ ನಾನು ನಿಮ್ಮ ವಿಷಯದಲ್ಲಿ ಯಾವಾಗಲೂ ದೇವರನ್ನು ಕೊಂಡಾಡುತ್ತೇನೆ.
1 ಕೊರಿಂಥದವರಿಗೆ 1 : 5 (KNV)
ಹೀಗೆ ನೀವು ಎಲ್ಲಾ ನುಡಿಯಲ್ಲಿಯೂ ಸಕಲ ಜ್ಞಾನದಲ್ಲಿಯೂ ಪ್ರತಿಯೊಂದು ವಿಷಯದಲ್ಲಿ ಆತನಿಂದ ಸಮೃದ್ಧಿ ಹೊಂದಿದವರಾಗಿದ್ದೀರಿ.
1 ಕೊರಿಂಥದವರಿಗೆ 1 : 6 (KNV)
ಕ್ರಿಸ್ತನ ವಿಷಯವಾದ ಸಾಕ್ಷಿಯು ನಿಮ್ಮಲ್ಲಿ ದೃಢವಾಗಿ ನೆಲೆಗೊಂಡಿತ್ತು.
1 ಕೊರಿಂಥದವರಿಗೆ 1 : 7 (KNV)
ಹೀಗಿ ರಲಾಗಿ ನೀವು ಯಾವದರಲ್ಲಿಯೂ ಕೊರತೆಯಿಲ್ಲದವರಾಗಿದ್ದು ನಮ್ಮ ಕರ್ತನಾದ ಯೇಸು ಕ್ರಿಸ್ತನ ಬರೋಣಕ್ಕಾಗಿ ಎದುರು ನೋಡುವವರಾಗಿದ್ದೀರಿ.
1 ಕೊರಿಂಥದವರಿಗೆ 1 : 8 (KNV)
ನಮ್ಮ ಕರ್ತನಾದ ಯೇಸು ಕ್ರಿಸ್ತನ ದಿನದಲ್ಲಿ ಯಾರೂ ನಿಮ್ಮ ಮೇಲೆ ತಪ್ಪುಹೊರಿಸದಂತೆ ಆತನು ನಿಮ್ಮನ್ನು ಕಡೇವರೆಗೂ ದೃಢಪಡಿಸುವನು.
1 ಕೊರಿಂಥದವರಿಗೆ 1 : 9 (KNV)
ದೇವರು ನಂಬಿ ಗಸ್ತನು; ನಮ್ಮ ಕರ್ತನಾದ ಯೇಸು ಕ್ರಿಸ್ತನೆಂಬ ತನ್ನ ಮಗನ ಅನ್ಯೋನ್ಯತೆಗೆ ನಿಮ್ಮನ್ನು ಕರೆದವನು ಆತನೇ.
1 ಕೊರಿಂಥದವರಿಗೆ 1 : 10 (KNV)
ಸಹೋದರರೇ, ನಿಮ್ಮೆಲ್ಲರ ಮಾತು ಒಂದೇ ಆಗಿರಬೇಕು; ನಿಮ್ಮಲ್ಲಿ ಭೇದಗಳಿರಬಾರದು, ನೀವು ಒಂದೇ ಮನಸ್ಸೂ ಒಂದೇ ಅಭಿಪ್ರಾಯವೂ ಉಳ್ಳವ ರಾಗಿದ್ದು ಹೊಂದಿಕೆಯಿಂದಿರಬೇಕು ಎಂಬದಾಗಿ ನಾನು ನಮ್ಮ ಕರ್ತನಾದ ಯೇಸು ಕ್ರಿಸ್ತನ ಹೆಸರಿನಲ್ಲಿ ನಿಮ್ಮನ್ನು ಬೇಡಿಕೊಳ್ಳುತ್ತೇನೆ.
1 ಕೊರಿಂಥದವರಿಗೆ 1 : 11 (KNV)
ನನ್ನ ಸಹೋದರರೇ, ನಿಮ್ಮಲ್ಲಿ ಜಗಳಗಳುಂಟೆಂದು ನಿಮ್ಮ ವಿಷಯವಾಗಿ ಖ್ಲೋಯೆಯ ಮನೆಯವರಿಂದ ನನಗೆ ತಿಳಿದುಬಂತು.
1 ಕೊರಿಂಥದವರಿಗೆ 1 : 12 (KNV)
ನಾನು ನಿಮಗೆ ಈಗ ಹೇಳುವದೇನಂದರೆ, ನಿಮ್ಮೊ ಳಗೆ ಪ್ರತಿಯೊಬ್ಬನು--ನಾನು ಪೌಲನವನು, ನಾನು ಅಪೊಲ್ಲೋಸನವನು, ನಾನು ಕೇಫನವನು, ನಾನು ಕ್ರಿಸ್ತನವನು ಎಂದು ಹೇಳಿಕೊಳ್ಳುತ್ತಾನಂತೆ.
1 ಕೊರಿಂಥದವರಿಗೆ 1 : 13 (KNV)
ಕ್ರಿಸ್ತನು ವಿಭಾಗವಾಗಿದ್ದಾನೋ? ನಿಮಗೋಸ್ಕರ ಶಿಲುಬೆಗೆ ಹಾಕಿಸಿಕೊಂಡವನು ಪೌಲನೋ? ನೀವು ಪೌಲನ ಹೆಸರಿನಲ್ಲಿ ಬಾಪ್ತಿಸ್ಮ ಮಾಡಿಸಿಕೊಂಡಿರೋ?
1 ಕೊರಿಂಥದವರಿಗೆ 1 : 14 (KNV)
ನಿಮ್ಮಲ್ಲಿ ಕ್ರಿಸ್ಪನಿಗೂ ಗಾಯನಿಗೂ ಹೊರತಾಗಿ ಮತ್ತಾರಿಗೂ ನಾನು ಬಾಪ್ತಿಸ್ಮ ಮಾಡಿಸಲಿಲ್ಲವಾದದರಿಂದ ದೇವರಿಗೆ ಸ್ತೋತ್ರ ಸಲ್ಲಿಸುತ್ತೇನೆ.
1 ಕೊರಿಂಥದವರಿಗೆ 1 : 15 (KNV)
ಹೀಗೆ ನನ್ನ ಹೆಸರಿನಲ್ಲಿ ಬಾಪ್ತಿಸ್ಮ ಮಾಡಿಸಿಕೊಂಡಿರೆಂದು ಯಾರಿಗೂ ಹೇಳುವದ ಕ್ಕಾಗದು.
1 ಕೊರಿಂಥದವರಿಗೆ 1 : 16 (KNV)
ನಾನು ಸ್ತೆಫನನ ಮನೆಯವರಿಗೆ ಸಹ ಬಾಪ್ತಿಸ್ಮ ಮಾಡಿಸಿದೆನು. ಇವರಿಗಲ್ಲದೆ ಇನ್ನಾರಿಗೂ ನಾನು ಬಾಪ್ತಿಸ್ಮ ಮಾಡಿಸಿದಂತೆ ಕಾಣೆನು.
1 ಕೊರಿಂಥದವರಿಗೆ 1 : 17 (KNV)
ಬಾಪ್ತಿಸ್ಮ ಮಾಡಿಸುವದಕ್ಕಲ್ಲ, ಸುವಾರ್ತೆಯನ್ನು ಸಾರುವದಕ್ಕೆ ಕ್ರಿಸ್ತನು ನನ್ನನ್ನು ಕಳುಹಿಸಿದನು. ವಾಕ್ಚಾತುರ್ಯದಿಂದ ಸಾರಬೇಕೆಂದು ಕಳುಹಿಸಲಿಲ್ಲ; ಹಾಗೆ ಸಾರಿದರೆ ಕ್ರಿಸ್ತನ ಶಿಲುಬೆಯು ನಿರರ್ಥಕವಾಗುವದು.
1 ಕೊರಿಂಥದವರಿಗೆ 1 : 18 (KNV)
ನಾಶವಾಗುವವರಿಗೆ ಶಿಲುಬೆಯ ವಿಷಯವಾದ ಸಾರೋಣವು ಹುಚ್ಚುತನವಾಗಿದೆ; ರಕ್ಷಣೆ ಹೊಂದಿದ ನಮಗಾದರೋ ಅದು ದೇವರ ಶಕ್ತಿಯಾಗಿದೆ.
1 ಕೊರಿಂಥದವರಿಗೆ 1 : 19 (KNV)
ನಾನು ಜ್ಞಾನಿಗಳ ಜ್ಞಾನವನ್ನು ನಾಶಮಾಡುವೆನು; ವಿವೇಕಿಗಳ ವಿವೇಕವನ್ನು ಇಲ್ಲದಂತಾಗ ಮಾಡುವೆನು ಎಂದು ಬರೆಯಲ್ಪಟ್ಟಿದೆ.
1 ಕೊರಿಂಥದವರಿಗೆ 1 : 20 (KNV)
ಜ್ಞಾನಿಯು ಎಲ್ಲಿ? ಶಾಸ್ತ್ರಿಯು ಎಲ್ಲಿ? ಲೋಕದ ತರ್ಕವಾದಿ ಎಲ್ಲಿ? ದೇವರು ಈ ಲೋಕದ ಜ್ಞಾನವನ್ನು ಹುಚ್ಚುತನವನ್ನಾಗಿ ಮಾಡಿದ್ದಾನಲ್ಲವೇ?
1 ಕೊರಿಂಥದವರಿಗೆ 1 : 21 (KNV)
ಯಾಕಂದರೆ ದೇವರ ಜ್ಞಾನದಲ್ಲಿ ಲೋಕವು(ತನ್ನ) ಜ್ಞಾನದ ಮೂಲಕ ದೇವರನ್ನು ತಿಳಿದುಕೊಳ್ಳಲಿಲ್ಲವಾದ ದರಿಂದ ಪ್ರಸಂಗದ ಹುಚ್ಚುತನದಿಂದಲೇ ನಂಬುವ ವರನ್ನು ರಕ್ಷಿಸುವದು ದೇವರಿಗೆ ಇಷ್ಟವಾಗಿತ್ತು.
1 ಕೊರಿಂಥದವರಿಗೆ 1 : 22 (KNV)
ಯೆಹೂದ್ಯರು ಸೂಚಕಕಾರ್ಯವನ್ನು ಕೇಳುತ್ತಾರೆ; ಗ್ರೀಕರು ಜ್ಞಾನವನ್ನು ಹುಡುಕುತ್ತಾರೆ;
1 ಕೊರಿಂಥದವರಿಗೆ 1 : 23 (KNV)
ನಾವಾದರೋ ಶಿಲುಬೆಗೆ ಹಾಕಲ್ಪಟ್ಟವನಾದ ಕ್ರಿಸ್ತನನ್ನು ಪ್ರಚುರ ಪಡಿಸುತ್ತೇವೆ. ಆತನು ಯೆಹೂದ್ಯರಿಗೆ ಅಭ್ಯಂತರವೂ ಗ್ರೀಕರಿಗೆ ಹುಚ್ಚುತನವೂ ಆಗಿದ್ದಾನೆ.
1 ಕೊರಿಂಥದವರಿಗೆ 1 : 24 (KNV)
ಆದರೆ ಕರೆಯಲ್ಪಟ್ಟ ಯೆಹೂದ್ಯರಿಗೂ ಗ್ರೀಕರಿಗೂ ಕ್ರಿಸ್ತನೇ ದೇವರ ಶಕ್ತಿಯೂ ದೇವರ ಜ್ಞಾನವೂ ಆಗಿದ್ದಾನೆ.
1 ಕೊರಿಂಥದವರಿಗೆ 1 : 25 (KNV)
ದೇವರ ಹುಚ್ಚುತನವು ಮನುಷ್ಯರಿಗಿಂತಲೂ ಜ್ಞಾನವುಳ್ಳದ್ದಾಗಿದೆ. ದೇವರ ಬಲಹೀನತೆಯು ಮನುಷ್ಯರಿಗಿಂತಲೂ ಬಲವುಳ್ಳದ್ದಾಗಿದೆ.
1 ಕೊರಿಂಥದವರಿಗೆ 1 : 26 (KNV)
ಸಹೋದರರೇ, ದೇವರು ನಿಮ್ಮನ್ನು ಕರೆದಾಗ ಎಂಥವರನ್ನು ಕರೆದನೆಂದು ಆಲೋಚಿಸಿರಿ; ನಿಮ್ಮೊಳಗೆ ಲೌಕಿಕದೃಷ್ಟಿಯಲ್ಲಿ ಜ್ಞಾನಿಗಳೂ ಅನೇಕರಿಲ್ಲ, ಬಲಿಷ್ಠರೂ ಅನೇಕರಿಲ್ಲ, ಕುಲೀನರೂ ಅನೇಕರಿಲ್ಲ.
1 ಕೊರಿಂಥದವರಿಗೆ 1 : 27 (KNV)
ಆದರೆ ದೇವರು ಜ್ಞಾನಿಗಳನ್ನು ನಾಚಿಕೆಪಡಿಸುವದಕ್ಕಾಗಿ ಈ ಲೋಕದ ಬುದ್ಧಿಹೀನರನ್ನು ಆರಿಸಿಕೊಂಡಿದ್ದಾನೆ; ದೇವರು ಬಲಿಷ್ಟರನ್ನು ನಾಚಿಕೆಪಡಿಸುವದಕ್ಕಾಗಿ ಈ ಲೋಕದ ಬಲಹೀನರನ್ನು ಆರಿಸಿಕೊಂಡಿದ್ದಾನೆ;
1 ಕೊರಿಂಥದವರಿಗೆ 1 : 28 (KNV)
ಇದಲ್ಲದೆ ದೇವರು ಇರುವವುಗಳನ್ನು ಇಲ್ಲದಂತಾಗಿ ಮಾಡುವ ಹಾಗೆ ಈ ಲೋಕದ ಹೀನವಾದವರನ್ನೂ ಅಸಡ್ಡೆಯಾದವರನ್ನೂ ಆರಿಸಿಕೊಂಡದ್ದಲ್ಲದೆ ಗಣನೆಗೆ ಬಾರದವರನ್ನೂ ಆರಿಸಿಕೊಂಡಿದ್ದಾನೆ.
1 ಕೊರಿಂಥದವರಿಗೆ 1 : 29 (KNV)
ಹೀಗಿರಲು ಆತನ ಮುಂದೆ ಹೊಗಳಿಕೊಳ್ಳುವದಕ್ಕೆ ಯಾರಿಗೂ ಆಸ್ಪದವಿಲ್ಲ.
1 ಕೊರಿಂಥದವರಿಗೆ 1 : 30 (KNV)
ಆದರೆ ನೀವು ಕ್ರಿಸ್ತ ಯೇಸುವಿನಲ್ಲಿ ರುವದು ಆತನಿಂದಲೇ; ಆತನು ನಮಗೆ ದೇವರ ಕಡೆಯಿಂದ ಜ್ಞಾನವು ನೀತಿ ಶುದ್ಧೀಕರಣ ವಿಮೋಚನೆ ಗಳಾಗಿ ಮಾಡಲ್ಪಟ್ಟಿದ್ದಾನೆ.ಹೆಚ್ಚಳ ಪಡುವವನು ಕರ್ತನಲ್ಲಿಯೇ ಹೆಚ್ಚಳಪಡಲಿ ಎಂದು ಬರೆಯಲ್ಪಟ್ಟಂತೆ ಆಯಿತು.
1 ಕೊರಿಂಥದವರಿಗೆ 1 : 31 (KNV)
ಹೆಚ್ಚಳ ಪಡುವವನು ಕರ್ತನಲ್ಲಿಯೇ ಹೆಚ್ಚಳಪಡಲಿ ಎಂದು ಬರೆಯಲ್ಪಟ್ಟಂತೆ ಆಯಿತು.

1 2 3 4 5 6 7 8 9 10 11 12 13 14 15 16 17 18 19 20 21 22 23 24 25 26 27 28 29 30 31

BG:

Opacity:

Color:


Size:


Font: