1 ಪೂರ್ವಕಾಲವೃತ್ತಾ 7 : 1 (KNV)
ಇಸ್ಸಾಕಾರನ ಕುಮಾರರು--ತೋಲನು ಪೂವನುಯಾ ಶೂಬನು ಶಿಮ್ರೋನನುಈ ನಾಲ್ಕು ಮಂದಿ.
1 ಪೂರ್ವಕಾಲವೃತ್ತಾ 7 : 2 (KNV)
ತೋಲನ ಕುಮಾರರು ಉಜ್ಜೀಯು ರೆಫಾಯನು ಯೆರೀಯೇಲನು ಯಹ್ಮೈಯು ಇಬ್ಸಾಮನು ಸಮುವೇಲನು. ಇವರು ತಮ್ಮ ತಂದೆ ಯಾದ ತೋಲನ ಮನೆಗೆ ಯಜಮಾನರಾಗಿದ್ದರು. ಇವರು ತಮ್ಮ ವಂಶಗಳಲ್ಲಿ ಯುದ್ಧ ಪರಾಕ್ರಮ ಶಾಲಿಗಳಾಗಿದ್ದರು; ದಾವೀದನ ದಿವಸಗಳಲ್ಲಿ ಅವರ ಲೆಕ್ಕ ಇಪ್ಪತ್ತೆರಡು ಸಾವಿರದ ಆರುನೂರು ಮಂದಿ ಆಗಿತ್ತು.
1 ಪೂರ್ವಕಾಲವೃತ್ತಾ 7 : 3 (KNV)
ಉಜ್ಜೀಯನ ಕುಮಾರನು ಇಜ್ಯಹ್ಯಾಹನು. ಇಜ್ಯಹ್ಯಾಹನ ಕುಮಾರರು -- ವಿಾಕಾಯೇಲನು, ಓಬದ್ಯನು, ಯೋವೇಲನು, ಇಷ್ಷೀಯನು--ಈ ಐದು ಮಂದಿಯು; ಇವರೆಲ್ಲರು ಮುಖ್ಯಸ್ಥರಾಗಿದ್ದರು.
1 ಪೂರ್ವಕಾಲವೃತ್ತಾ 7 : 4 (KNV)
ಇವರ ಸಂಗಡ ಅವರ ವಂಶಗಳ ಪ್ರಕಾರವೂ ಅವರ ಪಿತೃಗಳ ಮನೆಯ ಪ್ರಕಾರವೂ ಯುದ್ಧಕ್ಕೋಸ್ಕರ ಮೂವತ್ತಾರು ಸಾವಿರ ಮಂದಿ ಸೈನಿಕರ ಗುಂಪುಗಳಿದ್ದವು; ಯಾಕಂದರೆ ಹೆಂಡತಿಯರು ಮಕ್ಕಳು ಅವರಿಗೆ ಬಹಳ ಮಂದಿ ಇದ್ದರು.
1 ಪೂರ್ವಕಾಲವೃತ್ತಾ 7 : 5 (KNV)
ಇಸ್ಸಾಕಾರನ ಕುಟುಂಬಗಳಾಗಿರುವ ಸಹೋ ದರರೊಳಗೆ ಅವರ ವಂಶಾವಳಿಗಳಲ್ಲಿ ಲೆಕ್ಕಿಸಲ್ಪಟ್ಟ ಯುದ್ಧ ಪರಾಕ್ರಮಶಾಲಿಗಳೆಲ್ಲರೂ ಎಂಭತ್ತೇಳು ಸಾವಿರ ಮಂದಿಯಾಗಿದ್ದರು.
1 ಪೂರ್ವಕಾಲವೃತ್ತಾ 7 : 6 (KNV)
ಬೆನ್ಯಾವಿಾನನ ಕುಮಾರರು--ಬೆಳನು, ಬೆಕರನು, ಯೆದೀಯಯೇಲನು--ಈ ಮೂರು ಮಂದಿ.
1 ಪೂರ್ವಕಾಲವೃತ್ತಾ 7 : 7 (KNV)
ಬೆಳನ ಕುಮಾರರು--ಎಚ್ಬೋನನು, ಉಜ್ಜೀಯು, ಉಜ್ಜೀಯೇ ಲನು, ಯೆರೀಮೋತನು, ಈರೀಯು--ಈ ಐದು ಮಂದಿ ತಮ್ಮ ಪಿತೃಗಳ ಮನೆಯಲ್ಲಿ ಯಜಮಾನ ರಾಗಿಯೂ ಯುದ್ಧದ ಪರಾಕ್ರಮಶಾಲಿಗಳಾಗಿಯೂ ಇದ್ದು ತಮ್ಮ ವಂಶಾವಳಿಗಳ ಪ್ರಕಾರ ಇಪ್ಪತ್ತೆರಡು ಸಾವಿರದ ಮೂವತ್ತು ನಾಲ್ಕುಮಂದಿ ಲೆಕ್ಕಿಸಲ್ಪಟ್ಟಿದ್ದರು.
1 ಪೂರ್ವಕಾಲವೃತ್ತಾ 7 : 8 (KNV)
ಬೆಕರನ ಕುಮಾರರು ಜೆವಿಾರನು, ಯೋವಾಷನು, ಎಲೀಯೆಜೆರನು, ಎಲ್ಯೋವೇನೈ, ಒಮ್ರಿಯು, ಯೇರಿ ಮೋತನು, ಅಬೀಯನು, ಅನಾತೋತನು, ಆಲೆ ಮೆತ್. ಇವರೆಲ್ಲರು ಬೆಕರನ ಕುಮಾರರು.
1 ಪೂರ್ವಕಾಲವೃತ್ತಾ 7 : 9 (KNV)
ಇವರ ಲೆಕ್ಕವು ತಮ್ಮ ಪಿತೃಗಳ ಮನೆಯ ಯಜಮಾನರ ವಂಶ ಗಳ ವಂಶಾವಳಿಯ ಪ್ರಕಾರವಾಗಿ ಯುದ್ಧ ಪರಾಕ್ರಮಶಾಲಿಗಳಾದವರು ಇಪ್ಪತ್ತುಸಾವಿರದ ಇನ್ನೂರು ಮಂದಿ.
1 ಪೂರ್ವಕಾಲವೃತ್ತಾ 7 : 10 (KNV)
ಯೆದೀಯಯೇಲನ ಕುಮಾರನು ಬಿಲ್ಹಾ ನನು. ಬಿಲ್ಹಾನನ ಕುಮಾರರು--ಯೆಯೂಷನು, ಬೆನ್ಯಾವಿಾನನು, ಏಹೂದನು, ಕೆನಾನನು, ಜೇತಾ ನನು, ತಾರ್ಷೀಷನು, ಅಹೀಷೆಹರನು.
1 ಪೂರ್ವಕಾಲವೃತ್ತಾ 7 : 11 (KNV)
ಇವರೆ ಲ್ಲರು ಯೆದೀಯಯೇಲನ ಕುಮಾರರು. ಅವರು ತಮ್ಮ ಪಿತೃಗಳಲ್ಲಿ ಯಜಮಾನರಾಗಿಯೂ ಯುದ್ಧದ ಪರಾಕ್ರಮಶಾಲಿಗಳಾಗಿಯೂ ಯುದ್ಧಕ್ಕೆ ಹೊರಡ ತಕ್ಕವರು ಹದಿನೇಳು ಸಾವಿರದ ಇನ್ನೂರು ಮಂದಿ ಯಾಗಿದ್ದರು.
1 ಪೂರ್ವಕಾಲವೃತ್ತಾ 7 : 12 (KNV)
ಅಹೇರನ ಕುಮಾರರಾದ ಈರನೂ ಹುಶೀ ಮನೂ ಎಂಬವರ ಮಕ್ಕಳು ಶುಪ್ಪೀಮನೂ ಹುಪ್ಪೀ ಮನೂ ಇದ್ದರು.
1 ಪೂರ್ವಕಾಲವೃತ್ತಾ 7 : 13 (KNV)
ನಫ್ತಾಲಿಯ ಕುಮಾರರು--ಯಹಚಿಯೇಲನು, ಗೂನೀಯು, ಯೇಚೆರನು, ಶಲ್ಲೂಮನು. ಇವರು ಬಿಲ್ಹಳ ಕುಮಾರರು.
1 ಪೂರ್ವಕಾಲವೃತ್ತಾ 7 : 14 (KNV)
ಮನಸ್ಸೆಯ ಕುಮಾರರು--ಅವನ ಹೆಂಡತಿಯು ಹೆತ್ತ ಅಷ್ರೀಯೇಲನು; ಅರಾಮ್ಯಳಾದ ಉಪಪತ್ನಿಯು ಗಿಲ್ಯಾದನಿಗೆ ತಂದೆಯಾದ ಮಾಕೀರನನ್ನು ಹೆತ್ತಳು.
1 ಪೂರ್ವಕಾಲವೃತ್ತಾ 7 : 15 (KNV)
ಆದರೆ ಈ ಮಾಕೀರನು ಹುಪ್ಪೀಮನು ಶುಪ್ಪೀಮನು ಎಂಬವರ ಸಹೋದರಿಯಾದ ಮಾಕಳನ್ನು ಹೆಂಡತಿ ಯಾಗಿ ತಕ್ಕೊಂಡನು. ಅವನ ಮೊಮ್ಮಗನ ಹೆಸರು ಚೆಲೋಫಾದನು; ಈ ಚೆಲೋಫಾದನಿಗೆ ಕುಮಾರ್ತೆ ಗಳು ಇದ್ದರು.
1 ಪೂರ್ವಕಾಲವೃತ್ತಾ 7 : 16 (KNV)
ಮಾಕೀರನ ಹೆಂಡತಿಯಾದ ಮಾಕಳು ಮಗನನ್ನು ಹೆತ್ತು ಪೆರೆಷೆಂದು ಹೆಸರಿಟ್ಟಳು. ಅವನ ಸಹೋದರನ ಹೆಸರು ಶೆರೆಷ್; ಇವನಿಗೆ ಊಲಾಮನು, ರೆಕೆಮನು ಎಂಬ ಹೆಸರುಳ್ಳ ಕುಮಾರ ರಿದ್ದರು.
1 ಪೂರ್ವಕಾಲವೃತ್ತಾ 7 : 17 (KNV)
ಊಲಾಮನ ಮಗ ಬೆದಾನನು. ಇವರೇ ಮನಸ್ಸೆಯ ಮಗನಾಗಿರುವ ಮಾಕೀರನ ಮಗನಾದ ಗಿಲ್ಯಾದನ ಕುಮಾರರು.
1 ಪೂರ್ವಕಾಲವೃತ್ತಾ 7 : 18 (KNV)
ಅವನ ಸಹೋದರಿಯಾದ ಹಮ್ಮೋಲೆಕೆತಳು ಈಷ್ಹೋದನನ್ನೂ ಅಬೀಯೆಜೆರ ನನ್ನೂ ಮಹ್ಲನನ್ನೂ ಹೆತ್ತಳು.
1 ಪೂರ್ವಕಾಲವೃತ್ತಾ 7 : 19 (KNV)
ಶೆವಿಾದನ ಕುಮಾ ರರು--ಅಹ್ಯಾನನು, ಶೆಕೆಮನು, ಲಿಕ್ಹೀಯು, ಅನೀಯಾಮನು.
1 ಪೂರ್ವಕಾಲವೃತ್ತಾ 7 : 20 (KNV)
ಎಫ್ರಾಯಾಮನ ಕುಮಾರರು--ಶೂತೆಲಹನು; ಇವನ ಮಗನು ಬೆರದನು. ಇವನ ಮಗನು ತಹತನು, ಇವನ ಮಗನು ಎಲ್ಲಾದನು; ಇವನ ಮಗನು ತಹತನು.
1 ಪೂರ್ವಕಾಲವೃತ್ತಾ 7 : 21 (KNV)
ಇವನ ಮಗನು ಜಾಬಾದನು; ಇವನ ಮಕ್ಕಳು --ಶೂತೆಲಹನು ಎಜೆರನೂ ಎಲ್ಲಾದನೂ. ಆ ದೇಶ ದಲ್ಲಿ ಹುಟ್ಟಿದ ಗತ್ನವರು ಇವರ ದನಗಳನ್ನು ಸುಲು ಕೊಳ್ಳಲು ಇಳಿದು ಬಂದಾಗ ಇವರನ್ನು ಕೊಂದು ಹಾಕಿದರು.
1 ಪೂರ್ವಕಾಲವೃತ್ತಾ 7 : 22 (KNV)
ಅವರ ತಂದೆಯಾದ ಎಫ್ರಾಯಾಮನು ಅನೇಕ ದಿವಸಗಳು ದುಃಖಪಟ್ಟದ್ದರಿಂದ ಅವನ ಸಹೋದರರು ಅವನನ್ನು ಆದರಿಸಲು ಬಂದರು.
1 ಪೂರ್ವಕಾಲವೃತ್ತಾ 7 : 23 (KNV)
ಅವನು ತನ್ನ ಹೆಂಡತಿಯನ್ನು ಕೂಡಿದಾಗ ಅವಳು ಗರ್ಭಧರಿಸಿ ಮಗನನ್ನು ಹೆತ್ತಳು. ಆಗ ತನ್ನ ಮನೆಯಲ್ಲಿ ಕೇಡು ಉಂಟಾದದ್ದರಿಂದ ಅವನಿಗೆ ಬೆರೀಯನೆಂಬ ಹೆಸರಿಟ್ಟನು.
1 ಪೂರ್ವಕಾಲವೃತ್ತಾ 7 : 24 (KNV)
ಇವನ ಕುಮಾರ್ತೆಯ ಹೆಸರು ಶೇರಳು; ಇವಳು ಮೇಲಣ ಮತ್ತು ಕೆಳಗಣ ಬೇತ್ಹೋರೋ ನನ್ನೂ, ಉಜ್ಜೇನ್ಶೇರವನ್ನೂ ಕಟ್ಟಿಸಿದಳು.
1 ಪೂರ್ವಕಾಲವೃತ್ತಾ 7 : 25 (KNV)
ಬೆರೀಯ ಮಗನು ರೆಫಹ, ಇವನ ಮಗನು ರೆಷೆಫನು; ಇವನಮಗನು ತೆಲಹನು.
1 ಪೂರ್ವಕಾಲವೃತ್ತಾ 7 : 26 (KNV)
ಇವನ ಮಗನು ತಹನ್, ಇವನ ಮಗನು ಲದ್ದಾನ್, ಇವನ ಮಗನು ಅವ್ಮೆಾಹೂದನು, ಇವನ ಮಗನು ಎಲೀಷಾಮನು,
1 ಪೂರ್ವಕಾಲವೃತ್ತಾ 7 : 27 (KNV)
ಇವನ ಮಗನು ನೋನನು, ಇವನ ಮಗನು ಯೆಹೋಷುವನು.
1 ಪೂರ್ವಕಾಲವೃತ್ತಾ 7 : 28 (KNV)
ಅವರ ಸ್ವಾಸ್ಥ್ಯಗಳೂ ನಿವಾಸಗಳೂ ಯಾವ ವೆಂದರೆ, ಬೇತೇಲೂ ಅದರ ಗ್ರಾಮಗಳೂ ಮೂಡಣ ದಿಕ್ಕಿನಲ್ಲಿ ನಾರಾನೂ ಪಡುವಣ ದಿಕ್ಕಿನಲ್ಲಿ ಗೆಜೆರೂ ಅದರ ಗ್ರಾಮಗಳೂ ಶೆಕೆಮೂ ಅದರ ಗ್ರಾಮಗಳೂ ಗಾಜವೂ ಅದರ ಗ್ರಾಮಗಳೂ
1 ಪೂರ್ವಕಾಲವೃತ್ತಾ 7 : 29 (KNV)
ಮನಸ್ಸೆಯ ಮಕ್ಕಳ ಮೇರೆಯಲ್ಲಿರುವ ಬೇತ್ಷಾನೂ ಅದರ ಗ್ರಾಮಗಳೂ ತಾನಾಕವೂ ಅದರ ಗ್ರಾಮಗಳೂ ಮೆಗಿದ್ದೋನೂ ಅದರ ಗ್ರಾಮಗಳೂ ದೋರೂ ಅದರ ಗ್ರಾಮಗಳೂ ಇವುಗಳಲ್ಲಿ ಇಸ್ರಾಯೇಲನ ಮಗನಾದ ಯೋಸೇಫನ ಕುಮಾರರು ವಾಸವಾಗಿದ್ದರು.
1 ಪೂರ್ವಕಾಲವೃತ್ತಾ 7 : 30 (KNV)
ಆಶೇರನ ಕುಮಾರರು--ಇಮ್ನನು, ಇಷ್ವನು, ಇಷ್ವೀ, ಬೆರೀಯನು ಅವರ ಸಹೋದರಿಯಾದ ಸೆರಹಳು.
1 ಪೂರ್ವಕಾಲವೃತ್ತಾ 7 : 31 (KNV)
ಬೆರೀಯನ ಕುಮಾರರು--ಹೆಬೆರನು ಮಲ್ಕೀಯೇಲನು;
1 ಪೂರ್ವಕಾಲವೃತ್ತಾ 7 : 32 (KNV)
ಇವನು ಬಿರ್ಜೈಯಿತನ ತಂದೆಯು. ಹೆಬೆರನು ಯಫ್ಲೇಟನನ್ನೂ ಶೋಮೇರ ನನ್ನೂ ಹೋತಾಮನನ್ನೂ ಅವರ ಸಹೋದರಿಯಾದ ಶೂವಳನ್ನೂ ಪಡೆದನು.
1 ಪೂರ್ವಕಾಲವೃತ್ತಾ 7 : 33 (KNV)
ಯಫ್ಲೇಟನ ಕುಮಾರರು--ಪಾಸಕನು, ಬಿಮ್ಹಾಲನು, ಅಶ್ವಾತನು. ಇವರೇ ಯಫ್ಲೇಟನ ಮಕ್ಕಳು.
1 ಪೂರ್ವಕಾಲವೃತ್ತಾ 7 : 34 (KNV)
ಶಮೆರನ ಕುಮಾರರು--ಅಹೀಯು, ರೊಹ್ಗನು, ಹುಬ್ಬನು, ಅರಾಮನು.
1 ಪೂರ್ವಕಾಲವೃತ್ತಾ 7 : 35 (KNV)
ಅವನ ಸಹೋದರನಾದ ಹೆಲೆಮನ ಕುಮಾರರು--ಚೋಫಹನು, ಇಮ್ನನು, ಶೇಲೆಷನು, ಆಮಾಲನು.
1 ಪೂರ್ವಕಾಲವೃತ್ತಾ 7 : 36 (KNV)
ಚೋಫಹನ ಕುಮಾರರು-- ಸೂಹನು, ಹರ್ನೇಫೆರನು, ಶೂಗಾಲನು, ಬೇರೀಯು, ಇಮ್ರನು,
1 ಪೂರ್ವಕಾಲವೃತ್ತಾ 7 : 37 (KNV)
ಬೆಚೆರನು, ಹೋದನು, ಶಮ್ಮನು, ಶಿಲ್ಷನು, ಇತ್ರಾನನು, ಬೇರನು.
1 ಪೂರ್ವಕಾಲವೃತ್ತಾ 7 : 38 (KNV)
ಯೆತೆರನ ಕುಮಾ ರರು--ಯೆಫುನ್ನೆಯು, ಪಿಸ್ಪನು, ಅರಾನು,
1 ಪೂರ್ವಕಾಲವೃತ್ತಾ 7 : 39 (KNV)
ಉಲ್ಲನ ಕುಮಾರರು--ಆರಹನು, ಹನ್ನೀಯೇಲನು ರಿಚ್ಯನು.
1 ಪೂರ್ವಕಾಲವೃತ್ತಾ 7 : 40 (KNV)
ಇವರೆಲ್ಲರು ಆಶೇರನ ಮಕ್ಕಳಾಗಿದ್ದು ತಮ್ಮ ತಂದೆಯ ಮನೆಯಲ್ಲಿ ಯಜಮಾನರಾಗಿಯೂ ಯುದ್ಧಪರಾಕ್ರಮ ಶಾಲಿಗಳಲ್ಲಿ ಮುಖ್ಯಸ್ಥರಾಗಿಯೂ ಪ್ರಭುಗಳಲ್ಲಿ ಶ್ರೇಷ್ಠ ರಾಗಿಯೂ ಇದ್ದರು. ಅವರ ವಂಶಾವಳಿಯಲ್ಲಿ ಬರೆಯ ಲ್ಪಟ್ಟ ಲೆಕ್ಕದ ಪ್ರಕಾರ ಯುದ್ದಕ್ಕೆ ಸಿದ್ಧವಾದವರು ಇಪ್ಪ ತ್ತಾರು ಸಾವಿರ ಮಂದಿಯಾಗಿದ್ದರು.

1 2 3 4 5 6 7 8 9 10 11 12 13 14 15 16 17 18 19 20 21 22 23 24 25 26 27 28 29 30 31 32 33 34 35 36 37 38 39 40