1 ಪೂರ್ವಕಾಲವೃತ್ತಾ 5 : 1 (KNV)
ಇಸ್ರಾಯೇಲಿನ ಚೊಚ್ಚಲ ಮಗನಾದ ರೂಬೇನನ ಕುಮಾರರು (ರೂಬೇನನು ಚೊಚ್ಚಲ ಮಗನಾಗಿದ್ದನು; ಆದರೆ ಅವನು ತನ್ನ ತಂದೆಯ ಹಾಸಿಗೆಯನ್ನು ಅಪವಿತ್ರಮಾಡಿದ್ದರಿಂದ ಅವನ ಚೊಚ್ಚಲತನದ ಹಕ್ಕು ಇಸ್ರಾಯೇಲನ ಮಗ ನಾದ ಯೋಸೇಫನ ಕುಮಾರರಿಗೆ ಕೊಡಲ್ಪಟ್ಟಿತು. ಆದದರಿಂದ ಈ ವಂಶಾವಳಿಯು ಚೊಚ್ಚಲತನದ ಪ್ರಕಾರ ಬರೆಯಲ್ಪಟ್ಟದ್ದಲ್ಲ.
1 ಪೂರ್ವಕಾಲವೃತ್ತಾ 5 : 2 (KNV)
ಯೆಹೂದನು ತನ್ನ ಸಹೋದರರಿಗಿಂತ ಪ್ರಬಲವುಳ್ಳವನಾದನು. ಅವ ನಿಂದ ಮುಖ್ಯ ಅಧಿಕಾರಿಯು ಹುಟ್ಟಿದನು. ಆದರೆ ಚೊಚ್ಚಲತನ ಯೋಸೆಫನದಾಗಿತ್ತು).
1 ಪೂರ್ವಕಾಲವೃತ್ತಾ 5 : 3 (KNV)
ಇಸ್ರಾಯೇಲನ ಚೊಚ್ಚಲ ಮಗನಾದ ರೂಬೇನನ ಕುಮಾರರು; ಹನೋ ಕನು ಫಲ್ಲೂ ಹೆಚ್ರೋನನು ಕರ್ವಿಾಯು.
1 ಪೂರ್ವಕಾಲವೃತ್ತಾ 5 : 4 (KNV)
ಯೋವೇ ಲನ ಕುಮಾರರು; ಇವನ ಮಗನಾದ ಶೆಮಾಯನು ಇವನ ಮಗನಾದ ಗೋಗನು
1 ಪೂರ್ವಕಾಲವೃತ್ತಾ 5 : 5 (KNV)
ಇವನ ಮಗನಾದ ಶಿವ್ಮೆಾ ಇವನ ಮಗನಾದ ವಿಾಕನು ಇವನ ಮಗ ನಾದ ರೆವಾಯನು ಇವನ ಮಗನಾದ ಬಾಳನು.
1 ಪೂರ್ವಕಾಲವೃತ್ತಾ 5 : 6 (KNV)
ಅಶ್ಯೂರಿನ ಅರಸನಾದ ತಿಗ್ಲತ್ಪಿಲೆಸರನಿಂದ ಸೆರೆಯಾಗಿ ಒಯ್ಯಲ್ಪಟ್ಟ ಇವನ ಮಗನಾದ ಬೇರನು; ಇವನೇ ರೂಬೇನ್ಯರಲ್ಲಿ ಪ್ರಭುವಾಗಿದ್ದನು.
1 ಪೂರ್ವಕಾಲವೃತ್ತಾ 5 : 7 (KNV)
ಇವನ ಸಹೋದರರು ತಮ್ಮ ಸಂತತಿಗಳಲ್ಲಿ ವಂಶಗಳ ವಂಶಾ ವಳಿಯನ್ನು ಲೆಕ್ಕಿಸುತ್ತಿರುವಾಗ ಅವರ ಮುಖ್ಯಸ್ಥರು ಯಾರಂದರೆ --
1 ಪೂರ್ವಕಾಲವೃತ್ತಾ 5 : 8 (KNV)
ಯೆಗೀಯೇಲನು, ಜೆಕರ್ಯನು, ಯೊವೇಲನ ಮಗನಾದ ಶೆಮಯನ ಮಗನಾದ ಅಜಾಜನ ಮಗನಾದ ಬೆಳವನು: ಇವನು ಅರೋ ಯೇರುನಿಂದ ಮೊದಲುಗೊಂಡು ನೆಬೋ, ಬಾಳ್ಮೆ ಯೋನ್ ವರೆಗೂ ವಾಸವಾಗಿದ್ದನು.
1 ಪೂರ್ವಕಾಲವೃತ್ತಾ 5 : 9 (KNV)
ಗಿಲ್ಯಾದಿನ ದೇಶದಲ್ಲಿ ಅವರ ದನಕುರಿಗಳು ಹೆಚ್ಚಾದದರಿಂದ ಅವನು ಮೂಡಣ ದಿಕ್ಕಿನಲ್ಲಿ ಯೂಫ್ರೇಟೀಸ್ ನದಿ ಮೊದಲುಗೊಂಡು ಅರಣ್ಯ ಪ್ರದೇಶದ ವರೆಗೂ ವಾಸ ವಾಗಿದ್ದನು.
1 ಪೂರ್ವಕಾಲವೃತ್ತಾ 5 : 10 (KNV)
ಸೌಲನ ದಿವಸಗಳಲ್ಲಿ ಅವರು ಹಗ್ರಿ ಯರ ಸಂಗಡ ಯುದ್ಧಮಾಡಿ ಅವರನ್ನು ಸಂಹರಿಸಿದರು; ಅವರು ಗಿಲ್ಯಾದಿನ ಸಮಸ್ತವಾದ ಮೂಡಣ ದಿಕ್ಕಿನ ಮೇರೆಯಲ್ಲಿ ತಮ್ಮ ಡೇರೆಗಳೊಳಗೆ ವಾಸವಾಗಿದ್ದರು.
1 ಪೂರ್ವಕಾಲವೃತ್ತಾ 5 : 11 (KNV)
ಗಾದನ ಮಕ್ಕಳು ಅವರಿಗೆದುರಾಗಿ ಬಾಷಾನ್ ದೇಶದಲ್ಲಿ ಸಲ್ಕದ ವರೆಗೂ ವಾಸವಾಗಿದ್ದರು.
1 ಪೂರ್ವಕಾಲವೃತ್ತಾ 5 : 12 (KNV)
ಬಾಷಾ ನಿನಲ್ಲಿ ಮುಖ್ಯನಾದವನು ಯೊವೇಲನು, ಎರಡನೆಯ ವನು ಶಾಫಾಮನು, ಯನ್ನೈ, ಶಾಫಾಟನು.
1 ಪೂರ್ವಕಾಲವೃತ್ತಾ 5 : 13 (KNV)
ಅವರ ಪಿತೃಗಳ ಮನೆಯಲ್ಲಿರುವ ತಮ್ಮ ಸಹೋದರರು ಯಾರಂದರೆ -- ವಿಾಕಾಯೇಲನು, ಮೆಷುಲ್ಲಾಮನು, ಶೆಬನು, ಯೋರೈಯು, ಯಕ್ಕಾನನು, ಜೀಯನು, ಏಬೆ ರನು; ಈ ಏಳು ಮಂದಿಯು.
1 ಪೂರ್ವಕಾಲವೃತ್ತಾ 5 : 14 (KNV)
ಇವರು ಹೂರೀಯ ಮಗನಾದ ಅಬೀಹೈಲನ ಮಕ್ಕಳು; ಈ ಹೂರೀಯು ಯಾರೋಹನ ಮಗನು, ಇವನು ಗಿಲ್ಯಾದನ ಮಗನು, ಇವನು ವಿಾಕಾಯೇಲನ ಮಗನು, ಇವನು ಯೆಷೀ ಷೈಯನ ಮಗನು, ಇವನು ಯಹ್ದೋವಿನ ಮಗನು, ಇವನು ಅಹೀಬೂಜನ ಮಗನು.
1 ಪೂರ್ವಕಾಲವೃತ್ತಾ 5 : 15 (KNV)
ಗೂನೀಯ ಮಗ ನಾದ ಅಬ್ದೀಹೈಲನ ಮಗನಾದ ಅಹಿಯು ಅವರ ಪಿತೃಗಳ ಮನೆಯಲ್ಲಿ ಮುಖ್ಯಸ್ಥನು.
1 ಪೂರ್ವಕಾಲವೃತ್ತಾ 5 : 16 (KNV)
ಅವರು ಗಿಲ್ಯಾದಿ ನಲ್ಲಿರುವ ಬಾಷಾನಿನಲ್ಲಿಯೂ ಅದರ ಊರುಗಳ ಲ್ಲಿಯೂ ಅದರ ಮೇರೆಯಲ್ಲಿರುವ ಶಾರೋನಿನ ಸಮಸ್ತ ಉಪನಗರಗಳಲ್ಲಿಯೂ ವಾಸವಾಗಿದ್ದರು.
1 ಪೂರ್ವಕಾಲವೃತ್ತಾ 5 : 17 (KNV)
ಇವರೆ ಲ್ಲರೂ ಯೆಹೂದದ ಅರಸನಾದ ಯೋತಾಮನ ದಿವಸ ಗಳಲ್ಲಿಯೂ ಇಸ್ರಾಯೇಲಿನ ಅರಸನಾದ ಯಾರೊ ಬ್ಬಾಮನ ದಿವಸಗಳಲ್ಲಿಯೂ ವಂಶಾವಳಿಗಳ ಪ್ರಕಾರ ಲೆಕ್ಕಿಸಲ್ಪಟ್ಟಿದ್ದರು.
1 ಪೂರ್ವಕಾಲವೃತ್ತಾ 5 : 18 (KNV)
ರೂಬೇನನ ಕುಮಾರರಲ್ಲಿಯೂ ಗಾದ್ಯರಲ್ಲಿಯೂ ಮನಸ್ಸೆಯ ಅರ್ಧ ಗೋತ್ರದಲ್ಲಿಯೂ ಗುರಾಣಿಯನ್ನು ಕತ್ತಿಯನ್ನು ಹಿಡಿಯುವದಕ್ಕೆ ಬಿಲ್ಲೆಸೆಯುವದಕ್ಕೆ ಯುದ್ಧ ದಲ್ಲಿ ಪ್ರವೀಣರೂ ಪರಾಕ್ರಮಶಾಲಿಗಳಾಗಿಯೂ ಯುದ್ಧಕ್ಕೆ ಹೊರಡುವವರು ನಾಲ್ವತ್ತುನಾಲ್ಕುಸಾವಿರದ ಏಳು ನೂರ ಅರವತ್ತು ಮಂದಿಯಾಗಿದ್ದರು.
1 ಪೂರ್ವಕಾಲವೃತ್ತಾ 5 : 19 (KNV)
ಇವರು ಹಗ್ರೀಯರಾದ ಯೆಟೂರನು ನಾಫೀಷನು ನೋದಾ ಬನು ಎಂಬ ಇವರ ಸಂಗಡ ಯುದ್ಧಮಾಡಿದರು.
1 ಪೂರ್ವಕಾಲವೃತ್ತಾ 5 : 20 (KNV)
ಇವರು ಅವರಿಗೆ ವಿರೋಧವಾಗಿ ಸಹಾಯಹೊಂದಿ ದ್ದರಿಂದ ಹಗ್ರೀಯರೂ ಅವರ ಸಂಗಡ ಕೂಡಿದ್ದ ವರೆಲ್ಲರೂ ಇವರ ಕೈಯಲ್ಲಿ ಒಪ್ಪಿಸಲ್ಪಟ್ಟರು. ಯಾಕಂದರೆ ಅವರು ಯುದ್ಧದಲ್ಲಿ ದೇವರಿಗೆ ಮೊರೆಯಿಟ್ಟು ಆತನಲ್ಲಿ ಭರವಸವಿಟ್ಟದ್ದರಿಂದ ಆತನು ಅವರ ಮನವಿಯನ್ನು ಕೇಳಿದನು.
1 ಪೂರ್ವಕಾಲವೃತ್ತಾ 5 : 21 (KNV)
ಅವರು ಸುಲುಕೊಂಡ ಪಶುಗಳುಅವರ ಒಂಟೆಗಳು ಐವತ್ತು ಸಾವಿರ, ಕುರಿಗಳು ಎರಡು ವರೆ ಲಕ್ಷ, ಕತ್ತೆಗಳು ಎರಡು ಸಾವಿರ, ಮನುಷ್ಯರು ಒಂದುಲಕ್ಷ ಮಂದಿ.
1 ಪೂರ್ವಕಾಲವೃತ್ತಾ 5 : 22 (KNV)
ಯುದ್ಧವು ದೇವರಿಂದ ಉಂಟಾದ ಕಾರಣ ಅನೇಕ ಜನರು ಕೊಲ್ಲಲ್ಪಟ್ಟು ಬಿದ್ದುಹೋದರು. ಇವರು ಸೆರೆಒಯ್ಯಲ್ಪಡುವವರೆಗೂ ಅವರ ಸ್ಥಳದಲ್ಲಿ ವಾಸವಾಗಿದ್ದರು.
1 ಪೂರ್ವಕಾಲವೃತ್ತಾ 5 : 23 (KNV)
ಮನಸ್ಸೆಯ ಅರ್ಧಗೋತ್ರದ ಮಕ್ಕಳು ದೇಶ ದಲ್ಲಿ ವಾಸಮಾಡಿ ಬಾಷಾನ್ ಮೊದಲುಗೊಂಡು ಬಾಳ್ಹೆರ್ಮೋನು ಸೆನೀರು ಹೆರ್ಮೋನ್ ಬೆಟ್ಟದ ವರೆಗೂ ಹಬ್ಬಿಕೊಂಡರು.
1 ಪೂರ್ವಕಾಲವೃತ್ತಾ 5 : 24 (KNV)
ಅವರ ಪಿತೃಗಳ ಮನೆ ಯಲ್ಲಿರುವ ಯಜಮಾನರು ಯಾರಂದರೆ--ಏಫೆರನು, ಇಷ್ಷೀಯು, ಎಲೀಯೇಲನು, ಅಜ್ರಿಯೇಲನು, ಯೆರೆ ವಿಾಯನು, ಹೋದವ್ಯನು, ಯೆಹ್ತಿಯೇಲನು. ಇವರು ಪರಾಕ್ರಮಶಾಲಿಗಳಾಗಿಯೂ ಹೆಸರುಗೊಂಡವರಾ ಗಿಯೂ ತಮ್ಮ ಪಿತೃಗಳ ಮನೆಯಲ್ಲಿ ಯಜಮಾನ ರಾಗಿಯೂ ಇದ್ದರು.
1 ಪೂರ್ವಕಾಲವೃತ್ತಾ 5 : 25 (KNV)
ಆದರೆ ಅವರು ತಮ್ಮ ಪಿತೃಗಳ ದೇವರಿಗೆ ವಿರೋಧವಾಗಿ ಅಪರಾಧಮಾಡಿ ದೇವರು ತಮ್ಮ ಮುಂದೆ ನಾಶಮಾಡಿದ ಆ ದೇಶದ ಜನರ ದೇವರುಗಳ ಹಿಂದೆ ಜಾರರಾಗಿ ಹೋದರು.
1 ಪೂರ್ವಕಾಲವೃತ್ತಾ 5 : 26 (KNV)
ಆದ ಕಾರಣ ಇಸ್ರಾಯೇಲಿನ ದೇವರು ಅಶ್ಯೂರಿನ ಅರಸ ನಾದ ಪೂಲನ ಆತ್ಮವನ್ನೂ ಅಶ್ಯೂರಿನ ಅರಸನಾದ ತಿಗ್ಲತ್ಪಿಲೆಸರನ ಆತ್ಮವನ್ನೂ ಪ್ರೇರಿಸಿದ್ದರಿಂದ ಅವರು ಅವರನ್ನು ಸೆರೆಯಾಗಿ ಒಯ್ದರು. ಆ ರೂಬೇನ್ಯರನ್ನೂ ಗಾದ್ಯರನ್ನೂ ಮನಸ್ಸೆಯ ಅರ್ಧಗೋತ್ರದವರನ್ನೂ ಹಲಹಕ್ಕೂ ಹಾಬೋರಿಗೂ ಹಾರಕ್ಕೂ ಗೋಜಾನ್ ನದಿಯ ಪ್ರದೇಶಕ್ಕೂ ತಕ್ಕೊಂಡುಹೋದರು. ಅವರು ಇಂದಿನ ವರೆಗೂ ಅಲ್ಲೇ ಇದ್ದಾರೆ.

1 2 3 4 5 6 7 8 9 10 11 12 13 14 15 16 17 18 19 20 21 22 23 24 25 26