1 ಪೂರ್ವಕಾಲವೃತ್ತಾ 4 : 1 (KNV)
ಯೆಹೂದನ ಕುಮಾರರು--ಪೇರಚನು, ಹೆಚ್ರೋನನು, ಕರ್ವಿಾಯು, ಹೂರನು, ಶೋಬಾಲನು.
1 ಪೂರ್ವಕಾಲವೃತ್ತಾ 4 : 2 (KNV)
ಶೋಬಾಲನ ಮಗನಾದ ರೆವಾ ಯನು ಯಹತನನ್ನು ಪಡೆದನು; ಯಹತನು ಅಹೂಮೈನನ್ನೂ ಲಹದನನ್ನೂ ಪಡೆದನು. ಇವರೇ ಚೊರ್ರದ ಸಂತತಿಗಳು.
1 ಪೂರ್ವಕಾಲವೃತ್ತಾ 4 : 3 (KNV)
ಎಟಾಮನ ತಂದೆಯಿಂದ ಹುಟ್ಟಿದವರು ಯಾರಂದರೆ--ಇಜ್ರೇಯೇಲನು, ಇಷ್ಮನು, ಇಬ್ಬಾಷನು ಅವರ ಸಹೋದರಿಯಾದ ಹಚೆಲೆಲ್‌ಪೋನಿ ಎಂಬ ವಳು.
1 ಪೂರ್ವಕಾಲವೃತ್ತಾ 4 : 4 (KNV)
ಪೆನೂವೇಲನು ಗೆದೋರಿನವರಿಗೆ ತಂದೆ ಯಾಗಿದ್ದನು. ಏಜೆರನು ಹೂಷಾಹ್ಯರನಿಗೆ ತಂದೆ ಯಾಗಿದ್ದನು. ಇವರು ಬೇತ್ಲೆಹೇಮಿಗೆ ತಂದೆಯಾ ಗಿದ್ದ ಎಫ್ರಾತಾನ ಚೊಚ್ಚಲ ಮಗನಾದ ಹೂರನ ಕುಮಾರರು.
1 ಪೂರ್ವಕಾಲವೃತ್ತಾ 4 : 5 (KNV)
ತೆಕೋವದ ತಂದೆಯಾದ ಅಷ್ಹೂರನಿಗೆ ಹೆಲಾ ಹಳು, ನಾರಳು ಎಂಬ ಇಬ್ಬರು ಪತ್ನಿಯರಿದ್ದರು.
1 ಪೂರ್ವಕಾಲವೃತ್ತಾ 4 : 6 (KNV)
ನಾರಳು ಅವನಿಗೆ ಅಹುಜ್ಜಾಮನನ್ನೂ ಹೇಫೆರನನ್ನೂ ತೇಮಾನ್ಯನನ್ನೂ ಅಹಷ್ಟಾರ್ಯನನ್ನೂ ಹೆತ್ತಳು.
1 ಪೂರ್ವಕಾಲವೃತ್ತಾ 4 : 7 (KNV)
ಇವರೇ ನಾರಳ ಮಕ್ಕಳು. ಹೆಲಾಹಳ ಮಕ್ಕಳು ಚೆರೆತೆನು, ಇಚ್ಹಾರನು, ಎತ್ನಾನನು.
1 ಪೂರ್ವಕಾಲವೃತ್ತಾ 4 : 8 (KNV)
ಕೋಚನು ಆನೂ ಬನನ್ನೂ ಚೊಬೇಬನನ್ನೂ ಹಾರುಮನ ಮಗನಾದ ಅಹರ್ಹೇಲನ ಸಂತತಿಗಳನ್ನೂ ಪಡೆದನು.
1 ಪೂರ್ವಕಾಲವೃತ್ತಾ 4 : 9 (KNV)
ಯಾಬೇ ಚನು ತನ್ನ ಸಹೋದರರಿಗಿಂತ ಘನವುಳ್ಳವನಾಗಿದ್ದನು. ಅವನ ತಾಯಿ -- ನಾನು ಇವನನ್ನು ವ್ಯಥೆಯಿಂದ ಹೆತ್ತೆನೆಂದು ಅವನಿಗೆ ಯಾಬೇಚನೆಂಬ ಹೆಸರಿಟ್ಟಳು.
1 ಪೂರ್ವಕಾಲವೃತ್ತಾ 4 : 10 (KNV)
ಆದರೆ ಯಾಬೇಚನು ಇಸ್ರಾಯೇಲಿನ ದೇವರನ್ನು ಕೂಗಿ ಹೇಳಿದ್ದು--ನೀನು ನನ್ನನು ನಿಜವಾಗಿ ಆಶೀರ್ವ ದಿಸಬೇಕು; ನನ್ನ ಮೇರೆಯನ್ನು ವಿಸ್ತರಿಸಬೇಕು; ನಿನ್ನ ಕೈ ನನ್ನ ಸಂಗಡ ಇರಲಿ; ಅದು ನನ್ನನ್ನು ವ್ಯಥೆಪಡಿಸದ ಹಾಗೆ ನನ್ನನು ಕೇಡಿನಿಂದ ತಪ್ಪಿಸು. ಮತ್ತು ಅವನು ಬೇಡಿಕೊಂಡದ್ದನ್ನು ದೇವರು ದೊರಕಿಸಿದನು.
1 ಪೂರ್ವಕಾಲವೃತ್ತಾ 4 : 11 (KNV)
ಇದಲ್ಲದೆ ಶೂಹನ ಸಹೋದರನಾದ ಕೆಲೂಬನು
1 ಪೂರ್ವಕಾಲವೃತ್ತಾ 4 : 12 (KNV)
ಎಷ್ಟೋನನು ಮೆಹೀರನನ್ನು ಪಡೆದನು. ಎಷ್ಟೋನನ ತಂದೆಯಾದ ಬೆತ್ರಾಫನನ್ನೂ ಪಾಸೇಹನನ್ನೂ ಇರ್ನಾ ಹಷಿನವರ ತಂದೆಯಾದ ತೆಹಿನ್ನನನ್ನೂ ಪಡೆದನು.
1 ಪೂರ್ವಕಾಲವೃತ್ತಾ 4 : 13 (KNV)
ಇವರೇ ರೇಕಾಹ್ಯರು. ಕೆನಾಜನ ಕುಮಾರರು--ಒತ್ನೀಯೇಲನು ಸೆರಾಯನು. ಒತ್ನೀಯೇಲನ ಕುಮಾ ರರು--ಹತತನು.
1 ಪೂರ್ವಕಾಲವೃತ್ತಾ 4 : 14 (KNV)
ಮೆಯೋನೋತೈಯು ಒಫ್ರಾಹ ನನ್ನು ಪಡೆದನು; ಸೆರಾಯನು ಶಿಲ್ಪಿಗರಾಗಿರುವ ಗೇಹರಾಷೀಮ್ಯರ ತಂದೆಯಾದ ಯೋವಾಬನನ್ನು ಪಡೆದನು.
1 ಪೂರ್ವಕಾಲವೃತ್ತಾ 4 : 15 (KNV)
ಯೆಫುನ್ನೆಯ ಮಗನಾದ ಕಾಲೇಬನ ಕುಮಾರರು--ಈರುವು, ಏಲನು, ನಾಮನು, ಏಲನ ವರು, ಕೆನಜನು.
1 ಪೂರ್ವಕಾಲವೃತ್ತಾ 4 : 16 (KNV)
ಯೆಹಲ್ಲೆಲೇಲನ ಕುಮಾರರು -- ಜೀಫನು, ಜೀಫಾನು, ತೀರ್ಯನು, ಅಸರೇಲನು. ಎಜ್ರನ ಕುಮಾ ರರು --
1 ಪೂರ್ವಕಾಲವೃತ್ತಾ 4 : 17 (KNV)
ಯೆತೆರನು, ಮೆರೆದನು, ಏಫೆರನು, ಯಾಲೋನನು. ಮೇರದನ ಹೆಂಡತಿಯು ಅವನಿಗೆ ಮಿರ್ಯಾಮಳನ್ನೂ ಶೆಮ್ಮೈಯನ್ನೂ ಎಷ್ಟೆಮೋವನ ತಂದೆಯಾದ ಇಷ್ಟಹನನ್ನೂ ಹೆತ್ತಳು.
1 ಪೂರ್ವಕಾಲವೃತ್ತಾ 4 : 18 (KNV)
ಇದಲ್ಲದೆ ಅವನ ಹೆಂಡತಿಯಾದ ಯೆಹೂದ್ಯಳು ಗೆದೋರ್ಯನ ತಂದೆಯಾದ ಯೆರೆದನನ್ನೂ ಸೋಕೋವಿನ ತಂದೆ ಯಾದ ಹೆಬೆರನನ್ನೂ ಜಾನೋಹನ ತಂದೆಯಾದ ಯೆಕೊತೀಯೇಲನನ್ನೂ ಹೆತ್ತಳು. ಇವರೇ ಮೆರೆದನು ತಕ್ಕೊಂಡ ಫರೋಹನ ಮಗಳಾದ ಬಿತ್ಯಳ ಕುಮಾರರು.
1 ಪೂರ್ವಕಾಲವೃತ್ತಾ 4 : 19 (KNV)
ನಹಾಮನ ಸಹೋದರಿಯಾದ ಹೋದೀಯಳೆಂಬ ಅವನ ಹೆಂಡತಿಯ ಕುಮಾರರು -- ಗರ್ಮ್ಯನಾದ ಕೆಯಾಲನ ತಂದೆಯು, ಮಾಕಾತ್ಯನಾದ ಎಷ್ಟೆಮೋ ವನು.
1 ಪೂರ್ವಕಾಲವೃತ್ತಾ 4 : 20 (KNV)
ಶೀಮೋನನ ಕುಮಾರರು--ಅಮ್ನೋನನು, ರಿನ್ನನು, ಬೆನ್ಹನಾನನು, ತೀಲೋನನು. ಇಷ್ಷೀಯನ ಕುಮಾರರು--ಜೋಹೇತನು ಬೆನ್‌ಜೋಹೇತನು.
1 ಪೂರ್ವಕಾಲವೃತ್ತಾ 4 : 21 (KNV)
ಯೆಹೂದನ ಮಗನಾದ ಶೇಲನ ಕುಮಾರರು --ಲೇಕಾಹ್ಯದ ತಂದೆಯಾದ ಏರನು, ಮರೇಷದ ತಂದೆಯಾದ ಲದ್ದನು, ಬೇತಪ್ಬೇವನ ಮನೆಯವರಾಗಿ ರುವ ನಾರುಗಳಿಂದ ನಯವಾದ ಕೆಲಸಮಾಡಿದವರ ಮನೆಯ ಸಂತತಿಗಳು.
1 ಪೂರ್ವಕಾಲವೃತ್ತಾ 4 : 22 (KNV)
ಯೊಕೀಮನು ಮೋವಾಬಿ ನಲ್ಲಿ ಅಧಿಕಾರವುಳ್ಳವರಾದ ಕೊಜೇಬವು ಯೋವಾ ಷವು ಸಾರಾಫವು ಎಂಬ ಸ್ಥಳಗಳ ಮನುಷ್ಯರೂ ಯೆಷೂಬಿಹೇಮಿನಲ್ಲಿ ವಾಸವಾಗಿದ್ದವರೂ. ಇವು ಪೂರ್ವದ ಕಾರ್ಯಗಳು.
1 ಪೂರ್ವಕಾಲವೃತ್ತಾ 4 : 23 (KNV)
ಇವರೇ ಕುಂಬಾರರು. ಇವರು ಗಿಡಗಳ ಕೆಳಗೂ ಬೇಲಿಯ ಅಂಚಿನಲ್ಲಿಯೂ ವಾಸವಾಗಿರುವವರು; ಅಲ್ಲಿ ಅವರು ಅರಸನ ಕೆಲಸ ಕ್ಕೋಸ್ಕರ ವಾಸವಾಗಿದ್ದರು.
1 ಪೂರ್ವಕಾಲವೃತ್ತಾ 4 : 24 (KNV)
ಸಿಮೆಯೋನನ ಕುಮಾರರು -- ನೆಮೂವೇ ಲನು, ಯಾವಿಾನನು, ಯಾರೀದನು, ಜೆರಹನು, ಸೌಲನು.
1 ಪೂರ್ವಕಾಲವೃತ್ತಾ 4 : 25 (KNV)
ಇವನ ಮಗನಾದ ಶಲ್ಲುಮನು, ಇವನ ಮಗನಾದ ಮಿಬ್ಸಾಮನು, ಇವನ ಮಗನಾದ ಮಿಷ್ಮ ವನು.
1 ಪೂರ್ವಕಾಲವೃತ್ತಾ 4 : 26 (KNV)
ಮಿಷ್ಮಾಗನ ಕುಮಾರರು--ಇವನ ಮಗನಾದ ಹಮ್ಮೂವೇಲನು, ಇವನ ಮಗನಾದ ಜಕ್ಕೂರನು, ಇವನ ಮಗನಾದ ಶಿವ್ಮೆಾ.
1 ಪೂರ್ವಕಾಲವೃತ್ತಾ 4 : 27 (KNV)
ಶಿಮ್ಮಿಗೆ ಹದಿನಾರು ಮಂದಿ ಕುಮಾರರೂ ಆರು ಮಂದಿ ಕುಮಾರ್ತೆಯರೂ ಇದ್ದರು. ಆದರೆ ಇವನ ಸಹೋದರರಿಗೆ ಬಹಳ ಮಕ್ಕಳಿರಲಿಲ್ಲ; ಅವರ ಸಮಸ್ತ ಸಂತತಿಯು ಯೆಹೂ ದದ ಮಕ್ಕಳ ಹಾಗೆ ಹೆಚ್ಚಾಗಲಿಲ್ಲ.
1 ಪೂರ್ವಕಾಲವೃತ್ತಾ 4 : 28 (KNV)
ಇವರು ಬೇರ್ಷೆ ಬದಲ್ಲಿಯೂ ಮೋಲಾದದಲ್ಲಿಯೂ
1 ಪೂರ್ವಕಾಲವೃತ್ತಾ 4 : 29 (KNV)
ಹಚರ್‌ ಷೂವಾಲ್ತ್‌ನಲ್ಲಿಯೂ ಬಿಲ್ಹದಲ್ಲಿಯೂ ಏಚೆಮನ ಲ್ಲಿಯೂ
1 ಪೂರ್ವಕಾಲವೃತ್ತಾ 4 : 30 (KNV)
ತೋಲಾದಿನಲ್ಲಿಯೂ ಬೆತುವೇಲಿನ ಲ್ಲಿಯೂ ಹೊರ್ಮದಲ್ಲಿಯೂ
1 ಪೂರ್ವಕಾಲವೃತ್ತಾ 4 : 31 (KNV)
ಚಿಕ್ಲಗಿನಲ್ಲಿಯೂ ಬೇತ್‌ಮರ್ಕಾಬೋತ್‌ದಲ್ಲಿಯೂ ಹಚರ್‌ ಸೂಸೀಮ ದಲ್ಲಿಯೂ ಬೇತ್‌ಬಿರೀಯಲ್ಲಿಯೂ ಶಾರಯಿಮನ ಲ್ಲಿಯೂ ವಾಸವಾಗಿದ್ದರು. ದಾವೀದನ ಆಳಿಕೆಯ ವರೆಗೂ ಇವು ಅವರ ಪಟ್ಟಣಗಳಾಗಿದ್ದವು.
1 ಪೂರ್ವಕಾಲವೃತ್ತಾ 4 : 32 (KNV)
ಅವರ ಊರುಗಳು ಯಾವವಂದರೆ--ಏಟಾಮು, ಅಯಿನು, ರಿಮ್ಮೋನು, ತೋಕೆನು, ಆಷಾನು ಐದು ಪಟ್ಟಣಗಳು.
1 ಪೂರ್ವಕಾಲವೃತ್ತಾ 4 : 33 (KNV)
ಇದಲ್ಲದೆ ಆ ಪಟ್ಟಣಗಳ ಸುತ್ತಲಿದ್ದ ಊರುಗಳು ಬಾಳದ ವರೆಗೂ ಅವರಿಗೆ ಇದ್ದವು. ಇವೇ ಅವರು ವಾಸವಾಗಿರುವ ಸ್ಥಳಗಳೂ ಅವರ ವಂಶಾವಳಿಗಳೂ.
1 ಪೂರ್ವಕಾಲವೃತ್ತಾ 4 : 34 (KNV)
ಮೆಷೋಬಾಬನು, ಯಮ್ಲೇಕನು, ಅಮಚ್ಯನ ಮಗನಾದ ಯೋಷನು, ಯೋವೇಲನು.
1 ಪೂರ್ವಕಾಲವೃತ್ತಾ 4 : 35 (KNV)
ಅಸಿ ಯೇಲನ ಮಗನಾದ ಸೆರಾಯನ ಮಗನಾದ ಯೊಷಿಬ್ಯನ ಮಗನಾದ ಯೇಹೂ.
1 ಪೂರ್ವಕಾಲವೃತ್ತಾ 4 : 36 (KNV)
ಎಲ್ಯೋವೇನೈ, ಯಾಕೋಬನು, ಯೆಷೋಹಾಯನು, ಅಸಾಯನು, ಅದೀಯೇಲನು, ಯೆಸೀಮಿಯೇಲನು, ಬೆನಾಯನು.
1 ಪೂರ್ವಕಾಲವೃತ್ತಾ 4 : 37 (KNV)
ಶೆಮಾಯನ ಮಗನಾದ ಶಿಮ್ರಿಯ ಮಗನಾದ ಯೆದಾಯನ ಮಗನಾದ ಅಲ್ಲೋನನ ಮಗನಾದ ಶಿಪ್ಫಿಯ ಮಗನಾದ ಜೀಜನು.
1 ಪೂರ್ವಕಾಲವೃತ್ತಾ 4 : 38 (KNV)
ಹೆಸರು ಹೆಸರಾಗಿ ಬರೆಯಲ್ಪಟ್ಟವರಾದ ಇವರು ತಮ್ಮ ಸಂತತಿಗಳಲ್ಲಿ ಪ್ರಭುಗಳಾಗಿದ್ದರು; ಅವರ ಪಿತೃಗಳ ಮನೆ ಬಹಳ ಅಭಿವೃದ್ಧಿಯಾಯಿತು.
1 ಪೂರ್ವಕಾಲವೃತ್ತಾ 4 : 39 (KNV)
ತಮ್ಮ ಮಂದೆಗಳಿಗೆ ಮೇವನ್ನು ಹುಡುಕಲು ತಗ್ಗಿನ ಪೂರ್ವದಿಕ್ಕಿನಲ್ಲಿರುವ ಗೆದೋರು ಎಂಬ ಸ್ಥಳದ ಪ್ರವೇಶದ ವರೆಗೂ ಹೋದರು.
1 ಪೂರ್ವಕಾಲವೃತ್ತಾ 4 : 40 (KNV)
ಅವರು ರಸವತ್ತಾದ ಒಳ್ಳೇ ಮೇವನ್ನು ಕಂಡು ಕೊಂಡರು. ಆ ದೇಶವು ವಿಸ್ತಾರವಾಗಿಯೂ ಶಾಂತ ವಾಗಿಯೂ ಸಮಾಧಾನವಾಗಿಯೂ ಇತ್ತು; ಪೂರ್ವ ದಲ್ಲಿ ಹಾಮನ ವಂಶದವರು ಅಲ್ಲಿ ವಾಸವಾಗಿದ್ದರು.
1 ಪೂರ್ವಕಾಲವೃತ್ತಾ 4 : 41 (KNV)
ಹೆಸರು ಹೆಸರಾಗಿ ಬರೆಯಲ್ಪಟ್ಟವರಾದ ಇವರು ಯೆಹೂದದ ಅರಸನಾದ ಹಿಜ್ಕೀಯನ ದಿವಸಗಳಲ್ಲಿ ಬಂದು ಅಲ್ಲಿ ಸಿಕ್ಕಿದ ಅವರ ಡೇರೆಗಳನ್ನೂ ನಿವಾಸ ಗಳನ್ನೂ ಹೊಡೆದು ಅವರನ್ನು ಸಂಪೂರ್ಣ ನಾಶಮಾಡಿ ಅಲ್ಲಿ ತಮ್ಮ ಮಂದೆಗಳಿಗೆ ಮೇವು ಇರುವದರಿಂದ ಇಂದಿನ ವರೆಗೂ ಅವರ ಸ್ಥಳದಲ್ಲಿ ವಾಸವಾಗಿದ್ದಾರೆ.
1 ಪೂರ್ವಕಾಲವೃತ್ತಾ 4 : 42 (KNV)
ಇದಲ್ಲದೆ ಅವರಲ್ಲಿ ಸಿಮೆಯೋನನ ಕುಮಾರರಲ್ಲಿ ಐನೂರು ಮಂದಿ ಇಷ್ಷೀಯ ಕುಮಾರರಾದ ಪೆಲಟ್ಯ ನನ್ನೂ ನೆಗರ್ಯನನ್ನೂ ರೆಫಾಯನನ್ನೂ ಉಜ್ಜೀ ಯೇಲನನ್ನೂ ತಮ್ಮ ಅಧಿಪತಿಗಳಾಗಿ ಮಾಡಿಕೊಂಡು ಸೇಯಾರ್‌ ಪರ್ವತಕ್ಕೆ ಹೋಗಿ ತಪ್ಪಿಸಿಕೊಂಡು ಹೋದಉಳಿದ ಅಮಾಲೇಕ್ಯರನ್ನು ಹೊಡೆದು ಅಲ್ಲಿ ಇಂದಿನ ವರೆಗೂ ವಾಸವಾಗಿದ್ದಾರೆ.
1 ಪೂರ್ವಕಾಲವೃತ್ತಾ 4 : 43 (KNV)
ಉಳಿದ ಅಮಾಲೇಕ್ಯರನ್ನು ಹೊಡೆದು ಅಲ್ಲಿ ಇಂದಿನ ವರೆಗೂ ವಾಸವಾಗಿದ್ದಾರೆ.

1 2 3 4 5 6 7 8 9 10 11 12 13 14 15 16 17 18 19 20 21 22 23 24 25 26 27 28 29 30 31 32 33 34 35 36 37 38 39 40 41 42 43

BG:

Opacity:

Color:


Size:


Font: