1 ಪೂರ್ವಕಾಲವೃತ್ತಾ 27 : 1 (KNV)
ಆದರೆ ಇಸ್ರಾಯೇಲ್ ಮಕ್ಕಳು ತಮ್ಮ ಲೆಕ್ಕದ ಪ್ರಕಾರವಾಗಿ ಹೀಗೆಯೇ ಇದ್ದರು; ಹೇಗಂದರೆ, ಮುಖ್ಯಸ್ಥರಾದ ಪಿತೃಗಳು ಸಹಸ್ರಗಳಿಗೂ ಶತಗಳಿಗೂ ಅಧಿಪತಿಗಳು. ವರುಷದ ಎಲ್ಲಾ ತಿಂಗಳು ಗಳಲ್ಲಿ ಪ್ರತಿ ತಿಂಗಳು ಒಳಗೆ ಹೋಗಿ ಬರುವ ವರ್ಗ ಗಳ ಕಾರ್ಯಗಳಲ್ಲಿ ಅರಸನನ್ನು ಸೇವಿಸಿದ ಅವರ ಪಾರುಪತ್ಯಗಾರರೂ ಪ್ರತಿ ವರ್ಗಕ್ಕೆ ಇಪ್ಪತ್ತನಾಲ್ಕು ಸಾವಿರ ಮಂದಿಯಾಗಿದ್ದರು.
1 ಪೂರ್ವಕಾಲವೃತ್ತಾ 27 : 2 (KNV)
ಮೊದಲನೇ ತಿಂಗಳಿಗೋಸ್ಕರ ಮೊದಲನೇ ವರ್ಗದ ಮೇಲೆ ಜಬ್ದೀಯೇಲನ ಮಗನಾದ ಯಾಷೊ ಬ್ಬಾಮನು; ಅವನ ವರ್ಗದಲ್ಲಿ ಇಪ್ಪತ್ತನಾಲ್ಕು ಸಾವಿರ ಜನರು.
1 ಪೂರ್ವಕಾಲವೃತ್ತಾ 27 : 3 (KNV)
ಮೊದಲನೇ ತಿಂಗಳಿನ ಸೈನ್ಯದ ಸಮಸ್ತ ಅಧಿಪತಿಗಳಲ್ಲಿದ್ದ ಮುಖ್ಯನಾದವನು ಪೇರಚನ ಮಕ್ಕ ಳಲ್ಲಿ ಒಬ್ಬನಾಗಿದ್ದನು.
1 ಪೂರ್ವಕಾಲವೃತ್ತಾ 27 : 4 (KNV)
ಎರಡನೇ ತಿಂಗಳಿನ ವರ್ಗದ ಮೇಲೆ ಅಹೋಹಿಯನಾದ ದೋದೈಯು; ಅವನ ವರ್ಗದಲ್ಲಿ ಮಿಕ್ಲೋತನು ನಾಯಕನಾಗಿದ್ದನು; ಅವನ ವರ್ಗದಲ್ಲಿ ಇಪ್ಪತ್ತನಾಲ್ಕು ಸಾವಿರ ಜನರು.
1 ಪೂರ್ವಕಾಲವೃತ್ತಾ 27 : 5 (KNV)
ಮೂರನೇ ತಿಂಗಳಿನ ಸೈನ್ಯದ ಮೂರನೇ ಅಧಿಪತಿಯು ಮುಖ್ಯ ನಾಗಿರುವ ಯೆಹೋಯಾದನ ಮಗನಾದ ಬೆನಾ ಯನು; ಅವನ ವರ್ಗದಲ್ಲಿ ಇಪ್ಪತ್ತನಾಲ್ಕು ಸಾವಿರ ಜನರು.
1 ಪೂರ್ವಕಾಲವೃತ್ತಾ 27 : 6 (KNV)
ಈ ಬೆನಾಯನು ಮೂವತ್ತು ಮಂದಿಯಲ್ಲಿ ಪರಾಕ್ರಮಶಾಲಿಯಾದವನಾಗಿ ಮೂವತ್ತು ಮಂದಿಯ ಮೇಲೆ ಮುಖ್ಯಸ್ಥನಾಗಿದ್ದನು; ಅವನ ವರ್ಗದಲ್ಲಿ ಅವನ ಮಗನಾದ ಅವ್ಮೆಾಜಾಬಾದನು ಇದ್ದನು.
1 ಪೂರ್ವಕಾಲವೃತ್ತಾ 27 : 7 (KNV)
ನಾಲ್ಕನೇ ತಿಂಗಳಿನ ನಾಲ್ಕನೆಯವನು ಯೋವಾಬನ ಸಹೋ ದರನಾದ ಅಸಾಹೇಲನು; ಅವನ ತರುವಾಯ ಅವನ ಮಗನಾದ ಜೆಬದ್ಯನು; ಅವನ ವರ್ಗದಲ್ಲಿ ಇಪ್ಪತ್ತ ನಾಲ್ಕು ಸಾವಿರ ಜನರು.
1 ಪೂರ್ವಕಾಲವೃತ್ತಾ 27 : 8 (KNV)
ಐದನೇ ತಿಂಗಳಿನ ಐದನೇ ಅಧಿಪತಿಯು ಇಜ್ರಾಹ್ಯನಾದ ಶಮ್ಹೂತನು; ಅವನ ವರ್ಗದಲ್ಲಿ ಇಪ್ಪತ್ತನಾಲ್ಕು ಸಾವಿರ ಜನರು.
1 ಪೂರ್ವಕಾಲವೃತ್ತಾ 27 : 9 (KNV)
ಆರನೇ ತಿಂಗಳಿನ ಆರನೆಯವನು ತೆಕೋವಿಯನಾಗಿರುವ ಇಕ್ಕೇಷನ ಮಗನಾದ ಈರನು; ಅವನ ವರ್ಗದಲ್ಲಿ ಇಪ್ಪತ್ತನಾಲ್ಕು ಸಾವಿರ ಜನರು.
1 ಪೂರ್ವಕಾಲವೃತ್ತಾ 27 : 10 (KNV)
ಏಳನೇ ತಿಂಗಳಿನ ಏಳನೇಯವನು ಎಫ್ರಾಯಾಮನ ಮಕ್ಕಳಲ್ಲಿ ಒಬ್ಬ ನಾಗಿರುವ ಪೆಲೋನ್ಯನಾದ ಹೆಲೆಚನು; ಅವನ ವರ್ಗ ದಲ್ಲಿ ಇಪ್ಪತ್ತನಾಲ್ಕು ಸಾವಿರ ಜನರು.
1 ಪೂರ್ವಕಾಲವೃತ್ತಾ 27 : 11 (KNV)
ಎಂಟನೇ ತಿಂಗಳಿನ ಎಂಟನೆಯವನು ಜೆರಹೀಯರಲ್ಲಿ ಒಬ್ಬ ನಾಗಿರುವ ಹುಷಾತ್ಯನಾದ ಸಿಬ್ಬೆಕೈಯು; ಅವನ ವರ್ಗ ದಲ್ಲಿ ಇಪ್ಪತ್ತನಾಲ್ಕು ಸಾವಿರ ಜನರು;
1 ಪೂರ್ವಕಾಲವೃತ್ತಾ 27 : 12 (KNV)
ಒಂಭತ್ತನೇ ತಿಂಗಳಿನ ಒಂಭತ್ತನೆಯವನು ಬೆನ್ಯಾವಿಾನ್ಯರಲ್ಲಿ ಒಬ್ಬನಾಗಿರುವ ಅನತೋತ್ಯನಾದ ಅಬೀಯೆಜೆರನು; ಅವನ ವರ್ಗದಲ್ಲಿ ಇಪ್ಪತ್ತುನಾಲ್ಕು ಸಾವಿರ ಜನರು.
1 ಪೂರ್ವಕಾಲವೃತ್ತಾ 27 : 13 (KNV)
ಹತ್ತನೇ ತಿಂಗಳಿನ ಹತ್ತನೆಯವನು ಜೆರಹೀಯರಲ್ಲಿ ಒಬ್ಬನಾಗಿರುವ ನೆಟೋಫದವನಾದ ಮಹರೈಯು; ಅವನ ವರ್ಗದಲ್ಲಿ ಇಪ್ಪತ್ತನಾಲ್ಕುಸಾವಿರ ಜನರು.
1 ಪೂರ್ವಕಾಲವೃತ್ತಾ 27 : 14 (KNV)
ಹನ್ನೊಂದನೇ ತಿಂಗಳಿನ ಹನ್ನೊಂದನೆಯವನು ಎಫ್ರಾಯಾಮನ ಮಕ್ಕಳಲ್ಲಿ ಒಬ್ಬನಾಗಿರುವ ಪಿರ್ರಾ ತೋನ್ಯನಾದ ಬೆನಾಯನು; ಅವನ ವರ್ಗದಲ್ಲಿ ಇಪ್ಪತ್ತನಾಲ್ಕು ಸಾವಿರ ಜನರು.
1 ಪೂರ್ವಕಾಲವೃತ್ತಾ 27 : 15 (KNV)
ಹನ್ನೆರಡನೇ ತಿಂಗ ಳಿನ ಹನ್ನೆರಡನೆಯವನು ಒತ್ನೀಯೇಲನ ಮಕ್ಕಳಲ್ಲಿ ಒಬ್ಬನಾಗಿರುವ ನೆಟೋಫದವನಾದ ಹೆಲ್ದೈಯು; ಅವನ ವರ್ಗದಲ್ಲಿ ಇಪ್ಪತ್ತನಾಲ್ಕು ಸಾವಿರ ಜನರು.
1 ಪೂರ್ವಕಾಲವೃತ್ತಾ 27 : 16 (KNV)
ಇಸ್ರಾಯೇಲಿನ ಗೋತ್ರಗಳ ಮೇಲೆ ಇರುವ ವರು ಯಾರಂದರೆ, ರೂಬೇನ್ಯರ ನಾಯಕನು ಜಿಕ್ರೀಯ ಮಗನಾದ ಎಲೀಯೆಜೆರನು.
1 ಪೂರ್ವಕಾಲವೃತ್ತಾ 27 : 17 (KNV)
ಸಿಮೆಯೋನ್ಯರಿಗೆ ಮಾಕನ ಮಗನಾದ ಶೆಫಟ್ಯನು. ಲೇವಿಯರಿಗೆ ಕೆಮು ವೇಲನ ಮಗನಾದ ಹಷಬ್ಯನು. ಆರೋನ್ಯರಿಗೆ ಚಾದೋಕನು;
1 ಪೂರ್ವಕಾಲವೃತ್ತಾ 27 : 18 (KNV)
ಯೆಹೂದನಿಗೆ ದಾವೀದನ ಸಹೋ ದರರಲ್ಲಿ ಒಬ್ಬನಾಗಿರುವ ಎಲೀಹುವು; ಇಸ್ಸಾಕಾರನಿಗೆ ವಿಾಕಾಯೇಲನ ಮಗನಾದ ಒಮ್ರಿಯು;
1 ಪೂರ್ವಕಾಲವೃತ್ತಾ 27 : 19 (KNV)
ಜೆಬು ಲೋನನಿಗೆ, ಒಬದ್ಯನ ಮಗನಾದ ಇಷ್ಮಾಯನು; ನಫ್ತಾಲಿಯ ಗೋತ್ರಕ್ಕೆ ಅಜ್ರಿಯೇಲನ ಮಗನಾದ ಯೆರೀಮೋತನು;
1 ಪೂರ್ವಕಾಲವೃತ್ತಾ 27 : 20 (KNV)
ಎಫ್ರಾಯಾಮನ ಮಕ್ಕಳಿಗೆ ಅಜಜ್ಯನ ಮಗನಾದ ಹೊಷೇಯನು; ಮನಸ್ಸೆಯ ಅರ್ಧಗೋತ್ರಕ್ಕೆ ಪೆದಾಯನ ಮಗನಾದ ಯೋವೇ ಲನು.
1 ಪೂರ್ವಕಾಲವೃತ್ತಾ 27 : 21 (KNV)
ಗಿಲ್ಯಾದಿನಲ್ಲಿರುವ ಮನಸ್ಸೆಯ ಅರ್ಧ ಗೋತ್ರಕ್ಕೆ ಜೆಕರ್ಯನ ಮಗನಾದ ಇದ್ದೋನು, ಬೆನ್ಯಾವಿಾನನ ಗೋತ್ರಕ್ಕೆ ಅಬ್ನೇರನ ಮಗನಾದ ಯಗಸೀಯೇಲನು. ದಾನನ ಗೋತ್ರಕ್ಕೆ ಯೆರೋ ಹಾಮನ ಮಗನಾದ ಅಜರೇಲನು.
1 ಪೂರ್ವಕಾಲವೃತ್ತಾ 27 : 22 (KNV)
ಇವರೇ ಇಸ್ರಾ ಯೇಲಿನ ಗೋತ್ರಗಳ ಪ್ರಧಾನರು.
1 ಪೂರ್ವಕಾಲವೃತ್ತಾ 27 : 23 (KNV)
ಆದರೆ ದಾವೀದನು ಇಪ್ಪತ್ತು ವರುಷಗಳೊಳಗೆ ಇದ್ದವರ ಲೆಕ್ಕತಕ್ಕೊಳ್ಳಲಿಲ್ಲ. ಯಾಕಂದರೆ ಇಸ್ರಾ ಯೇಲ್ಯರನ್ನು ಆಕಾಶದ ನಕ್ಷತ್ರಗಳ ಹಾಗೆ ಹೆಚ್ಚಾಗಿ ಮಾಡುವೆನೆಂದು ಕರ್ತನು ಹೇಳಿದ್ದನು.
1 ಪೂರ್ವಕಾಲವೃತ್ತಾ 27 : 24 (KNV)
ಚೆರೂಯಳ ಮಗನಾದ ಯೋವಾಬನು ಎಣಿಸಲು ಆರಂಭಿ ಸಿದನು; ಆದರೆ ಇಸ್ರಾಯೇಲಿಗೆ ವಿರೋಧವಾಗಿ ದೇವರ ರೌದ್ರವು ಬಂದದ್ದರಿಂದ ಅವನು ಪೂರ್ತಿ ಗೊಳಿಸಲಿಲ್ಲ; ಆ ಲೆಕ್ಕವು ಅರಸನಾದ ದಾವೀದನ ವೃತಾಂತಗಳ ಪುಸ್ತಕದಲ್ಲಿ ಸೇರಲಿಲ್ಲ.
1 ಪೂರ್ವಕಾಲವೃತ್ತಾ 27 : 25 (KNV)
ಅರಸನ ಬೊಕ್ಕಸಗಳ ಮೇಲೆ ಅಡಿಯೇಲನ ಮಗನಾದ ಅಜ್ಮಾವೆತನು ಇದ್ದನು. ಹೊಲಗಳಲ್ಲಿಯೂ ಪಟ್ಟಣಗಳಲ್ಲಿಯೂ ಗ್ರಾಮಗಳಲ್ಲಿಯೂ ಗಡೀ ಸ್ಥಳ ಗಳಲ್ಲಿಯೂ ಇದ್ದ ಉಗ್ರಾಣಗಳ ಮೇಲೆ ಉಜ್ಜೀ ಯನ ಮಗನಾದ ಯೋನಾತಾನನು ಇದ್ದನು.
1 ಪೂರ್ವಕಾಲವೃತ್ತಾ 27 : 26 (KNV)
ಹೊಲದಲ್ಲಿ ವ್ಯವಸಾಯ ಮಾಡುವ ಕೆಲಸದವರ ಮೇಲೆ ಕೆಲೂಬನ ಮಗನಾದ ಎಜ್ರೀಯು ಇದ್ದನು.
1 ಪೂರ್ವಕಾಲವೃತ್ತಾ 27 : 27 (KNV)
ಬಹಳ ದ್ರಾಕ್ಷೇ ತೋಟಗಳ ಮೇಲೆ ರಾಮಾ ಊರಿನ ಶಿಮ್ಮನು ಇದ್ದನು; ಅಲೆಗೋಸ್ಕರ ದ್ರಾಕ್ಷೇ ತೋಟಗಳ ಫಲದ ಮೇಲೆ ಶಿಪ್ಮಿಯನಾದ ಜಬ್ದೀಯು ಇದ್ದನು.
1 ಪೂರ್ವಕಾಲವೃತ್ತಾ 27 : 28 (KNV)
ತಗ್ಗಿನಲ್ಲಿರುವ ಇಪ್ಪೆ ಮರಗಳ ಮೇಲೆಯೂ ಅತ್ತಿ ಮರಗಳ ಮೇಲೆಯೂ ಗೆದೆರೂರಿನವನಾದ ಬಾಳ್ಹಾನಾನನು ಇದ್ದನು; ಎಣ್ಣೆಯ ಉಗ್ರಾಣಗಳ ಮೇಲೆ ಯೋವಾಷನು ಇದ್ದನು.
1 ಪೂರ್ವಕಾಲವೃತ್ತಾ 27 : 29 (KNV)
ಶಾರೋನಿನಲ್ಲಿ ಮೇಯಿಸುವ ದನಗಳ ಮೇಲೆ ಶಾರೋನಿನವನಾದ ಶಿಟ್ರೈ ಇದ್ದನು; ತಗ್ಗುಗಳಲ್ಲಿರುವ ದನಗಳ ಮೇಲೆ ಅದ್ಲೈಯ ಮಗನಾದ ಶಾಫಾಟನು ಇದ್ದನು.
1 ಪೂರ್ವಕಾಲವೃತ್ತಾ 27 : 30 (KNV)
ಒಂಟೆಗಳ ಮೇಲೆ ಇರುವವನು ಇಷ್ಮಾ ಯೇಲ್ಯನಾದ ಓಬೀಲನು; ಕತ್ತೆಗಳ ಮೇಲೆ ಇರುವ ವನು ಮೇರೊನೋತಿನವನಾದ ಯೆಹ್ದೆಯನು.
1 ಪೂರ್ವಕಾಲವೃತ್ತಾ 27 : 31 (KNV)
ಕುರಿ ಮಂದೆಗಳ ಮೇಲೆ ಇರುವವನು ಹಗ್ರೀಯನಾದ ಯಾಜೀಜನು. ಇವೆರಲ್ಲರೂ ಅರಸನಾದ ದಾವೀದನ ಸ್ವಾಸ್ಥ್ಯದ ಮೇಲೆ ಪ್ರಧಾನರಾಗಿದ್ದರು.
1 ಪೂರ್ವಕಾಲವೃತ್ತಾ 27 : 32 (KNV)
ಇದಲ್ಲದೆ ದಾವೀದನ ಚಿಕ್ಕಪ್ಪನಾದ ಯೋನಾತಾನನು ಗ್ರಹಿಕೆಯುಳ್ಳವನಾಗಿ ಆಲೋಚನೆಯುಳ್ಳ ಲೇಖಕನೂ ಆಗಿದ್ದನು. ಹಕ್ಮೋನನಾದ ಯೆಹೀಯೇ ಲನು ಅರಸನ ಕುಮಾರರ ಸಂಗಡ ಇದ್ದನು.
1 ಪೂರ್ವಕಾಲವೃತ್ತಾ 27 : 33 (KNV)
ಅರಸನ ಆಲೋಚನೆಗಾರನು ಅಹೀತೋಫೆಲನು, ಅರಸನ ಸ್ನೇಹಿತನು ಅರ್ಕೀಯನಾದ ಹೂಷೈಯು.
1 ಪೂರ್ವಕಾಲವೃತ್ತಾ 27 : 34 (KNV)
ಅಹೀ ತೋಫೆಲನ ತರುವಾಯ ಬೆನಾಯನ ಮಗನಾದ ಯೆಹೋಯಾದಾವನೂ ಎಬ್ಯಾತಾರನೂ. ಅರಸನ ಸೈನ್ಯದ ಅಧಿಪತಿಯು ಯೋವಾಬನು.

1 2 3 4 5 6 7 8 9 10 11 12 13 14 15 16 17 18 19 20 21 22 23 24 25 26 27 28 29 30 31 32 33 34

BG:

Opacity:

Color:


Size:


Font: