1 ಪೂರ್ವಕಾಲವೃತ್ತಾ 23 : 1 (KNV)
ಹೀಗೆ ದಾವೀದನು ಮುದುಕನಾಗಿಯೂ ದಿವಸಗಳು ತುಂಬಿದವನಾಗಿಯೂ ಇರು ವಾಗ ತನ್ನ ಮಗನಾದ ಸೊಲೊಮೋನನನ್ನು ಇಸ್ರಾ ಯೇಲಿನ ಮೇಲೆ ಅರಸನನ್ನಾಗಿ ಮಾಡಿದನು.
1 ಪೂರ್ವಕಾಲವೃತ್ತಾ 23 : 2 (KNV)
ಇದ ಲ್ಲದೆ ತಾನು ಇಸ್ರಾಯೇಲಿನ ಸಮಸ್ತ ಪ್ರಧಾನರನ್ನೂ ಯಾಜಕರನ್ನೂ ಲೇವಿಯರನ್ನೂ ಒಟ್ಟುಗೂಡಿಸಿ ಬರ ಮಾಡಿದನು.
1 ಪೂರ್ವಕಾಲವೃತ್ತಾ 23 : 3 (KNV)
ಲೇವಿಯರು ಮೂವತ್ತು ವರುಷ ಪ್ರಾಯದವರು ಮೊದಲುಗೊಂಡು ಲೆಕ್ಕಿಸಲ್ಪಟ್ಟಿದ್ದರು. ಅವರ ಪುರುಷರ ಲೆಕ್ಕವು ತಲೆ ತಲೆಯ ಪ್ರಕಾರ ಮೂವತ್ತೆಂಟು ಸಾವಿರ ವಾಗಿತ್ತು.
1 ಪೂರ್ವಕಾಲವೃತ್ತಾ 23 : 4 (KNV)
ಇವರಲ್ಲಿ ಇಪ್ಪತ್ತನಾಲ್ಕು ಸಾವಿರ ಮಂದಿ ಕರ್ತನ ಮನೆಯ ಕೆಲಸವನ್ನು ನಡಿಸುವವರಾಗಿದ್ದರು; ಆರು ಸಾವಿರ ಮಂದಿ ಪಾರುಪತ್ಯಗಾರರೂ ನ್ಯಾಯಾಧಿ ಪತಿಗಳೂ ಆಗಿದ್ದರು.
1 ಪೂರ್ವಕಾಲವೃತ್ತಾ 23 : 5 (KNV)
ಇದಲ್ಲದೆ ನಾಲ್ಕು ಸಾವಿರ ಮಂದಿ ದ್ವಾರಪಾಲಕರಾಗಿದ್ದರು; ನಾಲ್ಕು ಸಾವಿರ ಮಂದಿ ಸ್ತುತಿಸುವದಕ್ಕೆ ದಾವೀದನು ಸಿದ್ಧಮಾಡಿದ ವಾದ್ಯಗಳಿಂದ ಕರ್ತನನ್ನು ಸ್ತುತಿಸಿದರು.
1 ಪೂರ್ವಕಾಲವೃತ್ತಾ 23 : 6 (KNV)
ಗೇರ್ಷೋನನು ಕೆಹಾತನು ಮೆರಾರೀಯು ಎಂಬ ಲೇವಿಯ ಮಕ್ಕಳಲ್ಲಿ ಅವರನ್ನು ವರ್ಗಗಳಾಗಿ ದಾವೀ ದನು ವಿಭಾಗಿಸಿದನು.
1 ಪೂರ್ವಕಾಲವೃತ್ತಾ 23 : 7 (KNV)
ಗೇರ್ಷೋನ್ಯರಲ್ಲಿ ಲದ್ದಾನನು ಶಿವ್ಮೆಾ: ಲದ್ದಾನನ ಕುಮಾರರು --
1 ಪೂರ್ವಕಾಲವೃತ್ತಾ 23 : 8 (KNV)
ಮುಖ್ಯಸ್ಥರಾದ ಯೆಹೀಯೇಲನು ಜೇತಾಮನು ಯೋವೇಲನು ಎಂಬ ಮೂರು ಮಂದಿಯು.
1 ಪೂರ್ವಕಾಲವೃತ್ತಾ 23 : 9 (KNV)
ಶಿಮ್ಮಿಯ ಕುಮಾರರು ಶೆಲೋಮೊ ತನು ಹಜೀಯೇಲನು ಹಾರಾನನು ಎಂಬ ಮೂರು ಮಂದಿಯು.
1 ಪೂರ್ವಕಾಲವೃತ್ತಾ 23 : 10 (KNV)
ಇವರು ಲದ್ದಾನನ ಪಿತೃಗಳಲ್ಲಿ ಮುಖ್ಯಸ್ಥ ರಾಗಿದ್ದರು. ಶಿಮ್ಮನ ಕುಮಾರರು--ಯಹತನು ಜೀನನು ಯೆಯೂಷನು ಬೆರೀಯನು.
1 ಪೂರ್ವಕಾಲವೃತ್ತಾ 23 : 11 (KNV)
ಶಿಮ್ಮನ ಈ ನಾಲ್ಕು ಮಂದಿ ಕುಮಾರರಲ್ಲಿ ಯಹತನು ಮುಖ್ಯಸ್ಥನು. ಜೀಜನು ಎರಡನೆಯವನಾಗಿದ್ದನು; ಆದರೆ ಯೆಯೂಷ ನಿಗೂ ಬೆರೀಯನಿಗೂ ಬಹಳ ಮಂದಿ ಮಕ್ಕಳು ಇಲ್ಲ ದ್ದರಿಂದ ಇವರು ತಮ್ಮ ತಂದೆಯ ಮನೆಯಲ್ಲಿ ಒಂದೇ ಲೆಕ್ಕವಾಗಿ ಎಣಿಸಲ್ಪಟ್ಟಿದ್ದರು.
1 ಪೂರ್ವಕಾಲವೃತ್ತಾ 23 : 12 (KNV)
ಕೆಹಾತನ ಕುಮಾರರು--ಅಮ್ರಾಮನು, ಇಚ್ಹಾ ರನು, ಹೆಬ್ರೋನನು, ಉಜ್ಜಿಯೇಲನು ಎಂಬ ಈ ನಾಲ್ಕು ಮಂದಿಯು.
1 ಪೂರ್ವಕಾಲವೃತ್ತಾ 23 : 13 (KNV)
ಅಮ್ರಾಮನ ಕುಮಾರರು --ಆರೋನನು ಮೋಶೆಯು; ಆರೋನನು ಯುಗ ಯುಗಾಂತರಕ್ಕೂ ಕರ್ತನ ಮುಂದೆ ಧೂಪ ಸುಡು ವದಕ್ಕೂ ಆತನಿಗೆ ಸೇವೆಮಾಡುವದಕ್ಕೂ ಆತನ ಹೆಸರಿನಲ್ಲಿ ಆಶೀರ್ವದಿಸುವದಕ್ಕೂ ತಾನೂ ತನ್ನ ಕುಮಾರರೂ ಯುಗಯುಗಾಂತರಗಳಿಗೂ ಅತಿ ಪರಿ ಶುದ್ಧವಾದವುಗಳನ್ನು ಪ್ರತಿಷ್ಠೆಮಾಡುವದಕ್ಕೂ ಪ್ರತ್ಯೇ ಕಿಸಲ್ಪಟ್ಟನು.
1 ಪೂರ್ವಕಾಲವೃತ್ತಾ 23 : 14 (KNV)
ದೇವರ ಮನುಷ್ಯನಾದ ಮೋಶೆಯ ಕುಮಾರರು ಲೇವಿಯ ಗೋತ್ರದಲ್ಲಿ ಲೆಕ್ಕಿಸಲ್ಪಟ್ಟಿದ್ದರು.
1 ಪೂರ್ವಕಾಲವೃತ್ತಾ 23 : 15 (KNV)
ಮೋಶೆಯ ಕುಮಾರರು--ಗೇರ್ಷೋಮನು ಎಲೀ ಯೆಜೆರನು.
1 ಪೂರ್ವಕಾಲವೃತ್ತಾ 23 : 16 (KNV)
ಗೇರ್ಷೋಮನ ಕುಮಾರರಲ್ಲಿ ಶೆಬೂ ವೇಲನು ಮುಖ್ಯಸ್ಥನಾಗಿದ್ದನು.
1 ಪೂರ್ವಕಾಲವೃತ್ತಾ 23 : 17 (KNV)
ಎಲೀಯೆಜೆರನ ಕುಮಾರರು -- ಮುಖ್ಯಸ್ಥನಾದ ರೆಹಬ್ಯನು. ಇವನ ಹೊರತಾಗಿ ಎಲೀಯೆಜೆರನಿಗೆ ಬೇರೆ ಕುಮಾರರಿಲ್ಲ; ಆದರೆ ರೆಹಬ್ಯನ ಕುಮಾರರು ಬಹಳ ಮಂದಿ ಇದ್ದರು.
1 ಪೂರ್ವಕಾಲವೃತ್ತಾ 23 : 18 (KNV)
ಇಚ್ಹಾರನ ಕುಮಾರರಲ್ಲಿ ಶೆಲೋಮೊತನು ಮುಖ್ಯಸ್ಥನಾಗಿದ್ದನು.
1 ಪೂರ್ವಕಾಲವೃತ್ತಾ 23 : 19 (KNV)
ಹೆಬ್ರೋನನ ಕುಮಾರರಲ್ಲಿ ಯೆರೀಯ ಮೊದಲನೆಯವನು, ಅಮರ್ಯನು ಎರ ಡನೆಯವನು, ಯಹಜೀಯೇಲನು ಮೂರನೆಯ ವನು, ಯೆಕಮ್ಮಾಮನು ನಾಲ್ಕನೆಯವನು.
1 ಪೂರ್ವಕಾಲವೃತ್ತಾ 23 : 20 (KNV)
ಉಜ್ಜೀ ಯೇಲನ ಕುಮಾರರಲ್ಲಿ ವಿಾಕನು ಮೊದಲನೆಯವನು, ಇಷ್ಷೀಯನು ಎರಡನೆಯವನು.
1 ಪೂರ್ವಕಾಲವೃತ್ತಾ 23 : 21 (KNV)
ಮೆರಾರೀಯ ಕುಮಾರರು--ಮಹ್ಲೀಯು, ಮೂಷೀಯು. ಮಹ್ಲೀಯ ಕುಮಾರರು--ಎಲ್ಲಾಜಾರ್, ಕೀಷನು;
1 ಪೂರ್ವಕಾಲವೃತ್ತಾ 23 : 22 (KNV)
ಎಲ್ಲಾಜಾರ್ ಸತ್ತನು. ಅವನಿಗೆ ಕುಮಾರ ರಿಲ್ಲ, ಕುಮಾರ್ತೆಯರು ಮಾತ್ರ ಇದ್ದರು; ಅವರ ಸಹೋದರರಾದ ಕೀಷನ ಕುಮಾರರು ಅವರನ್ನು ತೆಗೆದುಕೊಂಡರು.
1 ಪೂರ್ವಕಾಲವೃತ್ತಾ 23 : 23 (KNV)
ಮೂಷೀಯ ಕುಮಾರರು-- ಮಹ್ಲೀಯು ಏದೆರ್ ಯೆರೇಮೋತ್ ಈ ಮೂರು ಮಂದಿ.
1 ಪೂರ್ವಕಾಲವೃತ್ತಾ 23 : 24 (KNV)
ಇವರು ತಮ್ಮ ಪಿತೃಗಳ ವಂಶದ ಪ್ರಕಾರವಾಗಿ ಲೇವಿಯ ಕುಮಾರರಾಗಿದ್ದರು; ಇವರು ತಮ್ಮ ಹೆಸರು ಗಳಿಂದಲೂ ತಮ್ಮ ತಲೆಗಳಿಂದಲೂ ಎಣಿಸಲ್ಪಟ್ಟಿದ್ದ ತಮ್ಮ ಪಿತೃಗಳಲ್ಲಿ ಮುಖ್ಯಸ್ಥರಾಗಿದ್ದರು; ಇಪ್ಪತ್ತು ವರುಷ ಪ್ರಾಯದವರು ಮೊದಲುಗೊಂಡು ಕರ್ತನ ಮನೆಯ ಸೇವೆಗೋಸ್ಕರ ಕೆಲಸ ಮಾಡಿದರು.
1 ಪೂರ್ವಕಾಲವೃತ್ತಾ 23 : 25 (KNV)
ಅವರು ಯುಗ ಯುಗಾಂತರಕ್ಕೂ ಇಸ್ರಾಯೇಲಿನಲ್ಲಿ ವಾಸಿಸುವ ಹಾಗೆ ಇಸ್ರಾಯೇಲಿನ ದೇವರಾದ ಕರ್ತನು ತನ್ನ ಜನರಿಗೆ ವಿಶ್ರಾಂತಿಯನ್ನು ಕೊಟ್ಟಿದ್ದಾನೆ ಎಂದು ದಾವೀದನು ಹೇಳಿ
1 ಪೂರ್ವಕಾಲವೃತ್ತಾ 23 : 26 (KNV)
ಲೇವಿಯರನ್ನು ಕುರಿತು ಅವರು ಗುಡಾರವನ್ನೂ ಅದರ ಸೇವೆಗೋಸ್ಕರ ಅದರ ಪಾತ್ರೆಗಳನ್ನೂ ಇನ್ನು ಮೇಲೆ ಹೊರುವ ಕೆಲಸವಿಲ್ಲವೆಂದು ಹೇಳಿದ್ದನು.
1 ಪೂರ್ವಕಾಲವೃತ್ತಾ 23 : 27 (KNV)
ದಾವೀದನ ಕಡೇಮಾತುಗಳ ಪ್ರಕಾರ ಲೇವಿಯರು ಇಪ್ಪತ್ತುವರುಷ ಮೊದಲುಗೊಂಡು ಅದಕ್ಕೆ ಮೇಲ್ಪಟ್ಟ ಪ್ರಾಯದವರು ಲೆಕ್ಕಿಸಲ್ಪಟ್ಟಿದ್ದರು.
1 ಪೂರ್ವಕಾಲವೃತ್ತಾ 23 : 28 (KNV)
ಕರ್ತನ ಮನೆಯ ಸೇವೆಗೋಸ್ಕರ ಅಂಗಳಗಳಲ್ಲಿಯೂ ಕೊಠಡಿಗಳ ಲ್ಲಿಯೂ ಸಮಸ್ತ ಪರಿಶುದ್ಧವಾದವುಗಳನ್ನು ಪರಿಶುದ್ಧ ಮಾಡುವದರಲ್ಲಿಯೂ
1 ಪೂರ್ವಕಾಲವೃತ್ತಾ 23 : 29 (KNV)
ಕರ್ತನ ಮಂದಿರದ ಸೇವೆಯ ಕಾರ್ಯದಲ್ಲಿ ಸಮ್ಮುಖದ ರೊಟ್ಟಿ ಅರ್ಪಣೆ ಬಲಿಯ ನಯವಾದ ಹಿಟ್ಟು ಹುಳಿ ಇಲ್ಲದ ರೊಟ್ಟಿ ಬಾಂಡ್ಲಿಯಲ್ಲಿ ಮಾಡಿದ್ದ ಎಣ್ಣೆಯಲ್ಲಿ ಕರಿದಿದ್ದಕ್ಕೋಸ್ಕರವೂ ಸಮಸ್ತ ವಿವಿಧ ಅಳತೆಗೋಸ್ಕರವೂ ಆರೋನನ ಮಕ್ಕಳಿಗೆ ನೇಮಕವಾಗಿತ್ತು.
1 ಪೂರ್ವಕಾಲವೃತ್ತಾ 23 : 30 (KNV)
ಇದಲ್ಲದೆ ಉದಯಕಾಲದ ಲ್ಲಿಯೂ ಸಾಯಂಕಾಲದಲ್ಲಿಯೂ ನಿಂತು ಕರ್ತನನ್ನು ಕೊಂಡಾಡುವದಕ್ಕೂ ಸ್ತುತಿಸುವದಕ್ಕೂ ಕರ್ತನ ಮುಂದೆ ನಿರಂತರವಾಗಿ ಅವರಿಗೆ ಆಜ್ಞಾಪಿಸಿದ
1 ಪೂರ್ವಕಾಲವೃತ್ತಾ 23 : 31 (KNV)
ಕಟ್ಟಳೆಯ ಪ್ರಕಾರವಾಗಿ ಸಬ್ಬತ್ ದಿವಸಗಳಲ್ಲಿಯೂ ಅಮವಾಸ್ಯೆ ಗಳಲ್ಲಿಯೂ ನೇಮಕವಾದ ಹಬ್ಬಗಳಲ್ಲಿಯೂ ಲೆಕ್ಕದ ಪ್ರಕಾರ ಎಲ್ಲಾ ದಹನಬಲಿಗಳನ್ನು ಅರ್ಪಿಸುವದಕ್ಕೂ
1 ಪೂರ್ವಕಾಲವೃತ್ತಾ 23 : 32 (KNV)
ಕರ್ತನ ಮನೆಯ ಸೇವೆಯಲ್ಲಿ ಸಭೆಯ ಗುಡಾರದ ಕಾವಲಿಯನ್ನೂ ಪರಿಶುದ್ಧಸ್ಥಾನದ ಕಾವಲಿಯನ್ನೂ ತಮ್ಮ ಸಹೋದರರಾದ ಆರೋನನ ಕುಮಾರರ ಆಜ್ಞೆಯನ್ನೂ ಕೈಕೊಳ್ಳುವದಕ್ಕೆ ಅವರಿಗೆ ನೇಮಕವಾಗಿತ್ತು.
❮
❯