1 ಪೂರ್ವಕಾಲವೃತ್ತಾ 2 : 1 (KNV)
ಇಸ್ರಾಯೇಲನ ಮಕ್ಕಳು -- ರೂಬೇನನು, ಸಿಮೆಯೋನನು, ಲೇವಿಯು,
1 ಪೂರ್ವಕಾಲವೃತ್ತಾ 2 : 2 (KNV)
ಯೆಹೂ ದನು, ಇಸ್ಸಾಕಾರನು, ಜೆಬುಲೂನನು, ದಾನನು, ಯೋಸೇಫನು, ಬೆನ್ಯಾವಿಾನನು, ನಫ್ತಾಲಿಯು, ಗಾದನು, ಆಶೇರನು.
1 ಪೂರ್ವಕಾಲವೃತ್ತಾ 2 : 3 (KNV)
ಯೆಹೂದನ ಮಕ್ಕಳು -- ಏರನು, ಓನಾನನು, ಶೇಲಾಹನು ಈ ಮೂವರು ಅವನಿಗೆ ಶೂನನ ಮಗ ಳಾದ ಕಾನಾನ್ ದೇಶದವಳಿಂದ ಹುಟ್ಟಿದರು. ಆದರೆ ಯೆಹೂದನ ಚೊಚ್ಚಲ ಮಗನಾದ ಏರನು ಕರ್ತನ ಸಮ್ಮುಖದಲ್ಲಿ ಕೆಟ್ಟವನಾದದರಿಂದ ಆತನು ಅವನನ್ನು ಕೊಂದುಹಾಕಿದನು.
1 ಪೂರ್ವಕಾಲವೃತ್ತಾ 2 : 4 (KNV)
ಅವನ ಸೊಸೆಯಾದ ತಾಮಾ ರಳು ಅವನಿಗೆ ಪೆರೆಚನನ್ನೂ, ಜೆರಹನನ್ನೂ ಹೆತ್ತಳು. ಯೆಹೂದನ ಕುಮಾರರೆಲ್ಲರೂ ಐದು ಮಂದಿ.
1 ಪೂರ್ವಕಾಲವೃತ್ತಾ 2 : 5 (KNV)
ಪೆರೆಚನ ಮಕ್ಕಳು--ಹೆಚ್ರೋನನು, ಹಾಮುಲನು;
1 ಪೂರ್ವಕಾಲವೃತ್ತಾ 2 : 6 (KNV)
ಜೆರಹನ ಮಕ್ಕಳು ಜಿಮ್ರಿಯು, ಏತಾನನು, ಹೇಮಾನನು, ಕಲ್ಕೋಲನು, ದಾರನನು ಇವರೆಲ್ಲರು ಐದು ಮಂದಿ.
1 ಪೂರ್ವಕಾಲವೃತ್ತಾ 2 : 7 (KNV)
ಕರ್ವಿಾಯ ಮಕ್ಕಳು--ಶಪಿಸಲ್ಪಟ್ಟಿ ದ್ದರಲ್ಲಿ ಅಕೃತ್ಯಮಾಡಿ ಇಸ್ರಾಯೇಲನ್ನು ತೊಂದರೆ ಪಡಿಸುವವನಾದ ಆಕಾರನು.
1 ಪೂರ್ವಕಾಲವೃತ್ತಾ 2 : 8 (KNV)
ಏತಾನನ ಮಗನುಅಜರ್ಯನು.
1 ಪೂರ್ವಕಾಲವೃತ್ತಾ 2 : 9 (KNV)
ಹೆಚ್ರೋನನಿಗೆ ಹುಟ್ಟಿದ ಮಕ್ಕಳುಯೇರಹ್ಮೇಲನು, ರಾಮನು, ಕೆಲೂಬಾಯ್.
1 ಪೂರ್ವಕಾಲವೃತ್ತಾ 2 : 10 (KNV)
ರಾಮನು ಅವ್ಮೆಾನಾದಾಬನನ್ನು ಪಡೆದನು. ಅವ್ಮೆಾನಾದಾಬನು ಯೆಹೂದನ ಮಕ್ಕಳಿಗೆ ಪ್ರಭು ವಾದ ನಹಶೋನನನ್ನು ಪಡೆದನು,
1 ಪೂರ್ವಕಾಲವೃತ್ತಾ 2 : 11 (KNV)
ನಹಶೋನನು ಸಲ್ಮನನ್ನು ಪಡೆದನು. ಸಲ್ಮನು ಬೋವಜನನ್ನು ಪಡೆದನು.
1 ಪೂರ್ವಕಾಲವೃತ್ತಾ 2 : 12 (KNV)
ಬೋವಜನು ಓಬೇದನನ್ನು ಪಡೆದನು; ಓಬೇದನು ಇಷಯನನ್ನು ಪಡೆದನು.
1 ಪೂರ್ವಕಾಲವೃತ್ತಾ 2 : 13 (KNV)
ಇಷಯನು ತನ್ನ ಚೊಚ್ಚಲ ಮಗನಾದ ಎಲೀಯಾಬನನ್ನೂ ಎರಡನೆಯವನಾದ ಅಬೀನಾದಾಬನನ್ನೂ
1 ಪೂರ್ವಕಾಲವೃತ್ತಾ 2 : 14 (KNV)
ಮೂರ ನೆಯವನಾದ ಶಿಮ್ಮನನ್ನೂ ನಾಲ್ಕನೆಯವನಾದ ನೆತ್ ನೇಲನನ್ನೂ
1 ಪೂರ್ವಕಾಲವೃತ್ತಾ 2 : 15 (KNV)
ಐದನೆಯವನಾದ ರದ್ದೈಯನನ್ನೂ ಆರನೆಯವನಾದ ಓಚೇಮನನ್ನೂ ಏಳನೆಯವನಾದ ದಾವೀದನನ್ನೂ ಪಡೆದನು.
1 ಪೂರ್ವಕಾಲವೃತ್ತಾ 2 : 16 (KNV)
ಅವರ ಸಹೋದರಿಗಳು ಚೆರೂಯಳು ಅಬೀಗೈಲಳು. ಚೆರೂಯಳ ಮಕ್ಕಳುಅಬ್ಷೈನು ಯೋವಾಬನು ಅಸಾಹೇಲನು ಎಂಬ ಈ ಮೂವರು.
1 ಪೂರ್ವಕಾಲವೃತ್ತಾ 2 : 17 (KNV)
ಅಬೀಗೈಲಳು ಅಮಾಸನನ್ನು ಹೆತ್ತಳು. ಅಮಾಸನ ತಂದೆಯು ಇಷ್ಮಾಯೇಲ್ಯನಾದ ಯೇತೆರನು.
1 ಪೂರ್ವಕಾಲವೃತ್ತಾ 2 : 18 (KNV)
ಹೆಚ್ರೋನನ ಮಗನಾದ ಕಾಲೇಬನು ತನ್ನ ಹೆಂಡ ತಿಯಾದ ಅಜೂಬಳಿಂದ ಯೆರ್ಯೋತಳನ್ನು ಪಡೆದನು. ಇವಳ ಮಕ್ಕಳು -- ಯೇಷೆರನು, ಶೋಬಾಬನು, ಅರ್ದೋನನು.
1 ಪೂರ್ವಕಾಲವೃತ್ತಾ 2 : 19 (KNV)
ಅಜೂಬಳು ಸತ್ತ ತರುವಾಯ ಕಾಲೇಬನು ಎಫ್ರಾತಳನ್ನು ಮದುವೆಯಾದನು.
1 ಪೂರ್ವಕಾಲವೃತ್ತಾ 2 : 20 (KNV)
ಅವಳು ಅವನಿಗೆ ಹೂರನನ್ನು ಹೆತ್ತಳು. ಹೂರನು ಊರಿಯನನ್ನು ಪಡೆದನು; ಊರಿಯನು ಬೆಚಲೇಲ ನನ್ನು ಪಡೆದನು.
1 ಪೂರ್ವಕಾಲವೃತ್ತಾ 2 : 21 (KNV)
ತರುವಾಯ ಹೆಚ್ರೋನನು ಗಿಲ್ಯಾದನ ತಂದೆಯಾದ ಮಾಕೀರನ ಮಗಳ ಬಳಿಗೆ ಹೋದನು; ಅವನು ಅರವತ್ತು ವರುಷದವನಾಗಿರು ವಾಗ ಅವಳನ್ನು ಮದುವೆಯಾದನು. ಅವಳು ಅವನಿಗೆ ಸೆಗೂಬನನ್ನು ಹೆತ್ತಳು.
1 ಪೂರ್ವಕಾಲವೃತ್ತಾ 2 : 22 (KNV)
ಸೆಗೂಬನು ಯಾಯಾರನನ್ನು ಪಡೆದನು.
1 ಪೂರ್ವಕಾಲವೃತ್ತಾ 2 : 23 (KNV)
ಇವನಿಗೆ ಗಿಲ್ಯಾದಿನ ದೇಶದಲ್ಲಿ ಇಪ್ಪತ್ತ ಮೂರು ಪಟ್ಟಣಗಳು ಉಂಟಾಗಿದ್ದವು. ಇದಲ್ಲದೆ ಅವನು ಗೆಷೂರ್ಯನ್ನೂ ಅರಾಮ್ಯನ್ನೂ ಯಾಯಾರನ ಪಟ್ಟಣಗಳನ್ನೂ ಕೆನತನ್ನೂ ಅದರ ಪಟ್ಟಣಗಳನ್ನೂಅಂದರೆ ಅರುವತ್ತು ಪಟ್ಟಣಗಳನ್ನು ತೆಗೆದುಕೊಂಡನು. ಇವುಗಳೆಲ್ಲಾ ಗಿಲ್ಯಾದನ ತಂದೆಯಾದ ಮಾಕೀರನ ಮಕ್ಕಳಿಗೆ ಇದ್ದವು.
1 ಪೂರ್ವಕಾಲವೃತ್ತಾ 2 : 24 (KNV)
ಹೆಚ್ರೋನನು ಕಾಲೇಬನ ಎಫ್ರಾ ತದಲ್ಲಿ ಸತ್ತ ತರುವಾಯ ಹೆಚ್ರೋನನ ಹೆಂಡತಿಯಾದ ಅಬೀಯಳು ಅವನಿಗೆ ಅಷ್ಹೂರನನ್ನು ಹೆತ್ತಳು. ಇವನು ತೆಕೋವಿನ ತಂದೆಯು.
1 ಪೂರ್ವಕಾಲವೃತ್ತಾ 2 : 25 (KNV)
ಹೆಚ್ರೋನನ ಚೊಚ್ಚಲ ಮಗನಾದ ಯೆರಹ್ಮೇ ಲನ ಮಕ್ಕಳು--ಚೊಚ್ಚಲ ಮಗನಾದ ರಾಮನು, ಬೂನನು, ಓರೆನನು, ಓಚೆಮನು, ಅಹೀಯನು.
1 ಪೂರ್ವಕಾಲವೃತ್ತಾ 2 : 26 (KNV)
ಈ ಯೆರಹ್ಮೇಲನಿಗೆ ಮತ್ತೊಬ್ಬ ಹೆಂಡತಿ ಇದ್ದಳು; ಅವಳ ಹೆಸರು ಅಟಾರಳು; ಅವಳು ಓನಾಮನ ತಾಯಿ. ಯೆರಹ್ಮೇಲನ ಚೊಚ್ಚಲ ಮಗನಾದ ರಾಮನ ಮಕ್ಕಳು
1 ಪೂರ್ವಕಾಲವೃತ್ತಾ 2 : 27 (KNV)
ಮಾಚನು, ಯಾವಿಾನನು, ಏಕೆರೆನು.
1 ಪೂರ್ವಕಾಲವೃತ್ತಾ 2 : 28 (KNV)
ಓನಾಮನ ಮಕ್ಕಳು--ಶಮ್ಮೈಯನು, ಯಾದಾವನು. ಶಮ್ಮೈಯನ ಮಕ್ಕಳು--ನಾದಾಬನು, ಅಬೀಷೂರನು.
1 ಪೂರ್ವಕಾಲವೃತ್ತಾ 2 : 29 (KNV)
ಅಬೀ ಷೂರನ ಹೆಂಡತಿಯ ಹೆಸರು ಅಬೀಹೈಲು; ಅವಳು ಅವನಿಗೆ ಅಹ್ಬಾನನನ್ನೂ, ಮೋಲೀದನನ್ನೂ ಹೆತ್ತಳು.
1 ಪೂರ್ವಕಾಲವೃತ್ತಾ 2 : 30 (KNV)
ನಾದಾಬನ ಮಕ್ಕಳು--ಸೆಲೆದನು, ಅಪ್ಪಯಿಮನು. ಸೆಲೆದನು ಮಕ್ಕಳಿಲ್ಲದೆ ಸತ್ತನು.
1 ಪೂರ್ವಕಾಲವೃತ್ತಾ 2 : 31 (KNV)
ಅಪ್ಪಯಿಮನ ಮಗನು ಇಷ್ಷೀಯು; ಇಷ್ಷೀಯ ಮಗನು ಶೇಷಾನನು;
1 ಪೂರ್ವಕಾಲವೃತ್ತಾ 2 : 32 (KNV)
ಶೇಷಾನನ ಮಗನು ಅಹ್ಲೈಯನು. ಶಮ್ಮೈಯನ ಸಹೋದರನಾದ ಯಾದನ ಮಕ್ಕಳು--ಯೆತೆರ್, ಯೋನಾತಾನನು.
1 ಪೂರ್ವಕಾಲವೃತ್ತಾ 2 : 33 (KNV)
ಯೆತೆರನು ಮಕ್ಕಳಿಲ್ಲದೆ ಸತ್ತನು. ಯೋನಾತಾನನ ಮಕ್ಕಳು--ಪೆಲೆತನು, ಜಾಜನು. ಇವರೇ ಯೆರಹ್ಮೇಲನ ಮಕ್ಕಳಾಗಿದ್ದರು.
1 ಪೂರ್ವಕಾಲವೃತ್ತಾ 2 : 34 (KNV)
ಆದರೆ ಶೇಷಾನನಿಗೆ ಕುಮಾರರಿಲ್ಲದೆ ಕುಮಾರ್ತೆಗಳಿದ್ದರು. ಮತ್ತು ಶೇಷಾನನಿಗೆ ಯರ್ಹನೆಂಬ ಹೆಸರುಳ್ಳ ಐಗುಪ್ತನಾದ ಸೇವಕನಿದ್ದನು.
1 ಪೂರ್ವಕಾಲವೃತ್ತಾ 2 : 35 (KNV)
ಶೇಷಾನನು ತನ್ನ ಕುಮಾರ್ತೆಯನ್ನು ತನ್ನ ಸೇವಕನಾದ ಯರ್ಹನಿಗೆ ಹೆಂಡತಿಯಾಗಕೊಟ್ಟನು. ಅವಳು ಅವನಿಗೆ ಅತ್ತೈಯನ್ನು ಹೆತ್ತಳು.
1 ಪೂರ್ವಕಾಲವೃತ್ತಾ 2 : 36 (KNV)
ಅತ್ತೈಯು ನಾತಾನನನ್ನು ಪಡೆದನು; ನಾತಾನನು ಜಾಬಾದನನ್ನು ಪಡೆದನು.
1 ಪೂರ್ವಕಾಲವೃತ್ತಾ 2 : 37 (KNV)
ಜಾಬಾದನು ಎಫ್ಲಾಲನನ್ನು ಪಡೆದನು; ಎಫ್ಲಾಲನು ಓಬೇದನನ್ನು ಪಡೆದನು.
1 ಪೂರ್ವಕಾಲವೃತ್ತಾ 2 : 38 (KNV)
ಓಬೇದನು ಯೇಹೂವನ್ನು ಪಡೆದನು; ಯೇಹೂವು ಅಜರ್ಯನನ್ನು ಪಡೆದನು.
1 ಪೂರ್ವಕಾಲವೃತ್ತಾ 2 : 39 (KNV)
ಅಜ ರ್ಯನು ಹೆಲೆಚನನ್ನು ಪಡೆದನು; ಹೆಲೆಚನು ಎಲ್ಲಾಸ ನನ್ನು ಪಡೆದನು.
1 ಪೂರ್ವಕಾಲವೃತ್ತಾ 2 : 40 (KNV)
ಎಲ್ಲಾಸನು ಸಿಸ್ಮೈಯನ್ನು ಪಡೆದನು; ಸಿಸ್ಮೈಯು ಶಲ್ಲೂಮನನ್ನು ಪಡೆದನು.
1 ಪೂರ್ವಕಾಲವೃತ್ತಾ 2 : 41 (KNV)
ಶಲ್ಲೂಮನು ಯೆಕಮ್ಯಾಹನನ್ನು ಪಡೆದನು; ಯೆಕಮ್ಯಾಹನು ಎಲೀಷಾಮನನ್ನು ಪಡೆದನು.
1 ಪೂರ್ವಕಾಲವೃತ್ತಾ 2 : 42 (KNV)
ಯೆರಹೇಲ್ಮನ ಸಹೋದರನಾದ ಕಾಲೇಬನ ಮಕ್ಕಳು -- ಅವನ ಚೊಚ್ಚಲ ಮಗನು ಮೇಷನು; ಇವನು ಜೀಫ್ಯನಿಗೆ ತಂದೆಯಾಗಿದ್ದನು. ಮತ್ತು ಹೆಬ್ರೋ ನ್ಯನ ತಂದೆಯಾದ ಮಾರೇಷನಿಗೆ ಮಕ್ಕಳು ಉಂಟಾ ಗಿದ್ದರು.
1 ಪೂರ್ವಕಾಲವೃತ್ತಾ 2 : 43 (KNV)
ಹೆಬ್ರೋನನ ಮಕ್ಕಳು--ಕೋರಹನು, ತಪ್ಪೊಹನು, ರೆಕಮನು, ಶೆಮವನು.
1 ಪೂರ್ವಕಾಲವೃತ್ತಾ 2 : 44 (KNV)
ಶೆಮವನು ಯೊರ್ಕೆಯಾಮ್ಯನ ತಂದೆಯಾದ ರಹಮ್ಯನನ್ನು ಪಡೆ ದನು; ರೆಕಮನು ಶಮ್ಮೈಯನನ್ನು ಪಡೆದನು.
1 ಪೂರ್ವಕಾಲವೃತ್ತಾ 2 : 45 (KNV)
ಶಮ್ಮೈ ಯಿಯ ಮಗನು ಮಾವೋನನು; ಈ ಮಾವೋನನು ಬೆತ್ಸೂರಿಗೆ ತಂದೆಯಾಗಿದ್ದನು.
1 ಪೂರ್ವಕಾಲವೃತ್ತಾ 2 : 46 (KNV)
ಕಾಲೇಬನ ಉಪ ಪತ್ನಿಯಾದ ಏಫಳು ಹಾರಾನನನ್ನೂ, ಮೋಚನನ್ನೂ, ಗಾಜೇಜನನ್ನೂ ಹೆತ್ತಳು. ಹಾರಾನನು ಗಾಜೇಜನನ್ನು ಪಡೆದನು.
1 ಪೂರ್ವಕಾಲವೃತ್ತಾ 2 : 47 (KNV)
ಯಾದೈಯಳ ಮಕ್ಕಳು--ರೆಗೆಮನು, ಯೋತಾಮನು, ಗೇಷಾನನು, ಪೆಲಟನು, ಏಫನು, ಶಾಫನು.
1 ಪೂರ್ವಕಾಲವೃತ್ತಾ 2 : 48 (KNV)
ಕಾಲೇಬನ ಉಪಪತ್ನಿಯಾದ ಮಾಕಳು ಶೆಬೆರನನ್ನೂ ತಿರ್ಹನನ್ನೂ ಹೆತ್ತಳು.
1 ಪೂರ್ವಕಾಲವೃತ್ತಾ 2 : 49 (KNV)
ಇದಲ್ಲದೆ ಅವಳು ಮದ್ಮನ್ನನ ತಂದೆಯಾದ ಶಾಫನನ್ನೂ ಮಕ್ ಬೇನನಿಗೂ ಗಿಬ್ಯನಿಗೂ ತಂದೆಯಾದ ಶೆವನನ್ನೂ ಹೆತ್ತಳು. ಕಾಲೇಬನ ಮಗಳು ಅಕ್ಸಾಹಳು.
1 ಪೂರ್ವಕಾಲವೃತ್ತಾ 2 : 50 (KNV)
ಎಫ್ರಾತಳ ಚೊಚ್ಚಲ ಮಗನಾದ ಹೂರನ ಮಗನಾದ ಕಾಲೇ ಬನ ಮಗನು -- ಕಿರ್ಯತ್ಯಾರೀಮನ ತಂದೆಯಾದ ಶೋಬಾಲನು.
1 ಪೂರ್ವಕಾಲವೃತ್ತಾ 2 : 51 (KNV)
ಬೇತ್ಲೆಹೇಮ್ಯರಿಗೆ ತಂದೆಯಾದ ಸಲ್ಮನು, ಬೇತ್ಗಾ ದೇರಿಗೆ ತಂದೆಯಾದ ಹಾರೇಫನು.
1 ಪೂರ್ವಕಾಲವೃತ್ತಾ 2 : 52 (KNV)
ಇದಲ್ಲದೆ ಕಿರ್ಯತ್ಯಾರೀಮನ ತಂದೆಯಾದ ಶೋಬಾಲನಿಗೆ ಮಕ್ಕ ಳಿದ್ದರು; ಅವರು ಯಾರಂದರೆ ಹಾರೋಯೆನು, ಮಾನ ಹತಿಯರ ಅರ್ಧಜನರು.
1 ಪೂರ್ವಕಾಲವೃತ್ತಾ 2 : 53 (KNV)
ಕಿರ್ಯತ್ಯಾರೀಮಿನವರ ಸಂತತಿಗಳು ಯಾರಂದರೆ, ಯೆತೆರಿನವರು, ಪೂತ್ಯರು, ಶುಮಾತ್ಯರು, ಮಿಷ್ರಾಗ್ಯರು ಇವರಿಂದ ಚೊರ್ರಾ ತ್ಯರೂ ಎಷ್ಟಾವೋಲ್ಯರೂ ಹುಟ್ಟಿದರು;
1 ಪೂರ್ವಕಾಲವೃತ್ತಾ 2 : 54 (KNV)
ಸಲ್ಮನ ಮಕ್ಕಳು -- ಬೇತ್ಲೆಹೇಮ್ಯರು, ನೆಟೋಫಾದವರು, ಅಟರೋತರು, ಬೇತ್ಯೋವಾಬ್ ಮನೆಯವರುಮಾನಹತಿಯರಲ್ಲಿ ಅರ್ಧಜನರೂ ಚೊರಾತ್ಯರೂ.
1 ಪೂರ್ವಕಾಲವೃತ್ತಾ 2 : 55 (KNV)
ಯಾಬೇಚಿನಲ್ಲಿ ವಾಸವಾಗಿದ್ದ ಸಂತತಿಗಳು ಯಾರಂದರೆ, ತಿರ್ರಾತ್ಯರು, ಶಿಮ್ಗಾತ್ಯರು, ಸೂಕಾತ್ಯರು; ಇವರೇ ರೇಕಾಬನ ಮನೆಗೆ ತಂದೆಯಾದ ಹಮತನಿಂದ ಹುಟ್ಟಿದ ಕೇನ್ಯರು.
❮
❯